ಕೊಪ್ಪಳ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 33 ವೆಂಟಿಲೇಟರ್‌!

67ರ ಪೈಕಿ ಇನ್ನೂ 28 ಅಳವಡಿಕೆ ಮಾಡಿಲ್ಲ /ನಿತ್ಯ ಸಾಯುತ್ತಿದ್ದಾರೆ ಕೋವಿಡ್ ಸೋಂಕಿತರು

Team Udayavani, Aug 24, 2020, 3:21 PM IST

Kopala-tdy-1

ಸಾಂದರ್ಭಿಕ ಚಿತ್ರ

ಕೊಪ್ಪಳ: ಜಿಲ್ಲೆಯಲ್ಲಿ ನಿತ್ಯವೂ ನಾಲ್ಕೈದು ಜನ ಕೋವಿಡ್‌ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಆದರೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 33 ವೆಂಟಿಲೇಟರ್‌ಗಳು ಕಾರ್ಯ ನಿರ್ವಹಿಸುತ್ತಿರುವುದು ಸೋಜಿಗ ತಂದಿದೆ.

ಜಿಲ್ಲೆಯಲ್ಲಿ ನಿತ್ಯವೂ ನೂರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲುತ್ತಿದ್ದು, ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ರೋಗಿಗಳಿಗೆ ಚಿಕಿತ್ಸೆಯೇದೊರೆಯುತ್ತಿಲ್ಲ ಎನ್ನುವುದು ಸೋಂಕಿತ ಕುಟುಂಬದವರ ಆರೋಪ. ಸಕ್ಕರೆ ಕಾಯಿಲೆ, ಕ್ಯಾನ್ಸರ್‌, ಬಿಪಿ ಸೇರಿದಂತೆ ಹಲವು ಕಾಯಿಲೆ ಇರುವಸೋಂಕಿತರು ನರಳುತ್ತಿದ್ದಾರೆ. ಹಿರಿಯ  ಜೀವಿಗಳಿಗೆ ಸೋಂಕು ಹೆಚ್ಚು ಕಾಡುತ್ತಿದೆ. ಅವರಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಬೇಕು.ಆದರೆ ಜಿಲ್ಲಾದ್ಯಂತ ಇರುವ ಸರ್ಕಾರಿ ಕೋವಿಡ್‌ ಸಂಬಂಧಿತ ಆಸ್ಪತ್ರೆಗಳಲ್ಲಿ 67 ವೆಂಟಿಲೇಟರ್‌ ಇದ್ದರೂ 33 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ನಿತ್ಯ ನೂರಾರು ಜನರು ಸೋಂಕಿಗೆ ತುತ್ತಾಗುತ್ತಿದ್ದರೂ ವೆಂಟಿಲೇಟರ್‌ ಸಂಖ್ಯೆಯನ್ನು ಹೆಚ್ಚಿಸಿಲ್ಲ. ಅದಕ್ಕೆ ತಕ್ಕಂತೆ ತಜ್ಞರ ತಂಡವನ್ನು ನಿಯೋಜಿಸಿ ಸಾವಿನ ಸಂಖ್ಯೆ ಕಡಿಮೆ ಮಾಡದಿರುವುದೇ ಜನರ ಆಕ್ರೊಶಕ್ಕೆ ಕಾರಣವಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು?: ನಿಜಕ್ಕೂ ಜಿಲ್ಲೆಯಲ್ಲಿನ ವೆಂಟಿಲೇಟರ್‌ ಲೆಕ್ಕಾಚಾರ ಗಮನಿಸಿದರೆ, ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ 43 ವೆಂಟಿಲೇಟರ್‌ ಇದ್ದರೆ, 16 ಇನ್ನೂಅಳವಡಿಸಿಲ್ಲ. 4 ರಿಪೇರಿಯಾಗಿವೆ.  ಗಂಗಾವತಿ ತಾಲೂಕಿನಲ್ಲಿ 16 ವೆಂಟಿಲೇಟರ್‌ಗಳಿದ್ದು 6 ಅಳವಡಿಕೆ ಮಾಡಿಲ್ಲ. 2 ರಿಪೇರಿಯಾಗಿವೆ. ಯಲಬುರ್ಗಾ ತಾಲೂಕಿನಲ್ಲಿ 4 ವೆಂಟಿಲೇಟರ್‌ ಇದ್ದು, ಯಾವುದನ್ನೂ ಅಳವಡಿಸಿಲ್ಲ. ಕುಷ್ಟಗಿ ತಾಲೂಕಿನಲ್ಲಿ 4 ವೆಂಟಿಲೇರ್‌ ಇದ್ದು, 2ನ್ನು ಅಳವಡಿಕೆ ಮಾಡಿಲ್ಲ. ಒಟ್ಟಾರೆ 67 ವೆಂಟಿಲೇಟರ್‌ ಪೈಕಿ 28 ವೆಂಟಿಲೇಟರ್‌ ಅಳವಡಿಸಿಲ್ಲ. 6 ದುರಸ್ತಿಯಲ್ಲಿವೆ.

