Udayavni Special

ಗದ್ದುಗೆ ಹಿಡಿದರಿಗೆ ಮತ್ತೆ ದಿಗಿಲು

ಅ. 8ರ ಮೀಸಲು ರದ್ದುಪಡಿಸಿದ ಹೈಕೋರ್ಟ್‌ | ಹೊಸ ಮೀಸಲಾತಿ ರೂಪಿಸಲು ಸರಕಾರಕ್ಕೆ ಸೂಚನೆ

Team Udayavani, Nov 20, 2020, 8:22 PM IST

bng-tdy-2

ಕೊಪ್ಪಳ: ಕಳೆದ ಅ. 10ರಂದು ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿ ಮಾಡಿದ್ದ ಮೀಸಲಾತಿಯನ್ನು ಹೈಕೋರ್ಟ್‌ ಒಂದು ಪ್ರಕರಣದಲ್ಲಿ ಮತ್ತೆ ರದ್ದುಪಡಿಸಿದೆ. ಇದರಿಂದಾಗಿ ಈಗಾಗಲೇ ಅಧಿ ಕಾರದ ಗದ್ದುಗೆ ಹಿಡಿದವರಿಗೆ ದಿಗಲು ಬಡಿದಂತಾಗಿದೆ. ಜಿಲ್ಲೆಯ 9 ಸ್ಥಳೀಯ ಸಂಸ್ಥೆಗಳಲ್ಲೂ ಚುನಾವಣೆ ನಡೆದಿದೆ.

ಈಗ ಕೋರ್ಟ್‌ ತೀರ್ಪು ಸದಸ್ಯರಿಗೆ ಸಂಕಷ್ಟ ತಂದಿಟ್ಟಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು 2 ವರ್ಷ 3 ತಿಂಗಳಾದರು ಇನ್ನೂ ಮೀಸಲಾತಿಯ ವಿವಾದ ಬಗೆ ಹರಿಯುತ್ತಲೇ ಇಲ್ಲ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 4 ಬಾರಿ ಮೀಸಲಾತಿ ಪ್ರಕಟವಾಗಿ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕೆನ್ನುವಷ್ಟರಲ್ಲಿ ಕೋರ್ಟ್‌ನಿಂದ ತಡೆಯಾಜ್ಞೆ ಬಂದಿರುವುದರಿಂದ ಎಲ್ಲವೂ ವಿಳಂಬವಾಗಿವೆ.

ಹೈಕೋರ್ಟ್‌ ಹಾಸನದ ಒಂದು ರಿಟ್‌ ಅರ್ಜಿ ಪ್ರಕರಣ ವಿಚಾರಣೆ ಮಾಡಿ, ರಾಜ್ಯ ಸರ್ಕಾರ ಅ. 8ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿಗೆ ಹೊರಡಿಸಿದ ಅ ಧಿಸೂಚನೆಯನ್ನು ರದ್ದುಪಡಿಸಿದೆಯಲ್ಲದೇ ರೋಸ್ಟರ್‌ ಪ್ರಕಾರ ಹೊಸದಾಗಿ ಮತ್ತೆ ಮೀಸಲಾತಿ ಸಿದ್ಧಪಡಿಸಿ ನಾಲ್ಕು ವಾರದಲ್ಲಿ ಪ್ರಕಟಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಸರ್ಕಾರಕ್ಕೂ ನೋಟಿಸ್‌ ಜಾರಿಗೊಳಿಸಿ, 10 ದಿನದಲ್ಲಿ ನಿಮ್ಮ ಅಭಿಪ್ರಾಯ ತಿಳಿಸುವಂತೆ ಅವಕಾಶ ನೀಡಿದೆ.

