ಗವಿಸಿದ್ದೇಶ್ವರ ಜಾತ್ರೆ: ಶಿವಶಾಂತವೀರ ಶರಣರಿಂದ ದೀರ್ಘದಂಡ ನಮಸ್ಕಾರ
Team Udayavani, Jan 31, 2021, 10:29 AM IST
ಕೊಪ್ಪಳ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸದ ಪ್ರಯುಕ್ತ ಪ್ರತಿ ವರ್ಷದ ಸಂಪ್ರದಾಯದಂತೆ ಬಳಗಾನೂರಿನ ಶ್ರೀ ಶಿವಶಾಂತ ವೀರ ಶರಣರು ಗವಿಮಠದ ಮೈದಾನದಿಂದ ಮಠದ ಕತೃ ಗದ್ದುಗೆಯವರೆಗೂ ಹೂವಿನ ಹಾಸಿನಲ್ಲಿ ದೀರ್ಘ ದಂಡ ನಮಸ್ಕಾರ ಹಾಕಿದರು.
ಗವಿಸಿದ್ದೇಶ್ವರ ಜಯಘೋಷ ಮೊಳಗಿಸುತ್ತಾ, ಸ್ವಾಮೀಜಿಗಳ ನೆನೆಯುತ್ತಾ ಭಕ್ತಿಯಿಂದ ದೀರ್ಘ ದಂಡ ನಮಸ್ಕಾರ ಹಾಕಿದರು.
ಈ ಹಿಂದಿನ ಚನ್ನವೀರ ಶರಣರು ಜಾತ್ರಾ ಮಹಾ ರಥೋತ್ಸವ ನಡೆದ ಮರುದಿನ ದೀರ್ಘ ದಂಡ ನಮಸ್ಕಾರ ಹಾಕುತ್ತಾ ತಮ್ಮ ಗುರುಗಳ ನೆನೆಯುತ್ತಾ ಭಕ್ತಿ ತೋರುತ್ತಿದ್ದರು. ಅವರು ಲಿಂಗ್ಯಕ್ಯರಾದ ಬಳಿಕ ಈಗಿನ ಶಿವಶಾಂತವೀರ ಶರಣರು ತಮ್ಮ ಗುರುವಿನ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಇದನ್ನೂ ಓದಿ:ನುಕ್ಯಾಡಿ ಉದ್ಭವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಸಚಿವ ಈಶ್ವರಪ್ಪ ಭೇಟಿ
ಪ್ರತಿ ವರ್ಷದ ಜಾತ್ರಾ ರಥೋತ್ಸವ ನಡೆದ ಮರು ದಿನದ ಬಳಿಕ ಸಂಜೆ ದೀರ್ಘದಂಡ ನಮಸ್ಕಾರ ಹಾಕುತ್ತಿದ್ದರು. ಅವರ ಹಿಂದೆ ಸಾವಿರಾರು ಭಕ್ತರು ದೀರ್ಘದಂಡ ನಮಸ್ಕಾರವನ್ನ ಹಾಕುತ್ತಿದ್ದರು. ಆದರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಶಿವಶಾಂತವೀರ ಶರಣರು ಇಂದು ಬೆಳಗ್ಗೆ 7 ಗಂಟೆ ವೇಳೆಗೆ ಹೂವಿನ ಹಾಸಿನಲ್ಲಿ ದೀರ್ಘದಂಡ ನಮಸ್ಕಾರ ಹಾಕಿದರು. ವಾದ್ಯ ಮೇಳದ ಮೆರವಣಿಗೆಯು ಜರುಗಿತು.