Udayavni Special

ಮಹಿಳಾ ಪದವಿ ಕಾಲೇಜಿಗೆ ಹೆಚ್ಚಿದ ಬೇಡಿಕೆ

4 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರಿಂದ ಅಭ್ಯಾಸ, ಗಂಗಾವತಿ ಜನರ ಕನಸು ನನಸಾಗುವ ಸಾಧ್ಯತೆ

Team Udayavani, Mar 13, 2021, 4:34 PM IST

ಮಹಿಳಾ ಪದವಿ ಕಾಲೇಜಿಗೆ ಹೆಚ್ಚಿದ ಬೇಡಿಕೆ

ಗಂಗಾವತಿ: ದಶಕದಿಂದ ಗಂಗಾವತಿ ನಗರ ಶೈಕ್ಷಣಿಕವಾಗಿ ಪ್ರಗತಿ ಹೊಂದುತ್ತಿದ್ದು, ಸದ್ಯ ನಗರದಲ್ಲಿ ಆರು ಪದವಿ ಮಹಾವಿದ್ಯಾಲಯಗಳಿವೆ. ಇವುಗಳಲ್ಲಿಶೇ.50ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಈಗಾಗಲೇವಿದ್ಯಾರ್ಥಿ ಸಂಘಟನೆಗಳು ದಶಕಗಳಿಂದ ಗಂಗಾವತಿಗೆಪ್ರತ್ಯೇಕ ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯ ಮಂಜೂರಿ ಮಾಡುವಂತೆ ಮನವಿ ಮಾಡುತ್ತಿದ್ದರೂ ಸರಕಾರ ನಿರ್ಲಕ್ಷ್ಯ ವಹಿಸಿದೆ. ಈ ಮಧ್ಯೆ ರಾಜ್ಯದಲ್ಲಿ ಶೀಘ್ರವೇ 20 ಸರಕಾರಿ ಮಹಾವಿದ್ಯಾಲಯಗಳನ್ನು ಮಂಜೂರಿ ಮಾಡುವ ಕುರಿತು ಉನ್ನತ ಶಿಕ್ಷಣ ಇಲಾಖೆ ಆಸಕ್ತಿ ಹೊಂದಿದ್ದು, ಈಗಾಗಲೇ ಪ್ರಸ್ತಾವನೆ ಸಲ್ಲಿಸಿರುವಂತೆ ಗಂಗಾವತಿ ನಗರಕ್ಕೆ ಒಂದು ಮಹಿಳಾಸರಕಾರಿ ಮಹಾವಿದ್ಯಾಲಯ ದೊರಕುವ ಸಾಧ್ಯತೆ ಇದೆ.

ನಗರದಲ್ಲಿ ಕೊಲ್ಲಿನಾಗೇಶ್ವರರಾವ್‌ ಸರಕಾರಿಮಹಾವಿದ್ಯಾಲಯ, ಕಲ್ಮಠ ಮಹಿಳಾಮಹಾವಿದ್ಯಾಲಯ, ಸಂಕಲ್ಪ ಮಹಾವಿದ್ಯಾಲಯ,ಜಿಎಚ್‌ಎನ್‌ ಮಹಾವಿದ್ಯಾಲಯ, ಜೆಎಸ್‌ಎಸ್‌ ಮಹಾವಿದ್ಯಾಲಯ, ಶ್ರೀರಾಮುಲು ಮಹಾವಿದ್ಯಾಲಯ ಮತ್ತು ಶ್ರೀರಾಮನಗರ,ಕಾರಟಗಿ ಮತ್ತು ಕನಕಗಿರಿಯಲ್ಲಿ ಸರಕಾರಿ ಪದವಿಮಹಾವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಒಟ್ಟು 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ತಾಲೂಕಿನಲ್ಲಿಒಟ್ಟು 16 ಪಿಯುಸಿ ಕಾಲೇಜು ಗಳಿದ್ದು,  ಪ್ರತಿ ವರ್ಷವೃತ್ತಿಪರ ಕೋರ್ಸ್‌ಗೆ ಇದರಲ್ಲಿ ಶೇ. 16ರಷ್ಟುವಿದ್ಯಾರ್ಥಿಗಳು ಹೋಗುತ್ತಿದ್ದು, ಉಳಿದವರು ಪದವಿ ಕೋರ್ಸ್‌ಗೆ ಸೇರಿ ಕಲೆ, ವಾಣಿಜ್ಯ, ವಿಜ್ಞಾನವಿಭಾಗದ ಪದವಿ ಅಭ್ಯಾಸ ಮಾಡು ತ್ತಿದ್ದಾರೆ. ಕೋ ಎಜ್ಯುಕೇಶನ್‌ನಲ್ಲಿ ಕಲಿಯಲು ಆಸಕ್ತಿ ಇಲ್ಲದೇ ಮತ್ತು ಪಾಲಕರ ನಿರಾಕರಣೆಯ ಫಲವಾಗಿ ಶೇ.14ರಷ್ಟುವಿದ್ಯಾರ್ಥಿನಿಯರು ಪಿಯುಸಿಗೆ ತಮ್ಮ ವಿದ್ಯಾಭ್ಯಾಸನಿಲ್ಲಿಸುತ್ತಿದ್ದಾರೆ ಎಂದು ಸಮೀಕ್ಷೆ ಯೊಂದು ಹೇಳಿದ್ದುಇದನ್ನು ಪರಿಗಣಿಸಿ 2014-15ರಲ್ಲಿ ಉನ್ನತ ಶಿಕ್ಷಣಇಲಾಖೆ ಪ್ರತಿ ತಾಲೂಕಿನಲ್ಲಿ ವಿದ್ಯಾರ್ಥಿಗಳು ಮತ್ತುವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿ ಸಹಿತ ಪದವಿ ಕಾಲೇಜು ಆರಂಭಿಸುವ ಯೋಜನೆ ರೂಪಿಸಿತ್ತು.