ಅಧಿಕಾರಕ್ಕೇರಿದವರಿಗೆ ದಿಗಿಲು: ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಕೆಲವೆಡೆ ಮೀಸಲಾತಿ ಅನುಸಾರ ಚುನಾವಣೆ ನಡೆದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ. ಕೊಪ್ಪಳ ನಗರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಆದರೆ ಫಲಿತಾಂಶ ಪ್ರಕಟ ಮಾಡದೇ ಕೋರ್ಟ್‌ ನಿರ್ದೇಶನದಂತೆ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಫಲಿತಾಂಶ ಸಲ್ಲಿಸಲಾಗಿದೆ. ಕೋರ್ಟ್‌ ತೀರ್ಪಿನ ಬಳಿಕ ಗಂಗಾವತಿ ನಗರಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಿ ಆಡಳಿತ ನಡೆಸಿದೆ. ಅಲ್ಲದೆ, ತಾವರಗೇರಾ, ಕುಷ್ಟಗಿ, ಕನಕಗಿರಿ, ಕಾರಟಗಿ, ಕುಕನೂರು, ಯಲಬುರ್ಗಾ ಸ್ಥಳೀಯ ಸಂಸ್ಥೆಗಳಲ್ಲಿ ಕೆಲವೆಡೆ ಸುಗಮ ಆಡಳಿತನಡೆದಿವೆ. ಈ ವೇಳೆಗೆ ಹೈಕೋರ್ಟ್‌ ತೀರ್ಪು ಹಾಲಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ನಿಜಕ್ಕೂ ದಿಗಿಲು ತಂದಿಟ್ಟಿದೆ.

ನಾಲ್ಕು ಬಾರಿ ಮೀಸಲಾತಿ ಬದಲು: ಕೊಪ್ಪಳ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಎರಡು ವರ್ಷದಲ್ಲಿ ನಾಲ್ಕು ಬಾರಿ ಬದಲಾಗಿದೆ. ಆರಂಭದಲ್ಲಿ ಮೀಸಲಾತಿ ಬರುತ್ತಿದ್ದಂತೆ ಕೆಲವು ರಾಜಕೀಯ ನಾಯಕರು ರಾಜ್ಯಮಟ್ಟದಲ್ಲಿ ಪ್ರಯತ್ನ ನಡೆಸಿ ಮೀಸಲಾತಿ ಬದಲಾವಣೆ ಮಾಡಿದ್ದರು. ಮೀಸಲಾತಿ ಬದಲಾವಣೆಯಾಗಿದ್ದನ್ನು ಪ್ರಶ್ನಿಸಿ ಹಾಲೇಶ ಕಂದಾರಿ ಅವರು ಕೋರ್ಟ್‌ ಮೆಟ್ಟಿಲೇರಿದ್ದರು. ಬಳಿಕ ಮೀಸಲಾತಿಮತ್ತೆ ಬದಲಾದ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದರು. ಇದಾದ ಬಳಿಕವೂ ಎರಡು ಬಾರಿ ಮೀಸಲಾತಿ ಬದಲಾಗಿದೆ. ಈಗ ಹೈಕೋರ್ಟ್‌ ತೀರ್ಪು ಮತ್ತೆ ಮೀಸಲು ಬದಲಿಸುವಂತೆ ತಿಳಿಸಿದೆ.

ಅಧಿಕಾರಕ್ಕೇರಿದ ದಿನವೇ ಅಧಿಕಾರ ಕಳೆದುಕೊಂಡ್ರು ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಹೈಕೋರ್ಟ್‌ ರದ್ದುಪಡಿಸಿದೆ. ಆದರೆ ಭಾಗ್ಯನಗರದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರು ಗುರುವಾರವಷ್ಟೇ ಪದಗ್ರಹಣ ಮಾಡಿದ್ದರು. ಆದರೆ ಅಧಿಕಾರ ಸ್ವೀಕರಿಸಿದ ದಿನದಂದೇ ಮೀಸಲು ರದ್ದಾದ ಹಿನ್ನೆಲೆಯಲ್ಲಿ ಅವರು ಅಧಿಕಾರ ಕಳೆದುಕೊಂಡಂತಾಗಿದೆ. ಅಧಿಕಾರ ಪದಗ್ರಹಣ ಖುಷಿಯಿಂದಲೇ ನಡೆದಿತ್ತಾದರೂ ಸಂಜೆ ವೇಳೆಗೆ ಮೀಸಲು ರದ್ದು ಎನ್ನುವ ವಿಷಯ ಕೇಳಿ ದಿಗಲೇ ಬಡಿದಂತಾಗಿದೆ.

