Udayavni Special

ಅಕ್ರಮ ಸಾಗಾಟಕ್ಕೆ ಬೇಕಿದೆ ಕಡಿವಾಣ


Team Udayavani, Aug 31, 2019, 11:49 AM IST

kopala-tdy-1

ಕನಕಗಿರಿ: ತಾಲೂಕು ವ್ಯಾಪ್ತಿಯ ನವಲಿ, ಯತ್ನಟ್ಟಿ, ಬುನ್ನಟ್ಟಿ, ಈಚನಾಳ, ಕರಡೋಣಿ ಭಾಗದಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಮರಳು ಮಾಫಿಯಾದಿಂದ ಸಮೀಪದ ನವಲಿ ಗ್ರಾಮದಲ್ಲಿ ಮರುಳಿನ ದಿಬ್ಬ ಕುಸಿತು ಮೂವರು ಮಕ್ಕಳು ಮೃತಪಟ್ಟಿರುವ ಘಟನೆ ಕುರಿತು ತನಿಖೆ ನಡೆಸುತ್ತಿದೆ. ಈ ಘಟನೆ ನಂತರ ಎಚ್ಚೆತ್ತುಕೊಂಡ ಸಂಘ-ಸಂಸ್ಥೆಗಳು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಂತೆ ಮನವಿ ಸಲ್ಲಿಸುತ್ತೀವೆ.

ಕೇಂದ್ರಗಳು ನಾಮಮಾತ್ರಕ್ಕೆ: ಬುನ್ನಟ್ಟಿ ಗ್ರಾಮದ ಸಮೀಪದ ಭೂ ಮತ್ತು ಗಣಿ ಇಲಾಖೆ ವತಿಯಿಂದ ಎರಡು ಮರಳು ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಕಳೆದ ಒಂದು ವರ್ಷ ಹಿಂದೆ ಟೆಂಡರ್‌ ಕೂಡಾ ಮಾಡಲಾಗಿದೆ. ಈ ಕೇಂದ್ರಗಳು ನಾಮ ಮಾತ್ರಕ್ಕೆ ತೆರಯಲಾಗಿದೆ. ಡಿ.ಡಿ.ಯನ್ನು ನೀಡದೇ ಇರುವ ಕಾರಣ ಅಕ್ರಮ ಮರಳು ನಡೆಸವವರು ಮನ ಬಂದಂತೆ ಎಲ್ಲಿ ಅದರಲ್ಲಿ ಮರಳು ಸಾಗಿಸುತ್ತಿದ್ದಾರೆ.

ಕಾರ್ಯಪ್ರವೃತ್ತರಿಲ್ಲದ ಅಧಿಕಾರಿಗಳು: ಕಳೆದ ನಾಲ್ಕು ತಿಂಗಳ ಹಿಂದೆ ಅಕ್ರಮ ಮರಳು ಸಾಗಿಸುವ ಕುರಿತು ‘ಉದಯವಾಣಿ’ ವರದಿ ಮಾಡಿತ್ತು. ನಂತರ ತಹಶೀಲ್ದಾರ್‌ ರವಿ ಅಂಗಡಿ ಅವರು ಎಲ್ಲ ಇಲಾಖೆಗಳನ್ನು ಒಳಗೊಂಡ ಸಮಿತಿ ರಚಿಸಿದ್ದರು. ಪ್ರತಿ ದಿನವೂ ಒಬ್ಬರು ತಾಲೂಕಿನ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಗಸ್ತು ತಿರುಗುವಂತೆ ಸೂಚಿಸಿದರು. ಆದರೆ ಅಧಿಕಾರಿಗಳು ಮಾತ್ರ ಎಷ್ಟರ ಮಟ್ಟಿಗೆ ಕಾರ್ಯ ಪ್ರವೃತ್ತರಾದರೂ ಎಂಬುವುದು ಮಾತ್ರ ಯಾರಿಗೂ ತಿಳಿದಿಲ್ಲ.

