Udayavni Special

ತಿಮ್ಮಕ್ಕ ಉದ್ಯಾನದಲ್ಲಿ ಹಸಿರೇ ಮಾಯ

| ಗಿಡಗಳ ರಕ್ಷಣೆಗೆ ಅರಣ್ಯ ಇಲಾಖೆಯಿಂದ ಹರಸಾಹಸ | ನೀರಿಲ್ಲದೇ ಒಣಗುತ್ತಿದೆ ಜಿಲ್ಲೆಯ ಪಿಕ್‌ನಿಕ್‌ ಸ್ಪಾಟ್‌

Team Udayavani, Mar 14, 2021, 3:30 PM IST

ತಿಮ್ಮಕ್ಕ ಉದ್ಯಾನದಲ್ಲಿ ಹಸಿರೇ ಮಾಯ

ಕೊಪ್ಪಳ: ತಾಲೂಕಿನ ರುದ್ರಾಪುರ ಬಳಿ ಅರಣ್ಯ ಇಲಾಖೆ ವ್ಯಾಪ್ತಿಯ 300ಎಕರೆಯಲ್ಲಿ ಸಾಲು ಮರದ ತಿಮ್ಮಕ್ಕನ ವೃಕ್ಷ ಉದ್ಯಾನವನದಲ್ಲಿರುವ ಗಿಡಗಳಿಗೆನೀರಿನ ಕೊರತೆ ಎದುರಾಗಿದೆ. ಇರುವಗಿಡಗಳ ರಕ್ಷಣೆಗೆ ಅರಣ್ಯ ಇಲಾಖೆ ಹರಸಾಹಸ ಪಡುವಂತಾಗಿದ್ದು,ಇದರಿಂದಾಗಿ ಪ್ರವಾಸೋದ್ಯಮಕ್ಕೂದೊಡ್ಡ ಪೆಟ್ಟು ಬೀಳುತ್ತಿದೆ. ಕ್ಷೇತ್ರದ ಶಾಸಕ,ಸಂಸದರು ಇಂತಹ ಸಮಸ್ಯೆಗಳಿಗೆ ಸ್ಪಂದನೆಮಾಡುವುದು ತೀರ ಅಗತ್ಯವಾಗಿದೆ.

ಹೌದು.. ಈ ಹಿಂದೆ ಸರ್ಕಾರ ಜಿಲ್ಲೆಗೊಂದು ಉದ್ಯಾನವನ ಎನ್ನುವ ಹೆಸರಿನಡಿ ಅರಣ್ಯ ಇಲಾಖೆ ವ್ಯಾಪ್ತಿಯ ಪ್ರದೇಶದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷಉದ್ಯಾನವನ ಮಾಡಿ ಅರಣ್ಯ ರಕ್ಷಿಸುವ ಉಳಿಸಲು ಮುಂದಾಗಿದೆ. ಜೊತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸಲುಉದ್ಯಾನವನವನ್ನು ಅಭಿವೃದ್ಧಿಮಾಡುತ್ತಿದೆ. ಆದರೆ ಜಿಲ್ಲಾ ಕೇಂದ್ರದಿಂದಕೇವಲ 20 ಕಿ.ಮೀ. ದೂರದಲ್ಲಿರುವರುದ್ರಾಪುರ ಬಳಿಯ ತಿಮ್ಮಕ್ಕನ ವೃಕ್ಷಉದ್ಯಾನವನದಲ್ಲಿನ ಗಿಡಗಳ ರಕ್ಷಣೆಮಾಡಿಕೊಳ್ಳುವುದೇ ಅರಣ್ಯ ಇಲಾಖೆಗೆ ಸವಾಲಾಗಿದೆ. ಇಲ್ಲಿ ಬಗೆ ಬಗೆಯಗಿಡಗಳಿವೆ. ಜೊತೆಗೆ ಪ್ರವಾಸೋದ್ಯಮಕ್ಕೆಉತ್ತೇಜನ ನೀಡಲು ಈ ಹಿಂದಿನವರ್ಷದಲ್ಲಿ ಆನೆ, ಜಿಂಕೆ, ಮೊಲ, ಕರಡಿ,ನವಿಲು, ಮೊಸುಳೆ ಸೇರಿದಂತೆ ಇತರೆಪ್ರಾಣಿಗಳ ಆಕೃತಿಗಳನ್ನು ಇರಿಸಿ ಪಾರ್ಕ್‌ ನ್ನು ಇನ್ನಷ್ಟು ಸುಂದರಗೊಳಿಸಲಾಗಿದೆ. ಜಿಲ್ಲೆಯ ಜನರು ಶನಿವಾರ,ರವಿವಾರ ಹಾಗೂ ರಜಾ ದಿನದಲ್ಲಿ ಈ ವೃಕ್ಷ ಉದ್ಯಾನವನ್ನಕ್ಕೆ ಭೇಟಿ ನೀಡಿ ಕುಟುಂಬದೊಂದಿಗೆ ಸಂತಸದ ಕ್ಷಣ ಕಳೆದು ಸಂಜೆ ಮನೆಗೆ ಮರಳುತ್ತಾರೆ.

