ಕೆರೆ ಹೂಳೆತ್ತಿದರೆ ನೀರಿನ ಸಮಸ್ಯೆಗೆ ಪರಿಹಾರ ಸಾಧ್ಯ
Team Udayavani, Feb 15, 2021, 5:00 PM IST
ಕನಕಗಿರಿ: ತಾಲೂಕಿನ ಕಲಿಕೇರಿ ಗ್ರಾಮದಲ್ಲಿ ಮಹಿಳಾ ಕಾಯಕೋತ್ಸವ ಅಭಿಯಾನದಡಿ ಗಂಗಾವತಿ ತಾಲೂಕಿನ ಹೇರೂರು ಗ್ರಾಪಂ ವತಿಯಿಂದ ಆರಂಭಿಸಿರುವ ಕೆರೆ ಹೂಳೆತ್ತುವ ಕಾಮಗಾರಿಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ| ಡಿ. ಮೋಹನ್ ವೀಕ್ಷಣೆ ಮಾಡಿದರು.
ನಂತರ ಇಒ ಡಾ| ಡಿ. ಮೋಹನ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯ ಮಹಿಳಾ ಕಾಯಕೋತ್ಸವ ಅಭಿಯಾನದಡಿ ಕಲಿಕೇರಿಯಲ್ಲಿ 1042 ಕೂಲಿಕಾರರಿಗೆ ಕೆರೆ ಹೂಳೆತ್ತುವ ಕೆಲಸ ನೀಡಲಾಗಿದೆ. ಕೆರೆ ಹೂಳು ಸಾಗಿಸುವ ಟ್ರ್ಯಾಕ್ಟರ್‌ಗಳು ಸಮೀಪದ ಗ್ರಾಮಗಳ ರಸ್ತೆ ಅಕ್ಕಪಕ್ಕದ ತಗ್ಗು ದಿನ್ನೆಗಳಿಗೆ ಹಾಕಿದರೆ ಸಮತಟ್ಟು ಆಗಲು ಅನುಕೂಲವಾಗಲಿದೆ ಎಂದರು. ಕೆರೆ ಹೂಳೆತ್ತುವುದರಿಂದ ಬೇಸಿಗೆ ಕಾಲದಲ್ಲಿ ಎದುರಾಗುವ ನೀರಿನ ಸಮಸ್ಯೆ ತಡೆಯಬಹುದು. ಸುತ್ತಲಿನ ರೈತರ ಜಮೀನುಗಳಲ್ಲಿನ ಬೋರ್‌ವೆಲ್‌ಗಳು ರಿಚಾರ್ಜ್ ಆಗಲಿವೆ. ಕೆರೆಯಲ್ಲಿ ನೀರು ಸಂಗ್ರಹವಾಗಿ ದನಕರಗಳಿಗೂ ಕುಡಿಯಲು ನೀರು ದೊರೆಯಲಿದೆ. ಜಾಬ್ ಕಾರ್ಡ್ ಹೊಂದಿರುವವರು ಯೋಜನೆ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳುವಂತೆ ಹೇಳಿದರು.
ಪಿಡಿಒ ಕಿರಣ್ ಕುಮಾರ್, ತಾಲೂಕು ನರೇಗಾ ಐಇಸಿ ಕೋಆರ್ಡಿನೆಟರ್ ಬಾಳಪ್ಪ ತಾಳಕೇರಿ, ಕಂಪ್ಯೂಟರ್ ಆಪರೇಟರ್ ಮಹ್ಮದ್ ರμ, ಗ್ರಾಪಂ ಸಿಬ್ಬಂದಿ ಹನುಮಂತಪ್ಪ ಸೇರಿ ಇತರರಿದ್ದರು.