ಕೆರೆ ತುಂಬಿಸುವ ಯೋಜನೆಗೆ ಅಸ್ತು

•498 ಕೋಟಿ ಯೋಜನೆಗೆ ಅನುಮೋದನೆ•15 ಕೆರೆಗಳಿಗೆ ಕೃಷ್ಣಾ ನದಿ ನೀರು

Team Udayavani, Jul 26, 2019, 9:11 AM IST

kopala-tdy-2

ಕುಷ್ಟಗಿ: ತಾಲೂಕಿನ ನಿಡಶೇಸಿ ಕೆರೆ.

ಕುಷ್ಟಗಿ: ಮಳೆಗಾಲದ ಅನಿಶ್ಚಿತತೆಯಲ್ಲಿ ಸತತ ಬರಗಾಲ ಎದುರಿಸುತ್ತಿರುವ ಕುಷ್ಟಗಿ ತಾಲೂಕಿನ 15 ಕೆರೆಗಳನ್ನು ಕೃಷ್ಣಾ ನದಿಯಿಂದ ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಗೊಂಡಿದೆ. ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆಗೆ ಸರ್ಕಾರ ಸಚಿವ ಸಂಪುಟದ ಅನುಮೋದನೆಯೊಂದಿಗೆ 498.80 ಕೋಟಿ ರೂ. ಮಂಜೂರಾತಿ ಸಿಕ್ಕಿದೆ. ಮೊದಲ ಹಂತದಲ್ಲಿ 8 ಕೆರೆಗಳನ್ನು ತುಂಬಿಸಲು ಕ್ರಮಕೈಗೊಳ್ಳಲಾಗಿದ್ದು ಶೀಘ್ರವೇ ಟೆಂಡರ್‌ ಪ್ರಕ್ರಿಯೆ ಆರಂಭಿಸುವ ಮುನ್ಸೂಚನೆ ಸಿಕ್ಕಿದೆ.

ಸರ್ಕಾರದ ಆದೇಶ ಸಂಖ್ಯೆ ಸನೀಇ: 62 ಏತ ನೀರಾವರಿ ಯೋಜನೆ 2018 (ತಾಂತ್ರಿಕ) ಬೆಂಗಳೂರು ಜುಲೈ ಆದೇಶದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಬಿ. ಬಾಲಸುಬ್ರಹ್ಮಣ್ಯಂ ಇವರ ಆದೇಶದಲ್ಲಿ ವಿವರಿಸಲಾಗಿದೆ. 2019-20ನೇ ಸಾಲಿನಲ್ಲಿ ಕುಷ್ಟಗಿ ತಾಲೂಕಿನಲ್ಲಿ ಕುಡಿಯುವ ನೀರು ಹಾಗೂ ಅಂತರ್ಜಲ ಅಭಿವೃದ್ಧಿ ಸಲುವಾಗಿ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಯೋಜನೆಗೆ 0.526 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಆಲಮಟ್ಟಿ ಜಲಾಶಯದ ಕೆಳ ಭಾಗದಲ್ಲಿ 2.3 ಕ್ಯೂಸೆಕ್ಸ್‌ ನೀರನ್ನು ಏತ ನೀರಾವರಿ ಯೋಜನೆಯ ಮೂಲಕ ಉದ್ದೇಶಿತ ಕೆರೆಗಳಿಗೆ ಹರಿಸಲಾಗುವುದು. ಕೃಷ್ಣಾ ನದಿಯ ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಕುಷ್ಟಗಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ 5 ವರ್ಷದ ಕಾಲಮಿತಿಯ ಯೋಜನೆ ಇದಾಗಿದೆ.

