Udayavni Special

ಅಂಜನಾದ್ರಿ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ಯಾನ್‌

ಪ್ರವಾಸೋದ್ಯಮ ಇಲಾಖೆಯಿಂದಲೇ ಹೋಟೆಲ್‌ ಆರಂಭ! ­ಅಂಜನಾದ್ರಿಯೇ ಹನುಮಂತನ ಜನ್ಮಸ್ಥಳ

Team Udayavani, Jul 1, 2021, 4:57 PM IST

30-gvt-01

ಕೊಪ್ಪಳ/ಗಂಗಾವತಿ: ವಿಶ್ವಪ್ರಸಿದ್ಧ ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ಸಮಗ್ರ ಮಾಸ್ಟರ್‌ ಪ್ಲ್ಯಾನ್‌ ಮಾಡಲಾಗಿದೆ. ಇದಕ್ಕೆ ನೂರಾರು ಕೋಟಿ ರೂ. ಅನುದಾನ ಬೇಕಿದ್ದು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್‌ ಹೇಳಿದರು.

ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ಅಂಜನಾದ್ರಿ ಬೆಟ್ಟಕ್ಕೆ ಕುಟುಂಬ ಸಮೇತ ತೆರಳಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಅಂಜನಾದ್ರಿ ಪ್ರಸಿದ್ಧ ತಾಣವಾಗಿದೆ. ವಿವಿಧೆಡೆಯಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇದನ್ನು ವಿಶ್ವಮಟ್ಟದಲ್ಲಿ ಪ್ರವಾಸೋದ್ಯಮವಾಗಿ ಅಭಿವೃದ್ಧಿ ಮಾಡುವ ಅಗತ್ಯವಿದ್ದು, ಜಿಲ್ಲೆಯ ಶಾಸಕರು ಅಭಿವೃದ್ಧಿಗೆ ಹಲವು ಬಾರಿ ನನ್ನನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಈ ಹಿಂದೆಯೇ ಸಚಿವ ಈಶ್ವರಪ್ಪ ಸೇರಿ ನಾವು ಸ್ಥಳಕ್ಕೆ ಆಗಮಿಸುವ ಯೋಜನೆ ಮಾಡಿದ್ದರೂ ಕೋವಿಡ್‌ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ಆದರೆ ಅಭಿವೃದ್ಧಿ ಕುರಿತಂತೆ ಸಭೆ ನಡೆಸಿದ್ದೇವೆ. ಇಲ್ಲಿನ ಸ್ಥಳ ಪರಿಶೀಲನೆಗೆ ಕೊಪ್ಪಳ ಪ್ರವಾಸ ಹಮ್ಮಿಕೊಂಡಿದ್ದೇನೆ ಎಂದರು.

ಬೇಕು ನೂರಾರು ಕೋಟಿ: ಅಂಜನಾದ್ರಿ ಬೆಟ್ಟ ಕೇವಲ ಪ್ರವಾಸೋದ್ಯಮ ಇಲಾಖೆಯಿಂದ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಕಂದಾಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ ನಾಲ್ಕೈದು ಇಲಾಖೆಗಳ ಸಹಯೋಗದಲ್ಲಿ ಇದನ್ನು ಅಭಿವೃದ್ಧಿ ಮಾಡುವ ಅಗತ್ಯವಿದೆ. ಅಂಜನಾದ್ರಿಗೆ ಕೋಟ್ಯಂತರ ರೂ. ಆದಾಯ ಬರುತ್ತಿದೆ. ಹಾಗಾಗಿ ಇದಕ್ಕೆ ಮಾಸ್ಟರ್‌ ಪ್ಲಾನ್‌ ಮಾಡಿದ್ದು, ನೂರಾರು ಕೋಟಿ ರೂ. ಅನುದಾನ ಬೇಕಾಗುತ್ತದೆ. ಈ ದೃಷ್ಟಿಯಿಂದ ಹಲವು ಸಚಿವರು ಈ ಬಗ್ಗೆ ಚರ್ಚಿಸಿದ್ದೇವೆ ಎಂದರು.

