ನಾನು ಯಾವಾಗಲೂ ಭಾಜಪ ಪರ: ಪ್ರೋ. ಡಾ.ಚಿದಾನಂದ ಮೂರ್ತಿ

Team Udayavani, Oct 2, 2019, 2:59 PM IST

ಗಂಗಾವತಿ: ನಾನು ಯಾವಾಗಲೂ ಭಾರತೀಯ ಜನತಾ ಪಾರ್ಟಿಯ ಪರವಾಗಿದ್ದು ನೀವು ಜನರ ಕೆಲಸ ಮಾಡುವ ಮೂಲಕ ಪ್ರಧಾನಿ ಮೋದಿ ಹಾಗೂ ಭಾಜಪಕ್ಕೆ ಒಳ್ಳೆಯ ಹೆಸರು ತರಬೇಕೆಂದು ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿಯವರಿಗೆ ಖ್ಯಾತ ಸಾಹಿತಿ ಸಂಶೋಧಕ ಪ್ರೋ.ಡಾ.ಚಿದಾನಂದ ಮೂರ್ತಿ ಕಿವಿಮಾತು ಹೇಳಿದರು.

ನಗರದ ಲಯನ್ಸ್ ಭವನದಲ್ಲಿ ಶಾಸಕರಿಂದ ಸನ್ಮಾನ ಸ್ವೀಕರಿಸಿ ಮುನವಳ್ಳಿಯವರನ್ನು ಹತ್ತಿರ ಕರೆದು ಈ ಮಾತನ್ನು ಹೇಳಿದರು. ದೇಶ ಹಾಗೂ ಧರ್ಮದ ಉಳುವಿಗಾಗಿ ಪ್ರತಿಯೊಬ್ಬರು ಕೆಲಸ ಮಾಡಬೇಕಿದೆ ಎಂದರು. ಈ ಮಾತಿಗೆ ಶಾಸಕ ಪರಣ್ಣ ಮುನವಳ್ಳಿಯವರು ಡಾ.ಚಿದಾನಂದ ಮೂರ್ತಿ ಯವರ ಕಾಲಿಗೆ ನಮಸ್ಕಾರ ಮಾಡಿ ನೀವು ಹೇಳಿದಂತೆ ಮಾಡುವುದಾಗಿ ತಲೆ ಅಲ್ಲಾಡಿಸಿದರು.

ಕಮ್ಮಟ ದುರ್ಗಾ ಕ್ಕೆ ಚಿದಾನಂದ ಮೂರ್ತಿ ಭೇಟಿ:

ನಾಡಹಬ್ಬ ಮಹಾನವಮಿ ದಸರಾ ಹಬ್ಬ ಮೊದಲು ತಾಲೂಕಿನ ಕಮ್ಮಟ ದುರ್ಗ ದಲ್ಲಿ ಆರಂಭಿಸಲಾಗಿದೆ ಎಂದು ಇತ್ತೀಚೆಗೆ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿಯ ಹಿನ್ನೆಲೆಯಲ್ಲಿ ಬುಧವಾರ ಕಮ್ಮಟ ದುರ್ಗ ಹಾಗು ಹೇಮಗುಡ್ಡ ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದು ಅಗತ್ಯ ಮಾಹಿತಿಯನ್ನು ಸಂಗ್ರಹಿಸಿದರು. ದಸರಾ ಹಬ್ಬವನ್ನು ಸರಕಾರ ಕುಮ್ಮಟದುರ್ಗದಲ್ಲಿ ಆರಂಭಿಸಿ ಹಂಪಿಯ ಮಹಾನವಮಿ ದಿಬ್ಬದ ಹತ್ತಿರ ಕೊನೆಗೊಳ್ಳುತೆ ಆಚರಣೆ ಮಾಡಲು ಸರಕಾರಕ್ಕೆ ಪತ್ರ ಬರೆಯುವುದಾಗಿ ಪತ್ರಕರ್ತರಿಗೆ ತಿಳಿಸಿದರು.

ಶಾಸಕ ಪರಣ್ಣ ಮುನವಳ್ಳಿ, ಇತಿಹಾಸ ತಜ್ಞ ಡಾ.ಶರಣಬಸಪ್ಪ ಕೋಲ್ಕಾರ್,ಡಾ.ಶಿವಕುಮಾರ ಮಾಲೀಪಾಟೀಲಗ, ರಾಜೇಶನಾಯಕ,ಕೆ.ಬಸವರಾಜ ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