ಚೆಂಡು ಹೂವು ಇಳುವರಿ ಕುಂಠಿತ


Team Udayavani, Oct 23, 2020, 6:34 PM IST

KOPALA-TDY-1

ಕುಷ್ಟಗಿ: ಕೀಟಬಾಧೆಯಿಂದ ಪಪ್ಪಾಯ ಬೆಳೆಗೆ ರಕ್ಷಿಸಿಸುವ ನಿಟ್ಟಿನಲ್ಲಿ ಬೆಳೆದ ಚೆಂಡು ಹೂವು ಇಳುವರಿ ಮಳೆಯಿಂದ ಕುಂಠಿತಗೊಂಡಿದೆ. ದಸರಾ, ದೀಪಾವಳಿ ಹಬ್ಬಕ್ಕೆ ಬಹುಬೇಡಿಕೆ ಚೆಂಡು ಹೂವು ಅಲ್ಪಾವಧಿಯಲ್ಲಿ ಗರಿಷ್ಠ ಆದಾಯ ತಂದುಕೊಡುವ ಬೆಳೆಯಾಗಿದೆ.

ಕಳೆದ ವರ್ಷ ಚೆಂಡು ಹೂವು ಪ್ರತಿ ಕೆಜಿಗೆ 50ರಿಂದ 60 ರೂ. ಬೆಲೆ ಇತ್ತು. ಇದೀಗ ಆರಂಭದಲ್ಲಿ ಅರ್ಧದಷ್ಟು ಕುಸಿದಿರುವುದಕ್ಕೆ ಬೆಳೆದವರಿಗೆ ಚಿಂತೆ ಇಲ್ಲ. ಬೆಳೆಕಟಾವು ಸಂದರ್ಭದಲ್ಲಿ ಮಳೆ ಶುರುವಿಟ್ಟುಕೊಂಡರೆ ಆದಾಯ ನಿರೀಕ್ಷೆಯಲ್ಲಿ ಬೆಳೆದ ಹೂವು ಇಳುವರಿ ಇದ್ದರೂ ಮಣ್ಣಿಗೆ ಸೇರಿಸಬೇಕಾದೀತು ಎನ್ನುವ ಆತಂಕದಲ್ಲಿದ್ದಾರೆ ರೈತರು. ಸದ್ಯ ಪ್ರತಿ ಕೆಜಿಗೆ 20ರಿಂದ 30 ರೂ. ಇದ್ದು, ಮಳೆಯ ಹೊಡೆತಕ್ಕೆ ಸಿಲುಕದಂತೆ ತ್ವರಿತಗತಿಯಲ್ಲಿ ಕಟಾವು ಮಾಡಿ

ಮಾರುಕಟ್ಟೆಗೆ ಸಾಗಿಸುವ ಯೋಚನೆಯಲ್ಲಿದ್ದಾರೆ ರೈತರು. ಕುಷ್ಟಗಿಯ ಕೃಷಿಕ ಚಿರಂಜೀವಿ ಹಿರೇಮಠ ಅವರು ತಮ್ಮ 4 ಎಕರೆ ಪ್ರದೇಶದಲ್ಲಿ ಬಹು ವಾರ್ಷಿಕ ಬೆಳೆಯಾಗಿ 600 ಮಹಾಗನಿ, 550 ಮಾವು, ಸೀಜನ್‌ ಇಳುವರಿಯಾಗಿ 2,200 ದಾಳಿಂಬೆ, 2,800 ಪಪ್ಪಾಯ. 10 ಸೀತಾಫಲ, 50 ಲಿಂಬೆ ನಾಟಿ ಮಾಡಿದ್ದಾರೆ. ಈ ಗಿಡಗಳ ಅಂತರದಲ್ಲಿ ಪಪ್ಪಾಯ ಬೆಳೆಗೆ ಕೀಟಬಾಧೆ ನಿಯಂತ್ರಿಸುವ ಹಿನ್ನೆಲೆಯಲ್ಲಿ 12 ಸಾವಿರಕ್ಕೂ ಅಧಿಕ ಚೆಂಡು ಹೂವು ಬೆಳೆಸಿದ್ದಾರೆ.

