ತ್ಯಾಜ್ಯದಿಂದ ಗೊಬ್ಬರ ತಯಾರಿಕೆ ಸಾಧ್ಯ

ಮಕ್ಕಳ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ

Team Udayavani, Mar 2, 2021, 1:46 PM IST

ತ್ಯಾಜ್ಯದಿಂದ ಗೊಬ್ಬರ ತಯಾರಿಕೆ ಸಾಧ್ಯ

ಕೊಪ್ಪಳ: ತ್ಯಾಜ್ಯ ವಸ್ತುಗಳನ್ನು ಬಳಕೆ ಮಾಡಿ ಹದ ಮಾಡಿದರೆ ಉತ್ತಮ ಗೊಬ್ಬರ ದೊರೆಯುತ್ತದೆ ಎಂದು ಕೃಷಿವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿ ಪಿ.ಆರ್‌. ಬದರಿ ಪ್ರಸಾದ ತಿಳಿಸಿದರು.

ನಗರದ ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ,ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ನಡೆದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾವಯವ ಗೊಬ್ಬರ ಮತ್ತು ಎರೆಹುಳು ಗೊಬ್ಬರ, ಬಹಳ ಹಿಂದಿನ ಕಾಲದಿಂದಲೂ ಆಚರಣೆಯಲ್ಲಿದೆ. ತಿಪ್ಪೆ ಗೊಬ್ಬರ ಮತ್ತು ಕಾಂಪೋಸ್ಟ್‌ ಗೊಬ್ಬರಗಳಉಪಯೋಗ ಕೃಷಿಯೊಂದಿಗೆ ಬೆಳೆದು ಬಂದಿದೆ. ತ್ಯಾಜ್ಯ ವಸ್ತುಗಳನ್ನು ಬಳಕೆ ಮಾಡಿ ಹದ ಮಾಡಿದರೆ ಉತ್ತಮ ಗೊಬ್ಬರ ದೊರೆಯುತ್ತದೆ. ಹೀಗೆ ತಯಾರಿಸಿದರೆಗುಣಮಟ್ಟ ಗೊಬ್ಬರ ಲಭಿಸುತ್ತದೆ. ದನದಕೊಟ್ಟಿಗೆಯಲ್ಲಿ ಸಗಣಿ, ಮೂತ್ರ, ತಿಂದು ಬಿಟ್ಟ ಕಡ್ಡಿ, ಬೂದಿ ಮತ್ತು ದನಗಳಿಗೆಹಾಸಿಗೆಗಾಗಿ ಉಪಯೋಗಿಸಿದ ಹುಲ್ಲುಮುಂತಾದವುಗಳನ್ನು ನಿತ್ಯವೂ 20x6x3 ರ ತಗ್ಗಿನಲ್ಲಿ 3-4 ಭಾಗಮಾಡಿ ಒಂದುಭಾಗದಲ್ಲಿ ತುಂಬುತ್ತ ಹೊಗಬೇಕು. ನಂತರ ಉತ್ತಮ ಗೊಬ್ಬರವಾಗುತ್ತದೆ. ಇದನ್ನು ತಗ್ಗು ಪದ್ಧತಿ ಮತ್ತು ರಾಶಿ ಪದ್ಧತಿ ಅಂತ ಕರೆಯುತ್ತಾರೆ ಎಂದರು.

ಇತ್ತೀಚೆಗೆ ಜೇನು ಸಾಕಾಣಿಕೆ ಒಂದು ಉದ್ಯಮವಾಗಿ ಬೆಳೆಯುತ್ತಿದೆ. ಜೇನು ನೊಣಗಳು ಮಾನವ ಜೀವನಕ್ಕೆಉಪಯುಕ್ತವಾಗಿವೆ. ಹೊಲದಲ್ಲಿಬೆಳೆದ ಬೆಳೆಗಳ ಹೂವುಗಳ ಮೇಲೆಕೂತು ಜೇನುಗಳು ಪರಾಗಸ್ಪರ್ಷ ಮಾಡುತ್ತವೆ. ಇದರಿಂದ ಇಳುವರಿಯಲ್ಲಿ ಹೆಚ್ಚಳವಾಗುತ್ತದೆ. ಜೇನು ನೊಣಗಳುಮಳೆನೀರು ಬೀಳದಂತೆ, ಮಳೆಗೆಹಾನಿಯಾಗದಂತೆ ಗೂಡನ್ನು ಕಟ್ಟುತ್ತವೆ.ಅದರಲ್ಲಿ ರಾಣಿ ಜೇನು ಹುಳು ಎಂಬುದುಒಂದು ವಿಶೇಷ ಜೇನು ನೊಣವಾಗಿದೆ. ಒಂದು ತಟ್ಟೆಯಲ್ಲಿ 30-35 ಸಾವಿರಹುಳುಗಳಿರುತ್ತವೆ. ಪ್ರತಿದಿನ 1500ಕ್ಕೂ ಹೆಚ್ಚು ಮೊಟ್ಟೆಗಳನ್ನಿಡುತ್ತದೆ. ಮನೆಯಲ್ಲಿ ಪೆಟ್ಟಿಗೆ ಇಟ್ಟು ಜೇನು ಸಾಕಾಣಿಕೆ ಮಾಡಬಹುದು. ಪೆಟ್ಟಿಗೆಯಿಂದ ವರ್ಷಕ್ಕೆ 10 ಕೆ.ಜಿ ಜೇನು ತೆಗೆಯಬಹುದು. ಇದರ ಸೇವನೆಯಿಂದ ಉತ್ತಮ ಆರೋಗ್ಯ ದೊರೆಯುತ್ತದೆ ಎಂದರು.

