
ಕುಷ್ಟಗಿ: ಧ್ರುವ ಸರ್ಜಾ ಜೊತೆ ಸೆಲ್ಫಿಗಾಗಿ ಅಭಿಮಾನಿಗಳ ಸರ್ಕಸ್
Team Udayavani, Dec 5, 2022, 11:57 PM IST

ಕುಷ್ಟಗಿ: ಕುಷ್ಟಗಿಯ ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಅವರ 50ನೇ ಹುಟ್ಟು ಹಬ್ಬ ಪ್ರಯುಕ್ತ ನಡೆದ ಸಮಾರಂಭದಲ್ಲಿ ನೆಚ್ಚಿನ ಯುವ ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರನ್ನು ನೋಡಲು ಅವರ ಅಭಿಮಾನಿಗಳು ಮುಗಿಬಿದ್ದರು.
ಪಟ್ಟಣದ ಹಸನಸಾಬ್ ದೋಟಿಹಾಳ ಅವರ ಜಾಗೆಯಲ್ಲಿ ವರ್ಣರಂಜಿತ ವೇದಿಕೆಯಲ್ಲಿ ನಡೆದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಜನ್ಮ ದಿನದ ಪ್ರಯುಕ್ತ ಅಭಿನಂದನಾ ಸಮಾರಂಭದಲ್ಲಿ ಪೊಲೀಸರು ಬ್ಯಾರಿಕೇಡ್ ನಂತೆ ನಿಂತರು ಸಹ ಅಭಿಮಾನಿಗಳು ಪೊಲೀಸರನ್ನು ಬೇಧಿಸಿ ನೆಚ್ಚಿನ ನಟ ಧ್ರುವ ಸರ್ಜಾ ಅವರನ್ನು ಭೇಟಿ ಮಾಡಿ,ಸೆಲ್ಪಿಗಾಗಿ ಹರಸಹಾಸ ಪಟ್ಟರು.
ನಟ ಧ್ರುವ ಸರ್ಜಾ ಅವರ ಬಾಕ್ಸರಗಳು, ಪೊಲೀಸರು, ಕಾರ್ಯಕರ್ತರು ಎಷ್ಟೇ ನಿಯಂತ್ರಿಸಿದರೂ ಜಗ್ಗದ ಅಭಿಮಾನಿಗಳು ವೇದಿಕೆ ಮೇಲೆರುತ್ತಿರುವುದು ಆಯೋಜಕರಿಗೆ ತಲೆನೋವು ತಂದಿತ್ತು.
ವೇದಿಕೆ ಒಂದು ಬದಿಯಿಂದ ಪೊಲೀಸರು ಇಳಿಸಿದರೆ ಮತ್ತೊಂದು ಬದಿಯಲ್ಲಿ ಏರುತ್ತಿರುವುದು ಹಾವು ಏಣಿಯಾಟದಂತಾಗಿತ್ತು.ವೇದಿಕೆಯ ಮುಂಭಾಗದಲ್ಲಿ ಸಾವಿರ ಸಂಖ್ಯೆಯಲ್ಲಿ ಅಭಿಮಾನಿಗಳು ದ್ರುವ ಸರ್ಜಾ ಅವರನ್ನು ತಮ್ಮ ಮೋಬೈಲ್ ನಲ್ಲಿ ಚಿತ್ರಿಸಿಕೊಂಡರಲ್ಲದೇ ಧ್ರುವ..ಧ್ರುವ ಎಂದು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ನೆಚ್ಚಿನ ನಟ ಧ್ರುವ ಸರ್ಜಾ ಅವರಿಗೆ ಅಭಿಮಾನಿಗಳು ಟಗರು ಕಾಣಿಕೆಯಾಗಿ ನೀಡಿದರು. ಓರ್ವ ಅಭಿಮಾನಿ ದ್ರುವ ಸರ್ಜಾ ಅವರ ಕಾಲು ಹಿಡಿದುಕೊಂಡು ಜಪ್ಪಯ್ಯ ಎಂದು ಬಿಡದೇ ಇದ್ದಾಗ, ಪೊಲೀಸರು ಬಿಡಿಸಿದರು. ಅಭಿಮಾನಿಗಳ ತಳ್ಳಾಟ ನೂಕಾಟದಲ್ಲಿ ನಟ ಧ್ರುವ ಸರ್ಜಾ ಬೇಸರಿಸಿಕೊಳ್ಳದೇ ಅಭಿಮಾನಿಗಳನ್ನು ಉದ್ದೇಶಿಸಿ ಇಲ್ಲಿ ರಾಜಕೀಯ ಮಾತನಾಡಲಾರೆ, ದೊಡ್ಡನಪಾಟೀಲ ಅವರ ಹಿಡಿದ ಸಂಕಲ್ಪ ಈಡೇರಲಿ. ನಮ್ಮೆಲ್ಲರ ಅಣ್ಣಾ… ದೊಡ್ಡನಗೌಡ ಪಾಟೀಲ ಅವರಿಗೆ ಶುಭಾಶಯ ಕೋರಿದರು. ನಂತರ ಧ್ರುವ ಸರ್ಜಾ ವೇದಿಕೆಯಿಂದ ನಿರ್ಗಮಿಸುತ್ತಿದ್ದಂತೆ ಅಭಿಮಾನಿಗಳು ಅವರನ್ನು ಹಿಂಬಾಲಿಸಿರುವುದು ಕಂಡು ಬಂತು. ಸಂಗೀತ ಕಾರ್ಯಕ್ರಮಗಳು ನಡೆದವು.
ಕೊಪ್ಪಳ ಸಂಸದ ಕರಡಿ ಸಂಗಣ್ಣ, ಕನಕಗಿರಿ ಶಾಸಕ ಬಸವರಾಜ ದಡೇಸುಗೂರು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಕೆ.ಶರಣಪ್ಪ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರನ್ನು ಅಭಿನಂದಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವಕ್ಕೆ 25 ಸಾವಿರಕ್ಕೂ ಅಧಿಕ ಭಕ್ತರ ದಂಡು