ಸ್ಥಳಕ್ಕೆ ಭೇಟಿ ನೀಡದ ಶಾಸಕ: ಮೂವರು ಮಕ್ಕಳ ಮೃತಪಟ್ಟ ಘಟನೆ ನಡೆದು ಮೂರು ದಿನಗಳ ಕಳೆದರೂ ಘಟನಾ ಸ್ಥಳಕ್ಕೆ ಇದುವರೆಗೂ ಶಾಸಕ ಬಸವರಾಜ ದಢೇಸೂಗೂರು ಭೇಟಿ ನೀಡಿ ಪರಿಶೀಲಿಸಿಲ್ಲ. ಮೃತಪಟ್ಟ ಕುಟುಂಬದವರಿಗೆ ಇದುವರೆಗೂ ರಾಜ್ಯ ಸರ್ಕಾರ ಅಥವಾ ಜಿಲ್ಲಾಡಳಿತದಿಂದ ಯಾವುದೇ ಪರಿಹಾರ ಕೂಡಿಸಲು ಶಾಸಕರು ಮುಂದಾಗಿಲ್ಲ.

ಎಲ್ಲಿ ಬೇಕಾದರಲ್ಲಿ ತೆಗ್ಗು ದಿನ್ನೆಗಳೇ: ತಾಲೂಕಿನ ಕೊನೆಯ ಭಾಗವಾದ ಯತ್ನಟ್ಟಿ ಮಾರ್ಗವಾಗಿ ಬುನ್ನಟ್ಟಿ, ಈಚನಾಳ, ನವಲಿ ಗ್ರಾಮದವರೆಗೆ ಹಳ್ಳವಿದೆ. ಹಳ್ಳದ ಅಕ್ಕಪಕ್ಕ ಇರುವ ಖಾಸಗಿ ಜಮೀನಗಳಲ್ಲಿ ಕೂಡಾ ಯೋಗ್ಯವಾದ ಮರಳು ಲಭ್ಯವಿದೆ. ಇದನ್ನೆ ಬಂಡವಾಳ ಮಾಡಿಕೊಂಡ ದಂಧೆಕೊರರು ಹಳ್ಳದ ಸುತ್ತಲೂ ಎಲ್ಲಿ ಬೇಕಾದರಲ್ಲಿ ತೆಗ್ಗುಗಳನ್ನು ಅಗೆದಿದ್ದಾರೆ. ಇವು ಕೂಡಾ ಬಲಿಗಾಗಿ ಕಾದು ಕುಳಿತಿವೆ. ಇವುಗಳನ್ನು ನೆಲ ಸಮ ಮಾಡುವವರು ಯಾರು ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ.

 

•ಶರಣಪ್ಪ ಗೋಡಿನಾಳ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

ರಾಜ್ಯದಲ್ಲಿ ಸೋಮವಾರ 5018 ಸೋಂಕು ದೃಢ; 8005 ಬಿಡುಗಡೆಯಾದವರ ಸಂಖ್ಯೆ ; 64 ಸಾವು

ರಾಜ್ಯದಲ್ಲಿ ಸೋಮವಾರ 5018 ಸೋಂಕು ದೃಢ; 8005 ಬಿಡುಗಡೆಯಾದವರ ಸಂಖ್ಯೆ ; 64 ಸಾವು

101

ಚೆನ್ನೈ-ರಾಜಸ್ಥಾನ್ ಮುಖಾಮುಖಿ : ಟಾಸ್ ಗೆದ್ದ ಧೋನಿ ಪಡೆ ಬ್ಯಾಟಿಂಗ್ ಆಯ್ಕೆ

ಸಾಮಾಜಿಕ ಜಾಲತಾಣದ ಎಫೆಕ್ಟ್: ಮುತ್ತಯ್ಯ ಮುರಳೀಧರನ್ ಬಯೋಪಿಕ್ ಗೆ ಸೇತುಪತಿ ಗುಡ್ ಬೈ

ಸಾಮಾಜಿಕ ಜಾಲತಾಣದ ಎಫೆಕ್ಟ್: ಮುತ್ತಯ್ಯ ಮುರಳೀಧರನ್ ಬಯೋಪಿಕ್ ಗೆ ಸೇತುಪತಿ ಗುಡ್ ಬೈ

ಏನಿದು ನಿತೀಶ್ ಲೆಕ್ಕಾಚಾರ:ಬಿಹಾರ ಚುನಾವಣಾ ಕಣದಲ್ಲಿ ಈ ಬಾರಿ ಯುವ ಮಹಿಳಾ ಅಭ್ಯರ್ಥಿಗಳ ಸದ್ದು

ಏನಿದು ನಿತೀಶ್ ಲೆಕ್ಕಾಚಾರ:ಬಿಹಾರ ಚುನಾವಣಾ ಕಣದಲ್ಲಿ ಈ ಬಾರಿ ಯುವ ಮಹಿಳಾ ಅಭ್ಯರ್ಥಿಗಳ ಸದ್ದು…

ಮನೆಯ ಹಿತ್ತಲಲ್ಲಿ ಗಾಂಜಾ ಬೆಳೆದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು

