Udayavni Special

ಶಾಲೆ ದತ್ತು ಪಡೆಯುವಲ್ಲಿ ನಿರಾಸಕ್ತಿ


Team Udayavani, Oct 15, 2019, 2:06 PM IST

kopala-tdy-1

ಕೊಪ್ಪಳ: ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಜಿಪಂ ಸದಸ್ಯರು ರೂಪಿಸಿದ್ದ “ದತ್ತು ಶಾಲೆ’ಯೋಜನೆ ಬಹುತೇಕ ಮುಗಿದಂತೆ ಆಗಿದೆ. ಕೆಲವೇ ಸದಸ್ಯರು ಶಾಲೆ ದತ್ತು ಪಡೆದು ಅಭಿವೃದ್ಧಿ ಪಡಿಸಿದ್ದು ಬಿಟ್ಟರೆ ಉಳಿದವರು ಈ ಬಗ್ಗೆ ಕಾಳಜಿ ತೋರಲಿಲ್ಲ.

ಈ ಹಿಂದೆ ಜಿಪಂ ಅಧ್ಯಕ್ಷರಾಗಿದ್ದ ರಾಜಶೇಖರ ಹಿಟ್ನಾಳ ಅವರು, ಜಿಲ್ಲೆಯಲ್ಲಿನ ಸರ್ಕಾರಿ ಶಾಲೆ ಬಗ್ಗೆ ಕಾಳಜಿ ತೋರಿ ಪ್ರತಿ ವರ್ಷ ಒಂದೊಂದು ಶಾಲೆಯನ್ನು ಜಿಪಂ ಸದಸ್ಯರು ಕ್ಷೇತ್ರವಾರು ಆಯ್ಕೆ ಮಾಡಿಕೊಂಡು ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿ ಮಾದರಿ ಶಾಲೆಯನ್ನಾಗಿ ಮಾಡಿ ಉತ್ತಮ ಫಲಿತಾಂಶ ತರುವ ಕುರಿತು ಯೋಜನೆ ರೂಪಿಸಿದ್ದರು. ತಮ್ಮ ಅಧಿಕಾರವಧಿಯಲ್ಲೇ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಇತರೆ ಅನುದಾನ ಬಳಸಿಕೊಂಡು ಶಾಲಾ ಕಾಂಪೌಂಡ್‌ ನಿರ್ಮಾಣ, ಕುಡಿಯುವ ನೀರಿನ ಸಮಸ್ಯೆ, ಶಾಲೆಗೆ ಅಗತ್ಯವಿರುವ ಪೀಠೊಪಕರಣ, ಪಠ್ಯ ಪುಸ್ತಕ ಸೇರಿದಂತೆ ಕಂಪ್ಯೂಟರ್‌ ಹಾಗೂ ಇತರೆ ಸಾಮಗ್ರಿಗಳನ್ನೂ ಪೂರೈಕೆ ಮಾಡಲು ಈ ಯೋಜನೆಯಲ್ಲಿ ಅವಕಾಶವಿತ್ತು.

ಇದಕ್ಕೆ ಆರಂಭದಲ್ಲಿ 29 ಜಿಪಂ ಸದಸ್ಯರು ಕೂಡ ಸಮ್ಮತಿ ಸೂಚಿಸಿದ್ದಲ್ಲದೇ, ತಮ್ಮ ತಮ್ಮ ಕ್ಷೇತ್ರದಲ್ಲೇ ಒಂದೊಂದು ಶಾಲೆ ಆಯ್ಕೆಗೆ ಸೂಚಿಸಿದ್ದರು. ಈ ಯೋಜನೆಯಲ್ಲಿ ಜಿಪಂ ಅಧ್ಯಕ್ಷರಿಗೆ ವಾರ್ಷಿಕವಾಗಿ ಬರುವ ಅನುದಾನದಲ್ಲಿಯೇ ಸದಸ್ಯರಿಗೆ ಅನುದಾನ ಹಂಚಿಕೆ ಮಾಡಲಾಗಿತ್ತು. ಆದರೆ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ರಾಜಶೇಖರ ಹಿಟ್ನಾಳ ಅವರು ಜಿಪಂ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಹಾಗಾಗಿ ಅವರ ಕನಸಿನ ಯೋಜನೆಗೂ ಮಂಕು ಬಡಿದಿದೆ. ಇದರಲ್ಲಿ ಅಧಿಕಾರಿಗಳ ನಿರಾಸಕ್ತಿ ಭಾವನೆಯೂ ಪ್ರಮುಖವಾಗಿದೆ.