ಮೊದಲ ಹಂತ: ಈ ಹಂತಕ್ಕೆ 281 ಕೋಟಿ ರೂ. ನಿಗದಿಗೊಳಿಸಲಾಗಿದ್ದು, ತಾಲೂಕಿನ ಮೆಣಸಗೇರ ಕೆರೆ, ಮಿಯಾಪುರ ಕೆರೆ. ಹೊಸಳ್ಳಿ ಕೆರೆ, ಹನುಮಸಾಗರ ಕೆರೆ, ಮಾವಿನ ಇಟಗಿ ಕೆರೆ, ಬಾದಿಮಿನಾಳ ಕೆರೆ, ಜಾಗೀರಗುಡದೂರು ಕೆರೆ, ನಿಡಶೇಸಿ ಕೆರೆಗೆ 1580 ಅಶ್ವಶಕ್ತಿಯ ಸಾಮಾರ್ಥ್ಯದ 5 ಕಾರ್ಯ ನಿರತ ಮತ್ತ 1 ಹೆಚ್ಚುವರಿ ಪಂಪ್‌ಗ್ಳನ್ನು ಬಳಸಿ, 1250 ಮಿ.ಮೀ ವ್ಯಾಸದ ಎಂ.ಎಸ್‌. ಪೈಪ್‌ಗ್ಳನ್ನು ಅಳವಡಿಸಿ 59.5 ಕಿ.ಮೀ. ಉದ್ದದ ಏರು ಕೊಳವರ ಮಾರ್ಗ ಮೂಲಕ ಕಡೆಕೊಪ್ಪ ಹತ್ತಿರ ಮಧ್ಯಂತರ ವಿತರಣಾ ತೊಟ್ಟಿಗೆ ಹರಿಸುವ ಯೋಜನೆಯ ವಿನ್ಯಾಸ ಸಿದ್ಧಪಡಿಸಲಾಗಿದೆ.

ಎರಡನೇ ಹಂತ: ಈ ಹಂತಕ್ಕೆ 217.16 ಕೋಟಿ ರೂ. ನಿಗದಿಯಾಗಿದ್ದು, ಜಿಮ್ಲಾಪೂರ ಕೆರೆ, ವಿಠಲಾಪೂರ ಕೆರೆ, ನಾರೀನಾಳ ಕೆರೆ, ರಾಯನ ಕೆರೆ, ಮೆಣೇದಾಳ ಕೆರೆ, ಹುಲಿಯಾಪೂರ ಕೆರೆ, ಪುರ ಕೆರೆಗೆ 217.16 ಕೋಟಿ ರೂ. ನಿಗದಿಯಾಗಿದೆ. ಹಂತದಲ್ಲಿ ಕಡೆಕೊಪ್ಪ ನೀರಿನ ತೊಟ್ಟಿಯಿಂದ ಎರಡು ವಿಭಾಗಗಳಲ್ಲಿ ಏರು ಕೊಳವೆ ಮಾರ್ಗದ ಮೂಲಕ ಕೆರೆಗಳನ್ನು ತುಂಬಿಸಲಾಗುತ್ತಿದೆ. 2100 ಅಶ್ವಶಕ್ತಿ ಸಾಮಾರ್ಥ್ಯದ 2 ಕಾರ್ಯ ನಿರತ ಹಾಗೂ ಒಂದು ಹೆಚ್ಚುವರಿ ಪಂಪ್‌ ಹಾಗೂ 3180 ಅಶ್ವಶಕ್ತಿ ಸಾಮಾರ್ಥ್ಯ 3 ಕಾರ್ಯ ನಿರತ ಹಾಗೂ ಒಂದು ಹೆಚ್ಚುವರಿ ಪಂಪ್‌ಗ್ಳನ್ನು ಬಳಸಿ 610 ಮಿ.ಮೀ.ದಿಂದ 1,100 ಮಿ.ಮೀ. ವ್ಯಾಸ ಎಂಎಸ್‌ ಪೈಪ್‌, ಬಿಡಬ್ಲೂ ್ಯ ಎಸ್‌ಸಿ ಹಾಗೂ ಎಚ್‌ಡಿಪಿಇ ಪೈಪ್‌ ಅಳವಡಿಸಿ 63,408 ಕಿ.ಮೀ. ಕೊಳವೆ ಗುರುತ್ವ ಮಾರ್ಗದ ಮೂಲಕ ಒಟ್ಟು 15 ಕೆರೆಗಳನ್ನು ತುಂಬಿಸಲಾಗುತ್ತಿದೆ ಎಂದರು.

•ಮಂಜುನಾಥ ಮಹಾಲಿಂಗಪುರ

ಟಾಪ್ ನ್ಯೂಸ್

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

crime (2)

Koppal: ಕಾಣೆಯಾಗಿದ್ದ 7 ವರ್ಷದ ಬಾಲಕಿ ಶವವಾಗಿ ಪತ್ತೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.