ಮನೆಯ ಹಿತ್ತಲಲ್ಲಿ ಗಾಂಜಾ ಬೆಳೆ : ಪೊಲೀಸರಿಂದ ಓರ್ವನ ಬಂಧನ, ಗಾಂಜಾ ಬೆಳೆ ವಶ!

ಉತ್ತರ ಕರ್ನಾಟಕ ಜನ ಪ್ರವಾಹದಿಂದ ನರಳುತ್ತಿದ್ದರೆ ಸರಕಾರಕ್ಕೆ ಚಿಂತೆಯೇ ಇಲ್ಲ

ಪ್ರವಾಹದಿಂದ ಉತ್ತರ ಕರ್ನಾಟಕ ಜನ ನರಳುತ್ತಿದ್ದರೆ ಸರಕಾರಕ್ಕೆ ಚಿಂತೆಯೇ ಇಲ್ಲ : ತಂಗಡಗಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉತ್ತರ ಕರ್ನಾಟಕ ಜನ ಪ್ರವಾಹದಿಂದ ನರಳುತ್ತಿದ್ದರೆ ಸರಕಾರಕ್ಕೆ ಚಿಂತೆಯೇ ಇಲ್ಲ

ಪ್ರವಾಹದಿಂದ ಉತ್ತರ ಕರ್ನಾಟಕ ಜನ ನರಳುತ್ತಿದ್ದರೆ ಸರಕಾರಕ್ಕೆ ಚಿಂತೆಯೇ ಇಲ್ಲ : ತಂಗಡಗಿ

puneethh

ಅಪ್ಪು ಪ್ಲೀಸ್… ಒಮ್ಮೆ ಭೇಟಿಯಾಗಿ: ಪವರ್ ಸ್ಟಾರ್ ಆಗಮನದ ನಿರೀಕ್ಷೆಯಲ್ಲಿ ಅಂಧ ಸಹೋದರಿಯರು !

Kopala-tdy-2

ಎಪಿಎಂಸಿ ಆದಾಯ ಭಾರೀ ಕುಸಿತ

kopala-tdy-1

ಆರೋಗ್ಯ ಇಲಾಖೆ ನಿಯಮ ಪಾಲಿಸಿ

kopala-tdy-2

ಮಾಸಾಶನ: ಆಧಾರ್‌ ಲಿಂಕ್‌ 17 ಸಾವಿರ ಬಾಕಿ

MUST WATCH

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavani

udayavani youtube

ಹಸುವಿನ ಸಗಣಿ ಬಳಸಿ ಧೂಪ ತಯಾರಿಸುವುದು ಹೇಗೆ?

udayavani youtube

45 years journey of Pot maker from Karkala | Annumuli Pot maker | Udayavaniಹೊಸ ಸೇರ್ಪಡೆ

MallaKhamba

ಭಾರತದ ಹೆಮ್ಮೆಯ ಕ್ರೀಡೆ ಮಲ್ಲಕಂಬ; ಮರಾಠ ದೊರೆ ಎರಡನೇ ಪೇಶ್ವೆ ಬಾಜಿರಾವ್ ಕಾಲದ ಇತಿಹಾಸ

news-tdy-01

ಭೀಮಾ ನದಿ ಪ್ರವಾಹ ಸಂತ್ರಸ್ತರಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

ಚಾಮರಾಜನಗರ : ಕೋವಿಡ್  ಆರೋಗ್ಯ ಕೇಂದ್ರದಲ್ಲಿ 700 ಪುಸ್ತಕಗಳ ಗ್ರಂಥಾಲಯ!

isiri-tdy-3

ಬಾಳು ಜೇನು! ಖರ್ಚು ಕಡಿಮೆ, ಲಾಭ ಜಾಸ್ತಿ…

speed

ಗೆಲ್ಲಲು ಕಲಿಯುವ ಮೊದಲು ಸೋಲಲೇಬೇಕು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.