ಎಲ್ಲರಿಗೂ ನೆಚ್ಚಿನ ತಾಣವಾಗಿರುವ ಹಾಗೂ ಮನಸ್ಸಿಗೆ ಮುದ ನೀಡುವಈ ಪಾರ್ಕ್‌ನಲ್ಲಿ ನೀರಿನ ದೊಡ್ಡ ಸಮಸ್ಯೆಯಾಗಿದೆ. ಗಿಡಗಳನ್ನು ರಕ್ಷಣೆಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಅರಣ್ಯ ಇಲಾಖೆ ಈಗಾಗಲೇ ಎರಡುಬೋರ್‌ವೆಲ್‌ ಕೊರೆಯಿಸಿದ್ದರೂ ನೀರುಬಂದಿಲ್ಲ. ಇರುವ ಒಂದು ಬೋರ್‌ವೆಲ್‌ಮೂಲಕವೇ ಸಣ್ಣ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಇದರಿಂದ ಗಿಡಗಳ ರಕ್ಷಣೆ ನಡೆದಿದೆ. ಬರುವ ಜನರಿಗೆ ಕುಡಿಯುವನೀರಿನ ವ್ಯವಸ್ಥೆಯಿಲ್ಲ. ಬೋರ್‌ವೆಲ್‌ಕೊರೆಸಿದರೂ ತಳಭಾಗದಲ್ಲಿ ಕಲ್ಲುಬರುತ್ತಿರುವುದರಿಂದ ಪಾರ್ಕ್‌ ಅಭಿವೃದ್ಧಿಗೆ ತೊಂದರೆ ಎದುರಾಗುತ್ತಿದೆ.

ಪ್ರತಿ ಬೇಸಿಗೆಯಲ್ಲೂ ನೀರಿಲ್ಲದೇ ಹಲವು ಗಿಡಗಳು ಒಣಗುತ್ತಿವೆ. ಹಾಗಾಗಿಅರಣ್ಯ ಇಲಾಖೆ ಕೆಲವೊಮ್ಮೆ ಟ್ಯಾಂಕರ್‌ಮೂಲಕವೂ ನೀರು ಪೂರೈಸಿ ಸಸಿಗಳ ಜೀವ ಉಳಿಸುವ ಕೆಲಸ ಮಾಡುತ್ತಿದೆ. ಆದರೆಇಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಹಿಂದೆ ಆರ್‌. ಶಂಕರ್‌ ಅವರು ಅರಣ್ಯಖಾತೆ ಸಚಿವರಾಗಿದ್ದ ವೇಳೆ ಉದ್ಯಾನವನಕ್ಕೆ ಭೇಟಿ ನೀಡಿ ತುಂಗಭದ್ರಾ ಜಲಾಶಯದಮೂಲಕ ಈ ಪಾರ್ಕ್‌ಗೆ ನೀರು ತಂದುಉದ್ಯಾನವನ ಅಭಿವೃದ್ಧಿ ಮಾಡುವಕುರಿತು ಪ್ರಸ್ತಾಪ ಮಾಡಿದ್ದರು. ಆದರೆಬದಲಾದ ಸರ್ಕಾರದಿಂದ ಎಲ್ಲವೂ ನಿಂತು ಹೋಗಿದೆ.

ಪ್ರವಾಸೋದ್ಯಮಕ್ಕೂ ಪೆಟ್ಟು: ರಾಷ್ಟ್ರೀಯಹೆದ್ದಾರಿ-63 ರಸ್ತೆ ಪಕ್ಕದಲ್ಲೇ ಇರುವ ಈಪಾರ್ಕ್‌ ಜಿಲ್ಲೆಯ ಪ್ರವಾಸಿ ತಾಣವಾಗಿದೆ.ಜೊತೆಗೆ ನಿತ್ಯವೂ ನೂರಾರು ಜನರುಪಾರ್ಕ್‌ಗೆ ಭೇಟಿ ನೀಡುತ್ತಿದ್ದಾರೆ.ಅವರಿಗೆ ಹಸಿರುಮಯ ವಾತಾವರಣ ಕಾಣಲು ನೀರಿನ ಕೊರತೆ ಎದುರಾಗಿದೆ.ಹಾಗಾಗಿ ಪಾರ್ಕ್‌ನ್ನು ಸೌಂದರ್ಯ ಮಯವಾಗಿಡಲು ಸಾಧ್ಯವಾಗಿಲ್ಲ.ಇದರಿಂದ ಪ್ರವಾಸೋದ್ಯಮಕ್ಕೂಪೆಟ್ಟು ಬೀಳುತ್ತಿದೆ. ಸರ್ಕಾರಹಾಗೂ ಜಿಲ್ಲಾಡಳಿತವು ಇತ್ತ ಕಾಳಜಿ ವಹಿಸಬೇಕಿದೆ.

