Udayavni Special

ಭೈರಾಪೂರ ಬ್ಯಾರೇಜ್‌ಗೆ ಗವಿಶ್ರೀ ಭೇಟಿ

Team Udayavani, Feb 18, 2020, 3:33 PM IST

kopala-tdy-1

ಕೊಪ್ಪಳ: ನಗರ ಸಮೀಪದ 26 ಕಿಲೋ ಮೀಟರ್‌ ಹಳ್ಳ ಸ್ವಚ್ಛ ಮಾಡಿ ದೇಶದ ಗಮನ ಸೆಳೆದ ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ತಾಲೂಕಿನ ಭೈರಾಪೂರ ಗ್ರಾಮ ಸಮೀಪದ ಬ್ರಿಡ್ಜ್ ಕಂ ಬ್ಯಾರೇಜ್‌ ಸ್ಥಳಕ್ಕೆ ಭೇಟಿ ನೀಡಿ ಹೂಳೆತ್ತುವ ಪ್ರಸ್ತಾಪ ಮಾಡಿದ್ದಾರೆ.

ತಾಲೂಕಿನ ಭೈರಾಪೂರ ಗ್ರಾಮಕ್ಕೆ ರವಿವಾರ ಸಂಜೆ ಸದ್ದಿಲ್ಲದೇ ತೆರಳಿದ ಶ್ರೀಗಳು ಹೂಳು ತುಂಬಿಕೊಂಡಿರುವ ಬ್ರಿಜ್‌ ಕಂ ಬ್ಯಾರೇಜ್‌ನ್ನು ವೀಕ್ಷಣೆ ಮಾಡಿದರು. ಬ್ಯಾರೇಜ್‌ ನಿರ್ಮಾಣ ಮಾಡಿ 4 ವರ್ಷ ಗತಿಸಿದ್ದು ಎಲ್ಲ ಗೇಟ್‌ಗಳು ಕಿತ್ತು ಹೋಗಿವೆ. ಸೇತುವೆಯಲ್ಲಿ ಹೂಳು ತುಂಬಿದ್ದರಿಂದ ನೀರು ಸಂಗ್ರಹ ಆಗುತ್ತಿರಲಿಲ್ಲ. ಇದರ ಮಾಹಿತಿ ಅರಿತ ಶ್ರೀಗಳು ಸದ್ದಿಲ್ಲದೇ ಗ್ರಾಮಕ್ಕೆ ತೆರಳಿದ್ದರು. ಶ್ರೀಗಳು ಊರಿಗೆ ಆಗಮಿಸಿದ್ದನ್ನು ನೋಡಿದ ಜನ ನಮ್ಮೂರಿಗೆ ದೇವರೇ ಬಂದರೆಂದು ಎಲ್ಲೆಡೆಯೂ ಅವರಿಗೆ ಸ್ವಾಗತ ದೊರೆಯಿತು. ಆದರೆ ನೇರ ಸೇತುವೆಯ ಸ್ಥಳಕ್ಕೆ ತೆರಳಿದ ಶ್ರೀಗಳು ಹೂಳು ತುಂಬಿಕೊಂಡಿರುವುದನ್ನು, ಗೇಟ್‌ ಇರದೇ ಇರುವುದನ್ನು ಗಮನಿಸಿದರು.

ಅಲ್ಲದೇ ಗ್ರಾಮ ಸಮೀಪವೇ ಇನ್ನೆರಡು ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಾಣಕ್ಕೂ ಶ್ರೀಗಳು ಮನಸ್ಸು ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಸೀಮೆ ಹಳ್ಳಕ್ಕೆ ಹಾಗೂ ದೊಡ್ಡಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲು ಇಂಜಿನಿಯರ್‌ ಜೊತೆ ಸ್ಥಳ ಪರಿಶೀಲನೆಯೂ ಮಾಡಿದ್ದಾರೆ. ಈ ಭಾಗದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಾಣ ಮಾಡಿದರೆ 400ಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಮಳೆಗಾಲದ ಸಂದರ್ಭದಲ್ಲಿ ನೀರು ಸಂಗ್ರಹವಾಗಿ ರೈತರ ಬದುಕು ಬಂಗಾರವಾಗಲಿದೆ. ಹಳ್ಳದ ಎರಡೂ ಬದಿ ಅಂತರ್ಜಲ ಪ್ರಮಾಣ ಹೆಚ್ಚಳವಾಗಲಿದೆ.
ಈ ಗ್ರಾಮಕ್ಕೆ ಶ್ರೀಗಳು ಸದ್ದಿಲ್ಲದೇ ಬಂದು ಸೇತುವೆ ನೋಡಿ ತೆರಳಿದ್ದು ಸ್ವತಃ ಗ್ರಾಮಸ್ಥರಲ್ಲಿಯೇ ಅಚ್ಚರಿ ಮೂಡಿಸಿದೆ.

ಶ್ರೀಗಳು ನಮ್ಮೂರಿಗೆ ಆಗಮಿಸಿದ್ದಾರೆಂದರೆ ನಮ್ಮೂರಿನ ಸಮಸ್ಯೆ ಬಗೆ ಹರಿದಂತಾಗಲಿದೆ. ರೈತರ ಬದುಕಿಗೆ ಒಂದು ಮಾರ್ಗ ಸಿಕ್ಕಂತಾಗಲಿದೆ ಎನ್ನುವ ಕನಸು ಕಂಡಿದ್ದಾರೆ. ಶ್ರೀಗಳಿಗೆ ಗ್ರಾಪಂ ಸದಸ್ಯ ನಿಂಗಪ್ಪ ಮೇಟಿ, ದೇವಪ್ಪ ಮೇಟಿ, ದೇವಪ್ಪ ರಡ್ಡೆರ್‌, ಯಲ್ಲಪ್ಪ ಹರನಾಳಗಿ, ರವಿ ಮೇಟಿ, ರಾಮಣ್ಣ ಸನ್ನಪೂರ, ಭರಮಪ್ಪ ಸಿಂದೋಗಿ, ಬಸಯ್ಯ ಸಿಂದೋಗಿ, ಸಿದ್ಲಿಂಗಪ್ಪ ಹೊಳಿಯಾಚಿ, ಶರಣಪ್ಪ ತಟ್ಟಿ, ಕೊಟ್ರಯ್ಯ ಸಸಿ, ಶರೀಫ್‌ಸಾಬ್‌ ಬೆಳಗಟ್ಟಿ ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಕೊರಟಗೆರೆ ಪೊಲೀಸರು

ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಕೊರಟಗೆರೆ ಪೊಲೀಸರು

ಸೋಮಣ್ಣ, ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ : ಆರ್‌. ಅಶೋಕ್‌ ಸ್ಪಷ್ಟನೆ

ಸೋಮಣ್ಣ, ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ : ಆರ್‌. ಅಶೋಕ್‌ ಸ್ಪಷ್ಟನೆ

ತುಮಕೂರು ಬಳಿ ಖಾಸಗಿ ಬಸ್‌ ಮತ್ತು ಸರಕು ಸಾಗಣೆ ವಾಹನ ಅಪಘಾತ: ನಾಲ್ವರ ದುರ್ಮರಣ

ತುಮಕೂರು ಬಳಿ ಖಾಸಗಿ ಬಸ್‌ ಮತ್ತು ಸರಕು ಸಾಗಣೆ ವಾಹನ ಅಪಘಾತ : ನಾಲ್ವರ ದುರ್ಮರಣ

ghghhtyht

ಕೋವಿಡ್: ರಾಜ್ಯದಲ್ಲಿಂದು 326 ಹೊಸ ಪ್ರಕರಣ ಪತ್ತೆ | 380 ಸೋಂಕಿತರು ಗುಣಮುಖ

covid

ಪರಿಸ್ಥಿತಿಯ ಆಧಾರದ ಮೇಲೆ ಮಕ್ಕಳಿಗೆ ಕೋವಿಡ್ ಲಸಿಕೆ :ವಿ.ಕೆ.ಪಾಲ್

Untitled-1

ಶಶಿಕಲಾ ಎಐಎಡಿಎಂಕೆಯ ಸ್ವಯಂಘೋಷಿತ ಪ್ರಧಾನ ಕಾರ್ಯದರ್ಶಿ!

skit

ಸ್ಕಿಟ್‌ನಲ್ಲಿ ಭಾವನೆಗಳಿಗೆ ಧಕ್ಕೆ: ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ಏಮ್ಸ್ ವಿದ್ಯಾರ್ಥಿ ಸಂಘ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hfghftytr

ಗುಳದಾಳಕ್ಕೆ ನಡೆದುಕೊಂಡು ಬಂದ ಜಿಲ್ಲಾಧಿಕಾರಿ 

anjan

ಅಂಜನಾದ್ರಿಗೆ ಹರಿದು ಬಂದ ಪ್ರವಾಸಿಗರ ದಂಡು : ಬೆಟ್ಟ ಹತ್ತಲು ಕ್ಯೂ

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಗಂಗಾವತಿ: ಹೆಚ್ಚಳವಾಗುತ್ತಿರುವ ಅನಾಥ ವಯೋವೃದ್ಧರು, ಭಿಕ್ಷುಕರ ಸಂಖ್ಯೆ ಜಿಲ್ಲಾಡಳಿತ ಮೌನ

ಗಂಗಾವತಿ: ಹೆಚ್ಚಳವಾಗುತ್ತಿರುವ ಅನಾಥ ವಯೋವೃದ್ಧರು, ಭಿಕ್ಷುಕರ ಸಂಖ್ಯೆ ಜಿಲ್ಲಾಡಳಿತ ಮೌನ

dasara festival

ವೈಭವದ ಹೇಮಗುಡ್ಡ ಅಂಬಾರಿ ಮೆರವಣಿಗೆ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

hfghtyht

ದಾಂಡೇಲಿ :  ಅಪರಿಚಿತ ವಾಹನ ಡಿಕ್ಕಿ : ಪಾದಚಾರಿ ಸಾವು

ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಕೊರಟಗೆರೆ ಪೊಲೀಸರು

ನಕಲಿ ನಂಬರ್ ಪ್ಲೇಟ್ ಬಳಸಿ ಬೈಕ್ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಕೊರಟಗೆರೆ ಪೊಲೀಸರು

ಸೋಮಣ್ಣ, ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ : ಆರ್‌. ಅಶೋಕ್‌ ಸ್ಪಷ್ಟನೆ

ಸೋಮಣ್ಣ, ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ : ಆರ್‌. ಅಶೋಕ್‌ ಸ್ಪಷ್ಟನೆ

ಬಿಜೆಪಿ ಅಧಿಕಾರವಧಿಯಲ್ಲಿಯೇ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಿಜೆಪಿ ಅಧಿಕಾರವಧಿಯಲ್ಲಿಯೇ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ

ತುಮಕೂರು ಬಳಿ ಖಾಸಗಿ ಬಸ್‌ ಮತ್ತು ಸರಕು ಸಾಗಣೆ ವಾಹನ ಅಪಘಾತ: ನಾಲ್ವರ ದುರ್ಮರಣ

ತುಮಕೂರು ಬಳಿ ಖಾಸಗಿ ಬಸ್‌ ಮತ್ತು ಸರಕು ಸಾಗಣೆ ವಾಹನ ಅಪಘಾತ : ನಾಲ್ವರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.