- Friday 13 Dec 2019
ಕುಷ್ಟಗಿಯಲ್ಲಿ ನಿತ್ಯ ಧೂಳು ಮಜ್ಜನ
Team Udayavani, Nov 11, 2019, 2:54 PM IST
ಕುಷ್ಟಗಿ: ಪಟ್ಟಣದ ಮುಖ್ಯ ರಸ್ತೆಗಳಲ್ಲಿ ವಾಹನ ದಟ್ಟನೆ ಹೆಚ್ಚುತ್ತಿರುವ ಜೊತೆಗೆ ಧೂಳಿನ ಪ್ರಮಾಣವೂ ಹೆಚ್ಚಾಗುತ್ತಿದ್ದು, ಇದರಿಂದ ಪಟ್ಟಣ ಧೂಳುಮಯ ರಸ್ತೆಯಲ್ಲಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ.
ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಬಸ್ ನಿಲ್ದಾಣ ಮಾರ್ಗದಲ್ಲಿ ಧೂಳು ಹೆಚ್ಚಾಗಿದೆ. ಬಸ್, ಲಾರಿ ಇತರೇ ವಾಹನಗಳು ಸಂಚರಿಸಿದರೆ ರಸ್ತೆಯೇ ಕಾಣದಷ್ಟು ಧೂಳು ಏಳುತ್ತದೆ. ಧೂಳಿನಿಂದಾಗಿ ಜನ ತೊಂದರೆ ಅನುಭವಿಸುತ್ತಿದ್ದರೂ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಧೂಳಿನಿಂದ ಶ್ವಾಸಕೋಶ, ಉಸಿರಾಟ ಹಾಗೂ ಚರ್ಮರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
ಮುಖ್ಯ ರಸ್ತೆಗಳಲ್ಲಿನ ಗುಂಡಿಗಳನ್ನು ಮರಂ ಮಣ್ಣು ಹಾಕಿ ಮುಚ್ಚಿದ್ದು, ಇದೀಗ ಅದೇ ಮಣ್ಣು ವಾಹನಗಳ ಓಡಾಟದಿಂದ ಮೇಲೇಳುತ್ತಿರುವುದು ಮತ್ತೂಂದು ಸಮಸ್ಯೆಗೆ ಕಾರಣವಾಗಿದೆ. ಅಲ್ಲದೇ ಮುಖ್ಯ ರಸ್ತೆಗಳ ಅಕ್ಕಪಕ್ಕದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ಚರಂಡಿ ತುಂಬಿ ರಸ್ತೆಗೆ ಹರಿಯುವ ಸಂದರ್ಭದಲ್ಲಿ ಮಣ್ಣು ರಸ್ತೆಯಲ್ಲಿ ಹರಡಿಕೊಳ್ಳುತ್ತದೆ. ಒಣಗಿದ ಮೇಲೆ ವಾಹನಗಳ ಓಡಾಟದಿಂದ ಧೂಳು ಮೇಲೇಳುತ್ತಿದೆ.
ರಸ್ತೆ ಬದಿಯ ಅಂಗಡಿಕಾರರು ನಿತ್ಯ ಧೂಳು ಜಾಡಿಸಿ ಬೇಸತ್ತು ಹೋಗಿದ್ದಾರೆ. ಧೂಳಿನ ಭಯಕ್ಕೆ ಬೆಳಗ್ಗೆಯಿಂದ ರಾತ್ರಿಯವರೆಗೂ ಮೂಗಿಗೆ ಬಟ್ಟೆ ಕಟ್ಟಿಕೊಂಡೇ ವ್ಯಾಪಾರ ಮಾಡುವ ದುಸ್ಥಿತಿ ಎದುರಾಗಿದೆ. ಧೂಳಿನ ಹಾವಳಿ ವಿಪರೀತವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ನೀರು ಸಿಂಪಡಿಸಿ ಧೂಳು ನಿಯಂತ್ರಿಸಬೇಕಿದೆ. ಇಲ್ಲವೇ ಧೂಳು ಹೀರುವ ಯಂತ್ರದ ಮೂಲಕ ರಸ್ತೆಯ ಮೇಲಿನ ಮಣ್ಣು ತೆರವುಗೊಳಿಸಬೇಕಿರುವುದು ಅಗತ್ಯವಾಗಿದೆ.
ಸಂಚಾರ ದಟ್ಟಣೆಯಿಂದ ರಸ್ತೆಗಳಲ್ಲಿ ಧೂಳು ವ್ಯಾಪಕವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದರೆ ಪುರಸಭೆ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಇದ್ದರೆ. ಹೆಚ್ಚು ಧೂಳಿನಿಂದ ಅನಾರೋಗ್ಯದ ತೊಂದರೆಗಳಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಕೆಮ್ಮು, ದಮ್ಮು ತೊಂದರೆ ಕಾಣಿಸಿಕೊಳ್ಳುತ್ತಿದೆ. ದಿನ ಕಳೆದಂತೆ ಅಲರ್ಜಿಕ್ ಬ್ರಾಕೈಟೀಸ್ ಆಗುವ ಸಾಧ್ಯತೆಗಳಿವೆ. ಅಲ್ಲದೇ ಡರ್ಮಾಟೈಟೀಸ್ ನಂತಹ ಚರ್ಮ ವ್ಯಾಧಿ ಯೂ ಆಗಬಹುದು ಎನ್ನುತ್ತಾರೆ ವೈದ್ಯರು.
