ವಿಜಯಾನಂದ ಕಾಶಪ್ಪನವರ್ ದೊಡ್ಡವರು ಅವರಷ್ಟು ದೊಡ್ಡ ನಾಯಕ ನಾನಲ್ಲ : ನಿರಾಣಿ
Team Udayavani, Feb 27, 2021, 12:03 PM IST
ಕೊಪ್ಪಳ: ವಿಜಯಾನಂದ ಕಾಶಪ್ಪನವರ್ ಅವರು ದೊಡ್ಡವರು ಅವರಷ್ಟು ದೊಡ್ಡನಾಯಕ ನಾನಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಮುರಗೇಶ ನಿರಾಣಿ ಅವರು ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮೀಸಲಾತಿ ಹೋರಾಟಕ್ಕೆ ನಾವು ಲೀಡ್ ತೆಗೆದುಕೊಳ್ಳಲ್ಲ. ಕಾಶಪ್ಪನವರ್ ರಾಷ್ಟ್ರೀಯ ಅಧ್ಯಕ್ಷರು ಅವರೇ ಮೀಸಲಾತಿ ಹೋರಾಟಕ್ಕೆ ಲೀಡ್ ತಗೆದುಕೊಳ್ಳಲಿ. ಅವರಷ್ಟು ನಾವು ದೊಡ್ಡವರಲ್ಲ. ಅವರು ಹೋರಾಟ ಏನು ಮಾಡ್ತಾರೋ ದೇವರು ಕೊಟ್ಟಷ್ಟು ಅವರು ಮಾಡಲಿ. ಸರ್ಕಾರದ ಭಾಗವಾಗಿ ನಾವು ಏನುಮಾಡಬೇಕೋ ನಾವು ಮಾಡುತ್ತೇವೆ. ಕೇವಲ ಪಂಚಮಸಾಲಿ ಸಮಾಜವಲ್ಲ. ಒಟ್ಟಾರೆ ವೀರಶೈವ ಸಮಾಜಕ್ಕೆ ನಾವು ಏನುಮಾಡಬೇಕೋ ಅದನ್ನ ನಾವು ಮಾಡಲಿದ್ದೇವೆ. ಸಮಾಜದ ಬಗ್ಗೆ ಯತ್ನಾಳ ಅವರಿಗೆ ಇದ್ದಷ್ಟು ಕಳಕಳಿ ನಮಗೂ ಇದೆ ಎಂದರು.
ಇದನ್ನೂ ಓದಿ:ಸಿದ್ದಲಿಂಗೇಶ್ವರ ರಥೋತ್ಸವದ ಮುನ್ನ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಭಕ್ತರು
ಮೀಸಲಾತಿಗೆ ವಾಲ್ಮೀಕಿ ಸಮಾಜ, ಹಾಲುಮತ ಸಮಾಜ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವು ಹೋರಾಟ ಮಾಡುತ್ತಿದೆ. ಈ ಮೂರು ಸಮಾಜ ಮೀಸಲಾತಿ ವಿಚಾರದಲ್ಲಿ ಬೇರೆ ಬೇರೆ ವಿಚಾರ ಇದೆ. ಈ ಎಲ್ಲ ಸಮಾಜಗಳಿಗೆ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಸಾರ ಸರ್ಕಾರ ಏನುಕೊಡಬೇಕು ಅದನ್ನು ಕೊಡಲಿದೆ. ಸಿಎಂ ಸಚಿವ ಸಂಪುಟದಲ್ಲಿ ಇದರ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದರು.
ಶಿವಮೊಗ್ಗ ಘಟನೆ ಹಿನ್ನೆಲೆಯಲ್ಲಿ ಸ್ಪೋಟಕ ವಸ್ತುಗಳನ್ನು ಗಣಿ ಇಲಾಖೆಗೆ ಒಪ್ಪಿಸುವಂತೆ ಸೂಚನೆ ನೀಡಿದ್ದೇನೆ. ಅವುಗಳನ್ನು ಒಪ್ಪಿಸದ ಮಾಲಿಕರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಈಚೆಗೆ ನಡೆದ ಸ್ಪೋಟಕದ ಕುರಿತು ಸ್ಪೋಟಕ ವಸ್ತು ಒಪ್ಪಿಸುವಂತೆ ಸೂಚನೆ ನೀಡಿದ್ದರಿಂದಲೇ ಅವುಗಳ ಅವಸರದಲ್ಲಿ ಅವುಗಳನ್ನ ಬೇರೆಡೆ ಸಾಗಾಟ ಮಾಡಲು ಮುಂದಾದಾಗ ಸ್ಪೋಟ ಆಗಿದೆ. ಈ ಬಗ್ಗೆ ನಾವು ನಿಗಾ ವಹಿಸಿದ್ದೇವೆ ಎಂದರು.
