Udayavni Special

ಮುಂಗಾರು ಬೆಳೆ ಕಟಾವು ಸಮೀಕ್ಷೆ ಎಡವಟ್ಟು


Team Udayavani, Sep 7, 2019, 11:27 AM IST

kopala-tdy-2

ಕೊಪ್ಪಳ: ಜಿಲ್ಲೆಯಲ್ಲಿ 2018-19ನೇ ಸಾಲಿನ ಮುಂಗಾರಿನಲ್ಲಿ ಬೆಳೆ ಕಟಾವು ಸಮೀಕ್ಷೆಯಲ್ಲಿ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ರೈತರಿಗೆ ಬರಬೇಕಿದ್ದ ಬೆಳೆವಿಮೆ ಬರದಂತ ಪರಿಸ್ಥಿತಿ ಎದುರಾಗಿದೆ. ಅಚ್ಚರಿಯಂದರೆ ಯಾರದೋ ಜಮೀನಿನಲ್ಲಿ ಮಾಡಬೇಕಿದ್ದ ಬೆಳೆ ಕಟಾವು ಸಮೀಕ್ಷೆ ಇನ್ಯಾರಧ್ದೋ ಜಮೀನಿನಲ್ಲಿ ಮಾಡಿದ್ದಾರೆ.

ಹೌದು.. ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಬೆಳೆ ಕಟಾವು ಸಮೀಕ್ಷೆ ಕಳೆದ ವರ್ಷ ಸರಿಯಾಗಿ ನಡೆದಿಲ್ಲ. ಇದರಿಂದ ನಮಗೆ ಬೆಳೆ ವಿಮೆಯೂ ಬಂದಿಲ್ಲ ಎಂದು ರೈತರು ವೇದನೆ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ವರ್ಷ ಭೀಕರ ಬರದ ಪರಿಸ್ಥಿತಿಯಿಂದಾಗಿ ರೈತ ಸಮೂಹ ಬೆಂದು ಹೋಗಿತ್ತು. ಬಿತ್ತನೆ ಮಾಡಿದ ಬೆಳೆ ಮೊಳಕೆ ಒಡೆಯುವ ಹಂತದಲ್ಲೇ ಕಮರಿ ಹೋಗಿತ್ತು. ಬೆಳೆ ರಕ್ಷಣೆಗಾಗಿ ಮೊದಲೇ ವಿಮೆ ಮಾಡಿಸಿಕೊಂಡಿದ್ದ ಹಲವು ರೈತರು ವಿಮೆ ಹಣವಾದರೂ ನಮ್ಮ ಕೈ ಸೇರಲಿದೆ ಎಂಬ ನಂಬಿಕೆಯಿಂದ ವಿಮೆ ಹಣಕ್ಕಾಗಿ ಕಾಯುತ್ತಿದ್ದರು. ಇಲಾಖೆ ಹಂತದಲ್ಲಿ ಮಾಡಿದ ಎಡವಟ್ಟು ಈಗ ಬೆಳಕಿಗೆ ಬಂದಿದೆ.

ಬೆಳೆ ಕಟಾವು ಸಮೀಕ್ಷೆ ಮಾಡುತ್ತೆ: ಸರ್ಕಾರ ಪ್ರತಿ ವರ್ಷ ಬೆಳೆ ಕಟಾವು ಸಮೀಕ್ಷೆಯನ್ನು ಕೈಗೊಳ್ಳುತ್ತದೆ. ಜಿಲ್ಲೆಯಲ್ಲಿನ ಗ್ರಾಪಂ ಹಂತದಲ್ಲಿ ಮಳೆಯಾಶ್ರಿತ ಪ್ರದೇಶದ ಆಯ್ದ ರೈತರ ಜಮೀನುಗಳನ್ನು ಮೊದಲೇ ಆಯ್ಕೆ ಮಾಡಿಕೊಳ್ಳುತ್ತದೆ. ಆ ರೈತರ ಜಮೀನಿನಲ್ಲಿ ಇರುವ ಬೆಳೆಯನ್ನು ನಾಲ್ಕು ವಿಧಾನದಲ್ಲಿ ಬೆಳೆ ಕಟಾವು ಸಮೀಕ್ಷೆ ಮಾಡುತ್ತದೆ. ಆ ಇಳುವರಿ ಜಿಪಿಎಸ್‌ ಆಧಾರಿತವಾಗಿರುತ್ತದೆ. ಅಲ್ಲದೇ ಇದೇ ಬೆಳೆ ಕಟಾವು ಸಮೀಕ್ಷೆ ಇಳುವರಿ ಲೆಕ್ಕಾಚಾರದ ಮೇಲೆ ಬೆಳೆ ವಿಮೆಯು ರೈತರಿಗೆ ಬರಲಿದೆ. ಒಂದು ವೇಳೆ ಕಟಾವಿನ ವಿಧಾನದಲ್ಲಿ ನಿಗದಿಗಿಂತ ಹೆಚ್ಚಿನ ಇಳುವರಿ ಬಂದರೆ ಆ ರೈತನಿಗೆ ಬೆಳೆ ವಿಮೆ ಬರುವುದಿಲ್ಲ.

ನಡೆದಿರುವುದು ಏನು?: ತಾಲೂಕಿನ ಬೆಟಗೇರಿ ಗ್ರಾಪಂನಲ್ಲಿ 2018-19ನೇ ಸಾಲಿನಲ್ಲಿ ನಾಲ್ಕು ಬೆಳೆ ಕಟಾವು ಸಮೀಕ್ಷೆ ಆಯ್ಕೆಯಾಗಿವೆ. ಈ ಪೈಕಿ 151/ಸಿ ಸರ್ವೇ ನಂಬರ್‌ನ ರೈತನ ಜಮೀನಿನಲ್ಲಿ ಸರ್ವೇ ಮಾಡಬೇಕು. ಅದನ್ನು ಬಿಟ್ಟು ಗ್ರಾಪಂ ಪಿಡಿಒ ನೀರಾವರಿ ಪ್ರದೇಶದ ರೈತನ ಜಮೀನಿನಲ್ಲಿ ಬೆಳೆ ಕಟಾವು ಸಮೀಕ್ಷೆ ಮಾಡಿದ್ದಾರೆ. ಇದರಿಂದ ಸರಾಸರಿಗಿಂತ ಹೆಚ್ಚು ಇಳುವರಿ ಬಂದಿದೆ. ಇದಲ್ಲದೇ 519/1ರ ರೈತನ ಜಮೀನಿನಲ್ಲಿ ಬೆಳೆ ಕಟಾವು ಸಮೀಕ್ಷೆ ಮಾಡಬೇಕಿತ್ತು. ಆದರೆ ಇದನ್ನೂ ಬೇರೆ ರೈತನ ಜಮೀನಿನಲ್ಲಿ ಸಮೀಕ್ಷೆ ಮಾಡಿದ್ದಾರೆ. ಇನ್ನೂ ಮೋರನಾಳ ಗ್ರಾಮದಲ್ಲಿ 7/ಆ ಸರ್ವೇ ನಂಬರ್‌ನ ರೈತರ ಜಮೀನು ಬೆಳೆ ಕಟಾವು ಸಮೀಕ್ಷೆಗೆ ಆಯ್ಕೆಯಾಗಿತ್ತು. ಆದರೆ ಅದು ನೀರಾವರಿ ಪ್ರದೇಶವಾಗಿದೆ. ಹೀಗೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಬರದಲ್ಲೂ ಹೆಚ್ಚು ಇಳುವರಿ ಸಮೀಕ್ಷಾ ವರದಿ ಬಂದಿವೆ. ಹೀಗಾಗಿ ರೈತರಿಗೆ ಬೆಳೆವಿಮೆ ಬಾರದಂತಾಗಿದೆ.