4 ತ್ರೀಸ್ಟಾರ್‌ ಹೋಟೆಲ್‌: ರಾಜ್ಯದ ವಿವಿಧ ಪ್ರವಾಸಿ ತಾಣಗಳಲ್ಲಿ ತ್ರೀಸ್ಟಾರ್‌ ಹೋಟೆಲ್‌ ಆರಂಭಿಸಲು ಉದ್ಯಮಿಗಳು ಮುಂದೆ ಬಾರದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದಲೇ ನಾಲ್ಕು ಸ್ಥಳಗಳಲ್ಲಿ ತ್ರೀಸ್ಟಾರ್‌ ಹೋಟೆಲ್‌ ಆರಂಭಿಸಲು ನಿರ್ಧರಿಸಿದ್ದೇವೆ. ಕಲಬುರಗಿಯಲ್ಲಿ ಸ್ಥಳ ಪರಿಶೀಲನೆ ಮಾಡಿದ್ದೇನೆ. ಇಲ್ಲಿಯೂ ಹೋಟೆಲ್‌ ಆರಂಭಿಸುವ ಕುರಿತಂತೆ ಸ್ಥಳ ಪರಿಶೀಲನೆ ಮಾಡಿದ್ದೇನೆ. ಇಲ್ಲಿ ಕೆಲವೊಂದು ಭೂಮಿ ವಿವಾದವಿದೆ. ಅವೆಲ್ಲವು ಬಗೆಹರಿಯಬೇಕೆಂದರೆ ನಾಲ್ಕೈದು ಸಚಿವರು ಒಟ್ಟಾಗಿ ಸೇರಬೇಕಿದೆ ಎಂದರು.

ಅಂಜನಾದ್ರಿಯೇ ಹನುಮಂತನ ಜನ್ಮಸ್ಥಳ: ಆಂಜನೇಯ ಅಂಜನಾದ್ರಿಯಲ್ಲಿಯೇ ಜನಿಸಿದ್ದು ಎನ್ನುವುದಕ್ಕೆ ನಮ್ಮಲ್ಲಿ ಹಲವು ಸಾಕ್ಷ್ಯಗಳಿವೆ. ಇತಿಹಾಸ ಪುರಾವೆ ಇವೆ. ಇಲ್ಲಿ ಪೌರಾಣಿಕ ಹಿನ್ನೆಲೆಯೂ ಇದೆ. ಯಾರೋ ನಾಲ್ಕು ಜನರು ಅಂಜನಾದ್ರಿಯಲ್ಲಿ ಹನುಮಂತ ಜನಿಸಿಲ್ಲ ಎಂದರೆ ನಾವು ಒಪ್ಪಲ್ಲ. ಅಂಜನಾದ್ರಿಯಲ್ಲೇ ಹನುಮಂತನು ಜನಿಸಿದ್ದು ಎನ್ನುವುದನ್ನು ನಾವು ಸಾರಿ ಸಾರಿ ಹೇಳುತ್ತೇವೆ. ಸರ್ಕಾರದ ನಿಲವು ಇದೇ ಆಗಿದೆ. ಮುಂದಿನ ದಿನದಲ್ಲಿ ಅದನ್ನು ಘೋಷಣೆ ಮಾಡಲಿದ್ದೇವೆ ಎಂದರು.

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮುಖಂಡ ಸಂತೋಷ ಕೆಲೋಜಿ ಸೇರಿದಂತೆ ಗಣ್ಯರು ಸಚಿವರು ಹಾಗೂ ಶ್ರುತಿ ಅವರನ್ನು ಸನ್ಮಾನಿಸಿ ಆಂಜನೇಯನ ಭಾವಚಿತ್ರ ಅರ್ಪಿಸಿದರು.

ಟಾಪ್ ನ್ಯೂಸ್

ಟೋಕಿಯೊ ಒಲಿಂಪಿಕ್ಸ್: ಪದಕದ ಭರವಸೆ ಮೂಡಿಸಿದ ದೀಪಿಕಾ ಕುಮಾರಿಗೆ ಸೋಲು!

