ಮದುವೆ ಮನೆಯಲ್ಲಿ ಸಸಿ ವಿತರಿಸಿ ಪರಿಸರ ಜಾಗೃತಿ

Team Udayavani, Jun 17, 2019, 3:02 PM IST

ಗಂಗಾವತಿ: ತಾಲೂಕಿನ ಹಣವಾಳ ಗ್ರಾಮದ ಶಿಕ್ಷಕ ಜಗದೀಶ ರಸ್ತಾಪೂರ ಅವರ ಸರಳ ವಿವಾಹದಲ್ಲಿ ಮದುವೆಗೆ ಆಗಮಿಸಿದ್ದ ಪ್ರತಿಯೊಬ್ಬರಿಗೂ ಸಸಿ ವಿತರಿಸಿ ಪರಿಸರ ಜಾಗೃತಿ ಮೂಡಿಸಲಾಯಿತು. ತಮ್ಮ ಗುರುಗಳಿಗೆ ಶುಭ ಕೋರಲು ಆಗಮಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ಇಂಗ್ಲಿಷ್‌ ಶಬ್ಧಕೋಶ ನೀಡುವ ಮೂಲಕ ಆದರ್ಶ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಜಗದೀಶ ರಸ್ತಾಪೂರ ಮಾತನಾಡಿ, ಮದುವೆಯ ಹೆಸರಿನಲ್ಲಿ ದುಂದುವೆಚ್ಚ ಹೆಚ್ಚಾಗಿದ್ದು, ಪರಿಸರ ಸಂರಕ್ಷಣೆ ಹಾಗೂ ಇತರರಿಗೆ ಉಪಯುಕ್ತವಾಗುವ ರೀತಿಯಲ್ಲಿ ಯೋಚಿಸಬೇಕು. ಮದುವೆಗಾಗಿ ಪೆಂಡಾಲ್ ಸೇರಿ ಭರ್ಜರಿ ಅಲಂಕಾರ ಮಾಡಿ ಹಣ ಪೋಲಾಗದಂತೆ ತಡೆಯಲು ಬಡಶಾಲಾ ಮಕ್ಕಳಿಗೆ ಅಥವಾ ವೃದ್ಧಾಶ್ರಮ, ಅನಾಥಶ್ರಾಮಗಳಿಗೆ ನೆರವಾಗಬೇಕು. ಗಿಡಮರಗಳ ಕೊರತೆಯಿಂದಾಗಿ ಮಳೆಯ ಬಾರದಂತಾಗಿದ್ದು, ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸಬೇಕು ಎಂದರು. ಮದುವೆ ಆಗಮಿಸಿದ್ದ ಪ್ರತಿಯಯೊಬ್ಬರೂ ನೂತನ ದಂಪತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ತಾವರಗೇರಾ: ಪಟ್ಟಣದ ವಿವಿಧ ಸಮುದಾಯಗಳ ಶವ ಸಂಸ್ಕಾರಕ್ಕೆ ಮೀಸಲಿಟ್ಟಿರುವ ರುದ್ರಭೂಮಿ ಬಯಲು ಬಹಿರ್ದೆಸೆಯಿಂದ ಗಬ್ಬು ನಾರುತ್ತಿರುವುದು ಒಂದೆಡೆಯಾದರೇ, ಇನ್ನೊಂದೆಡೆ...

  • ಗಂಗಾವತಿ: ಸಾಮಾಜಿಕ ಭದ್ರತಾ ಯೋಜನೆಯಲ್ಲಿ ವಯೋವೃದ್ಧರು ಹಾಗೂ ಹಿರಿಯರಿಗೆ ನೀಡಲಾಗುತ್ತಿದ್ದ ಪಿಂಚಣಿ ಮಾಶಾಸನ ಕಳೆದ 7 ತಿಂಗಳಿಂದ ನಿಲುಗಡೆಯಾಗಿದ್ದು, ತಹಸೀಲ್ದಾರ್‌...

  • ಕನಕಗಿರಿ: ತಾಲೂಕಿನ ಕೊನೆಯ ಭಾಗದ ಯತ್ನಟ್ಟಿ ಗ್ರಾಮಸ್ಥರಿಗೆ ಕಳೆದ ಮೂರು ತಿಂಗಳಿಂದಕೋತಿಗಳ ಕಾಟ ಹೆಚ್ಚಾಗಿದ್ದು, ಇದರಿಂದ ತಮ್ಮ ಕೃಷಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದಾರೆ....

  • ಕೊಪ್ಪಳ: ಜಿಲ್ಲೆಯ ವಸತಿ ರಹಿತರಿಗೆ ವಾಜಪೇಯಿ ನಗರ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್‌ ಹಾಗೂ ವಿವಿಧ ಯೋಜನೆಗಳಡಿ ನಿವೇಶ ಮಂಜೂರು ಮಾಡುವ ಕುರಿತಂತೆ ನಿಯಮಾನುಸಾರವಾಗಿ...

  • ಗಂಗಾವತಿ: ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗು ಎನ್ ಆರ್ ಸಿ ಕಾಯ್ದೆ ವಿರೋಧಿಸಿ ನಗರದ ಜೂನಿಯರ್ ಕಾಲೇಜಿನ ಮೈದಾನದ ಗೋಡೆಗಳಿಗೆ ‘ನೋ ಎನ್ ಆರ್ ಸಿ,ಸಿಎಎ,...

ಹೊಸ ಸೇರ್ಪಡೆ