ಜೀವಾಮೃತ ಸಿಂಪರಣೆಯಿಂದ ಚಂಡು ಹೂವಿನ ಬೆಳೆ ಉತ್ತಮವಾಗಿದ್ದು, ದಸರಾದಿಂದ ದೀಪಾವಳಿವರೆಗೆ ಇಳುವರಿ ಪಡೆಯಬಹುದಾಗಿದೆ. ಅಲ್ಲಿಯವರೆಗೂ ಮಳೆರಾಯ ಕಾಯಬೇಕು. ಈ ಇಳುವರಿಯಿಂದ4ರಿಂದ 5 ಟನ್‌ ಇಳುವರಿ ನಿರೀಕ್ಷೆಯಲ್ಲಿದ್ದು, ಗದಗ ಹೂವು ಮಾರಾಟಗಾರರು ಪ್ರತಿ ಕೆ.ಜಿ.ಗೆ 30 ರೂ.ಗೆ ಖರೀ ದಿಸಿದ್ದು, ಕಟಾವು ಕಾರ್ಯ ಗುರುವಾರದಿಂದ ಆರಂಭಿಸಲಾಗಿದೆ ಎಂದು ಪುಷ್ಪ ಕೃಷಿಕ ಚಿರಂಜೀವಿ ಹಿರೇಮಠ ಹೇಳಿದರು.

ಪಪ್ಪಾಯ ಬೆಳೆಗೆ ಕಾಡುವ ಕೀಟ ನಿಯಂತ್ರಿಸಲು ಚೆಂಡು ಹೂವು ಬೆಳೆಯಲಾಗಿದ್ದು, ದೀಪಾವಳಿ ಹಬ್ಬದವರೆಗೂ ಇಳುವರಿ ನಿರೀಕ್ಷಿಸಬಹುದಾಗಿದೆ. ಮಳೆಯಾದರೆ ಅರಳಿದ ಹೂವಿನಲ್ಲಿ ಮಳೆ ಹನಿ ಹಿಡಿಟ್ಟುಕೊಳ್ಳುವುದರಿಂದ ಹೂವು ಕೊಳೆಯಲಾರಂಭಿಸುತ್ತದೆ. ಅಲ್ಲದೇ ಹನಿಯ ಭಾರಕ್ಕೆ ಹೂವು ನೆಲಕಚ್ಚಿ ಹಾಳಾಗುತ್ತಿದೆ. ಈ ಹೂವಿನ ಸೀಜನ್‌ ಮುಗಿಯುತ್ತಿದ್ದಂತೆ ಗಿಡಗನ್ನು ಕಿತ್ತು ಹಾಕದೇ ಅಲ್ಲಿಯೇ ಮಲ್ಚಿಂಗ್‌ ಮಾಡುವ ಉದ್ದೇಶವಿದೆ. – ಚಿರಂಜೀವಿ ಹಿರೇಮಠ, ಕೃಷಿಕ

ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ ರೈತರು :

ತಾವರಗೇರಾ: ಸಮೀಪದ ಸಂಗನಾಳ ಗ್ರಾಮದಿಂದ ಯತ್ನಟ್ಟಿ, ಬುನ್ನಟ್ಟಿ ಕಡೆ ಸಂಚರಿಸುವ ಜನರನ್ನು ಕನ್ನಾಳ ಗ್ರಾಮದ ರೈತ ಮಹೇಶ ಪಾಟೀಲ್‌

