ಬಿಗಿ ಲಾಕ್‌ಡೌನ್‌ಗೆ ಸ್ಪಂದಿಸಿದ ಜನ
ಅನಗತ್ಯ ಸಂಚರಿಸಿದವರ ವಾಹನ ಜಪ್ತಿ ! ಎಲ್ಲೆಡೆಯೂ ಪೊಲೀಸ್ ಸರ್ಪಗಾವಲು
Team Udayavani, May 19, 2021, 5:19 PM IST
ಕೊಪ್ಪಳ: ಜಿಲ್ಲೆಯಲ್ಲಿ ಬಿಗಿ ಲಾಕ್‌ಡೌನ್‌ಗೆ ಎರಡನೇ ದಿನವೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಬಹುಪಾಲು ಜನರು ಮನೆಯಿಂದ ಹೊರ ಬರದೇ ಲಾಕ್‌ಡೌನ್ ಗೆ ಸ್ಪಂದಿಸಿದ್ದಾರೆ. ಅನಗತ್ಯ ಸುತ್ತಾಟ ನಡೆಸುವ ವಾಹನ ಸವಾರರಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ರಸ್ತೆಗಳೆಲ್ಲ ಸಂಚಾರವಿಲ್ಲದೇ ಶಾಂತವಾಗಿದ್ದದ್ದು ಕಂಡುಬಂತು.
ಜಿಲ್ಲಾದ್ಯಂತ ಜಿಲ್ಲಾಡಳಿತ ಬಿಗಿ ಲಾಕ್‌ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ 2ನೇ ದಿನವಾದ ಮಂಗಳವಾರದಂದೂ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಅಷ್ಟೊಂದು ಜನ ಕಂಡು ಬರಲಿಲ್ಲ. ಎಂದಿನಂತೆ ಪೊಲೀಸರು ಬೆಳಗ್ಗೆ 10 ಗಂಟೆ ಬಳಿಕ ಕಾರ್ಯಪ್ರವೃತ್ತರಾಗಿ ಲಾಕ್‌ಡೌನ್ ಗೆ ಜನರ ಸಹಕಾರವೂ ಬಹುಮುಖ್ಯವಾಗಿದೆ. ಇದರಿಂದ ಸೋಂಕು ನಿಯಂತ್ರಣವೂ ಸಾಧ್ಯವಿದೆ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಹಲವು ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು.
ನಗರದ ಗಡಿಯಾರ ಕಂಬ, ಗವಿಮಠ ರಸ್ತೆ, ರಾಷ್ಟ್ರೀಯ ಹೆದ್ದಾರಿ ರಸ್ತೆ, ಜವಾಹರ ರಸ್ತೆ, ಸಿಂಪಿ ಲಿಂಗಣ್ಣ ರಸ್ತೆ ಸೇರಿದಂತೆ ಹಲವು ರಸ್ತೆಗಳು ಸ್ತಬ್ಧವಾಗಿದ್ದವು. ವಿವಿಧ ರಸ್ತೆಗಳಲ್ಲಿ ಪೊಲೀಸರು ಠಿಕಾಣಿ ಹೂಡಿ ಅನಗತ್ಯ ಸಂಚಾರ ನಡೆಸುವ ವಾಹನ ಸವಾರರ ದಾಖಲೆ ಪರಿಶೀಲಿಸಿದರು. ಡಿಎಸ್‌ಪಿ ಗೀತಾ, ಪೊಲೀಸ್ ಅಧಿಕಾರಿಗಳಾದ ರವಿ ಉಕ್ಕುಂದ, ಮೌನೇಶ್ವರ ಪಾಟೀಲ್ ಸೇರಿದಂತೆ ವಿವಿಧ ಪೊಲೀಸ್ ಅ ಧಿಕಾರಿಗಳು ಹಲವು ರಸ್ತೆಗಳಲ್ಲಿ ನಿಂತು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ವೈದ್ಯಕೀಯ ಹಾಗೂ ಕೃಷಿ ಸಂಬಂಧಿ ತ ಸೇವೆಗೆ ಮಾತ್ರ ವಿನಾಯಿತಿ ನೀಡಿ ಉಳಿದೆಲ್ಲ ಸೇವೆಗೂ ಬ್ರೇಕ್ ಹಾಕಿದ್ದರು.