ಜಿಲ್ಲಾಡಳಿತ ಮಾತ್ರ ವೆಂಟಿಲೇಟರ್‌ ಇದ್ದರೂ ಸಹಿತ ನಮ್ಮಲ್ಲಿ ಅನಸ್ತೇಶಿಯಾ ವೈದ್ಯರ ಸಂಖ್ಯೆ ಕಡಿಮೆಯಿದೆ. ಐದು ರೋಗಿಗಳಿಗೆ ಒಬ್ಬ ವೈದ್ಯರನ್ನು, 10 ರೊಗಿಗಳಿಗೆ ಒಬ್ಬ ನರ್ಸ್‌ ನೇಮಿಸಿದ್ದು ಐಸಿಯು ವಾರ್ಡಿನಲ್ಲಿ ಕಾರ್ಯ ನಿರ್ವಹಿಸುವ ವೈದ್ಯರಿಗೆ 6 ಗಂಟೆಗೊಮ್ಮೆ ಕಾರ್ಯ ನಿರ್ವಹಣೆ ಮಾಡಲು ವ್ಯವಸ್ಥೆ ಮಾಡಿದ್ದೇವೆ ಎನ್ನುತ್ತಿದೆ. ಒಬ್ಬ ರೋಗಿಗೆ ವೆಂಟಿಲೇಟರ್‌ ಅಳವಡಿಕೆ ಮಾಡಿದರೆ ನಿರಂತರ ಅವರ ಮೇಲೆ ನಿಗಾ ಇಡಬೇಕಾಗುತ್ತದೆ. ಅದಲ್ಲದೇ ಜಿಲ್ಲೆಯಲ್ಲಿನ ಜನರು ಸೋಂಕಿನ ಲಕ್ಷಣ ಕಂಡುಬಂದ ತಕ್ಷಣ ಆಸ್ಪತ್ರೆಗೆ ದಾಖಲಾಗಲ್ಲ. ಅವರ ಆರೋಗ್ಯದಲ್ಲಿ ಶೇ. 60-70ರಷ್ಟು ಏರುಪೇರಾದಾಗ ಆಸ್ಪತ್ರೆಗೆ ಬಂದು ದಾಖಲಾಗಿ ಪರೀಕ್ಷೆಗೆ ಒಳಗಾಗುತ್ತಾರೆ ಎನ್ನುತ್ತಿದೆ ಜಿಲ್ಲಾಡಳಿತ.ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಇದ್ದರೂ ಸಹಿತ ದುಪ್ಪಟ್ಟು ಶುಲ್ಕ ಇರುವುದರಿಂದ ಬಡ, ಮಧ್ಯಮ ವರ್ಗದವರು ಖಾಸಗಿ ಆಸ್ಪತ್ರೆಗೆ ಹೋಗದೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ, ಜಿಲ್ಲೆಯ ಶಾಸಕ, ಸಂಸದರು ಇದನ್ನೊಮ್ಮೆ ಗಮನಿಸಬೇಕಿದೆ. ಅನಸ್ತೇಶಿಯಾ ವೈದ್ಯರನ್ನು ನಿಯೋಜಿಸಬೇಕಿದೆ.

