ಚಿಹ್ನೆ ಹಿಡಿದು ಪ್ರಚಾರಕ್ಕಿಳಿದ ಅಭ್ಯರ್ಥಿಗಳು

| ಹಳ್ಳಿ ಚುನಾವಣೆಗೆ ಪ್ರತಿಷ್ಠೆ ಪಣಕ್ಕಿಟ್ಟಿವೆ ರಾಷ್ಟ್ರೀಯ ಪಕ್ಷಗಳು | ಮತದಾರರ ಓಲೈಕೆಗೆ ಅಭ್ಯರ್ಥಿಗಳ ತಂತ್ರಗಾರಿಕೆ

Team Udayavani, Dec 15, 2020, 4:09 PM IST

ಚಿಹ್ನೆ ಹಿಡಿದು ಪ್ರಚಾರಕ್ಕಿಳಿದ ಅಭ್ಯರ್ಥಿಗಳು

ಸಾಂದರ್ಭಿಕ ಚಿತ್ರ

ಕೊಪ್ಪಳ: ಜಿಲ್ಲೆಯ 73 ಗ್ರಾಪಂಗಳಿಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಅಭ್ಯರ್ಥಿಗಳು ತಮ್ಮ ನಾಮಪತ್ರವು ದೃಢವಾದ ತಕ್ಷಣವೇ ಚಿಹ್ನೆ ಪಡೆದು ಗ್ರಾಮಗಳಲ್ಲಿ ಪ್ರಚಾರಕ್ಕಿಳಿದಿದ್ದಾರೆ.

ಯಪ್ಪಾ ದೇವ್ರು.. ನನಗೊಂದು ಓಟ್‌ ಕೊಡಿ, ನಿಮ್ಮನ್ನ ಕೈ ಮುಗಿದು ಬೇಡುವೆ.. ಕಾಲು ಬೀಳುವೆ.. ನನ್ನನ್ನು ಗೆಲ್ಲಿಸಿಎಂದು ಜನರಲ್ಲಿ ಮನವಿ ಮಾಡುತ್ತಿದ್ದಾರೆ.

ಹೌದು.. ಈಗಾಗಲೇ ಮೊದಲ ಹಂತದ ಚುನಾವಣೆ ರಂಗೇರಿದೆ. ಹಳ್ಳಿ ಹಳ್ಳಿಯಲ್ಲೂ ಜಿದ್ದಾ ಜಿದ್ದಿಗೆ ಬಿದ್ದವರಂತೆ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗುತ್ತಿದ್ದಾರೆ.

ಅಭ್ಯರ್ಥಿಗಳಿಗೆ ಚಿಹ್ನೆ: ಗ್ರಾಪಂ ಚುನಾವಣೆಯಲ್ಲಿ ಯಾವುದೇ ಪಕ್ಷಗಳ ಚಿಹ್ನೆ ಇಲ್ಲವಾದ್ದರಿಂದ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಚಿಹ್ನೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲುನಾಮಪತ್ರ ಯಾರು ಸಲ್ಲಿಕೆ ಮಾಡಿರುತ್ತಾರೋ ಅಂತಹ ಅಭ್ಯರ್ಥಿಗಳಿಗೆ ಚಿಹ್ನೆ ಆಯ್ಕೆ ಮಾಡಿಕೊಳ್ಳಲು ಮೊದಲ ಆದ್ಯತೆ ನೀಡಿದ್ದು, ಹಾಗಾಗಿ ಆಯಾ ಗ್ರಾಪಂನ ಚುನಾವಣಾ ಅಧಿಕಾರಿಗಳು ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ ಚಿಹ್ನೆ ನೀಡಿದ್ದಾರೆ. ಅಭ್ಯರ್ಥಿಗೆ ಚಿಹ್ನೆ ಸಿಕ್ಕ ಬೆನ್ನಲ್ಲೇ ತಮ್ಮ ಊರುಗಳಿಗೆ ತೆರಳಿ ಇಡೀ ದಿನ ಮನೆ ಮನೆಗೂ ಸುತ್ತಿ ಮತದಾರನಿಗೆ ಮನವಿ ಮಾಡಿ ನಮಗೆ ಮತ ನೀಡಿ, ಇಂತಹ ಚಿಹ್ನೆಯಿಂದ ನಾನು ಸ್ಪರ್ಧೆ ಮಾಡಿದ್ದೇನೆ. ದಯವಿಟ್ಟು ಮತ ನೀಡಿ ಎಂದು ಮತದಾರರ ಮತಗಳನ್ನ ಪಡೆಯುವಲ್ಲಿ ನಿರತರಾಗಿದ್ದಾರೆ.