ಅಣಬೆ ಬೆಳೆ ಇಂದು ಬಹಳ ಪ್ರಸಿದ್ಧಿಪಡೆಯುತ್ತಿದೆ. ಇದರ ಬೀಜಗಳ ಬಳಕೆಮಾಡಿ ಮನೆಗಳಲ್ಲಿ ಎಲ್ಲಿಯಾದರೂಬೆಳೆಯಬಹುದು. ಕಡಿಮೆ ಅವ ಧಿಯಲ್ಲಿಅಣಬೆ ಬೆಳೆಯಬಹುದು. ಅಣಬೆ ಸೇವನೆ ಆರೊಗ್ಯಕ್ಕೆ ಉತ್ತಮವಾಗಿದ್ದು, ಇದುಮಾಂಸದಲ್ಲಿರುವ ಪೌಷ್ಟಿಕಾಂಶಗಳನ್ನುಹೊಂದಿರುತ್ತದೆ. ಮಾಂಸ ತಿನ್ನದವರುಅಣಬೆ ಸೇವಿಸಬಹುದು. ಅಣಬೆಮಾರಾಟ ಮಾಡುವುದರಿಂದ ಉತ್ತಮ ಲಾಭ ಪಡೆಯಬಹುದು ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೋಟಗಾರ ಮಾತನಾಡಿದರು. ಕೃಷಿ ವಿಸ್ತರಣಾ ಕೇಂದ್ರದ ಕೃಷಿ ಸಹಾಯಕ ಪರ್ವತಯ್ಯ, ಸರಕಾರಿ ಬಾಲಕಿಯರಬಾಲಮಂದಿರ ಅಧಿಧೀಕ್ಷಕಿ ಕಲಾವತಿ,ಸರಕಾರಿ ಬಾಲಕರ ಬಾಲಮಂದಿರಅಧಿಧೀಕ್ಷಕ ಮಂಜೂರ್‌ ಖಾನ್‌,ವಿಸ್ತಾರ ಸಂಸ್ಥೆಯ ಸಾವಿತ್ರಿ, ಕಲ್ವಾರಿ ಚಾಪೆಲ್‌ ಟ್ರಸ್ಟ್‌ನ ಜೈ ಕುಮಾರ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1czff

ಕೆವೈಸಿ ವಂಚನೆ : ಖ್ಯಾತ ನಟನ ಖಾತೆಯಿಂದ 4.36 ಲಕ್ಷ ರೂ. ಮಾಯ

ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರ ದೇಶಿ ಅಡಕೆ ಬೆಳೆಗಾರರ ಭವಿಷ್ಯಕ್ಕೆ ಮಾರಕ

ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರ ದೇಶಿ ಅಡಕೆ ಬೆಳೆಗಾರರ ಭವಿಷ್ಯಕ್ಕೆ ಮಾರಕ

tdy-16

ವಾರ್ತಾ ಇಲಾಖೆ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ರಜತ ಕಮಲ: ಮುಖ್ಯಮಂತ್ರಿಗಳಿಂದ ಅಭಿನಂದನೆ

tdy-15

ಗುಂಡ್ಲುಪೇಟೆ: ಭಾರತ್ ಜೋಡೋ ಯಾತ್ರೆಯಲ್ಲಿ ಪೇಸಿಎಂ ಟೀ ಶರ್ಟ್ ಧರಿಸಿದ್ದ ಯುವಕನ ಬಂಧನ

10 ವರ್ಷದ ಬಾಲಕಿ ಮೇಲೆ  ದೌರ್ಜನ್ಯ: ಆರೋಪಿಗೆ 142 ವರ್ಷ ಶಿಕ್ಷೆ ವಿಧಿಸಿದ ಕೇರಳ ಕೋರ್ಟ್

10 ವರ್ಷದ ಬಾಲಕಿ ಮೇಲೆ ದೌರ್ಜನ್ಯ: ಆರೋಪಿಗೆ 142 ವರ್ಷ ಶಿಕ್ಷೆ ವಿಧಿಸಿದ ಕೇರಳ ಕೋರ್ಟ್

6 ಕೋಟಿ ರೂ. ಮೌಲ್ಯದ ನೋಟುಗಳು, ಬಂಗಾರದಿಂದ ದೇವಿಗೆ ಅಲಂಕಾರ!