ಶಾಸಕ-ಸಂಸದರೇ ಸಮಸ್ಯೆ ಪಾರ್ಕ್‌ ಗಮನಿಸಿ :

ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ಸಂಗಣ್ಣ ಕರಡಿ ಅವರು ಜಿಲ್ಲೆಯ ಸಾಲು ಮರದ ತಿಮ್ಮಕ್ಕ ಪಾರ್ಕ್‌ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಇಲ್ಲಿ ಜನರಿಗಿಂತ ಗಿಡಮರಗಳಿಗೆ ನೀರಿನ ಸಮಸ್ಯೆ ಹೆಚ್ಚಿದ್ದು, ಇದರ ನಿವಾರಣೆಗೆ ತುಂಗಭದ್ರಾ ಡ್ಯಾಂನಿಂದ ಇಲ್ಲವೇ, ಇತರೆ ಜಲ ಮೂಲಗಳಿಂದಲಾದ್ರೂ ಶಾಶ್ವತ ನೀರಿನ ವ್ಯವಸ್ಥೆ ಮಾಡಬೇಕಿದೆ. ಇಲ್ಲದಿದ್ದರೆಮುಂದಿನ ದಿನಗಳಲ್ಲಿ ಹೆಸರಿಗಷ್ಟೇ ತಿಮ್ಮಕ್ಕ ಪಾರ್ಕ್‌, ಅಲ್ಲಿ ಏನೂ ಇಲ್ಲ ಎನ್ನುವಅಪಕೀರ್ತಿ ಎದುರಾಗುವ ಸಾಧ್ಯತೆ ಹೆಚ್ಚಿದೆ. ಜನಪ್ರತಿನಿ ಧಿಗಳು ವಿಶೇಷ ಯೋಜನೆರೂಪಿಸಿ, ನೀರಿನ ವ್ಯವಸ್ಥೆ ಮಾಡಿದರೆ ಜಿಲ್ಲೆಗೊಂದು ಮಾದರಿ ಉದ್ಯಾನವನವಾಗಿ ಮಾರ್ಪಡುವಲ್ಲಿ ಎರಡು ಮಾತಿಲ್ಲ.

ತಿಮ್ಮಕ್ಕನ ಪಾರ್ಕ್‌ನಲ್ಲಿ ಎರಡು ಬೋರ್‌ವೆಲ್‌ ಕೊರೆಯಿಸಿದ್ದೇವೆ. ಆದರೆನೀರು ಬಂದಿಲ್ಲ. ನಮಗೆ ಅಲ್ಲಿ ಜಲ ಮೂಲದ್ದೇ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆಗೆ ಸಭೆಯನ್ನೂ ನಡೆಸಿ ಚರ್ಚಿಸಿದ್ದೇವೆ. ಜೊತೆಗೆ ಡಿಸಿ ಅವರೊಂದಿಗೂ ಸಮಾಲೋಚಿಸಿದ್ದೇವೆ. ಕಲ್ಯಾಣ ಕರ್ನಾಟಕ ಮಂಡಳಿಅನುದಾನದಲ್ಲಿ ಪಾರ್ಕ್‌ ಅಭಿವೃದ್ಧಿಗೆ ವಿಶೇಷ ಯೋಜನೆಯನ್ನೂ ರೂಪಿಸಿ ಪ್ರಸ್ತಾವನೆ ಸಲ್ಲಿಸಿದ್ದೇವೆ. -ಹರ್ಷಬಾನು, ಡಿಎಫ್‌ಒ, ಕೊಪ್ಪಳ

 

­ದತ್ತು ಕಮ್ಮಾರ

ಟಾಪ್ ನ್ಯೂಸ್

jfghdrt

ಲಾಕ್‌ಡೌನ್‌, ನೈಟ್‌ ಕರ್ಫ್ಯೂ ಪರಿಹಾರವಲ್ಲ: ಸಚಿವ ಜೋಶಿ

gdfsvd

ಸಿಡಿ ಪ್ರಕರಣದಲ್ಲಿ  ಸಿಬಿಐ ತನಿಖೆ ಸದ್ಯ ಅನಗತ್ಯ: ಹೈಕೋರ್ಟ್‌

ನಹಬಗವ್ಚದಸ

ಸೆಕೆ ಕಡಿಮೆ ಮಾಡಲು ಈ ಅಜ್ಜಿ ಮಾಡಿದ ಐಡಿಯಾ ಸೂಪರ್..!

