ಕೆರೆ ಒತ್ತುವರಿ ತೆರವುಗೊಳಿಸಲು ಮನವಿ
Team Udayavani, Apr 14, 2021, 4:04 PM IST
ಕೊಪ್ಪಳ: ತಾಲೂಕಿನ ಬೂದಗುಂಪಾ ಬಳಿಯ ಕೆರೆಹಳ್ಳಿ ಕೆರೆಯ ಜಾಗೆಯನ್ನು ಪಕ್ಕದ ಕರ್ನಾಟಕಪೌಲ್ಟ್ರಿ ಫಾರ್ಮ್ ಮಾಲೀಕರು ಸೇರಿದಂತೆ ಕೆಲಬಂಡವಾಳ ಶಾಹಿಗಳು ಒತ್ತುವರಿ ಮಾಡಿದ್ದು,ಜಿಲ್ಲಾಧಿ ಕಾರಿಗಳು ಕೂಡಲೇ ಕೆರೆ ಒತ್ತುವರಿ ತೆರವು ಮಾಡಿ ಸಾರ್ವಜನಿಕ ಆಸ್ತಿ ರಕ್ಷಣೆಮಾಡಬೇಕೆಂದು ಗ್ರಾಮದ ಯುವಕರುಜಿಲ್ಲಾಧಿಕಾರಿ ಮನವಿ ಸಲ್ಲಿಸಿದರು.
ಕೆರೆಹಳ್ಳಿ ಕೆರೆಯು ನೂರು ಎಕರೆಗೂ ಅಧಿಕಪ್ರದೇಶ ಹೊಂದಿದೆ. ವಾಸ್ತವವಾಗಿ ಅರ್ಧದಷ್ಟುಕೆರೆ ಆಸ್ತಿ ಒತ್ತುವರಿಯಾಗಿರುವುದುಕಂಡುಬಂದಿದೆ. ಪಕ್ಕದಲ್ಲಿರುವ ಕೋಳಿ ಫಾರಂಸುಮಾರು ಹತ್ತಾರು ಎಕರೆ ಜಾಗೆಯನ್ನುಒತ್ತುವರಿ ಮಾಡಿದ್ದಾರೆ. ಅದು ಸಾಲದೆಂಬಂತೆ ಮಧ್ಯೆ ಕೆರೆಯಲ್ಲಿ ಇನ್ನೂ ತಮ್ಮ ಸ್ವಂತ ಆಸ್ತಿಇದೆ ಎಂದು ಹೇಳಿ ಕಲ್ಲುಕಂಬ ನೆಟ್ಟು ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.ಕೆರೆಹಳ್ಳಿ ಕೆರೆ ನಾಲ್ಕಾರು ಗ್ರಾಮಗಳ ರೈತರಜೀವನಾಡಿಯಾಗಿದೆ. ಈಗಾಗಲೇ ತುಂಗಭದ್ರನದಿಯಿಂದ ಯಲಬುರ್ಗಾವರೆಗೆ ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ಈ ಕೆರೆಯೂಒಂದಾಗಿದೆ. ಈ ಕೆರೆ ಸಂಪೂರ್ಣ ತುಂಬಿದರೆಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಅಂತರ್ಜಲಮಟ್ಟ ವೃದ್ಧಿಯಾಗುವುದಲ್ಲದೇ ಜನ ಜಾನುವಾರುಗಳಿಗೆ ವರ್ಷವಿಡೀ ಕುಡಿಯುವ ನೀರು ದೊರೆಯಲಿದೆ.
ಕೊಪ್ಪಳದ ಗವಿಮಠ ಶ್ರೀಗಳ ನೇತೃತ್ವದಲ್ಲಿ ಗಿಣಿಗೇರಿ ಕೆರೆ ಪುನಶ್ಚೇತನ ಮಾಡುತ್ತಿರುವುದುಈ ಭಾಗದ ಜನರಿಗೂ ಪ್ರೇರಣೆ ನೀಡಿದೆ.ಶ್ರೀಗಳ ಹಾಗೂ ಸಾರ್ವಜನಿಕರ ಸಹಕಾರಪಡೆದು ಕೆರೆಹಳ್ಳಿ ಕೆರೆ ಪುನಶ್ಚೇತನ ಮಾಡಲು ಯೋಚಿಸುತ್ತಿದ್ದಾರೆ. ಹಾಗಾಗಿ ಒತ್ತುವರಿಯಾದಕೆರೆಯ ಆಸ್ತಿಯನ್ನು ವಾಪಸ್ ಪಡೆದು ಕೆರೆಅಭಿವೃದ್ಧಿಗೆ ಅನುಕೂಲ ಮಾಡಿಕೊಡಬೇಕು.ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಒತ್ತುವರಿಮಾಡಿದವರ ಮೇಲೆ ಕಾನೂನು ಕ್ರಮಜರುಗಿಸಬೇಕು ಎಂದು ಮುಖಂಡರಾದಸೀಮಣ್ಣ ಗಬ್ಬೂರ, ಬಸವರಾಜ ಪೆದ್ಲರ್,ಕುಬೇರ ಮಜ್ಜಿಗಿ, ಸಿದ್ಧಪ್ಪ ಗೊಬ್ಬಿ, ಶಿವನಗೌಡ ಪೊಲೀಸಪಾಟೀಲ್, ಮಂಜುನಾಥ ಬಂಗಾಳಿ,ಗವಿಸಿದ್ಧಪ್ಪ ಡೊಳ್ಳಿನ್, ವೀರಣ್ಣ ಕಂಬಳಿ,ಹುಲಗಪ್ಪ ವೆಂಕಟಗಿರಿ, ರಮೇಶ ಕೆರೆಹಳ್ಳಿಸೇರಿದಂತೆ ಇತರರು ಒತ್ತಾಯಿಸಿ, ಜಿಲ್ಲಾಧಿಕಾರಿ ಮನವಿ ಸಲ್ಲಿಸಿದ್ದಾರೆ.