ಕೊಪ್ಪಳ: ಎಸ್ ಪಿ ಮುಂದೆ ರೌಡಿಶೀಟರ್ ಗಳ ಪರೇಡ್
Team Udayavani, Jul 3, 2022, 12:44 PM IST
ಕೊಪ್ಪಳ: ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಎಸ್ ಪಿ ಅರುಣಾಂಗ್ಷು ಗಿರಿ ಅವರು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ರೌಡಿಶೀಟರ್ ಗಳ ಪರೇಡ್ ನಡೆಸಿದರು.
ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಕೇಸ್ ಆಧಾರದ ಮೇಲೆ ಹಾಗು ಶಾಂತಿ ಭಂಗ ಮಾಡಿದ ವ್ಯಕ್ತಿಗಳನ್ನು ವಿಚಾರಣೆ ಮಾಡಿದ ಎಸ್ಪಿ ಅವರು ರೌಡಿಗಳ ಕಾರ್ಯ ಚಟುವಟಿಕೆ ವಿಚಾರಿಸಿದರು.
ಆಮ್ ಆದ್ಮಿ ಪಾರ್ಟಿಯ ಕೊಪ್ಪಳ ತಾಲೂಕು ಅಧ್ಯಕ್ಷ ಸಹ ರೌಡಿ ಶೀಟರ್ ಆಗಿದ್ದು ‘ನೀನು ಬಟ್ಟೆ ವ್ಯವಹಾರ ಮಾಡಿಕೊಂಡು ಜೀವನ ನಡೆಸುವುದು ಬಿಟ್ಟು ಬೇರೆಲ್ಲಾ ಕೆಲಸ ಮಾಡ್ತಿಯಾ, ನಿನ್ನ ಮೇಲೆ 15 ಕೇಸ್ ಇವೆ. ನೀನು ಲಗೇಜ್ ರಡಿ ಮಾಡ್ಕೊ’ ಎಂದು ಗಡಿಪಾರಿನ ಸೂಚನೆ ನೀಡಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಅಭಿವೃದ್ಧಿಗೆ ನಾಂದಿ ಹಾಡಿದ ರೂಪಾಲಿ
ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿನ ಎಲ್ಲ ರೌಡಿ ಶೀಟರ್ ಗಳ ವಿಚಾರಣೆಯು ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಮಾನಂದ ಸಂಪ್ರದಾಯದಂತೆ ರಾಮಾದಾಸ ಬಾಬಾ ಅಂತ್ಯಕ್ರಿಯೆ
ಮಗನ ಶಿವಗಣಾರಾಧನೆ ವೇಳೆ ಹೃದಯಘಾತದಿಂದ ತಾಯಿ ಸಾವು: 9 ದಿನ ಅಂತರದಲ್ಲಿ ಎರಡು ಸಾವು ಕಂಡ ಮನೆ
ಸಚಿನ್ ಧನಪಾಲ್ ನಟನೆಯ ‘ಚಾಂಪಿಯನ್’ ಚಿತ್ರದ ಟೀಸರ್ ಬಿಡುಗಡೆ
ವಿಪರೀತ ಕುಡಿತದ ಚಟ; ಕಿಡ್ನಿ ವೈಫಲ್ಯದಿಂದ ಖಿನ್ನತೆಗೊಳಗಾಗಿ ವ್ಯಕ್ತಿ ಆತ್ಮಹತ್ಯೆ
ಐದು ದಶಕಗಳಿಂದ ಪಂಪಾಸರೋವರದ ಅರ್ಚಕರಾಗಿದ್ದ ರಾಮಾದಾಸ ಬಾಬಾ ವಿಧಿವಶ