ಕುಷ್ಟಗಿ : ಮದುವೆ ನಿಶ್ಚಿತಾರ್ಥಗೊಂಡಿದ್ದ ಯುವ ಜೋಡಿ ಆತ್ಮಹತ್ಯೆ : ಕಾರಣ ನಿಗೂಢ
Team Udayavani, May 24, 2022, 3:48 PM IST
ಕುಷ್ಟಗಿ : ಮದುವೆ ನಿಶ್ಚಿತಾರ್ಥವಾಗಿ ಜೋಡಿಗಳಿಗೆ ಪಾಲಕರು, ಮದುವೆ ಮುಂದೂಡಿರುವುದಕ್ಕೆ ಬೇಸರಗೊಂಡು ಯುವ ಜೋಡಿ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ತಾಲೂಕಿನ ತಾವರಗೇರಾ ಪೋಲಿಸ್ ಠಾಣಾ ವ್ಯಾಪ್ತಿಯ ಅಡವಿಬಾವಿ ಗ್ರಾಮದಲ್ಲಿ ನಡೆದಿದೆ.
ಮದುವೆಯಾಗಿ ಸತಿ ಪತಿಗಳಾಗಿ ಹಸೆಮಣೆ ಏರಿ ನವ ದಂಪತಿಯಾಗುವ ಮೊದಲೇ ಈ ದುರ್ಘಟಣೆ ನಡೆದಿದೆ. ಅಮರೇಶ ಮಾಲಿಪಾಟೀಲ(21), ಯಲ್ಲಮ್ಮ ಗೋನಾಳ (18) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಮಂಗಳವಾರ ಅಪರಾಹ್ನ 11ಕ್ಕೆ ಯಲ್ಲಮ್ಮ ಗೋನಾಳ ಕುಟುಂಬಕ್ಕೆ ಸೇರಿದ ಜನತಾ ಮನೆಯಲ್ಲಿ ನೇಣಿಗೆ ಕೊರಳೊಡ್ಡುವ ಮೂಲಕ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಸ್ಥಳೀಯರು ಬಾಗಿಲು ಮುರಿದು ನೇಣು ಬಿಗಿದ ಹಗ್ಗ ಕತ್ತರಿಸಿ ಕೂಡಲೇ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಇಬ್ಬರು ಇಹಲೋಕ ತ್ಯಜಿಸಿದ್ದರು. ತಾವರಗೇರಾ ಪೊಲೀಸರು ಆಗಮಿಸಿ, ಪರಿಶೀಲಿಸಿ ಶವ ಪರೀಕ್ಷೆಗೆ ತಾವರಗೇರಾ ಸಮುದಾಯ ಆಸ್ಪತ್ರೆಗೆ ಸಾಗಿಸಲಾಗಿದೆ.
ಇದನ್ನೂ ಓದಿ : ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಸವರಾಜ ಹೊರಟ್ಟಿ
ಆತ್ಮಹತ್ಯೆ ನಡೆ ನಿಗೂಢ:
ಈ ನವ ಜೋಡಿ ಅನ್ಯೋನ್ಯವಾಗಿದ್ದರಿಂದ ಕಳೆದ ವರ್ಷದ ಹಿಂದೆ ಎರಡು ಕುಟುಂಬಗಳ ಪರಸ್ಪರ ಸಮ್ಮತಿ ಮೇರೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.ಅಮರೇಶ ಮಾಲಿಪಾಟೀಲ, ತಾವರಗೇರಾ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿ ಯಲ್ಲಮ್ಮ ಗೋನಾಳ ಪಿಯುಸಿ ವ್ಯಾಸಾಂಗದಲ್ಲದ್ದಳು ಎಂದು ಗೊತ್ತಾಗಿದೆ. ಒಂದೇ ಗ್ರಾಮ, ಒಂದೇ ಜಾತಿ, ಮಾವ, ಸೊಸೆ ಸಂಬಂಧಿಯಾಗಿದ್ದರಿಂದ ಪಾಲಕರ ವಿರೋಧ ಇರಲಿಲ್ಲ. ಈ ಜೋಡಿ ಮೇ 23 ರ ಅಂಕಲಿಮಠದ ಜಾತ್ರೆಗೂ ಹೋಗಿ ಬಂದಿದ್ದರು. ಆದಾಗ್ಯೂ ಈ ನವ ಜೋಡಿಗಳು ಆತ್ಮಹತ್ಯೆ ಮಾಡಿಕೊಂಡಿರುವ ನಡೆ ನಿಗೂಢ ರಹಸ್ಯವಾಗಿದೆ.
