ಆಫ್ರಿಕಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ಗಂಗಾವತಿ ಯುವಕ 

Team Udayavani, Aug 9, 2021, 1:09 PM IST

srerew

ಕೊಪ್ಪಳ: ನಾಲ್ಕು ತಿಂಗಳ ಹಿಂದಷ್ಟೇ ಉದ್ಯೋಗ ಅರಸಿ ಆಫ್ರಿಕಾದ ಲಿಬೇರಿಯಾಗೆ ತೆರಳಿದ್ದ ಗಂಗಾವತಿಯ ಹೆಡ್ರಾಲಿಕ್‌ ಮೆಕ್ಯಾನಿಕ್‌ ತೊಂದರೆಗೆ ಸಿಲುಕಿದ್ದಾನೆ. ನನಗೆ ಊಟ ಸರಿಯಾಗಿ ಸಿಗುತ್ತಿಲ್ಲ, ಗುಡ್ಡಗಾಡಿನಲ್ಲಿ ಕಂಪನಿ ಕೆಲಸ ನೀಡಿದೆ. ವೇತನವೂ ಸಿಗುತ್ತಿಲ್ಲ. ಕೂಡಲೇ ನನ್ನ ದೇಶಕ್ಕೆ ಕಳುಹಿಸಿಕೊಡಿ, ನನಗೆ ನೆರವಾಗಿ ಎಂದು ಏಮ್ಸ್‌ ಇಂಡಿಯಾ ಸಂಸ್ಥೆಗೆ ಮೊರೆ ಇಟ್ಟಿದ್ದಾನೆ.

ಏಮ್ಸ್‌ ಸಂಸ್ಥೆಯೂ ಈತನ ನೆರವಿಗೆ ಧಾವಿಸಿದ್ದು, ಭಾರತ ಸರ್ಕಾರಕ್ಕೂ, ಸಿಎಂ ಬೊಮ್ಮಾಯಿ ಅವರಿಗೂ ಪತ್ರ ಬರೆದು ನೆರವಾಗುವಂತೆ ಕೇಳಿಕೊಂಡಿದೆ. ಗಂಗಾವತಿಯ ಯುವಕ ಮೆಹಬೂಬಸಾಬ್‌ ಹೆಡ್ರಾಲಿಕ್‌ ಮೆಕ್ಯಾನಿಕ್‌ ಆಗಿದ್ದು, ಕೋವಿಡ್‌ ಬಳಿಕ ಕೆಲಸಕ್ಕೆ ಹುಡುಕಾಟ ನಡೆಸಿದ್ದ ವೇಳೆ ಆಫ್ರಿಕಾದಲ್ಲಿನ ಸೆನೋ ಎನ್ನುವ ಕಂಪನಿಯಲ್ಲಿ ಕೆಲಸ ದೊರೆತಿದೆ. ಕಂಪನಿಯೂ ಈತನಿಗೆ ವೀಸಾ ವ್ಯವಸ್ಥೆ ಮಾಡಿ ತನ್ನ ಕೆಲಸಕ್ಕೆ ಕರೆಸಿಕೊಂಡು ಜೆಸಿಬಿ, ಇಟಾಚಿ ನೋಡಿಕೊಳ್ಳುವ ಮೇಲುಸ್ತುವಾರಿ ನೀಡಿದೆ. ಆದರೆ ಈತನಿಗೆ ಕಂಪನಿ ಯಾವುದೋ ಗುಡ್ಡಗಾಡು ಪ್ರದೇಶದಲ್ಲಿ ಕೆಲಸ ನೀಡಿದೆ. ಮೊದಲ ತಿಂಗಳು ಹೊಸ ಅನುಭವ ಎನ್ನುತ್ತ ಕೆಲಸಕ್ಕೆ ಸೇರಿಕೊಂಡಿರುವ ಮಹೆಬೂಬಸಾಬ್‌ಗ 4 ತಿಂಗಳಿಂದಲೂ ಕಂಪನಿ ವೇತನವನ್ನೇ ಕೊಟ್ಟಿಲ್ಲವಂತೆ. ಸರಿಯಾದ ಊಟವನ್ನೂ ಪೂರೈಸಿಲ್ಲವಂತೆ. ಇದರಿಂದ ಕಂಗಾಲಾದ ಈತ ತನಗೆ ಆಗುತ್ತಿರುವ ಸಂಕಷ್ಟ ಕುರಿತು ಆಡಿಯೋ ಮಾಡಿ ವಿದೇಶದಲ್ಲಿಯೇ ಕನ್ನಡಿಗರು ಸ್ಥಾಪಿಸಿರುವ ಏಮ್‌ ಇಂಡಿಯಾ ಸಂಸ್ಥೆಗೆ ತಲುಪಿಸಿದ್ದಾನೆ.