ಚೆಂಡು ಹೂವು ಬೆಳೆದ ಹೊಲ ಆಕರ್ಷಿಸದೇ ಇರಲಾರದು. ಇತ್ತೀಚಿನ ದಿನಗಳಲ್ಲಿ ರೈತರು ತೋಟಗಾರಿಕೆ ಬೆಳೆಗಳತ್ತ ಒಲವು ತೋರುತ್ತಿದ್ದಾರೆ. ಕನ್ನಾಳ ಗ್ರಾಮದ ರೈತ ಮಹೇಶ ಪಾಟೀಲ ಕೂಡ ತೋಟಗಾರಿಕೆ ಬೆಳೆಯ ಮಧ್ಯೆದಲ್ಲಿ ಚೆಂಡು ಹೂವು ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದಾರೆ. ಆಂಧ್ರಪ್ರದೇಶ ಗುತ್ತೆಗೆದಾರರೊಬ್ಬರಿಂದ ಎರಡು ತಿಂಗಳ ಹಿಂದೆ ಎಲ್‌-3 ತಳಿಯ 3 ಕೆಜಿ ಚೆಂಡು ಹೂವಿನ ಬೀಜ ಖರೀದಿ ಮಾಡಿ ತಂದಿದ್ದರು. ಹದವಾದ ಜಮೀನಿನಲ್ಲಿ ಬಿತ್ತನೆ ಮಾಡಿ ಸಸಿ ಮಡಿ ಮಾಡಿಕೊಂಡಿದ್ದಾರೆ. ನಂತರಬೀಜ ಬಿತ್ತಿದ 25-30 ದಿನಕ್ಕೆ ಸಸಿಗಳು ನಾಟಿಗೆ ಬರುತ್ತವೆ. ಜೂನ್‌ ಕೊನೆ ವಾರ ಅಥವಾ ಜುಲೈ ಮೊದಲನೆಯ ವಾರದಲ್ಲಿ ನಾಲ್ಕು ಎಕರೆ ಜಮೀನಿನ ಪೇರಲ ಸಸಿಗಳ ಮಧ್ಯೆದಲ್ಲಿ ಹೂವಿನ ಸಸಿಗಳನ್ನು ನಾಟಿ ಮಾಡಿದ್ದಾರೆ. ಸಸಿಗಳಿಗೆ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿದ್ದಾರೆ. ನಾಲ್ಕು ಎಕರೆಗೆ 8-10 ಸಾವಿರ ರೂ. ಖರ್ಚುಬರುತ್ತದೆ. ಒಂದು ಕೆಜಿ ಹೂವಿಗೆ 35-40 ರೂ. ಗೆ ಮಾರಾಟವಾಗುತ್ತಿದ್ದು, ನಾಲ್ಕು ಎಕರೆಯಲ್ಲಿ ಚೆಂಡು ಹೂವು 12-15 ಟನ್‌ ಆಗುವ ಸಾಧ್ಯತೆ ಇದೆ. ಇದರಿಂದ ಲಕ್ಷಾಂತರ ರೂ. ಆದಾಯದ ನಿರೀಕ್ಷೆ ಇದೆ ಎನ್ನುತ್ತಾರೆ ಮಹೇಶ ಪಾಟೀಲ್‌

ನಾಲ್ಕು ಎಕರೆಯಲ್ಲಿ ಪೇರಲ ಜೊತೆಗೆ ಮಿಶ್ರ ಬೆಳೆಯಾಗಿ ಚಂಡು ಹೂವು ಬೆಳೆದಿದ್ದು. 12-15 ಟನ್‌ ಆಗುವ ಸಾಧ್ಯತೆಇದೆ. ಕಳೆದ 10-15 ದಿನಗಳಿಂದ ಮಳೆ ಸುರಿಯುತ್ತಿದ್ದು, ಚೆಂಡು ಹೂವುಗಳಲ್ಲಿ ನೀರು ಸಂಗ್ರಹಗೊಂಡು ಕೊಳೆಯುವ ಸಾಧ್ಯತೆ ಇದೆ. ಮಹೇಶ ಪಾಟೀಲ್‌, ಕನ್ನಾಳ ಗ್ರಾಮದ ರೈತ