ಜಿಲ್ಲೆಯಲ್ಲಿ ಅನಸ್ತೇಸಿಯಾ ವೈದ್ಯರ ಕೊರತೆಯಿದೆ. ಐದು ರೋಗಿಗಳಿಗೆ ಒಬ್ಬ ವೈದ್ಯ, 10 ರೋಗಿಗಳಿಗೆ ಒಬ್ಬ ನರ್ಸ್‌ ನಿಯೋಜಿಸಿ ಪರಿಸ್ಥಿತಿ ನಿಯಂತ್ರಿಸುತ್ತಿದ್ದೇವೆ. ಅಲ್ಲದೇ, ಜನರು ಸೋಂಕಿನ ಲಕ್ಷಣ ಬಂದ ತಕ್ಷಣ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಿಲ್ಲ. ಕೊನೆಯ ಹಂತಕ್ಕೆ ಬರುತ್ತಿದ್ದಾರೆ. ಇದರಿಂದ ಸಾವು ಹೆಚ್ಚಾಗುತ್ತಿವೆ. ಇನ್ನಾದರು ಜನರು ಬೇಗನೆ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಗಾದರೆ ಅಗತ್ಯ ಸಂದರ್ಭದಲ್ಲಿ ಮನೆಯಲ್ಲೇ ಐಸೋಲೇಷನ್‌ಗೆ ಒಳಗಾಗಲು ಸೂಚನೆ ನೀಡಲಿದ್ದೇವೆ. – ವಿಕಾಸ್‌ ಕಿಶೋರ್‌, ಕೊಪ್ಪಳ ಡಿಸಿ

 

–  ದತ್ತು ಕಮ್ಮಾರ

ಟಾಪ್ ನ್ಯೂಸ್

1-sadsa

ಕಾಲಾವಕಾಶ ಕೇಳಿದ ಹೊರತಾಗಿಯೂ ಶರಣಾದ ನವಜೋತ್ ಸಿಂಗ್ ಸಿಧು

ಭೀಕರ ರಸ್ತೆ ಅಪಘಾತ: ಡೀಸೆಲ್‌ ಟ್ಯಾಂಕರ್‌-ಟ್ರಕ್‌ ಢಿಕ್ಕಿ: 9 ಮಂದಿ ಸಜೀವ ದಹನ

ಭೀಕರ ರಸ್ತೆ ಅಪಘಾತ: ಡೀಸೆಲ್‌ ಟ್ಯಾಂಕರ್‌-ಟ್ರಕ್‌ ಢಿಕ್ಕಿ: 9 ಮಂದಿ ಸಜೀವ ದಹನ

1-ffsf

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶಿಸಿದ ರಾಜ್ಯ ಸರಕಾರ

ಅಂಕೋಲಾ : ಗಂಗಾವಳಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ, ಮೂರು ತಾತ್ಕಾಲಿಕ ಸೇತುವೆ ಮುಳುಗಡೆ

ಅಂಕೋಲಾ : ಭಾರಿ ಮಳೆಗೆ ಮೂರು ಸೇತುವೆ ಸಂಪೂರ್ಣ ಮುಳುಗಡೆ, ಗ್ರಾಮಗಳ ಸಂಪರ್ಕ ಕಡಿತ

bommai

ಸಿಎಂ ಬೊಮ್ಮಾಯಿ ದಾವೋಸ್ ಪ್ರವಾಸ ಖಚಿತ: 26 ಕ್ಕೆ ವಾಪಸ್

siddaramaiah

ರಾಜ್ಯಸಭೆ ಚುನಾವಣೆ; ನಾಳೆ ಸಿದ್ದರಾಮಯ್ಯ ನವದೆಹಲಿಗೆ :ಹೈಕಮಾಂಡ್‌ ಜತೆ ಚರ್ಚೆ

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್ ಅಪಘಾತ : ಇಬ್ಬರು ಸಾವು, ಓರ್ವ ಗಂಭೀರ

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್ ಅಪಘಾತ : ಇಬ್ಬರು ಸಾವು, ಓರ್ವ ಗಂಭೀರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17