ಯಲ್ಲಮ್ಮ ಗೋನಾಳ ಗೆ 17 ವರ್ಷ 9 ತಿಂಗಳಾಗಿದ್ದು, ಕಾನೂನು ಪ್ರಕಾರ ಮದುವೆಯಾಗುವ ಅರ್ಹತೆ 18 ವರ್ಷಕ್ಕೆ ಮೂರು ತಿಂಗಳು ಕಡಿಮೆ ಇತ್ತು. ಈ ಹಿನ್ನೆಲೆಯಲ್ಲಿ ಪಾಲಕರು ಮದುವೆ ಮುಂದೂಡುವ ತೀರ್ಮಾನ ಈ ಜೋಡಿಗಳ ಬೇಸರಿಸಿಕೊಂಡಿದ್ದರು ಎನ್ನುವ ಮಾತುಗಳು ವ್ಯಕ್ತವಾಗಿದೆ.
ಕುಷ್ಟಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಪ್ರತಿಕ್ರಿಯಿಸಿ, ಒಂದೇ ಸಮುದಾಯ, ಅದೇ ಗ್ರಾಮ ಹಾಗೂ ಪಾಲಕರ ವಿರೋಧ ಇಲ್ಲದಿದ್ದರೂ ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಜೋಡಿ ಪ್ರತ್ಯೇಕವಾದ ಮನೆಯಲ್ಲಿ ಏಕಾಏಕಿ ಆತ್ಮಹತ್ಯೆ ಮಾಡಿಕೊಳ್ಳುವ ಪೂರ್ವದಲ್ಲಿ ಜಗಳ ಮಾಡಿಕೊಂಡಿರಹುದು ಈ ಹಿನ್ನೆಲೆಯಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರುಗಳ ಮೋಬೈಲ್ ಪರಿಶೀಲಿಸಿದ ಬಳಿಕವೇ ನಿಖರ ಕಾರಣ ಗೊತ್ತಾಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮುಗೆ ಶಿರೋಮಣಿ ಅಕಾಲಿದಳ ಬೆಂಬಲ: ರಾಗ ಬದಲಿಸಿದ ದೀದಿ
ರಾಜ್ಯ ಸಾರಿಗೆ ವ್ಯವಸ್ಥೆಗೆ ಸರ್ಕಾರ ವಿಷ ಕೊಟ್ಟು ಕೊಲ್ಲುತ್ತಿದೆ: ಸಿದ್ದರಾಮಯ್ಯ
ಒನ್ಪ್ಲಸ್ ನೋರ್ಡ್ 2ಟಿ 5ಜಿ ಬಿಡುಗಡೆ: 80 ವ್ಯಾಟ್ ಫಾಸ್ಟ್ ಚಾರ್ಜಿಂಗ್
ಏಕಬಳಕೆ ಪ್ಲಾಸ್ಟಿಕ್ ನಿಷೇಧ: ದಿಲ್ಲಿಯಲ್ಲಿ ಲಕ್ಷ ರೂ. ದಂಡ: ಸಚಿವ ಗೋಪಾಲ್ ರೈ
ಕೊನೆಗೂ ಮಂಗಳೂರು- ದೆಹಲಿ ನೇರ ವಿಮಾನ ಯಾನ ಆರಂಭ