ಟೋಕಿಯೊ ಒಲಿಂಪಿಕ್ಸ್: ಪದಕದ ಭರವಸೆ ಮೂಡಿಸಿದ ದೀಪಿಕಾ ಕುಮಾರಿಗೆ ಸೋಲು!

Kerala has reported 24,064 cases with 128 fatalities in the last 24 hours

ಕೇರಳ : ಕಳೆದ 24 ಗಂಟೆಗಳಲ್ಲಿ 24,064 ಹೊಸ ಕೋವಿಡ್  ಪ್ರಕರಣಗಳು ಪತ್ತೆ..!

ಬೊಮ್ಮಲಾಪುರಕ್ಕೆ ಬಿಎಸ್ ಯಡಿಯೂರಪ್ಪ ಭೇಟಿ: ರವಿ ಕುಟುಂಬಕ್ಕೆ 5 ಲಕ್ಷ ನೆರವು

ಬೊಮ್ಮಲಾಪುರಕ್ಕೆ ಬಿಎಸ್ ಯಡಿಯೂರಪ್ಪ ಭೇಟಿ: ರವಿ ಕುಟುಂಬಕ್ಕೆ 5 ಲಕ್ಷ ರೂ. ನೆರವು

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಧು ಬಂಗಾರಪ್ಪ: ಬೆಂಗಲಿಗರ ಸಂಭ್ರಮಾಚರಣೆ

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಧು ಬಂಗಾರಪ್ಪ: ಬೆಂಗಲಿಗರ ಸಂಭ್ರಮಾಚರಣೆ

Ex Eshwarppa Asked DCM seat in Mysore

ಉಪ ಮುಖ್ಯಮಂತ್ರಿಯನ್ನಾದರೂ ಮಾಡಲಿ : ಮಾಜಿ ಸಚಿವ ಈಶ್ವರಪ್ಪ

ಸಚಿವ ಸ್ಥಾನದ ಸರ್ಕಸ್: ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪರ ಯಾದವಶ್ರೀ ಬ್ಯಾಟಿಂಗ್

ಸಚಿವ ಸ್ಥಾನದ ಸರ್ಕಸ್: ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪರ ಯಾದವಶ್ರೀ ಬ್ಯಾಟಿಂಗ್

More than 220 tourists stuck in Lahaul-Spiti after cloudburst, rescue ops on

ಮೇಘ ಸ್ಪೋಟ : ಲಾಹೌಲ್ ಸ್ಪಿಟಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ 200ಕ್ಕೂ ಹೆಚ್ಚು ಪ್ರವಾಸಿಗರು..!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೊಮ್ಮಲಾಪುರಕ್ಕೆ ಬಿಎಸ್ ಯಡಿಯೂರಪ್ಪ ಭೇಟಿ: ರವಿ ಕುಟುಂಬಕ್ಕೆ 5 ಲಕ್ಷ ನೆರವು

ಬೊಮ್ಮಲಾಪುರಕ್ಕೆ ಬಿಎಸ್ ಯಡಿಯೂರಪ್ಪ ಭೇಟಿ: ರವಿ ಕುಟುಂಬಕ್ಕೆ 5 ಲಕ್ಷ ರೂ. ನೆರವು

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಧು ಬಂಗಾರಪ್ಪ: ಬೆಂಗಲಿಗರ ಸಂಭ್ರಮಾಚರಣೆ

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಧು ಬಂಗಾರಪ್ಪ: ಬೆಂಗಲಿಗರ ಸಂಭ್ರಮಾಚರಣೆ

ಸಚಿವ ಸ್ಥಾನದ ಸರ್ಕಸ್: ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪರ ಯಾದವಶ್ರೀ ಬ್ಯಾಟಿಂಗ್

ಸಚಿವ ಸ್ಥಾನದ ಸರ್ಕಸ್: ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪರ ಯಾದವಶ್ರೀ ಬ್ಯಾಟಿಂಗ್

ಸಾಗರ: ಬೈಕ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕೆರೆಗೆ ಉರುಳಿದ ಕೆಎಸ್ಆರ್ ಟಿಸಿ ಬಸ್!