ngfgdf

ತಾಯಿಯ ಮೇಲಿನ ದ್ವೇಷಕ್ಕೆ ಹಸುಗೂಸು ಬಲಿ: ಮೂರು ತಿಂಗಳ ಕಂದನಿಗೆ ಬೆಂಕಿ ಇಟ್ಟ ಚಿಕ್ಕಮ್ಮ   

18-11

ಕೋವಿಡ್ ನಿಯಂತ್ರಣಕ್ಕೆ ‘ಟೆಸ್ಟ್, ಟ್ರ್ಯಾಕಿಂಗ್,ಟ್ರೀಟ್’ ಹೊರತಾಗಿ ಬೇರೆ ಪರ್ಯಾಯವಿಲ್ಲ: ಮೋದಿ

ತಾಂತ್ರಿಕ ಸಲಹಾ ಸಮಿತಿಯ ಸಲಹೆ-ನಿರ್ದೇಶನ ಪಾಲಿಸುತ್ತೇವೆ: ಕಠಿಣ ನಿಯಮದ ಸೂಚನೆ ನೀಡಿದ ಸುಧಾಕರ್

ತಾಂತ್ರಿಕ ಸಲಹಾ ಸಮಿತಿಯ ಸಲಹೆ-ನಿರ್ದೇಶನ ಪಾಲಿಸುತ್ತೇವೆ: ಕಠಿಣ ನಿಯಮದ ಸೂಚನೆ ನೀಡಿದ ಸುಧಾಕರ್

್ಗ್ಗ್ಗ್ಗ

ವಿವಾಹ ಆಮಂತ್ರಣದಲ್ಲಿ ಕೋವಿಡ್ ಜಾಗೃತಿ : ನೆಗೆಟಿವ್ ವರದಿಯೊಂದಿಗೆ ಮದುವೆಗೆ ಬರಲು ಆಹ್ವಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

xgnsdftgs

ಜನ ಸಹಕರಿಸದಿದ್ದರೆ ಲಾಕ್‌ಡೌನ್‌: ಸಚಿವ ಪಾಟೀಲ್‌

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಆಂಜನೇಯಸ್ವಾಮಿ  ಮೊರೆ ಹೋದ ಆರ್.ಧ್ರವನಾರಾಯಣ್

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಆಂಜನೇಯಸ್ವಾಮಿ ಮೊರೆ ಹೋದ ಆರ್.ಧ್ರವನಾರಾಯಣ್

ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಟಿಟಿಡಿ ವಿವಾದದ ಬಗ್ಗೆ ಸಂಶೋಧನೆಯಾಗಲಿ: ಸಚಿವ ಲಿಂಬಾವಳಿ

ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಟಿಟಿಡಿ ವಿವಾದದ ಬಗ್ಗೆ ಸಂಶೋಧನೆಯಾಗಲಿ: ಸಚಿವ ಲಿಂಬಾವಳಿ

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ, ಜನರೂ ಸಹಕಾರ ಬೇಕು: ಸಚಿವ ಬಿ.ಸಿ. ಪಾಟೀಲ್

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ, ಜನರ ಸಹಕಾರ ಬೇಕು: ಸಚಿವ ಬಿ.ಸಿ. ಪಾಟೀಲ್

gjtrjrt

ಕಷ್ಟ ನಿವಾರಿಸಬಲ್ಲದೇ ಬಹುಗ್ರಾಮ ನೀರು ಪೂರೈಕೆ ಯೋಜನೆ?

MUST WATCH

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

ಹೊಸ ಸೇರ್ಪಡೆ

gsddf

ಖಾಸಗಿ ಆಸ್ಪತ್ರೆಗಳಲ್ಲಿ ರೆಮಿಡಿಸಿವರ್‌ -ಆಕ್ಸಿಜನ್‌ ಕೊರತೆ ಆಗದಂತೆ ನೋಡಿಕೊಳ್ಳಿ: ಶೆಟ್ಟರ

jfghdrt

ಲಾಕ್‌ಡೌನ್‌, ನೈಟ್‌ ಕರ್ಫ್ಯೂ ಪರಿಹಾರವಲ್ಲ: ಸಚಿವ ಜೋಶಿ

18-14

ದೇವರ ದಾಸಿಮಯ್ಯರ ಕಾಯಕ ಮಾದರಿ

18-13

ಶಾಂತನಗೌಡರ ಶಾಸಕರಾಗಿದ್ದಾಗ ಮಾಡಿದ ಸಾಧನೆ ಮುಂದಿಡಲಿ

gdfsvd

ಸಿಡಿ ಪ್ರಕರಣದಲ್ಲಿ  ಸಿಬಿಐ ತನಿಖೆ ಸದ್ಯ ಅನಗತ್ಯ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.