7.18 ಎಕರೆ ಗಾಂವಠಾಣಾ ಸಂಗಾಪುರ ಗ್ರಾಪಂ ವಶಕ್ಕೆ

16

ಸರಿಯಾಗಿ ಕೆಲಸ ಮಾಡದಿದ್ರೆ ತೆಗೆದು ಹಾಕಿ

rain

ಕೊಪ್ಪಳ, ಗದಗದಲ್ಲಿ ನಿರಂತರ ಮಳೆ: ಅಂಗನವಾಡಿ, ಶಾಲೆಗಳಿಗೆ ಇಂದು ರಜೆ

1

ಕುರಿ ಹಟ್ಟಿಯ ಸೋಲಾರ್ ಬೆಳಕಿನಲ್ಲಿ ಓದಿದ್ದ ಪರಶುರಾಮ್ ಪ್ರಥಮ ದರ್ಜೆಯಲ್ಲಿ ತೇರ್ಗಡೆ

ದೋಟಿಹಾಳ:  ಮಳೆ ನೀರಿಯಿಂದ ಜಲಾವೃತಗೊಂಡ ಮುದೇನೂರ ಶಾಲಾ ಆವರಣ

ದೋಟಿಹಾಳ:  ಮಳೆ ನೀರಿಯಿಂದ ಜಲಾವೃತಗೊಂಡ ಮುದೇನೂರ ಶಾಲಾ ಆವರಣ

MUST WATCH

udayavani youtube

ಹೈನುಗಾರಿಕೆ ಯಶಸ್ಸು ಕಾಣಲು ಇಲ್ಲಿದೆ formula!

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

ಹೊಸ ಸೇರ್ಪಡೆ

1-sadsa

ಕಾಲಾವಕಾಶ ಕೇಳಿದ ಹೊರತಾಗಿಯೂ ಶರಣಾದ ನವಜೋತ್ ಸಿಂಗ್ ಸಿಧು

ಭೀಕರ ರಸ್ತೆ ಅಪಘಾತ: ಡೀಸೆಲ್‌ ಟ್ಯಾಂಕರ್‌-ಟ್ರಕ್‌ ಢಿಕ್ಕಿ: 9 ಮಂದಿ ಸಜೀವ ದಹನ

ಭೀಕರ ರಸ್ತೆ ಅಪಘಾತ: ಡೀಸೆಲ್‌ ಟ್ಯಾಂಕರ್‌-ಟ್ರಕ್‌ ಢಿಕ್ಕಿ: 9 ಮಂದಿ ಸಜೀವ ದಹನ

ಎಟಿಆರ್‌ ಕಣ್ಣಿಗೆ ಬೆಣ್ಣೆ , ಕೆಎಂಶಿ ಕಣ್ಣಿಗೆ ಸುಣ್ಣ ಏಕೆ?; ಬಿಜೆಪಿ

ಎಟಿಆರ್‌ ಕಣ್ಣಿಗೆ ಬೆಣ್ಣೆ , ಕೆಎಂಶಿ ಕಣ್ಣಿಗೆ ಸುಣ್ಣ ಏಕೆ?; ಬಿಜೆಪಿ

ರಬಕವಿ-ಬನಹಟ್ಟಿಯಲ್ಲಿ ದಾಖಲೆಯ 10 ಸೆಂ.ಮೀ ಮಳೆ : 21 ಮನೆಗಳಿಗೆ ಹಾನಿ 

ರಬಕವಿ-ಬನಹಟ್ಟಿಯಲ್ಲಿ ದಾಖಲೆಯ 10 ಸೆಂ.ಮೀ ಮಳೆ : 21 ಮನೆಗಳಿಗೆ ಹಾನಿ 

ಚಿಕ್ಕಬಳ್ಳಾಪುರ ಸಮಗ್ರ ಅಭಿವೃದ್ಧಿಗೆ ಒತ್ತು; ಸಚಿವ ಡಾ.ಕೆ.ಸುಧಾಕರ್‌

ಚಿಕ್ಕಬಳ್ಳಾಪುರ ಸಮಗ್ರ ಅಭಿವೃದ್ಧಿಗೆ ಒತ್ತು; ಸಚಿವ ಡಾ.ಕೆ.ಸುಧಾಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.