ಈ ವಿಭಾಗದಿಂದ ಇನ್ನಷ್ಟು
-
ಕುಷ್ಟಗಿ: ಪಟ್ಟಣದ ಮಾರುತಿ ವೃತ್ತದ ಎಸ್ಬಿಐ ಬ್ಯಾಂಕ್ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಣ ಕ್ರೋಢೀಕರಣ ಘಟಕವನ್ನು (ಕರೆನ್ಸಿ ಚಸ್ಟ್) ಸೇವೆ ಇದೇ ಡಿ....
-
ಗಂಗಾವತಿ: ನಗರದ ಮಹಾತ್ಮ ಗಾಂಧಿ ವೃತ್ತ ಸೇರಿ ಪ್ರಮುಖ ವೃತ್ತಗಳಲ್ಲಿ ನಗರಸಭೆಯ ಫುಟ್ಪಾತ್ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ಕರವೇ (ಪ್ರವೀಣ ಶೆಟ್ಟಿ)...
-
ಕೊಪ್ಪಳ: 2017-18ನೇ ಸಾಲಿನ ಕಾಮಗಾರಿಗಳನ್ನು ಪೂರ್ಣಗೊಳಿಸಲು ಡಿಸೆಂಬರ್-2019ರ ಅಂತ್ಯದವರೆಗೆ ಕಾಲಮಿತಿ ನಿಗದಿ ಪಡಿಸಲಾಗಿತ್ತು. ಆದರೆ ಇಲ್ಲಿವರೆಗೂ ಬಹುತೇಕ ಕಾಮಗಾರಿಗಳು...
-
ಕೆ.ನಿಂಗಜ್ಜ ಗಂಗಾವತಿ: ತುಂಗಭದ್ರಾ ಡ್ಯಾಂ ಎಡದಂಡೆ ಕಾಲುವೆ 27ನೇ ವಿತರಣಾ ಕಾಲುವೆ ವ್ಯಾಪ್ತಿಯ ಭತ್ತದ ಗದ್ದೆ ಕಟಾವು ಕಾರ್ಯ ನಡೆಯುತ್ತಿದ್ದರೂ,ಕಾಲುವೆ ಮೂಲಕ...
-
ತಾವರಗೇರಾ: ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಸ್ಥಳಿಯ ಪಪಂ ಸಹಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿ ಯೋಜನೆಗಳನ್ನು ಸಾರುವುದಕ್ಕೆ...
ಹೊಸ ಸೇರ್ಪಡೆ
-
ಶಿವಮೊಗ್ಗ: ತಮಿಳು ಸೂಪರ್ ಸ್ಟಾರ್ ವಿಜಯ ಅಭಿನಯದ ಮಹತ್ವಾಕಾಂಕ್ಷೆಯ ದಳಪತಿ ಸಿನಿಮಾ ಶೂಟಿಂಗ್ ಶಿವಮೊಗ್ಗದಲ್ಲಿ ನಡೆಯುತ್ತಿದ್ದು ವಿಜಯ್ ನೋಡಲು ಅಭಿಮಾನಿಗಳು...
-
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯ ರೇಪ್ ಇನ್ ಇಂಡಿಯಾ...
-
ಮೈಸೂರು: ರಾಜ್ಯ ಸರ್ಕಾರ ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಚಿತ್ರನಗರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡದೆ ಮೈಸೂರಿನಲ್ಲೇ ಸ್ಥಾಪಿಸಬೇಕೆಂದು ಒತ್ತಾಯಿಸಿ...
-
ಬೆಂಗಳೂರು: ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿ ಜನರು ಸಂಕಷ್ಟ ಅನುಭವಿಸಿದ್ದು ಗೊತ್ತೇ ಇದೆ. ಉಳ್ಳಾಗಡ್ಡಿ ಬೆಲೆ ದ್ವಿಶತಕ ಸಮೀಪಿಸುತ್ತಿದ್ದಂತೆ ದೇಶದಾದ್ಯಂತ...
-
ಪಿರಿಯಾಪಟ್ಟಣ: ಪಟ್ಟಣದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗ ಮತ್ತು ರಾಜಕಾಲುವೆಗಳ ಸರ್ವೆ ನಡೆಸಿ, ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಪುರ ಸಭಾ ಮುಖ್ಯಾಧಿಕಾರಿ...