ಶಾಲೆ ದತ್ತು ಯೋಜನೆಯಲ್ಲಿ ಜಿಪಂ ಸದಸ್ಯರಾದ ಎಸ್‌.ಬಿ. ನಾಗರಳ್ಳಿ, ಲಕ್ಷ್ಮವ್ವ ನೀರಲೂಟಿ ಸೇರಿ ಪ್ರಸ್ತುತ ಜಿಪಂ ಅಧ್ಯಕ್ಷರಾದ ವಿಶ್ವನಾಥರಡ್ಡಿ ಅವರು ಒಂದೊಂದು ಶಾಲೆಯನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿಗೆ ಅನುದಾನ ಕೊಟ್ಟಿದ್ದಾರೆ. ಕೆಲವೊಂದು ಸಣ್ಣಪುಟ್ಟ ದುರಸ್ತಿ ಕಾರ್ಯ ಮಾಡಿಸುವ ಜೊತೆಗೆ ಫಲಿತಾಂಶದ ಮೇಲೂ ಗಮನ ಹರಿಸಿದ್ದರು. ಕುಡಿಯುವ ನೀರು ಸೇರಿದಂತೆ ಶಾಲೆಗೆ ಬೇಕಾದ ಕಂಪ್ಯೂಟರ್‌, ಉಪಕರಣ ಹಾಗೂ ಇತರೆ ಸಾಮಗ್ರಿಗಳ ಪೂರೈಕೆ ಮಾಡಿದ್ದಾರೆ. ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡಿದ್ದು, ಬಿಟ್ಟರೆ ಉಳಿದಂತೆ ಹಲವು ಸದಸ್ಯರು ಶಾಲೆ ದತ್ತು ಯೋಜನೆಗೆ ಕಾಳಜಿ ಕೊಡದೇ ಇರುವುದು ತಿಳಿದು ಬಂದಿದೆ.

ಒಟ್ಟಿನಲ್ಲಿ ಜಿಪಂನಿಂದ ಶೈಕ್ಷಣಿಕವಾಗಿ ಒಂದು ಮಹತ್ವದ ಸಂಚಲನ ನಡೆಯುತ್ತಿದೆ ಎಂದು ಕನಸು ಕಾಣುತ್ತಿದ್ದ ಜಿಲ್ಲೆಯ ಜನತೆ ವರ್ಷದಲ್ಲೇ ನಿರಾಶೆ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಜಿಪಂ ಸದಸ್ಯರಿಗೆ ಒಂದು ಶಾಲೆ ದತ್ತು ಪಡೆದು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡುವುದು ಕಷ್ಟದ ಕೆಲಸವೇನಲ್ಲ. ಆದರೆ ಒಬ್ಬೊಬ್ಬರು ಇತ್ತೀಚೆಗೆ ಒಂದೊಂದು ಮಾತನ್ನಾಡುತ್ತಿದ್ದಾರೆ. ಹಾಗಾಗಿ ಶಾಲೆ ದತ್ತು ಯೋಜನೆ ಬಹುಪಾಲು ಸ್ಥಗಿತವಾಗಿದೆ.