ಗಂಗಾವತಿಯಲ್ಲಿ ಮೊದಲ ಸಭೆ :  ಗಂಗಾವತಿಯಲ್ಲೂ ಸಹಿತ ಈಚೆಗೆ ಹಲವು ಹೈಡ್ರಾಮಾ ನಡುವೆ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಕಾಂಗ್ರೆಸ್‌ ಒಂದು ಮತದ ಅಂತರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ. ಗುರುವಾರ ನಗರಸಭೆಯ ಮೊದಲ ಸಭೆ ನಡೆದಿದೆ. ಈ ಬೆನ್ನಲ್ಲೇ ಹೈಕೋರ್ಟ್‌ ತೀರ್ಪು ಅಧ್ಯಕ್ಷ, ಉಪಾಧ್ಯಕ್ಷರಿಗೆ ದಿಕ್ಕೇ ತೋಚದ ಸ್ಥಿತಿಯಂತಾಗಿದೆ.

­-ದತ್ತು ಕಮ್ಮಾರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಲಬುರಗಿಯಲ್ಲಿ ಪ್ರತ್ಯೇಕ ರಸ್ತೆ ಅಪಘಾತ: ಮೂವರು ಬೈಕ್ ಸವಾರರು ಸಾವು

ಕಲಬುರಗಿಯಲ್ಲಿ ಪ್ರತ್ಯೇಕ ರಸ್ತೆ ಅಪಘಾತ: ಮೂವರು ಬೈಕ್ ಸವಾರರು ಸಾವು

ಶತ್ರುರಾಷ್ಟ್ರಗಳ ಡ್ರೋನ್‌ ಸಂಹಾರಕ್ಕೆ ‘ಸ್ಮ್ಯಾಶ್‌’- 2000 ರೈಫ‌ಲ್ ನಿಯೋಜನೆ

ಶತ್ರುರಾಷ್ಟ್ರಗಳ ಡ್ರೋನ್‌ ಸಂಹಾರಕ್ಕೆ ನೌಕಾಪಡೆಯಿಂದ ‘ಸ್ಮ್ಯಾಶ್‌’- 2000 ರೈಫ‌ಲ್ ನಿಯೋಜನೆ

UP : ಮತಾಂತರ ವಿರೋಧಿ ಕಾಯ್ದೆ ಜಾರಿಯಾದ 24ಗಂಟೆಯಲ್ಲಿ ಮೊದಲ ಪ್ರಕರಣ ದಾಖಲು: ಓರ್ವ ಬಂಧನ

UP : ಮತಾಂತರ ವಿರೋಧಿ ಕಾಯ್ದೆ ಜಾರಿಯಾದ 24ಗಂಟೆಯಲ್ಲಿ ಮೊದಲ ಪ್ರಕರಣ ದಾಖಲು: ಓರ್ವ ಬಂಧನ

ಮೊದಲ ರಾತ್ರಿಯೇ ಪತಿಯಿಂದ ಕಿರಿಕ್‌! ಪತ್ನಿಯಿಂದ ಠಾಣೆಗೆ ದೂರು: ಪತಿಯ ಬಂಧನ