ದಯವಿಟ್ಟು ನನ್ನನ್ನು ಭಾರತಕ್ಕೆ ಕಳುಹಿಸಿಕೊಡಿ. ಇಲ್ಲಿ ನನಗಾಗುತ್ತಿರುವ ತೊಂದರೆ ತಪ್ಪಿಸಿ ಎಂದು ಅಳಲು ತೋಡಿಕೊಂಡಿದ್ದಾನೆ. ಸಂಸ್ಥೆಯು ಈತನ ಸಮಸ್ಯೆ ಅರಿತು ತಕ್ಷಣ ಸ್ಪಂದಿಸಿದ್ದು, ಲಿಬೇರಿಯಾದಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ರವಾನಿಸಿದೆ.

ಕೇಂದ್ರ ಸರ್ಕಾರಕ್ಕೂ ಪತ್ರ: ಏಮ್ಸ್‌ ಇಂಡಿಯಾ ಸಂಸ್ಥೆಯು ಲೆಬಿರಿಯಾದಲ್ಲಿನ ಭಾರತೀಯ ಕಚೇರಿ, ಭಾರತ ಸರ್ಕಾರದ ವಿದೇಶಾಂಗ ಸಚಿವ ಜೈಶಂಕರ್‌, ವಿ. ಮುರಳೀಧರನ್‌, ಮೀನಾಕ್ಷಿ ಅವರು ಸೇರಿದಂತೆ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಆ.7ರಂದು ಯುವಕನ ಪಾಸ್‌ಪೋರ್ಟ್‌ ವಿವರದೊಂದಿಗೆ ಪತ್ರ ಬರೆದಿದೆ. ಯುವಕನ ನೆರವಿಗೆ ಬರಲು ಕೋರಿದೆ.

ನನ್ನ ಸಹೋದರ ಇತ್ತೀಚೆಗಷ್ಟೇ ಆಫ್ರಿಕಾದ ಲಿಬೇರಿಯಾಗೆ ತೆರಳಿದ್ದಾನೆ. ಅಲ್ಲಿ ವೇತನ ಸರಿಯಾಗಿ ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದು, ಭಾರತಕ್ಕೆ ವಾಪಸ್‌ ಬರುವುದಾಗಿ ತಿಳಿಸಿದ್ದಾನೆ. ಟಿಕೆಟ್‌ ಮಾಡಲು  ಪ್ರಯತ್ನಿಸುತ್ತಿದ್ದಾನೆ. ಆದರೆ ಆತನಿಗೆ ಟಿಕೆಟ್‌ ಲಭ್ಯವಾಗುತ್ತಿಲ್ಲ ಎಂದಷ್ಟೇ ನಮ್ಮ ಮುಂದೆ  ಹೇಳಿಕೊಂಡಿದ್ದಾನೆ. (ಆಯೂಬ್‌ ಶೇಕ್‌, ಮೆಹಬೂಬಸಾಬ್‌ ಸಹೋದರ)

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.