ಗಂಗಾವತಿ ಭಾಗದಲ್ಲಿ ಹೆಚ್ಚಿದ ಯೂರಿಯಾ ಬಳಕೆ

ಗೋಕೃಪಾಮೃತ ತಯಾರಿಸಲು ಸಾಧ್ಯವಾಗದೇ ಇದ್ದರೆ ಊರಲ್ಲಿ ಯಾರಿಗಾದರೂ ಜವಾಬ್ದಾರಿ ವಹಿಸಿ

Team Udayavani, Jan 1, 2022, 6:32 PM IST

ಗಂಗಾವತಿ ಭಾಗದಲ್ಲಿ ಹೆಚ್ಚಿದ ಯೂರಿಯಾ ಬಳಕೆ

ಕುಷ್ಟಗಿ: ರಾಜ್ಯದಲ್ಲಿ ಗಂಗಾವತಿ, ಶಿರಗುಪ್ಪ, ಸಿಂಧನೂರು ನೀರಾವರಿ ಪ್ರದೇಶಗಳಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಯೂರಿಯಾ, ಡಿಎಪಿ ಇನ್ನಿತರ ವಿಷಗಳನ್ನು ಬಳಸಲಾಗುತ್ತಿದೆ ಎಂದು ಕಲಬುರಗಿಯ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ, ಮಾಜಿ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಹೇಳಿದರು.

ವಜ್ರಬಂಡಿ ಕ್ರಾಸ್‌ನಲ್ಲಿರುವ ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಅವರ ತೋಟದಲ್ಲಿ ಶ್ರೀ ಕೊತ್ತ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ, ಕಲಬುರಗಿ ವಿಕಾಸ ಅಕಾಡೆಮಿ ಆಶ್ರಯದಲ್ಲಿ ನಡೆದ ಸಾವಯವ ಸಮಗ್ರ ಕೃಷಿ ಸಂತೃಪ್ತ ರೈತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಷ್ಟು ದಿನಗಳವರೆಗೆ ಪಂಜಾಬ್‌ನಲ್ಲಿ ಕ್ಯಾನ್ಸರ್‌ ರೋಗಿಗಳು ಹುಟ್ಟುತ್ತಿದ್ದರು. ಇದೀಗ ಗಂಗಾವತಿ, ಸಿಂಧನೂರ, ನೀರಾವರಿ ಪ್ರದೇಶಗಳಿಂದ ಮನೆ ಮನೆಗೆ ಒಬ್ಬರು ಕ್ಯಾನ್ಸರ್‌ ರೋಗಿಗಳಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಭೂಮಿಗೆ ವಿಷ ಹಾಕುವುದಕ್ಕೂ ಮಿತಿ ಇದ್ದು, ಮಿತಿ ಮೀರಿದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭೂಮಿಯನ್ನು ಉಳಿಸಬೇಕಾದರೆ ಗೋಕೃಪಾಮೃತ ಏಕಮಾತ್ರವಾಗಿದೆ. ಆದರೆ ನಮ್ಮ ರೈತರು ಮಾರುಕಟ್ಟೆಯಿಂದ ತಂದು ಸಿಂಪಡಿಸುವುದು ರೂಢಿಯಾಗಿದ್ದು, ತಾವೇ ತಯಾರಿಸಲು ಮುಂದಾಗುವುದಿಲ್ಲ. ಊರಲ್ಲಿ ಎಲ್ಲ ರೈತರಿಗೆ ಗೋಕೃಪಾಮೃತ ತಯಾರಿಸಲು ಸಾಧ್ಯವಾಗದೇ ಇದ್ದರೆ ಊರಲ್ಲಿ ಯಾರಿಗಾದರೂ ಜವಾಬ್ದಾರಿ ವಹಿಸಿ ಅವರಿಂದ ಪಡೆದುಕೊಳ್ಳಿ. ಆ ರೈತನು ಬದುಕುತ್ತಾನೆ ನಿಮ್ಮ ಕೆಲಸವೂ ಆಗುತ್ತದೆ.

ದೇಶದಲ್ಲಿ ರಾಸಾಯನಿಕ ಔಷ ಧಿಯ ಹೆಚ್ಚುವರಿ ಖರ್ಚು ತಗ್ಗಿಸಲು ಗೋಕೃಪಾಮೃತವಾಗಿದೆ. ಕಬ್ಬು, ಭತ್ತ ಇತರೆ ಬೆಳೆಗೆ ಪ್ರಯೋಗ ಮಾಡಲಾಗಿದ್ದು ಉತ್ತಮ ಬೆಳೆ ಬಂದಿದೆ ಎಂದರು. ಸಂಸದ ಕರಡಿ ಸಂಗಣ್ಣ ಮಾತನಾಡಿ, ಇತ್ತೀಚಿಗೆ ಕೃಷಿಕರಿಗೆ ಬೆಲೆ ಇಲ್ಲ ಎನ್ನುವ ಕೀಳರಿಮೆ ಇದೆ. ಕೃಷಿಗೆ ಇರುವ ಗೌರವ, ಪ್ರಾಧಾನ್ಯತೆ ಯಾರಿಗೂ ಇಲ್ಲ. ಯಾರು ಕೃಷಿಯತ್ತ ಮುಖ ಮಾಡುವವರು ಕೇವಲ ವ್ಯಕ್ತಿ ಅಲ್ಲ ದೇವರು ಎಂದರೆ ತಪ್ಪಗಲಾರದು ಎಂದರು.

ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ ಮಾತನಾಡಿ, ವಿದ್ಯಾವಂತರಿಗೆ ದುಶ್ಚಟ ಎನ್ನುವ ರೋಗದಿಂದ ಬಿಡುಗಡೆಯಾದರೆ ಮಾತ್ರ ಸ್ವಲ್ಪ ಮಟ್ಟಿನ ಸಂತೃಪ್ತರಾಗುವ ಸಾಧ್ಯತೆಗಳಿವೆ. ಯಾಕೆಂದರೆ ಈ ದುಶ್ಚಟದಿಂದ ಯಾರೂ ಬಿಡುಗಡೆ ಹೊಂದಲು ಸಾಧ್ಯವಿಲ್ಲ. ಸರ್ಕಾರ ಇದಕ್ಕೆ ಬೆಂಬಲಿಸುತ್ತಿದೆ ಎಂದು ವಿಷಾದಿಸಿದರು. ನವದೆಹಲಿ ಐಸಿಎಆರ್‌ ನಿಕಟಪೂರ್ವ ನಿರ್ದೇಶಕ ಡಾ| ಎಸ್‌.ಎ. ಪಾಟೀಲ ಮಾತನಾಡಿ,ಒಕ್ಕಲುತನ ಎಲ್ಲ ತತ್ವಗಳಿಗೆ ಮೂಲವಾಗಿದೆ. ರೈತ ಮೆಹಂದಿ ಬೆಳೆದರೆ ಮೆಹಂದಿ ಹಾಕುವವರು ಶ್ರೀಮಂತರಾಗಿದ್ದಾರೆ. ಮೆಕ್ಕೆಜೋಳ ಬೆಳೆದ ರೈತರಗಿಂತ ಸ್ವೀಟ್‌ ಕಾರ್ನ್, ಹುರಿದು ಮಾರುವವರು ಹೆಚ್ಚು ಹಣಗಳಿಸುತ್ತಿರುವುದು ಇಂದಿನ ಪರಿಸ್ಥಿತಿಯಾಗಿದೆ ಎಂದರು.

ರೋಣ ಗುಲಗಂಜಿಮಠದ ಗುರುಪಾದ ದೇವರು ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಂಸದ ಶಿವರಾಮೇಗೌಡ, ಐಎಫ್‌ಎಸ್‌ ಅಧಿಕಾರಿ ಕೃಷ್ಣ ಉದುಪುಡಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲಕ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವಿ.ಎಸ್‌. ಭೂಸನೂರುಮಠ, ಪ್ರಭುರಾಜ ಕಲಬುರಗಿ, ವಿ.ಶಾಂತರಡ್ಡಿ, ಲೀಲಾ ಕಾರಟಗಿ ಮತ್ತೀತರಿದ್ದರು.

ಸಮಗ್ರ ಕೃಷಿ ಮಾಡುವವರು ಜಗತ್ತನ್ನು ಸಾಕುತ್ತಾರೆ ತಾವೂ ಬದುಕುತ್ತಾರೆ. ಈ ರೈತರು ಕೇವಲ ಮನುಷ್ಯರಿಗೆ ಮಾತ್ರ ಅನ್ನ ಹಾಕುವುದಿಲ್ಲ. ಸಮಸ್ತ ಜೀವ ಸಂಕುಲಕ್ಕೆ ಅನ್ನ ಹಾಕುತ್ತಾರೆ. ದೇವರು ಬಿಟ್ಟ ಮೇಲೆ ಎರಡನೇ ದೇವರು ರೈತರಾಗಿದ್ದಾರೆ. ಏಕ ಬೆಳೆ ಬೆಳೆಯುವುದು ಜೂಜಿನಂತೆ, ಹೀಗಾಗಿ ಸಮಗ್ರ ಕೃಷಿಗೆ ಬಳಸಿಕೊಳ್ಳಬೇಕಿದೆ.
ಬಸವರಾಜ ಪಾಟೀಲ ಸೇಡಂ,
ಅಧ್ಯಕ್ಷರು ಕ.ಕ. ಮಾನವ ಸಂಪನ್ಮೂಲ
ಕೃಷಿ ಸಾಂಸ್ಕೃತಿಕ ಸಂಘ ಕಲಬುರಗಿ

ಟಾಪ್ ನ್ಯೂಸ್

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ

Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ

Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ

Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.