ಕೊಪ್ಪಳದಲ್ಲಿ 200ರ ಗಡಿ ದಾಟಿದ ಸೋಂಕಿತರ ಸಾವು
Team Udayavani, Sep 9, 2020, 7:50 PM IST
ಸಾಂದರ್ಭಿಕ ಚಿತ್ರ
ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ ಆರ್ಭಟ ಮುಂದುವರೆದಿದ್ದು, ಬುಧವಾರ ಕೋವಿಡ್-19 ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ. ಈ ಮೂಲಕ ಒಟ್ಟಾರೆ ಸಾವಿನ ಸಂಖ್ಯೆಯು 200ರ ಗಡಿ ದಾಟಿದ್ದು ಜಿಲ್ಲೆಯ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಇನ್ನು ಇದೇ ದಿನದಂದು 148 ಜನರಿಗೆ ಸೋಂಕು ದೃಢಪಟ್ಟಿದೆ. ಒಟ್ಟಾರೆ ಈ ವರೆಗು ಸೋಂಕಿತರ ಸಂಖ್ಯೆ 8447ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಬುಧವಾರ ದೃಢಪಟ್ಟ ಸೋಂಕಿತರ ಪೈಕಿ ಗಂಗಾವತಿ ತಾಲೂಕು-64, ಕೊಪ್ಪಳ-41, ಕುಷ್ಟಗಿ-30, ಯಲಬುರ್ಗಾ-13 ಸೇರಿ 148 ಜನರಿಗೆ ಸೋಂಕು ದೃಢಪಟ್ಟರೆ, ಒಟ್ಟಾರೆ ಈ ವರೆಗೂ ಗಂಗಾವತಿ ತಾಲೂಕು-
4054, ಕೊಪ್ಪಳ-2562, ಕುಷ್ಟಗಿ-1047, ಯಲಬುರ್ಗಾ-784 ಸೇರಿ 8447ಕ್ಕೇ ಏರಿಕೆಯಾಗಿದೆ. ಇವರಲ್ಲಿ ಇದೇ ದಿನ 4 ಜನರು ಸೋಂಕಿಗೆ ಬಲಿಯಾಗಿದ್ದರೆ, ಒಟ್ಟಾರೆ ಈ ವರೆಗೂ ಕೊರೊನಾ ಸೋಂಕಿಗೆ 201 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಇದೇ ದಿನದಂದು 152 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಇನ್ನೂ ಒಟ್ಟಾರೆ ಈ ವರೆಗೂ 6494 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ದಿನದಂದು 99 ಜನರು ಹೋಂ ಐಸೋಲೇಷನ್‌ಗೆ ಒಳಗಾಗಿದ್ದರೆ ಒಟ್ಟಾರೆ ಈ ವರೆಗೂ 1473 ಜನರು ಹೋಂ ಐಸೋಲೇಷನ್‌ಗೆ ಒಳಗಾಗಿದ್ದಾರೆ.