ಪೊಲೀಸರಿಗೆ ಪಾನಕ, ಊಟ: ನಗರದ ವಿವಿಧ ರಸ್ತೆಗಳಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿ ಕಾರಿ ಹಾಗೂ ಪೇದೆಗಳಿಗೆ ನಗರದಲ್ಲಿನ ಹಲವು ಸ್ವಯಂ ಸೇವಕರು, ಪ್ರತಿನಿಧಿ ಗಳು ಪಾನಕ, ಮಜ್ಜಿಗೆ, ಕಷಾಯ ಹಾಗೂ ಊಟದ ಸೇವೆ ಮಾಡುವ ಮೂಲಕ ಗಮನ ಸೆಳೆದರು. ಬಂದೋಬಸ್ತ್ನಲ್ಲಿ ತೊಡಗಿದ ಪೊಲೀಸ್ ತಂಡ ಇದ್ದ ಸ್ಥಳಕ್ಕೆ ತೆರಳಿ ಅಲ್ಲಿಯೇ ಅವರಿಗೆ ಊಟದ ಪ್ಯಾಕೇಟ್ ನೀಡಿ, ವಾಟರ್ ಬಾಟಲಿ ವಿತರಿಸುವ ಮೂಲಕ ಗಮನ ಸೆಳೆದರು.
ನಗರಸಭೆ ಅಧಿ ಕಾರಿಗಳಿಂದ ಕಾರ್ಯಾಚರಣೆ: ಇನ್ನೂ ನಗರಸಭೆಯ ಪೌರಾಯುಕ್ತ ಮಂಜುನಾಥ ಸೇರಿದಂತೆ ಸಿಬ್ಬಂದಿ ನಗರದ ವಿವಿಧ ರಸ್ತೆಯಲ್ಲಿ ಸಂಚಾರ ನಡೆಸಿ ಬೈಕ್‌ನಲ್ಲಿ ಸಂಚಾರ ಮಾಡುವ ಜನರನ್ನು ತಡೆದು ದಾಖಲೆಗಳನ್ನು ಪರಿಶೀಲಿಸಿ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡಬೇಕು. ಅನಗತ್ಯ ಸುತ್ತಾಟ ನಡೆಸಿದರೆ ದಂಡ, ಕೇಸ್ ದಾಖಲಿಸುವ ಕುರಿತಂತೆ ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಾರ್ವಜನಿಕರಿಂದ ಅಹವಾಲು ಸಲ್ಲಿಕೆ: ಶಾಸಕ ಯು.ಟಿ.ಖಾದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
ಕಲಬುರಗಿ: ವಾಹನಗಳ ಅನಧಿಕೃತ ನಾಮಫಲಕ ತೆರವು; ಪೊಲೀಸರಿಂದ ಕಾರ್ಯಾಚರಣೆ
ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆಗೆ ಸಿದ್ಧತೆ: ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಧಿವಿಧಾನ
ನೇತ್ರಾವತಿ ನೀರುಪಾಲಾದ ಯುವಕನ ಶವ ಕೋಟೆಪುರದಲ್ಲಿ ಪತ್ತೆ
ಕರಾವಳಿಯಲ್ಲಿ ಭಾರೀ ಮಳೆ: ಕಾಸರಗೋಡಿನ ಮಧೂರು ದೇಗುಲ ಜಲಾವೃತ
MUST WATCH
ಹೊಸ ಸೇರ್ಪಡೆ
ಸಾರ್ವಜನಿಕರಿಂದ ಅಹವಾಲು ಸಲ್ಲಿಕೆ: ಶಾಸಕ ಯು.ಟಿ.ಖಾದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
ಕಲಬುರಗಿ: ವಾಹನಗಳ ಅನಧಿಕೃತ ನಾಮಫಲಕ ತೆರವು; ಪೊಲೀಸರಿಂದ ಕಾರ್ಯಾಚರಣೆ
ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಭಾಪತಿ ಸ್ಥಾನ ಕೊಟ್ಟರೆ ನಿಭಾಯಿಸುವೆ: ಬಸವರಾಜ್ ಹೊರಟ್ಟಿ
ಮೊದಲ ಬಾರಿಗೆ ಹಿಂದೂ ಸಂಪ್ರದಾಯ ಮೂಲಕ ದಾಂಪತ್ಯ ಜೀವನಕ್ಕೆ ಗೇ ಕಪಲ್ಸ್!
ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆಗೆ ಸಿದ್ಧತೆ: ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಧಿವಿಧಾನ