ಹೊಸ ಬಾರ್ ಗೆ ಲೈಸೆನ್ಸ್ ನೀಡಲು ಲಂಚಕ್ಕೆ ಬೇಡಿಕೆ : ಅಬಕಾರಿ ಡಿಸಿ ಸೆಲೀನಾ ಎಸಿಬಿ ಬಲೆಗೆ
Team Udayavani, May 14, 2022, 7:25 PM IST
ಕುಷ್ಟಗಿ : ಹೊಸ ಬಾರ್ ಗೆ ಲೈಸೆನ್ಸ್ ನೀಡಲು ವ್ಯಕ್ತಿಯೊಬ್ಬರಿಂದ ಹಣ ಪಡೆಯುತ್ತಿದ್ದ ಅಬಕಾರಿ ಡಿಸಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಸೆಲೀನಾ ಎಸಿಬಿ ಬಲೆಗೆ ಬಿದ್ದ ಅಬಕಾರಿ ಡಿಸಿಯಾಗಿದ್ದು ಇವರು ಶೈಲಜಾ ಪ್ರಭಾಕರಗೌಡ ಅವರ ಬಳಿ ಬಾರ್ ಗೆ ಹೊಸ ಲೈಸನ್ಸ್ ನೀಡಲು ಮೂರು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ಶೈಲಜಾ ಅವರು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು, ಅದರಂತೆ ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ಸೆಲೀನಾ ಅವರು ಶೈಲಜಾ ಅವರಿಂದ ಲಂಚ ಸ್ವೀಕರಿಸುವಾಗ ಅಧಿಕಾರಿಗಳು ದಾಳಿ ನಡೆಸಿ ಅಬಕಾರಿ ಡಿಸಿ ಸೆಲೀನಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ
ಇದನ್ನೂ ಓದಿ : ಬಾಲಕಿಗೆ ಹುಟ್ಟಿದ ಮಗುವಿಗೂ ಆರೋಪಿಗೂ ಸಂಬಂಧವೇ ಇಲ್ಲ: ದೋಷಮುಕ್ತ