ಗಂಗಾವತಿ: ಅಂಜನಾದ್ರಿ ಹುಂಡಿ ಹಣ ಎಣಿಕೆ; 10.24 ಲಕ್ಷ ಸಂಗ್ರಹ
Team Udayavani, Sep 24, 2020, 8:08 PM IST
ಗಂಗಾವತಿ: ತಾಲ್ಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇಗುಲದ ಭಕ್ತರ ಕಾಣಿಕೆ ಹುಂಡಿ ಹಣ ಎಣಿಕೆ ಗುರುವಾರ ತಹಸೀಲ್ದಾರ್ ಆರ್. ಕವಿತಾ ನೇತೃತ್ವದಲ್ಲಿ ಜರುಗಿತು.
ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 23 ರಂದು ದೇಗುಲ ಬಂದ್ ಮಾಡಲಾಗಿತ್ತು. ಮೇ 30ರಂದು ಹುಂಡಿಯನ್ನು ಎಣಿಕೆ ಮಾಡಿದ ಸಂದರ್ಭದಲ್ಲಿ 3.08.634 ರೂ. ಸಂಗ್ರಹವಾಗಿತ್ತು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಪ್ರಥಮ ದರ್ಜೆ ಸಹಾಯಕ ಮಹೇಶ ದಲಾಲ ಸೇರಿ ದೇಗುಲ ಸಮಿತಿ ಸಿಬ್ಬಂದಿಗಳಿದ್ದರು.
ಕಳೆದ ಮಾ.23 ರಿಂದ ಆಗಸ್ಟ್ 04 ರವರೆಗೆ ದೇವಸ್ಥಾನವು ಕೋವಿಡ್ ಕಾರಣದಿಂದ ಬಂದ್ ಆಗಿದ್ದು ಆ.05 ರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಸಾರ್ವಜನಿಕ ದರ್ಶನಕ್ಕೆ ತೆರೆಯಲಾಗಿದೆ. ಅಲ್ಲಿಂದ ಇಂದಿನವರೆಗಿನ ಸಂಗ್ರಹವಾಗಿದ್ದ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು 10.24 ಲಕ್ಷ ರೂ. ಸಂಗ್ರಹವಾಗಿದೆ.