ಬೈಕ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸುವ ಯತ್ನದಲ್ಲಿ ಕೆರೆಗೆ ಉರುಳಿದ ಕೆಎಸ್ಆರ್ ಟಿಸಿ ಬಸ್!

ದಾವಣಗೆರೆ: ಸಹೋದರಿಯರ ಜೋಡಿ ಕೊಲೆ, ಕೆಟ್ಟ ವಾಸನೆ ಬಂದಾಗಲೇ ತಿಳಿಯಿತು ವಿಚಾರ!

ದಾವಣಗೆರೆ: ಸಹೋದರಿಯರ ಜೋಡಿ ಕೊಲೆ, ಕೆಟ್ಟ ವಾಸನೆ ಬಂದಾಗಲೇ ತಿಳಿಯಿತು ವಿಚಾರ!

MUST WATCH

udayavani youtube

ಪೂರ್ವಜನ್ಮದಲ್ಲಿ ನಾನು ಕನ್ನಡಿಗನಾಗಿ ಹುಟ್ಟಿದ್ದೆ ಅನ್ಸುತ್ತೆ

udayavani youtube

ನಾನು ಹಾಕುವ ಬಟ್ಟೆ ಬರೆಗಳು ಅತೀ ಹೆಚ್ಚು ಹೆಂಗಸ್ರು ಹಾಕುವ ಬಣ್ಣಗಳು !

udayavani youtube

ವಂಶವಾಹಿನಿ ರೂಪದಲ್ಲಿ ಬರುವುದು ಕಾಯಿಲೆ ಮಾತ್ರ :ಸಿದ್ದುಗೆ ಬಿಜೆಪಿ ತಿರುಗೇಟು

udayavani youtube

ರಾಷ್ಟ್ರೀಯ ಪ್ರಾಣಿಯಾಗಿದ್ದ ಸಿಂಹವನ್ನು ಹುಲಿ ಹಿಂದಿಕ್ಕಿದ್ದು ಹೇಗೆ ?

udayavani youtube

ಉದುರಿದ ಹೂಗಳಲ್ಲಿ ಅಕ್ಷರ ,123 ಬರಿಸುತ್ತಿದ್ದೆ!

ಹೊಸ ಸೇರ್ಪಡೆ

ಟೋಕಿಯೊ ಒಲಿಂಪಿಕ್ಸ್: ಪದಕದ ಭರವಸೆ ಮೂಡಿಸಿದ ದೀಪಿಕಾ ಕುಮಾರಿಗೆ ಸೋಲು!

ಟೋಕಿಯೊ ಒಲಿಂಪಿಕ್ಸ್: ಪದಕದ ಭರವಸೆ ಮೂಡಿಸಿದ ದೀಪಿಕಾ ಕುಮಾರಿಗೆ ಸೋಲು!

Kerala has reported 24,064 cases with 128 fatalities in the last 24 hours

ಕೇರಳ : ಕಳೆದ 24 ಗಂಟೆಗಳಲ್ಲಿ 24,064 ಹೊಸ ಕೋವಿಡ್  ಪ್ರಕರಣಗಳು ಪತ್ತೆ..!

Coastal Belt Tredition Aati

ಸುಖ ದು:ಖಗಳ ಸಮ್ಮಿಲನ ಆಟಿ ತಿಂಗಳು

ಬೊಮ್ಮಲಾಪುರಕ್ಕೆ ಬಿಎಸ್ ಯಡಿಯೂರಪ್ಪ ಭೇಟಿ: ರವಿ ಕುಟುಂಬಕ್ಕೆ 5 ಲಕ್ಷ ನೆರವು

ಬೊಮ್ಮಲಾಪುರಕ್ಕೆ ಬಿಎಸ್ ಯಡಿಯೂರಪ್ಪ ಭೇಟಿ: ರವಿ ಕುಟುಂಬಕ್ಕೆ 5 ಲಕ್ಷ ರೂ. ನೆರವು

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಧು ಬಂಗಾರಪ್ಪ: ಬೆಂಗಲಿಗರ ಸಂಭ್ರಮಾಚರಣೆ

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಧು ಬಂಗಾರಪ್ಪ: ಬೆಂಗಲಿಗರ ಸಂಭ್ರಮಾಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.