ಅನುಷ್ಠಾನ ಮಾಡುಯವ ವೇಳೆ ವಿಧಾನಸಭೆ ಚುನಾವಣೆ ಬಂದ ಕಾರಣ ತಾಲೂಕಿಗೊಂದು ಪದವಿ ಮಹಾವಿದ್ಯಾಲಯ ಯೋಜನೆ ನನೆಗುದಿಗೆಬಿದ್ದಿದೆ. ಇದೀಗ ತಾಲೂಕಿಗೊಂದು ಮಹಿಳಾ ಪದವಿ ಮಹಾವಿದ್ಯಾಲಯ ಆರಂಭ ಮಾಡಲು ರಾಜ್ಯ ಸರಕಾರ ಜಿಲ್ಲೆಗಳಿಂದ ವರದಿ ಕೇಳಿದ್ದು ಶೀಘ್ರ 20 ತಾಲೂಕುಗಳಲ್ಲಿ ಮಹಿಳಾ ಪದವಿ ಕಾಲೇಜು ಆರಂಭಿಸಲಾಗುತ್ತಿದೆ.

ಗಂಗಾವತಿ ನಗರಕ್ಕೆ ಸರಕಾರಿ ಮಹಿಳಾ ಮಹಾವಿದ್ಯಾಲಯದ ಅವಶ್ಯಕತೆ ಇದ್ದು, ಈಗಾಗಲೇ ಉನ್ನತ ಶಿಕ್ಷಣ ಸಚಿವ ಡಾ|ಅಶ್ವಥನಾರಾಯಣ ಅವರು ಗಂಗಾವತಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮನವಿ ಸಲ್ಲಿಸಲಾಗಿದೆ. ತಾಲೂಕಿನಲ್ಲಿ ಹೆಣ್ಣುಮಕ್ಕಳು ಪದವಿ ವಿದ್ಯಾಭ್ಯಾಸ ಮಾಡಲು ಪ್ರತ್ಯೇಕ ಮಹಿಳಾ ಪದವಿ ಕಾಲೇಜು ಇದ್ದರೆ ಅನುಕೂಲವಾಗುತ್ತದೆ. ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯವಾಗಲಿದೆ. ಇದೇ ವರ್ಷ ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯ ಆರಂಭಿಸಲು ಮತ್ತೂಮ್ಮೆ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗುತ್ತದೆ.  –ಪರಣ್ಣ ಮುನವಳ್ಳಿ, ಶಾಸಕರು

ಪ್ರತಿ ತಾಲೂಕಿನಲ್ಲಿ ಮಹಿಳಾ ಪದವಿಮಹಾವಿದ್ಯಾಲಯದ ಅಗತ್ಯವಿದ್ದು,ಈಗಾಗಲೇ ಶಾಸಕರು, ಸಂಸದರಿಗೆ ಈ ಕುರಿತುಮನವರಿಕೆ ಮಾಡಲಾಗಿದೆ. ಪ್ರಸ್ತುತ ಗಂಗಾವತಿಗೆಪ್ರತ್ಯೇಕ ಮಹಿಳಾ ಮಹಾವಿದ್ಯಾಲಯಆರಂಭಿಸಲು ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದಾರೆ.ಉನ್ನತ ಶಿಕ್ಷಣ ಸಚಿವರಿಗೆ ಮತ್ತೂಮ್ಮೆ ಪತ್ರ ಬರೆಯುವಂತೆ ಶಾಸಕರು, ಸಂಸದರಿಗೆ ಮನವಿ ಮಾಡಲಾಗುತ್ತದೆ. ಪದವಿ ಮಹಾವಿದ್ಯಾಲಯ ಮಂಜೂರಿ ಮಾಡುವ ಮೂಲಕ ಹೆಣ್ಣು ಮಕ್ಕಳು ಪದವಿವರೆಗೆ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುತ್ತದೆ. ಇದೇ ಶೈಕ್ಷಣಿಕ ವರ್ಷದಿಂದ ಮಹಿಳಾ ಪದವಿ ಕಾಲೇಜು ಆರಂಭಮಾಡಬೇಕು.  ಶಿವಾನಂದ ಮೇಟಿ, ಸದಸ್ಯರು ವಿದ್ಯಾವಿಷಯಕ್‌ ಪರಿಷತ್‌ ಶ್ರೀಕೃಷ್ಣದೇವರಾಯ ವಿವಿ