ಮೊದಲ ರಾತ್ರಿಯೇ ಪತಿಯಿಂದ ಕಿರಿಕ್‌! ಪತ್ನಿಯಿಂದ ಠಾಣೆಗೆ ದೂರು: ಪತಿಯ ಬಂಧನ

ಗೋಹತ್ಯೆ ನಿಷೇಧ: ಯೋಗಿ ಭೇಟಿ ಮಾಡಿದ ಪ್ರಭು ಚೌವ್ಹಾಣ್‌

ಗೋಹತ್ಯೆ ನಿಷೇಧ: ಯೋಗಿ ಭೇಟಿ ಮಾಡಿದ ಪ್ರಭು ಚೌವ್ಹಾಣ್‌

ಲಾಟರಿಗಳು, ಬೆಟ್ಟಿಂಗ್‌ ಮತ್ತು ಜೂಜುಗಳ ಮೇಲೆ GST ವಿಧಿಸುವುದು ತಪ್ಪಲ್ಲ: ಸುಪ್ರೀಂಕೋರ್ಟ್

ಲಾಟರಿಗಳು, ಬೆಟ್ಟಿಂಗ್‌ ಮತ್ತು ಜೂಜುಗಳ ಮೇಲೆ GST ವಿಧಿಸುವುದು ತಪ್ಪಲ್ಲ: ಸುಪ್ರೀಂಕೋರ್ಟ್

“ಬ್ರಹ್ಮಪುತ್ರ ಡ್ಯಾಂ’ನಲ್ಲೂ ಚೀನಾ ಡ್ರಾಮಾ! ಯೋಜನೆ ಬಗ್ಗೆ ಆತಂಕ ಬೇಡವೆಂಬ ಸಮಜಾಯಿಷಿ

“ಬ್ರಹ್ಮಪುತ್ರ ಡ್ಯಾಂ’ನಲ್ಲೂ ಚೀನಾ ಡ್ರಾಮಾ! ಯೋಜನೆ ಬಗ್ಗೆ ಆತಂಕ ಬೇಡವೆಂಬ ಸಮಜಾಯಿಷಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

benki-koppala

ಆಕಸ್ಮಿಕ ಬೆಂಕಿ ತಗುಲಿ ಡೀಸೆಲ್ ಟ್ಯಾಂಕರ್ ಬಳಿಯಿದ್ದ 3 ಮನೆ ಭಸ್ಮ: ತಪ್ಪಿದ ಭಾರೀ ಅನಾಹುತ !

ಗಂಗಾವತಿ ನಗರಸಭೆ ಆದಾಯ ಕುಸಿತ

ಗಂಗಾವತಿ ನಗರಸಭೆ ಆದಾಯ ಕುಸಿತ

ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಸಿದ್ದು ಓಲೈಕೆ ಮಾತು : ಲಕ್ಷ್ಮಣ ಸವದಿ ತಿರುಗೇಟು

ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಸಿದ್ದು ಓಲೈಕೆ ಮಾತು : ಲಕ್ಷ್ಮಣ ಸವದಿ ತಿರುಗೇಟು

