ಕೋವಿಡ್-19 ಎಚ್ಚರಿಕೆ ಮಧ್ಯೆಯೂ ಪೊಲೀಸರು ಜನಪ್ರತಿಧಿಗಳ ಗುಂಪು ಫೋಟೋ
Team Udayavani, Apr 21, 2020, 9:35 AM IST
ಗಂಗಾವತಿ: ಕೋವಿಡ್-19 ರೋಗ ಹರಡದಂತೆ ಗುಂಪು ಸೇರದೆ ಭೌತಿಕ ಅಂತರ ಕಾಪಾಡಿಕೊಳ್ಳುವ ಎಚ್ಚರಿಕೆ ಮಧ್ಯೆಯೂ ನಗರದಲ್ಲಿ ಕೋವಿಡ್ ಜನಜಾಗೃತಿ ಸೈಕಲ್ ಜಾಥ ನಡೆಸಿದ ನಂತರ ಪೊಲೀಸರು ಜನಪ್ರತಿನಿಧಿಗಳು ಮತ್ತು ಗೋ ಗ್ರೀನ್ ಸೈಕಲ್ ತಂಡದವರು ಭೌತಿಕ ಅಂತರ ಕಾಪಾಡದೇ ನಗರದ ಗಾಂಧಿ ಚೌಕಿನಲ್ಲಿ ಗುಂಪು ಪೋಟೊ ತೆಗೆಸಿಕೊಂಡು ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದ್ದಾರೆ.
ಮಂಗಳವಾರ ಗೋಗ್ರೀನ್ ಸೈಕಲ್ ತಂಡ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಕೋವಿಡ್-19 ವೈರಸ್ ಜನಜಾಗೃತಿ ಜಾಥವನ್ನು ಆಯೋಜನೆ ಮಾಡಲಾಗಿತ್ತು ಇದರಲ್ಲಿ ಶಾಸಕ ಪರಣ್ಣ ಮುನವಳ್ಳಿ, ಡಿವೈಎಸ್ ಪಿ ಡಾ.ಚಂದ್ರಶೇಖರ ಹಾಸ್ಯ ಭಾಷಣಕಾರ ಬಿ.ಪ್ರಾಣೇಶ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳು ವರ್ತಕರು ಸೇರಿದ್ದರು.
ನಗರದಾದ್ಯಂತ ಸೈಕಲ್ ನಲ್ಲಿ ಸುತ್ತಾಡಿ ಕೊನೆಗೆ ಗಾಂಧಿ ಚೌಕಿನಲ್ಲಿ 50ಕ್ಕೂ ಹೆಚ್ಚು ಜನರು ಸೇರಿ ಗುಂಪು ಪೊಟೊ ತೆಗೆಸಿಕೊಂಡರು ಇವರಲ್ಲಿ ಯಾರು ಸಹ ಸಾಮಾಜಿಕ ಅಂತರ ಕಾಪಾಡಲಿಲ್ಲ. ಜನಸಾಮಾನ್ಯರಿಗೆ ಸಾಮಾಜಿಕ ಅಂತರದ ಬಗ್ಗೆ ಉಪದೇಶ ಮಾಡುವ ಅಧಿಕಾರಿಗಳು ಜನಪ್ರತಿನಿಧಿಗಳು, ಪೊಲೀಸರು ತಾವೇ ಪಾಲನೆ ಮಾಡದಿರುವ ಕುರಿತು ಸಾರ್ವಜನಕರ ಆಕ್ರೋಶಕ್ಕೆ ಕಾರಣವಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ
IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್
Wheel Chair Romeo actor exclusive interview | RELEASING ON MAY 27TH
ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ
ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?
ಹೊಸ ಸೇರ್ಪಡೆ
ಉಳ್ಳಾಲದಿಂದ ಅಪಹರಿಸಿ ಚಾರ್ಮಾಡಿಯಲ್ಲಿ ಯುವಕನ ಕೊಲೆಗೆ ಯತ್ನ :ಅದೃಷ್ಟ ಚೆನ್ನಾಗಿತ್ತು ನೋಡಿ…
ಡಿಕೆಶಿ ಶೀಘ್ರ ಜೈಲಿಗೆ ಹೋಗುತ್ತಾರೆ : ಎಂ.ಜಿ. ಮಹೇಶ್
ಮಂಗಳೂರು : ಚೆಕ್ ಬೌನ್ಸ್ ಪ್ರಕರಣ ; 88 ಲ.ರೂ. ಪಾವತಿಸಲು ಆದೇಶ, ತಪ್ಪಿದರೆ 6 ತಿಂಗಳ ಸಜೆ
ಗಂಗಾ ಕಲ್ಯಾಣ ಅವ್ಯವಹಾರ ತನಿಖೆಯಲ್ಲಿ ಸಾಬೀತು- ಪ್ರಿಯಾಂಕ್ ಖರ್ಗೆ
ಪುತ್ತೂರು : 13 ಕ್ಕೂ ಅಧಿಕ ಮಂದಿಗೆ ಹುಚ್ಚು ನಾಯಿ ಕಡಿತ