ಬಸ್ ಚಾಲಕನ ವೇಗಕ್ಕೆ ಕಳಚಿ ಹೋದ ಚಕ್ರ: ಅಪಾಯದಿಂದ ಪಾರಾದ ಪ್ರಯಾಣಿಕರು

ಜನ ಸಂಕಲ್ಪಯಾತ್ರೆ: ಅಮಿತ್ ಶಾ ಬರುತ್ತಿದ್ದಂತೆ ಮೊಳಗಿದ ಜಯಘೋಷ

ಕುರುಗೋಡು: 16 ಕೋಟಿ ವೆಚ್ಚದಲ್ಲಿ ಎಮ್ಮಿಗನೂರು 110 ಕೆ.ವಿ ಕಾಮಗಾರಿಗೆ ಚಾಲನೆ

ಸಿದ್ದರಾಮಯ್ಯ ಸ್ವಂತ ಪಕ್ಷ ಕಟ್ಟಿ 5 ಸೀಟು ಗೆದ್ದು ತೋರಿಸಲಿ: ಕುಮಾರಸ್ವಾಮಿ ಸವಾಲು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವಕ್ಕೆ 25 ಸಾವಿರಕ್ಕೂ ಅಧಿಕ ಭಕ್ತರ ದಂಡು

ಸಮಾಜದಲ್ಲಿ ತುಳಿತಕ್ಕೆ ಒಳಗಾದ ಪ್ರತಿ ವರ್ಗದ ಅಭಿವೃದ್ಧಿಗೆ ಬದ್ಧ: ಮೋದಿ

ಬಸ್ ಚಾಲಕನ ವೇಗಕ್ಕೆ ಕಳಚಿ ಹೋದ ಚಕ್ರ: ಅಪಾಯದಿಂದ ಪಾರಾದ ಪ್ರಯಾಣಿಕರು

ಕುಂದಾಪುರ: ತಾಯಿ ಜೊತೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ

ಅಂಬೇಡ್ಕರ್ ಪ್ರತಿಮೆ ಭಗ್ನ: ಪೊಲೀಸರಿಂದ ವ್ಯಕ್ತಿ ಬಂಧನ