ಇಲ್ಲಿ ಸ್ವಯಂ ಆಸಕ್ತಿಯೂ ಮೂಡಬೇಕಿದೆ. ಗ್ರಾಪಂ ಸದಸ್ಯರಿಂದ ಹಿಡಿದು ಜಿಪಂ ಸದಸ್ಯರು ಹಾಗೂ ಅ ಧಿಕಾರಿ ವರ್ಗವೂ ಸಹಿತ ಆಸಕ್ತಿಯಿಂದ ಒಂದೊಂದು ಶಾಲೆ ದತ್ತು ಪಡೆದು ಅಭಿವೃದ್ಧಿ ಮಾಡಿಸಿದರೆ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯೇ ಮೊಳಗಲಿದೆ ಎನ್ನುತ್ತಿದ್ದಾರೆ ಶಿಕ್ಷಣ ಪ್ರೇಮಿಗಳು.

 

-ದತ್ತು ಕಮ್ಮಾರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಒಂದೇ ದಿನ 28,637 ಜನರಿಗೆ ಸೋಂಕು ದೃಢ: 8.5 ಲಕ್ಷ ಸನಿಹ ತಲುಪಿದ ದೇಶದ ಸೋಂಕಿತರ ಸಂಖ್ಯೆ

ಒಂದೇ ದಿನ 28,637 ಜನರಿಗೆ ಸೋಂಕು ದೃಢ: 8.5 ಲಕ್ಷ ಸನಿಹ ತಲುಪಿದ ದೇಶದ ಸೋಂಕಿತರ ಸಂಖ್ಯೆ

e-mail

ಸಂದರ್ಶನದಲ್ಲಿ ಸೋತ ಮಗನಿಗೆ ತಂದೆಯಿಂದ ಹೃದಯಸ್ಪರ್ಶಿ ಪತ್ರ! ಸಾಧನೆಗೆ ಮುಖ್ಯವಾಗಿರುವುದೇನು ?

ಭಾನುವಾರದ ಲಾಕ್ ಡೌನ್: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಗಿ ಕರ್ಫ್ಯೂ ಜಾರಿ

ಭಾನುವಾರದ ಲಾಕ್ ಡೌನ್: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಗಿ ಕರ್ಫ್ಯೂ ಜಾರಿ

ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು: ಹೆಜಮಾಡಿ ಗ್ರಾ.ಪಂ ಮಾಜಿ ಅಧ್ಯಕ್ಷನಿಗೆ ಗಾಯ

ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು: ಹೆಜಮಾಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷರಿಗೆ ಗಾಯ

ಆಂಗ್ಲರ ನೆಲದಲ್ಲಿ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿ ವೆಸ್ಟ್ ಇಂಡೀಸ್

ಆಂಗ್ಲರ ನೆಲದಲ್ಲಿ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿ ವೆಸ್ಟ್ ಇಂಡೀಸ್

ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿಗೆ ಮೊದಲ ಸಾವು

ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿಗೆ ಮೊದಲ ಸಾವು

ಟೀಂ ಇಂಡಿಯಾ ಮಾಜಿ ಆಟಗಾರನಿಗೂ ಕಾಡಿದ ಕೋವಿಡ್-19 ಸೋಂಕು

ಟೀಂ ಇಂಡಿಯಾ ಮಾಜಿ ಆಟಗಾರನಿಗೂ ಕಾಡಿದ ಕೋವಿಡ್-19 ಸೋಂಕು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆತ್ಮ ನಿರ್ಭರ್‌ದಲ್ಲಿ ಕೃಷಿಗೆ ಆದ್ಯತೆ

