ಶಿಥಿಲಾವಸ್ಥೆ ತಲುಪಿದ ಕಾರಟಗಿ ಪ್ರಾಥಮಿಕ ಶಾಲೆ ಕಟ್ಟಡ

Team Udayavani, Jul 22, 2019, 11:17 AM IST

ಕಾರಟಗಿ: ಪಟ್ಟಣದ ಬಸವೇಶ್ವರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಛಾವಣಿ ಸಿಮೆಂಟ್ ಕಿತ್ತು ಹೋಗಿದೆ.

ಕಾರಟಗಿ: ನೂತನ ತಾಲೂಕು ಕೇಂದ್ರವಾದ ಪಟ್ಟಣದ ಬಸವೇಶ್ವರ ನಗರದ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ವಿದ್ಯಾರ್ಥಿಗಳು ಭಯದಲ್ಲೆ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

1997ರಲ್ಲಿ ಆರಂಭವಾದ ಈ ಶಾಲೆಯಲ್ಲಿ 1ರಿಂದ 7ನೇ ತರಗತಿಗಳು ನಡೆಯುತ್ತಿದ್ದು, 100 ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಬೋಧನೆ ಮಾಡಲು ಐವರು ಶಿಕ್ಷಕರಿದ್ದಾರೆ. ಆದರೆ ಮಕ್ಕಳಿಗೆ ವ್ಯವಸ್ಥಿತವಾದ ಕೊಠಡಿಗಳಿಲ್ಲ. ಎರಡು ಶಾಲಾ ಕೊಠಡಿಗಳ ಮೇಲ್ಛಾವಣಿ ಕಿತ್ತು ಹೋಗಿದ್ದು ಅರೆಬರೆಯಾಗಿ ಕಬ್ಬಿಣದ ಸರಳು ಕಾಣುತ್ತವೆ. ಕೆಲವೊಮ್ಮೆ ವಿದ್ಯಾರ್ಥಿಗಳು ಶಾಲೆಯಲ್ಲಿ ಕುಳಿತಾಗ ಮೇಲ್ಛಾವಣಿಯ ಸಿಮೆಂಟ್ ತುಣುಕುಗಳು ಬಿದ್ದ ಘಟನೆಗಳು ಜರುಗಿವೆ. ಅಲ್ಲದೇ ಶಾಲಾ ಕಟ್ಟಡದ ಹೊರಮೇಲ್ಮೈ ಕೂಡ ಅಲ್ಲಲ್ಲಿ ಬಿರುಕು ಬಿಟ್ಟಿದ್ದು ಭಾರಿ ಮಳೆಗಾಳಿ ಬೀಸಿದ ಸಮಯದಲ್ಲಿ ಅವಘಡ ಸಂಭವಿಸುವ ಸಾಧ್ಯತೆಗಳಿವೆ. ಶಾಲೆಯಲ್ಲಿ ಬಿಸಿಯೂಟ, ಬೆಳಗಿನ ಕ್ಷೀರ ಭಾಗ್ಯ ಸಮರ್ಪಕವಾಗಿದೆ. ವಿದ್ಯಾರ್ಥಿಗಳು ನಿತ್ಯ ಫ್ಲೊರೈಡಯುಕ್ತ ನೀರನ್ನೇ ಸೇವಿಸುತ್ತಿದ್ದಾರೆ. ಮುಖ್ಯವಾಗಿ ಈ ಶಾಲೆಗೆ ಕಾಂಪೌಂಡ್‌ ಇಲ್ಲದ ಕಾರಣ ಸಂಜೆ ಶಾಲೆ ಅವಧಿ ಮುಗಿಯುತ್ತಿದ್ದಂತೆ ಕಿಡಿಗೇಡಿಗಳ ಹಾವಳಿ ಹೆಚ್ಚಾಗುತ್ತದೆ. ಅಲ್ಲದೇ ಶಾಲಾ ಆವರಣ ಹಾಗೂ ಕೊಠಡಿಗಳಲ್ಲಿ ಅನೈತಿಕ ಚಟುವಟಿಕೆಗಳೂ ನಡೆಯುತ್ತಿವೆ. ಇದರಿಂದಾಗಿ ಶಾಲೆಯ ಪರಿಸರ ಸಂಪೂರ್ಣ ಹದಗೆಟ್ಟಿದೆ. ಶಿಕ್ಷಣ ಇಲಾಖೆ ಶಾಲೆ ಸಮಸ್ಯೆಗಳತ್ತ ಗಮನಹರಿಸದೇ ನಿರ್ಲಕ್ಷ್ಯ ತೋರಿದ್ದಾರೆ.

