Udayavni Special

ಉತ್ತಮ ಆರೋಗ್ಯ ಎಲ್ಲರ ಹಕ್ಕು

•ಜಲಮೂಲ ಸ್ವಚ್ಛತೆಗೆ ಆದ್ಯತೆ ನೀಡಿ•ಸ್ವಾಭಿಮಾನಕ್ಕಾಗಿ ಶೌಚಾಲಯ ಬಳಸಿ

Team Udayavani, Jul 14, 2019, 4:16 PM IST

kopala-tdy-4..

ಯಲಬುರ್ಗಾ: ಸ್ವಚ್ಛತಾ ಕಾರ್ಯಾಗಾರದಲ್ಲಿ ಲಕ್ಷ್ಮೀ ಗೌಡ್ರ ಮಾತನಾಡಿದರು.

ಯಲಬುರ್ಗಾ: ಉತ್ತಮ ಆರೋಗ್ಯ ಪ್ರತಿಯೊಬ್ಬರ ಹಕ್ಕಾಗಿದೆ. ಸರ್ಕಾರಗಳು ನಾನಾ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿವೆ ಎಂದು ತಾಲೂಕು ಪಂಚಾಯತ್‌ ಅಧ್ಯಕ್ಷೆ ಲಕ್ಷ್ಮೀ ಗೌಡ್ರ ಹೇಳಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಸ್ವಚ್ಛ ಭಾರತ ಮೀಷನ್‌ ಯೋಜನೆಯಡಿ ತಾಲೂಕು ಯುನಿಸೇಫ್‌ ಘಟಕ, ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ ವತಿಯಿಂದ ಹಮ್ಮಿಕೊಂಡ ಮಾದರಿ ಗ್ರಾಮ ಪಂಚಾಯಿತಿಯ ಕ್ಷೇತ್ರಮಟ್ಟದ ಕಾರ್ಯಕರ್ತರಿಗೆ ಹಾಗೂ ಸ್ಥಾಯಿ ಸಮಿತಿ ಸದಸ್ಯರಿಗೆ ಸಾಮರ್ಥ್ಯ ಅಭಿವೃದ್ಧಿ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯರಾದ ನಾವುಗಳು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಸಾಕಷ್ಟು ಮುಂದುವರಿದಿರುವ ಈ ದಿನಗಳಲ್ಲಿ ಸ್ವಚ್ಛತೆ ಹಾಗೂ ಶೌಚಾಲಯ ಬಳಕೆ ವಿಷಯ ಬಂದಾಗ ನಾವು ಇನ್ನು ಯಾವ ಕಾಲದಲ್ಲಿ ಇದ್ದೇವೆ ಎಂದು ಹೇಳುವುದಕ್ಕೆ ತಲೆತಗ್ಗಿಸಬೇಕಾಗಿದೆ. ಗ್ರಾಮಗಳಲ್ಲಿ ರಚನೆಯಾಗಿರುವ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಗಳು ಕ್ರಿಯಾಶೀಲತೆಯಿಂದ ಕೆಲಸ ಮಾಡಬೇಕಿದೆ. ಕುಡಿಯುವ ನೀರಿನ ಮೂಲಗಳ ಸ್ವಚ್ಛತೆಗೆ ಪ್ರತಿ ಗ್ರಾಪಂ ವತಿಯಿಂದ ಬ್ಲೀಚಿಂಗ್‌ ಪುಡಿ ಖರೀದಿ ಮಾಡಿ ಸಿಂಪರಣೆ ಮಾಡುವುದಕ್ಕೆ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ತಾಪಂ ಇಒ ಡಾ| ಡಿ. ಮೋಹನ್‌ ಮಾತನಾಡಿ, ಕೆಲ ವರ್ಷಗಳಿಂದ ತಾಲೂಕಿನಲ್ಲಿ ಶೌಚಾಲಯ ನಿರ್ಮಾಣ ಹಾಗೂ ಬಳಕೆ ಮಾಡುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಆದರೆ ನಿರೀಕ್ಷೆಯಂತೆ ಇನ್ನು ಪೂರ್ಣ ಪ್ರಮಾಣದಲ್ಲಿ ಸಾಧನೆ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎನ್ನುವ ಬೇಸರ ಇದೆ. ಶೌಚಾಲಯ ನಿರ್ಮಾಣ ಹಾಗೂ ಬಳಕೆ ಮಾಡುವ ಬಗ್ಗೆ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ನಾನಾ ಇಲಾಖೆಯ ಅಧಿಕಾರಿಗಳು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಶೌಚಾಲಯ ನಿರ್ಮಾಣ ಮಾಡಿಕೊಂಡ ಕೆಲವರು ಶೌಚಾಲಯ ಬಳಸುತ್ತಿಲ್ಲ. ಸ್ವಾಭಿಮಾನಕ್ಕಾಗಿ ಶೌಚಾಲಯ ಎನ್ನುವುದನ್ನು ಅರಿಯಬೇಕು ಎಂದು ಹೇಳಿದರು.