ಕೈ ಮುಗಿತಾರೆ, ಕಾಲು ಬೀಳ್ತಾರೆ: ಚುನಾವಣಾ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳಂತೂ ಬಿಗುಮಾನ ಬಿಟ್ಟು ಕಂಡ ಕಂಡವರ ಕಾಲಿಗೆ ಬಿದ್ದು ಮತ ನೀಡುವಂತೆ ಮನವಿಮಾಡುತ್ತಿರುವ ದೃಶ್ಯ ಪ್ರತಿ ಹಳ್ಳಿಯಲ್ಲೂ ಕಂಡು ಬರುತ್ತಿದೆ. ಚುನಾವಣೆಗೆ ನಿಂತಿರುವನನಗೆ ನಿಮ್ಮ ಆಶೀರ್ವಾದ ಬೇಕು. ನೀವು ಕೈ ಹಿಡಿದರೆ ನಾನು ಗೆಲ್ಲುವೆ ನನ್ನನ್ನ ನೀರಿನಲ್ಲಿ ತೇಲಿಸುತ್ತೀರೋ.. ಮುಳಿಗಿಸುತ್ತೀರೋ ನಿಮಗೆ ಬಿಟ್ಟ ವಿಚಾರ. ನನ್ನ ನೀವು ಗೆಲ್ಲಿಸಿದರೆ ನಮ್ಮ ವಾರ್ಡ್‌ನ್ನು ಅಭಿವೃದ್ಧಿ ಮಾಡುವೆ ಎಂದೆಲ್ಲಾ ಆಶಾ ಗೋಪುರ ಕಟ್ಟುತ್ತಿದ್ದಾರೆ.

ಹಲವು ತಂತ್ರಗಾರಿಕೆ: ವಾರ್ಡ್‌ನಲ್ಲಿ ಪ್ರಬಲ ಸಮುದಾಯದ ನಾಯಕರ ಮನೆಯ ಕದ ತಟ್ಟುವ ಮೂಲಕ ನಿಮ್ಮ ಬೆಂಬಲ ನಮಗಿದ್ದರೆ ಸಮಾಜದಮತಗಳು ನಮಗೆ ಬರಲಿವೆ. ನೀವು ಮನಸ್ಸು ಮಾಡಿದರೆ ನಾವು ಗೆಲುವು ಕಾಣಲು ಸಾಧ್ಯ ಎಂದೆಲ್ಲ ಮುಖಂಡರಲ್ಲಿ ಮನವಿ ಮಾಡಿ ಹಲವು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಅಲ್ಲದೇ ದೇವಸ್ಥಾನಗಳಿಗೆ ದೇಣಿಗೆ ನೀಡುವ ಜೊತೆಗೆ ಅಭಿವೃದ್ಧಿ ಕಾರ್ಯಕ್ಕೆ ನಾನು ಕೈ ಜೋಡಿಸುವೆ. ಗೆದ್ದರೆಈ ವಾರ್ಡ್‌ನ ಸಮಸ್ಯೆಯನ್ನು ಬಗೆ ಹರಿಸುವೆ ಎಂದು ಅವರಲ್ಲಿ ಭರವಸೆ ಮೂಡಿಸುತ್ತಿದ್ದಾರೆ. ಒಟ್ಟಿನಲ್ಲಿ ಸೋಮವಾರದಿಂದಲೇ ಅಭ್ಯರ್ಥಿಗಳು ಪ್ರಚಾರ ಕಾರ್ಯಕ್ಕಿಳಿದಿದ್ದಾರೆ.

 

­-ದತ್ತು ಕಮ್ಮಾರ

ಟಾಪ್ ನ್ಯೂಸ್

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಹೆಚ್ಚಿಸಲು ಸಿದ್ಧತೆ : ಪ್ರತ್ಯೇಕ ವೇಳಾಪಟ್ಟಿ

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಹೆಚ್ಚಿಸಲು ಸಿದ್ಧತೆ : ಪ್ರತ್ಯೇಕ ವೇಳಾಪಟ್ಟಿ

ಮಂಗಳೂರು : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಮಂಗಳೂರು : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಅಲ್ಪಸಂಖ್ಯಾಕ ಸ್ಥಾನಮಾನ: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ಅಲ್ಪಸಂಖ್ಯಾಕ ಸ್ಥಾನಮಾನ: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