ಟಾಪ್ ನ್ಯೂಸ್

ಸಮಯ ವ್ಯರ್ಥಕ್ಕಾಗಿ ನ್ಯಾ.ಸುಭಾಷ್ ಆಡಿ ಸಮಿತಿ: ಬಸವಜಯ ಮೃತ್ಯುಂಜಯಶ್ರೀ

ಸಮಯ ವ್ಯರ್ಥಕ್ಕಾಗಿ ನ್ಯಾ.ಸುಭಾಷ್ ಆಡಿ ಸಮಿತಿ: ಬಸವಜಯ ಮೃತ್ಯುಂಜಯ ಶ್ರೀ

ಜನಪ್ರತಿನಿಧಿಗಳಿದ್ರೆ ಮಾತ್ರ ಸೂಕ್ತ ಆಡಳಿತ

ಜನಪ್ರತಿನಿಧಿಗಳಿದ್ರೆ ಮಾತ್ರ ಸೂಕ್ತ ಆಡಳಿತ

ಜನರಿಗೆ ಹತ್ತಿರವಾಗುತ್ತಿರುವ ಜನ ಸಂಪರ್ಕ್‌ ದಿವಸ್‌

ಜನರಿಗೆ ಹತ್ತಿರವಾಗುತ್ತಿರುವ ಜನ ಸಂಪರ್ಕ್‌ ದಿವಸ್‌

ದಂಗೆ: ಆ್ಯಂಗ್ ಸಾನ್ ಸೂ ಕಿಗೆ 4 ವರ್ಷ ಜೈಲುಶಿಕ್ಷೆ ವಿಧಿಸಿದ ಮ್ಯಾನ್ಮಾರ್ ಕೋರ್ಟ್

ದಂಗೆ: ಆ್ಯಂಗ್ ಸಾನ್ ಸೂ ಕಿಗೆ 4 ವರ್ಷ ಜೈಲುಶಿಕ್ಷೆ ವಿಧಿಸಿದ ಮ್ಯಾನ್ಮಾರ್ ಕೋರ್ಟ್

nagesh-BC

ಅಗತ್ಯ ಬಿದ್ದರೆ ಶಾಲೆಗಳನ್ನು ಬಂದ್ ಮಾಡಲಾಗುತ್ತದೆ : ಸಚಿವ ನಾಗೇಶ್

b-bommai

ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ: ಸಿಎಂ ಬೊಮ್ಮಾಯಿ

ಮಧು ಬಂಗಾರಪ್ಪ

ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಅಗತ್ಯವಿದೆ: ಮಧು ಬಂಗಾರಪ್ಪಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಕ್ಷ ಲಕ್ಷ ಕೋಟಿ ಲೂಟಿ; ಜನರ ನಂಬಿಕೆ ಕಳೆದುಕೊಂಡ ಕಾಂಗ್ರೆಸ್‌; ಹಾಲಪ್ಪ ಆಚಾರ್‌

15election

ಶರಣೇಗೌಡ ಬಯ್ಯಾಪುರ ಮೇಲ್ಮನೆಗೆ ಹೋಗಲು ಅರ್ಹರಲ್ಲ: ಶಿವನಗೌಡ ನಾಯಕ

12puneet

ಪುನೀತ್ ಸ್ಮರಣಾರ್ಥ 6ಜನ ವೃದ್ದರಿಗೆ ಉಚಿತ ನೇತ್ರ ಚಿಕಿತ್ಸೆ

ಅಲೆಮಾರಿ ಜನಾಂಗಕ್ಕೆ ಸೌಲಭ್ಯ ದೊರೆಯಲಿ

ಅಲೆಮಾರಿ ಜನಾಂಗಕ್ಕೆ ಸೌಲಭ್ಯ ದೊರೆಯಲಿ

1-dadasd

ಗೈರಾದ ತಾಲೂಕು ಅಧಿಕಾರಿಗಳ ವಿರುದ್ಧ ದಲಿತ ಮುಖಂಡರ ಆಕ್ರೋಶ

MUST WATCH

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

ಹೊಸ ಸೇರ್ಪಡೆ

ಸಮಯ ವ್ಯರ್ಥಕ್ಕಾಗಿ ನ್ಯಾ.ಸುಭಾಷ್ ಆಡಿ ಸಮಿತಿ: ಬಸವಜಯ ಮೃತ್ಯುಂಜಯಶ್ರೀ

ಸಮಯ ವ್ಯರ್ಥಕ್ಕಾಗಿ ನ್ಯಾ.ಸುಭಾಷ್ ಆಡಿ ಸಮಿತಿ: ಬಸವಜಯ ಮೃತ್ಯುಂಜಯ ಶ್ರೀ

chitradurga news

ಸಂವಿಧಾನ ರಕ್ಷಣೆಯಲ್ಲಿ ವಕೀಲರ ಪಾತ್ರ ಮಹತ್ವದ್ದು

1-sdfdf

ವೈದ್ಯರ ನಾಯಿ ಕಳವು : ಶಿವಮೊಗ್ಗ ಪೊಲೀಸರಿಂದ ಕೆಲವೇ ಗಂಟೆಯಲ್ಲಿ ಪತ್ತೆ

15oxen’

ಎತ್ತುಗಳ ಕಳ್ಳತನ ಪ್ರಕರಣ: ಮೂವರ ಬಂಧನ

davanagere news

ಸಂಗೀತ ಭಾರತೀಯ ಸಂಸ್ಕೃತಿ ಪ್ರತೀಕ: ಶಿವಲಿಂಗಾನಂದ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.