ಯುನಿಸೇಫ್‌ ತಾಲೂಕು ಸಂಯೋಜಕ ಭೀಮಣ್ಣ ಹವಳಿ ಮಾತನಾಡಿ, ತಾಲೂಕಿನ ಇಟಗಿ, ಮಸಬಹಂಚಿನಾಳ, ಹೀರೆವಂಕಲಕುಂಟಾ, ಮುಧೋಳ, ಸಂಕನೂರ ಗ್ರಾಪಂಗಳು ಶೌಚಾಲಯ ನಿರ್ಮಾಣ, ಬಳಕೆಯಲ್ಲಿ ಉತ್ತಮ ಸಾಧನೆ ಮಾಡಿವೆ. ಮುಂಬರು ದಿನಗಳಲ್ಲಿ ಎಲ್ಲ ಗ್ರಾಪಂಗಳಲ್ಲಿ ಶೌಚಾಲಯ, ಸ್ವಚ್ಛತೆ ಬಗ್ಗೆ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಆರೋಗ್ಯ ಇಲಾಖೆಯ ಅಧಿಕಾರಿ ಎಸ್‌.ಡಿ. ಬೆನ್ನೂರ, ಹನುಂತಗೌಡ ಪಾಟೀಲ್, ಬಸವರಾಜ ಸೂಡಿ ಸೇರಿದಂತೆ ಇನ್ನಿತರರು ಉಪನ್ಯಾಸ ನೀಡಿದರು.

ಟಾಪ್ ನ್ಯೂಸ್

Teenage Cell Phone Addiction: Are You Worried About Your Child?

ನಿಮ್ಮ ಮಕ್ಕಳು ಫೋನ್ ಚಟಕ್ಕೆ ಒಳಗಾಗಿದ್ದಾರೆ ಎಂದು ಹೇಗೆ ತಿಳಿಯಬಹುದು..? ಇಲ್ಲಿದೆ ಮಾಹಿತಿ

asfgnbvcxsdfg

ನೇಣು ಬಿಗಿದುಕೊಂಡು ಕೋವಿಡ್ ಸೋಂಕಿತ ಆತ್ಮಹತ್ಯೆ

covid Task Force Committee Meeting

ಮೂಡುಬಿದಿರೆ: ಕೋವಿಡ್ ಟಾಸ್ಕ್ ಫೊರ್ಸ್ ಸಮಿತಿ ಸಭೆ

ಚಂದ್ರನಲ್ಲಿ ಉಂಟಾಗಿದೆ ಭೂಕುಸಿತ : ನಾಸಾ ಸಂಶೋಧನೆಯಲ್ಲಿ ಕಂಡು ಬಂದಿದೆ ಅಚ್ಚರಿ ಅಂಶ

ಚಂದ್ರನಲ್ಲಿ ಉಂಟಾಗಿದೆ ಭೂಕುಸಿತ : ನಾಸಾ ಸಂಶೋಧನೆಯಲ್ಲಿ ಕಂಡು ಬಂದಿದೆ ಅಚ್ಚರಿ ಅಂಶ

Parul Yadav Positive Talk

ಪಾರುಲ್‌ ಯಾದವ್‌ ಪಾಸಿಟಿವ್‌ ಟಾಕ್‌

m

ಕೋವಿಡ್ ರೋಗಿಯ ಮೇಲೆ ಅತ್ಯಾಚಾರ-ಸಂತ್ರಸ್ತೆ ಸಾವು : ತಿಂಗಳ ನಂತರ ಪ್ರಕರಣ ಬೆಳಕಿಗೆ

ಒಂದೇ ಕುಟುಂಬದ 11 ಮಂದಿ ಮನೆಯಲ್ಲೇ ಇದ್ದು ಕೋವಿಡ್ -19 ಗೆದ್ದರು!