1-dadsd

ರೋಚಕ ಮುಖಾಮುಖಿ: ಲಕ್ನೋದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಲಕ್‌

Covid test

ಚೀನದ ಹಲವೆಡೆ ಮತ್ತೆ ಲಾಕ್‌ಡೌನ್‌; ಪ್ರಯಾಣದ ಮೇಲೆ ನಿರ್ಬಂಧ

1-wwqwq

ಫ್ರೆಂಚ್‌ ಲೇಖಕಿ ಆ್ಯನಿ ಎರ್ನಾಕ್ಸ್‌ಗೆ ಒಲಿದ ಸಾಹಿತ್ಯ ನೊಬೆಲ್‌

1-ssdsdda

ಬೆಳಗಾವಿ: ಸುಳೇಭಾವಿ ಗ್ರಾಮದಲ್ಲಿ ಇಬ್ಬರು ಯುವಕರ ಬರ್ಬರ ಹತ್ಯೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sddsdsad

ಸಿಎಂ ಕೃಪೆಯಿಂದಾದರೂ ಕುಷ್ಟಗಿ ಮುಖ್ಯ ರಸ್ತೆ ಅಭಿವೃದ್ಧಿ ಹೊಂದುವುದೇ?

19

ಬಸವನ ದುರ್ಗದಲ್ಲಿ ಚಿರತೆಗಳು ಪ್ರತ್ಯಕ್ಷ; ಭಯಭೀತಗೊಂಡ ಜನತೆ

1-sfdfdsff

ಕುಷ್ಟಗಿ: ಜೆಸಿಬಿ ಬಕೆಟ್ ತಾಗಿ ಬೈಕ್ ಸವಾರ ದುರ್ಮರಣ

ಕೊಪ್ಪಳ: ಮನೆಯ ಗೋಡೆ ಕುಸಿದು ವೃದ್ದೆ ಸಾವು!

ಕೊಪ್ಪಳ: ಮನೆಯ ಗೋಡೆ ಕುಸಿದು ವೃದ್ದೆ ಸಾವು

ಹೇಮಗುಡ್ಡ ದಸರಾ : ವೈಭವದ ಆನೆ ಮೇಲೆ ಅಂಬಾರಿ ದುರ್ಗಾಪರಮೇಶ್ವರಿ ಮೆರವಣಿಗೆ

ಹೇಮಗುಡ್ಡ ದಸರಾ: ಆನೆ ಮೇಲೆ ಅಂಬಾರಿ ದುರ್ಗಾಪರಮೇಶ್ವರಿ ಮೆರವಣಿಗೆ, ರಂಗು ಹೆಚ್ಚಿಸಿದ ಕಲಾ ತಂಡ

MUST WATCH

udayavani youtube

ಯುವಕನಾದ ಸಿದ್ದರಾಮಯ್ಯ… ರಾಹುಲ್ ಜತೆ ರೇಸ್ …. ವಿಡಿಯೋ ವೈರಲ್

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

ಹೊಸ ಸೇರ್ಪಡೆ

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಹೆಚ್ಚಿಸಲು ಸಿದ್ಧತೆ : ಪ್ರತ್ಯೇಕ ವೇಳಾಪಟ್ಟಿ

ಉಡುಪಿ: ಎಸೆಸೆಲ್ಸಿ ಫ‌ಲಿತಾಂಶ ಹೆಚ್ಚಿಸಲು ಸಿದ್ಧತೆ : ಪ್ರತ್ಯೇಕ ವೇಳಾಪಟ್ಟಿ

ಮಂಗಳೂರು : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಮಂಗಳೂರು : ಶತಮಾನದ ಶಾರದೋತ್ಸವಕ್ಕೆ ವೈಭವದ ತೆರೆ

ಅಲ್ಪಸಂಖ್ಯಾಕ ಸ್ಥಾನಮಾನ: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ಅಲ್ಪಸಂಖ್ಯಾಕ ಸ್ಥಾನಮಾನ: ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

1-dadsd

ರೋಚಕ ಮುಖಾಮುಖಿ: ಲಕ್ನೋದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಲಕ್‌

Covid test

ಚೀನದ ಹಲವೆಡೆ ಮತ್ತೆ ಲಾಕ್‌ಡೌನ್‌; ಪ್ರಯಾಣದ ಮೇಲೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.