 

-ಕೆ. ನಿಂಗಜ್ಜ

ಟಾಪ್ ನ್ಯೂಸ್

Oppo F19

ಒಪ್ಪಬಹುದಾದ ಒಪ್ಪೋ ಎಫ್19

ನಿಷೇಧದ ಮಧ್ಯೆ ಜಾತ್ರೆ: ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲು

ನಿಷೇಧದ ಮಧ್ಯೆ ಜಾತ್ರೆ: ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲು

/wearing-mask-in-public-space-to-avoid-covid-19-is-no-more-compulsory-says-israel

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಿಲ್ಲ : ಅಚ್ಚರಿಯ ನಿರ್ಣಯ ಕೈಗೊಂಡ ಈ ದೇಶ..!

ಮಿತಿಮೀರಿದ ಕೋವಿಡ್: ಇಂದಿನಿಂದ ದೆಹಲಿಯಲ್ಲಿ ಒಂದು ವಾರ ಲಾಕ್ ಡೌನ್ ಜಾರಿ: ಕೇಜ್ರಿವಾಲ್

ಮಿತಿಮೀರಿದ ಕೋವಿಡ್: ಇಂದಿನಿಂದ ದೆಹಲಿಯಲ್ಲಿ ಒಂದು ವಾರ ಲಾಕ್ ಡೌನ್ ಜಾರಿ: ಕೇಜ್ರಿವಾಲ್

ಮಿತಿಮೀರಿ ಹೆಚ್ಚಳವಾಗುತ್ತಿರುವ ಕೋವಿಡ್: ಪರಿಸ್ಥಿತಿ ನಿಭಾಯಿಸಲು ಸಭೆ ಕರೆದ ಪ್ರಧಾನಿ ಮೋದಿ

ಮಿತಿಮೀರಿ ಹೆಚ್ಚಳವಾಗುತ್ತಿರುವ ಕೋವಿಡ್: ಪರಿಸ್ಥಿತಿ ನಿಭಾಯಿಸಲು ಸಭೆ ಕರೆದ ಪ್ರಧಾನಿ ಮೋದಿ

ಕೋವಿಡ್ 2ನೇ ಅಲೆ: ಭಾರತದಲ್ಲಿ 24 ಗಂಟೆಗಳಲ್ಲಿ 2.73 ಲಕ್ಷ ಪ್ರಕರಣ ಪತ್ತೆ

ಕೋವಿಡ್ 2ನೇ ಅಲೆ: ಭಾರತದಲ್ಲಿ 24 ಗಂಟೆಗಳಲ್ಲಿ 2.73 ಲಕ್ಷ ಪ್ರಕರಣ ಪತ್ತೆ

upendra

ಉಪ್ಪಿ ‘ಲಗಾಮ್‌’ಗೆ ಇಂದು ಮುಹೂರ್ತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gdsdsfds

ಮಾನವೀಯತೆಯಿಂದ ವರ್ತಿಸಿ: ಪಾಟೀಲ

gdssdfgv

ಬಳ್ಳಾರಿ ವಿವಿ ವ್ಯಾಪ್ತಿಯ ಪರೀಕ್ಷೆ ಮುಂದೂಡಲು ಮನವಿ

xgnsdftgs

ಜನ ಸಹಕರಿಸದಿದ್ದರೆ ಲಾಕ್‌ಡೌನ್‌: ಸಚಿವ ಪಾಟೀಲ್‌

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಆಂಜನೇಯಸ್ವಾಮಿ  ಮೊರೆ ಹೋದ ಆರ್.ಧ್ರವನಾರಾಯಣ್

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಆಂಜನೇಯಸ್ವಾಮಿ ಮೊರೆ ಹೋದ ಆರ್.ಧ್ರವನಾರಾಯಣ್

ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಟಿಟಿಡಿ ವಿವಾದದ ಬಗ್ಗೆ ಸಂಶೋಧನೆಯಾಗಲಿ: ಸಚಿವ ಲಿಂಬಾವಳಿ

ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಟಿಟಿಡಿ ವಿವಾದದ ಬಗ್ಗೆ ಸಂಶೋಧನೆಯಾಗಲಿ: ಸಚಿವ ಲಿಂಬಾವಳಿ

MUST WATCH

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

ಹೊಸ ಸೇರ್ಪಡೆ

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ನಿಷೇಧದ ಮಧ್ಯೆ ಜಾತ್ರೆ: ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲು

ನಿಷೇಧದ ಮಧ್ಯೆ ಜಾತ್ರೆ: ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲು

Mallikarjuna Temple

ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ: ದೇವರ ದೊಡ್ಡ ದರ್ಶನ ಬಲಿ ಉತ್ಸವ

/wearing-mask-in-public-space-to-avoid-covid-19-is-no-more-compulsory-says-israel

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಿಲ್ಲ : ಅಚ್ಚರಿಯ ನಿರ್ಣಯ ಕೈಗೊಂಡ ಈ ದೇಶ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.