ಇದನ್ನೂ ಓದಿ: ಇಂದು ಸಿಎಂ ಯಡಿಯೂರಪ್ಪ ಹುಟ್ಟುಹಬ್ಬ: ಶುಭಾಶಯ ಕೋರಿದ ನರೇಂದ್ರ ಮೋದಿ, ನಡ್ಡಾ, ಶಾ
ರಾಜ್ಯದಲ್ಲಿ ಅಕ್ರಮ ಗಣಿಕಾರಿಕೆ ತಡೆಯಲು ಹೊಸ ಗಣಿ ನೀತಿ ತರಲಾಗುತ್ತಿದೆ. ಜೊತೆಗೆ ಹಟ್ಟಿ ಗೋಲ್ಡ್ ಮೈನಿಂಗ್ ಅನ್ನು ದೇಶ, ವಿದೇಶದಲ್ಲಿ ಗುರುತಿಸುವಂತೆ ಮಾಡಲು ಕರ್ನಾಟಕ ಸ್ಟೇಟ್ ಹಟ್ಟಿ ಗೋಲ್ಡ್ ಮೈನಿಂಗ್ ಎಂದು ನಾಮಕರಣ ಮಾಡಲಾಗುವುದು. ಜೊತೆಗೆ ಗಣಿ ಸಮಸ್ಯೆಯನ್ನ ಬಗೆ ಹರಿಸಲು ಪ್ರತಿ ತಿಂಗಳು ವಿಭಾಗವಾರು ಗಣಿ ಅದಾಲತ್ ಮಾಡಲಾಗವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೋಂಕು ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಇನ್ನಷ್ಟು ನಗರಗಳಿಗೆ ವಿಸ್ತರಣೆ: ಗೃಹ ಸಚಿವ ಬೊಮ್ಮಾಯಿ
ರಾಜ್ಯದ ವಿವಿಧೆಡೆ ಉತ್ತಮ ಮಳೆ : ಮಂಗಳೂರು ರಸ್ತೆ ಬದಿ ಕುಸಿತ, ಎರಡು ದಿನ ಎಲ್ಲೋ ಅಲರ್ಟ್
ಮುಷ್ಕರ ನಿರತರಿಂದ 60 ಬಸ್ಸುಗಳಿಗೆ ಹಾನಿ,152 ಕೋಟಿ ರೂ.ಆದಾಯ ನಷ್ಟ : ಸಚಿವ ಲಕ್ಷ್ಮಣ ಸವದಿ
ಶಾಸಕ ರಾಜುಗೌಡಗೂ ಕೋವಿಡ್ ಪಾಸಿಟಿವ್ ;ಬೆಂಗಳೂರು ಆಸ್ಪತ್ರೆಗೆ ದಾಖಲು
ಕರ್ನಾಟಕದಲ್ಲಿಂದು 11,265 ಕೋವಿಡ್ ಹೊಸ ಪ್ರಕರಣಗಳು ಪತ್ತೆ
MUST WATCH
ಹೊಸ ಸೇರ್ಪಡೆ
ಮಾಜಿ ಶಾಸಕ, ಅಪ್ಪಟ ಗಾಂಧಿವಾದಿ ಸದಾಶಿವರಾವ್ ಭೋಸಲೆ ಇನ್ನಿಲ್ಲ
ಸೋಂಕು ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಇನ್ನಷ್ಟು ನಗರಗಳಿಗೆ ವಿಸ್ತರಣೆ: ಗೃಹ ಸಚಿವ ಬೊಮ್ಮಾಯಿ
10 ದಿನಗಳಲ್ಲಿ ಮತ್ತಷ್ಟು ಹೆಚ್ಚಳ; ಭಾರತದಲ್ಲಿ 24 ಗಂಟೆಯಲ್ಲಿ 2 ಲಕ್ಷ ಕೋವಿಡ್ ಪ್ರಕರಣ ಪತ್ತೆ
ಬುಕಿಯಿಂದ ಬಿಟ್ ಕಾಯಿನ್, ಪತ್ನಿಗಾಗಿ ಐಫೋನ್ ಪಡೆದಿದ್ದ ಹೀತ್ ಸ್ಟ್ರೀಕ್ ಗೆ 8 ವರ್ಷ ನಿಷೇಧ!
ಹಿಂದಿಯ ‘ಅನ್ನಿಯನ್’ ಗೆ ರಣವೀರ್ ಸಿಂಗ್ ಹೀರೋ: ಶಂಕರ್ ಆಕ್ಷನ್ ಕಟ್