ಬಸವೇಶ್ವರ ನಗರದ ಸರಕಾರಿ ಶಾಲೆಗೆ ಆವರಣ ಗೋಡೆ ಇಲ್ಲದ ಕಾರಣ ಶಾಲೆಯಲ್ಲಿ ಕೆಲ ಕಿಡಿಗೇಡಿಗಳು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದರಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ನಿಟ್ಟಿನಲ್ಲಿ ಈ ಕುರಿತು ಎಸ್‌ಡಿಎಂಸಿ ಅವರೊಂದಿಗೆ ಚರ್ಚಿಸಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದೇವೆ.•ಸೋಮಪ್ಪ ಎಂ., ಮುಖ್ಯಶಿಕ್ಷಕ

ಶಾಲಾ ಆವರಣ ಗೋಡೆ ನಿರ್ಮಾಣಕ್ಕೆ ಎಚ್ಕೆಆರ್‌ಡಿಬಿ ಯೋಜನಯಡಿ ಬೇಡಿಕೆ ಸಲ್ಲಿಸಿದ್ದೇವೆ. ಶಾಲಾ ಕೊಠಡಿಗಳ ದುರಸ್ತಿಗಾಗಿ ಇಲಾಖೆ ಗಮನಕ್ಕೆ ತರಲಾಗಿದೆ. ಅಲ್ಲದೆ ಶುದ್ಧ ಕುಡಿವ ನೀರು ಪೂರೈಕೆಗಾಗಿ ಪುರಸಭೆ ವತಿಯಿಂದ ಕೊಳವೆ ಬಾವಿ ಕೊರೆಸಲಾಗಿದೆ. ಶೀಘ್ರದಲ್ಲೇ ಶುದ್ಧ ಕುಡಿವ ನೀರು ಪೂರೈಕೆಗೆ ಹಾಗೂ ಶಾಲೆಯಲ್ಲಿ ಸಂಜೆ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಮುಖ ಶಿಕ್ಷಕರು ಗಮನಕ್ಕೆ ತಂದಿದ್ದಾರೆ. ಅಗತ್ಯ ಕ್ರಮಕೈಗೊಳ್ಳಲಾಗುವುದು.•ತಿಮ್ಮಣ್ಣ ನಾಯಕ,ಸಿ.ಆರ್‌.ಪಿ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಲಬುರ್ಗಾ: ಸಂತ ಶ್ರೀ ಸೇವಾಲಾಲ್‌ ಮಹಾರಾಜರ ತತ್ವಾದರ್ಶಗಳು ನಮ್ಮ ನಿತ್ಯದ ಬದುಕಿಗೆ ಮಾರ್ಗದರ್ಶಕಗಳಾಗಿವೆ. ಅವುಗಳನ್ನು ಅಳವಡಿಸಿಕೊಂಡು ನಮ್ಮ ಬದುಕನ್ನು ಬಂಗಾರ...

  • ಸಿದ್ದಾಪುರ: ಶೈಕ್ಷಣಿಕ ಗ್ರಾಮ ವಾಸ್ತವ್ಯ ಸಮುದಾಯದ ಜೊತೆಗೆ ಮಕ್ಕಳ ಕಲಿಕೆಯ ಬಗ್ಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ ಎಂದು ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ...

  • ಕೊಪ್ಪಳ: ನಗರಸಭೆಯು ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯೀಕರಣಕ್ಕೆ ಸಾಕಷ್ಟು ಪ್ರಯತ್ನ ನಡೆಸುತ್ತಲೇ ಇದೆ. ಈಗ ನಗರದಲ್ಲಿನ ಚರಂಡಿಗಳ ದುರ್ವಾಸನೆ ತಡೆಯಲು ಚರಂಡಿಯಲ್ಲಿ...

  • ಯಲಬುರ್ಗಾ: ಡಾ| ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ, ಕರವೇ (ಯುವಸೇನೆ ಬಣ) ಪದಾ ಧಿಕಾರಿಗಳು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಂತರ...

  • ಕಾರಟಗಿ: ಪುರಸಭೆ ಸಿಬ್ಬಂದಿ ಬೇಜವಾಬ್ದಾರಿ, ಸದಸ್ಯರ ನೀರ್ಲಕ್ಷದಿಂದಾಗಿ ಪಟ್ಟಣದ ವಿವಿಧ ವಾರ್ಡ್‌ಗಳ ಚರಂಡಿಗಳಲ್ಲಿ ನೀರು ಸಂಗ್ರಹವಾಗಿ ದುರ್ನಾತ ಬೀರುತ್ತಿವೆ....

ಹೊಸ ಸೇರ್ಪಡೆ