6 ಕೋಟಿ ರೂ. ಮೌಲ್ಯದ ನೋಟುಗಳು, ಬಂಗಾರದಿಂದ ದೇವಿಗೆ ಅಲಂಕಾರ!

`ಗಾಂಧಿ’ ಕುಟುಂಬವನ್ನು ಯಾರು ಟಾರ್ಗೆಟ್ ಮಾಡುತ್ತಿದ್ದಾರೆಂದು ರಾಹುಲ್ ಗಾಂಧಿಯೇ ಸ್ಪಷ್ಟಪಡಿಸಲಿ

`ಗಾಂಧಿ’ ಕುಟುಂಬವನ್ನು ಯಾರು ಟಾರ್ಗೆಟ್ ಮಾಡುತ್ತಿದ್ದಾರೆಂದು ರಾಹುಲ್ ಗಾಂಧಿಯೇ ಸ್ಪಷ್ಟಪಡಿಸಲಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrest-25

ಕುಷ್ಟಗಿ: ಅಪ್ರಾಪ್ತ ವಯಸ್ಕಳನ್ನು ಪುಸಲಾಯಿಸಿ ಅತ್ಯಾಚಾರ ; ಆರೋಪಿ ಬಂಧನ

16

ಪರವಾನಗಿ ಇಲ್ಲದೇ ಸ್ಲ್ಯಾಬ್‌ ತೆರವು-ಪರಿಶೀಲನೆ

15

ʼಉದಯವಾಣಿ’ ವರದಿಗೆ ಸ್ಫಂದಿಸಿದ ಸಿಎಂ ಕಚೇರಿ

8

ಕುಷ್ಟಗಿ: ಲಂಪಿ ವೈರಸ್; ಜಾನುವಾರು ಸಂತೆ ರದ್ದು

11

ಕುಷ್ಟಗಿ: ಹಲವು ವರ್ಷಗಳ ಬೇವು ಹಾಗೂ ಆಲದ ಮರ ಕಡಿತ

MUST WATCH

udayavani youtube

ದಿನ6| ಕಾತ್ಯಾಯಿನಿ ದೇವಿ|ಕಾತ್ಯಾಯಿನಿ ದೇವಿ ಪೂಜೆಯ ಪ್ರಯೋಜನವೇನು ಗೊತ್ತೇ. | Udayavani

udayavani youtube

ದಿನ 5| ಸ್ಕಂದ ಮಾತೆ | ಸ್ಕಂದ ಮಾತೆ ಪ್ರತಿಯೊಬ್ಬ ತಾಯಿಯ ಪ್ರತಿರೂಪ ಹೇಗೆ ? | Udayavani

udayavani youtube

ಸಿದ್ದರಾಮಯ್ಯ RSS ಬ್ಯಾನ್ ಮಾತಿಗೆ ಮುಖ್ಯಮಂತ್ರಿ ಖಂಡನೆ

udayavani youtube

ಈ ಮಾದರಿಯಲ್ಲಿ ಹೈನುಗಾರಿಕೆ ಮಾಡಿದ್ದಾರೆ ಉತ್ತಮ ಲಾಭ ಆಗುತ್ತದೆ

udayavani youtube

ನವರಾತ್ರಿ ವಿಶೇಷ : 50 ವರ್ಷಗಳಿಂದ ಗೊಂಬೆಯ ಆರಾಧನೆ ಮಾಡುತ್ತಿರುವ ಕುಟುಂಬ

ಹೊಸ ಸೇರ್ಪಡೆ

ಅಡಿಕೆ ಕೊಳೆ ರೋಗಕ್ಕೆ ಸರಕಾರದಿಂದ ಉಚಿತ ಔಷಧಿಗೆ ಚಿಂತನೆ : ಸಚಿವ ಎಸ್.ಅಂಗಾರ

1czff

ಕೆವೈಸಿ ವಂಚನೆ : ಖ್ಯಾತ ನಟನ ಖಾತೆಯಿಂದ 4.36 ಲಕ್ಷ ರೂ. ಮಾಯ

ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರ ದೇಶಿ ಅಡಕೆ ಬೆಳೆಗಾರರ ಭವಿಷ್ಯಕ್ಕೆ ಮಾರಕ

ಅಡಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರ ದೇಶಿ ಅಡಕೆ ಬೆಳೆಗಾರರ ಭವಿಷ್ಯಕ್ಕೆ ಮಾರಕ

tdy-17

ಕಾರ್ಕಳ: ಕೃಷಿ ಹೊಂಡಕ್ಕೆ ಬಿದ್ದು ಕಾರ್ಮಿಕೆ ಮಹಿಳೆ ಸಾವು

1-sadadsadad

ಸಿದ್ದರಾಮಯ್ಯ, ಡಿಕೆಶಿರವರನ್ನೇ ಜೋಡಿಸಲು ಸಾಧ್ಯವಿಲ್ಲ,ಇನ್ನು..: ನಾರಾಯಣಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.