ಆತ್ಮ ನಿರ್ಭರ್‌ದಲ್ಲಿ ಕೃಷಿಗೆ ಆದ್ಯತೆ

ಕೋವಿಡ್ ಮಹಾಮಾರಿಗೆ ಕೊಪ್ಪಳದಲ್ಲಿ 6ನೇ ಸಾವು

ಕೋವಿಡ್ ಸೋಂಕಿಗೆ ಮಹಿಳೆ ಬಲಿ! ಕೊಪ್ಪಳದಲ್ಲಿ ಮಹಾಮಾರಿಗೆ 6ನೇ ಸಾವು

Kopala-tdy-1

ಏತ ನೀರಾವರಿ ಕಾಮಗಾರಿ ಸ್ಥಳಕ್ಕೆ ಸಂಸದ ಭೇಟಿ

ಕೋವಿಡ್ ಸೋಂಕಿತನ ಶವ ಸಂಸ್ಕಾರಕ್ಕೆ ಗ್ರಾಮಸ್ಥರ ವಿರೋಧ: ಅಧೀಕಾರಿಗಳಿಗೆ ರಾತ್ರಿಯಿಡಿ ಜಾಗರಣೆ

ಕೋವಿಡ್ ಸೋಂಕಿತನ ಶವ ಸಂಸ್ಕಾರಕ್ಕೆ ಗ್ರಾಮಸ್ಥರ ವಿರೋಧ: ಅಧಿಕಾರಿಗಳಿಗೆ ರಾತ್ರಿಯಿಡಿ ಜಾಗರಣೆ

ಕೊವಿಡ್-19 ಸೋಂಕಿತ ಸಾವು ಶವಸಂಸ್ಕಾರಕ್ಕೆ ಹಿರೇಜಂತಗಲ್ ಜನರ ವಿರೋಧ

ಕೊವಿಡ್-19 ಸೋಂಕಿತ ಸಾವು ಶವಸಂಸ್ಕಾರಕ್ಕೆ ಹಿರೇಜಂತಗಲ್ ಜನರ ವಿರೋಧ

MUST WATCH

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable


ಹೊಸ ಸೇರ್ಪಡೆ

ಒಡಿಶಾ ಕೋರ್ಟಿನ ಎದುರು ತರಕಾರಿ ಮಾರಾಟಕ್ಕೆ ಮುಂದಾದ ವಕೀಲ

ಒಡಿಶಾ ಕೋರ್ಟಿನ ಎದುರು ತರಕಾರಿ ಮಾರಾಟಕ್ಕೆ ಮುಂದಾದ ವಕೀಲ

ಸೋಂಕಿತನ ಬದಲು ತಾಯಿಯನ್ನು ವಾರ್ಡ್‌ಗೆ ದಾಖಲಿಸಿದರು!

ಸೋಂಕಿತನ ಬದಲು ತಾಯಿಯನ್ನು ವಾರ್ಡ್‌ಗೆ ದಾಖಲಿಸಿದರು!

ಪ್ರೀತಿಸಿ ಮದುವೆಯಾದ ಪ್ರತೀಕಾರ : ಯುವಕನ ಕುಟುಂಬದ ಐವರ ಹತ್ಯೆ!

ಪ್ರೀತಿಸಿ ಮದುವೆಯಾದ ಪ್ರತೀಕಾರ : ಯುವಕನ ಕುಟುಂಬದ ಐವರ ಹತ್ಯೆ!

ಒಂದೇ ದಿನ 28,637 ಜನರಿಗೆ ಸೋಂಕು ದೃಢ: 8.5 ಲಕ್ಷ ಸನಿಹ ತಲುಪಿದ ದೇಶದ ಸೋಂಕಿತರ ಸಂಖ್ಯೆ

ಒಂದೇ ದಿನ 28,637 ಜನರಿಗೆ ಸೋಂಕು ದೃಢ: 8.5 ಲಕ್ಷ ಸನಿಹ ತಲುಪಿದ ದೇಶದ ಸೋಂಕಿತರ ಸಂಖ್ಯೆ

ಲಕ್ಷಣ ಕಂಡುಬಂದ್ರೆ ಪರೀಕ್ಷಿಸಿಕೊಳ್ಳಿ

ಲಕ್ಷಣ ಕಂಡುಬಂದ್ರೆ ಪರೀಕ್ಷಿಸಿಕೊಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.