ನಿರ್ವಹಣೆ ಇಲ್ಲದೇ ಒಣಗುತ್ತಿವೆ ಉದ್ಯಾನವನದ ಗಿಡಗಳು

ನಿರ್ವಹಣೆ ಇಲ್ಲದೇ ಒಣಗುತ್ತಿವೆ ಉದ್ಯಾನವನದ ಗಿಡಗಳು

ಅಡ್ಡಾದಿಡ್ಡಿ ಪಾರ್ಕಿಂಗ್‌ ನಿಂದ ಸಂಚಾರಕ್ಕೆ ಸಮಸ್ಯೆ : ಪಾದಚಾರಿಗಳ ಸಮಸ್ಯೆ ಹೇಳತೀರದು

ಅಡ್ಡಾದಿಡ್ಡಿ ಪಾರ್ಕಿಂಗ್‌ ನಿಂದ ಸಂಚಾರಕ್ಕೆ ಸಮಸ್ಯೆ : ಪಾದಚಾರಿಗಳ ಸಮಸ್ಯೆ ಹೇಳತೀರದು

MUST WATCH

udayavani youtube

ಉಗ್ರಪರ ಗೋಡೆ ಬರಹ ಪ್ರಕರಣದ ಆರೋಪಿಗಳ ಶೀಘ್ರ ಬಂಧನ: ಗೃಹ ಸಚಿವ ಬೊಮ್ಮಾಯಿ

udayavani youtube

Meal of Bakasur | ತುಳುನಾಡಿನ 14ಖಾದ್ಯಗಳನ್ನು ಉಣಬಡಿಸುವ ಬಕಾಸುರನ ಬಾಡೂಟ | FishCampus

udayavani youtube

ಸ್ವಂತ ಉದ್ಯಮ ಪ್ರಾರಂಭಿಸುವ ಮುನ್ನ ಇಲ್ಲೊಮ್ಮೆ ನೋಡಿ

udayavani youtube

ಸರಕಾರ ನಿಮ್ಮ ಜೊತೆಯಿದೆ: ಮೀನುಗಾರರ ಕುಟುಂಬಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಯ

udayavani youtube

ಮಂಗಳೂರು ಬೋಟ್ ದುರಂತ: ಮತ್ತೋರ್ವ ಮೀನುಗಾರನ ಮೃತದೇಹ ಪತ್ತೆ

ಹೊಸ ಸೇರ್ಪಡೆ

ಕಲಬುರಗಿಯಲ್ಲಿ ಪ್ರತ್ಯೇಕ ರಸ್ತೆ ಅಪಘಾತ: ಮೂವರು ಬೈಕ್ ಸವಾರರು ಸಾವು

ಕಲಬುರಗಿಯಲ್ಲಿ ಪ್ರತ್ಯೇಕ ರಸ್ತೆ ಅಪಘಾತ: ಮೂವರು ಬೈಕ್ ಸವಾರರು ಸಾವು

ಶತ್ರುರಾಷ್ಟ್ರಗಳ ಡ್ರೋನ್‌ ಸಂಹಾರಕ್ಕೆ ‘ಸ್ಮ್ಯಾಶ್‌’- 2000 ರೈಫ‌ಲ್ ನಿಯೋಜನೆ

ಶತ್ರುರಾಷ್ಟ್ರಗಳ ಡ್ರೋನ್‌ ಸಂಹಾರಕ್ಕೆ ನೌಕಾಪಡೆಯಿಂದ ‘ಸ್ಮ್ಯಾಶ್‌’- 2000 ರೈಫ‌ಲ್ ನಿಯೋಜನೆ

UP : ಮತಾಂತರ ವಿರೋಧಿ ಕಾಯ್ದೆ ಜಾರಿಯಾದ 24ಗಂಟೆಯಲ್ಲಿ ಮೊದಲ ಪ್ರಕರಣ ದಾಖಲು: ಓರ್ವ ಬಂಧನ

UP : ಮತಾಂತರ ವಿರೋಧಿ ಕಾಯ್ದೆ ಜಾರಿಯಾದ 24ಗಂಟೆಯಲ್ಲಿ ಮೊದಲ ಪ್ರಕರಣ ದಾಖಲು: ಓರ್ವ ಬಂಧನ

ಮೊದಲ ರಾತ್ರಿಯೇ ಪತಿಯಿಂದ ಕಿರಿಕ್‌! ಪತ್ನಿಯಿಂದ ಠಾಣೆಗೆ ದೂರು: ಪತಿಯ ಬಂಧನ

ಮೊದಲ ರಾತ್ರಿಯೇ ಪತಿಯಿಂದ ಕಿರಿಕ್‌! ಪತ್ನಿಯಿಂದ ಠಾಣೆಗೆ ದೂರು: ಪತಿಯ ಬಂಧನ

ಗೋಹತ್ಯೆ ನಿಷೇಧ: ಯೋಗಿ ಭೇಟಿ ಮಾಡಿದ ಪ್ರಭು ಚೌವ್ಹಾಣ್‌

ಗೋಹತ್ಯೆ ನಿಷೇಧ: ಯೋಗಿ ಭೇಟಿ ಮಾಡಿದ ಪ್ರಭು ಚೌವ್ಹಾಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.