ಒಂದೇ ಕುಟುಂಬದ 11 ಮಂದಿ ಮನೆಯಲ್ಲೇ ಇದ್ದು ಕೋವಿಡ್ -19 ಗೆದ್ದರು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

covid effect

ಎಲ್ಲ ಉದ್ಯಮಗಳಿಗೂ ಕೋವಿಡ್‌ ಕಂಟಕ

hjgutyuty

ಕೆರೆ ತುಂಬಿಸುವ ಯೋಜನೆ ವರದಾನ

ghftytyt

ಸೋಂಕಿತರಲಿ ಆತ್ಮಸ್ಥೈರ್ಯ ಹೆಚ್ಚಿಸಿದ ಗವಿಮಠ

ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಉತ್ತಮ ಮಳೆ: ರೈತರಿಗೆ ಹರ್ಷ

ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಉತ್ತಮ ಮಳೆ: ರೈತರಿಗೆ ಹರ್ಷ

ಗವಿಮಠದಲ್ಲಿ ನಿರ್ಮಾಣಗೊಂಡ 100 ಆಕ್ಸಿಜನ್ ಬೆಡ್ ಗಳ ಕೋವಿಡ್ ಆಸ್ಪತ್ರೆ ಲೋಕಾರ್ಪಣೆ

ಗವಿಮಠದಲ್ಲಿ ನಿರ್ಮಾಣಗೊಂಡ 100 ಆಕ್ಸಿಜನ್ ಬೆಡ್ ಗಳ ಕೋವಿಡ್ ಆಸ್ಪತ್ರೆ ಲೋಕಾರ್ಪಣೆ

MUST WATCH

udayavani youtube

ರಾಬರ್ಟ್ ಚಿತ್ರ Tonic ಆಯ್ತು

udayavani youtube

ತನ್ನ ಮದುವೆಗೆ ತಾನೇ ಬ್ಯಾಂಡ್ ಬಾರಿಸಿದ ಮದುಮಗ

udayavani youtube

ಸರ್ವಾಧಿಕಾರಿ ಧೋರಣೆಗೆ ಆಕ್ರೋಶ : ಉನ್ನಾವ್ನಲ್ಲಿ ವೈದ್ಯರಿಂದ ಸಾಮೂಹಿಕ ರಾಜೀನಾಮೆ

udayavani youtube

ಬೆಂಗಳೂರು: ಮನೆ ಬಾಗಿಲಿಗೆ ಬರಲಿದೆ ಆಕ್ಸಿಜನ್‌ ಬಸ್‌

udayavani youtube

18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ

ಹೊಸ ಸೇರ್ಪಡೆ

asfgnbvcxsdfg

ನೇಣು ಬಿಗಿದುಕೊಂಡು ಕೋವಿಡ್ ಸೋಂಕಿತ ಆತ್ಮಹತ್ಯೆ

Teenage Cell Phone Addiction: Are You Worried About Your Child?

ನಿಮ್ಮ ಮಕ್ಕಳು ಫೋನ್ ಚಟಕ್ಕೆ ಒಳಗಾಗಿದ್ದಾರೆ ಎಂದು ಹೇಗೆ ತಿಳಿಯಬಹುದು..? ಇಲ್ಲಿದೆ ಮಾಹಿತಿ

Berkeley Mass Teaser

ಬರ್ಕ್ಲಿ ಮಾಸ್‌ ಟೀಸರ್‌

covid Task Force Committee Meeting

ಮೂಡುಬಿದಿರೆ: ಕೋವಿಡ್ ಟಾಸ್ಕ್ ಫೊರ್ಸ್ ಸಮಿತಿ ಸಭೆ

The only hope is light

ಭರವಸೆಯೊಂದೇ ಬೆಳಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.