ಕೃಷಿ, ಸಾಂಖೀಕ ಇಲಾಖೆ ಹೊಣೆ: ಇಂತಹ ಹಲವು ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿವೆ. ಪಿಡಿಒ ಸೇರಿದಂತೆ ಕೆಳ ಹಂತದ ಅಧಿಕಾರಿಗಳು ನಿಗದಿತ ರೈತನ ಜಮೀನಿನಲ್ಲಿ ಜಿಪಿಎಸ್‌ ಮಾಡಬೇಕು. ಆದರೆ ಅವರ ಎಡವಟ್ಟಿನಿಂದ ಇನ್ಯಾವುದೋ ಜಮೀನಿನಲ್ಲಿ ಬೆಳೆ ಕಟಾವು ಸಮೀಕ್ಷೆ ಮಾಡಿ ವರದಿ ನೀಡಿದ್ದರಿಂದ ರೈತರಿಗೆ ಅನ್ಯಾಯವಾಗಿದೆ. ಈ ಹೊಣೆಯನ್ನು ಕೃಷಿ ಹಾಗೂ ಸಾಂಖೀಕ ಇಲಾಖೆ ಹೊರಬೇಕಿದೆ. ಜಿಲ್ಲಾದ್ಯಂತ ಇಂತಹ ಪ್ರಕರಣಗಳು ನಡೆದಿವೆ. ಆದರೆ ಇದು ತಾಂತ್ರಿಕವಾಗಿ ಲೆಕ್ಕಾಚಾರ ಹಾಕಿದಾಗ ಮಾತ್ರ ಬೆಳಕಿಗೆ ಬರಲಿದೆ.

ಜಿಲ್ಲಾದ್ಯಂತ ಬೆಳೆ ಕಟಾವು ಸಮೀಕ್ಷೆ ವರದಿ ತನಿಖೆ ಮಾಡಿದರೆ ಮಾತ್ರ ಇಂತಹ ಹಲವು ಪ್ರಕರಣ ಹೊರ ಬರಲಿವೆ. ಅಲ್ಲದೇ, ಸರ್ಕಾರ ಹಾಗೂ ವಿಮೆ ಕಂಪನಿಯೂ ಈ ಬೆಳೆ ಕಟಾವು ಇಳುವರಿ ಲೆಕ್ಕಾಚಾರದ ಆಧಾರದ ಮೇಲೆಯೇ ಬೆಳೆ ವಿಮೆ ಹಣವನ್ನು ರೈತರ ಖಾತೆಗೆ ಜಮೆ ಮಾಡಲಿವೆ. ಅಧಿಕಾರಿಗಳು ಮಾಡುವ ಸಣ್ಣ ಎಡವಟ್ಟಿನಿಂದ ಇಂದು ರೈತರು ಬರದಲ್ಲೂ ಬೆಳೆವಿಮೆ ಪಡೆಯದಂತ ಸ್ಥಿತಿ ಎದುರಾಗಿದೆ.

 

•ದತ್ತು ಕಮ್ಮಾರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

IPL-2020

ಮುಚ್ಚಿದ ಬಾಗಿಲಲ್ಲಿ ಐಪಿಎಲ್‌ಗೆ ಒತ್ತಡ!

ASIAN-CUP-TROPHY

ಎಎಫ್ ಸಿ ಏಶ್ಯನ್‌ ಕಪ್‌ ಆತಿಥ್ಯಕ್ಕೆ ಭಾರತ ಬಿಡ್‌

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಭಾರತದಿಂದ ಔಷಧ ಕೋರಿದ ಅಮೆರಿಕ

ಭಾರತದಿಂದ ಔಷಧ ಕೋರಿದ ಅಮೆರಿಕ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

ಕೋವಿಡ್-19 ಹಿನ್ನೆಲೆ ಆನ್ ಲೈನ್ ಮೂಲಕ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪಾಠ ಪ್ರವಚನ

kopala-tdy-1

20 ಜನರ ಗಂಟಲು ದ್ರವ ಪ್ರಯೋಗಾಲಯಕ್ಕೆ

ಕೋವಿಡ್-19 ಹಿನ್ನೆಲೆ ಮಸೀದಿಗಳಲ್ಲಿ ನಮಾಜ್ ಮಾಡಿದರೆ ಕಠಿಣ ಕ್ರಮ

ಕೋವಿಡ್-19 ಹಿನ್ನೆಲೆ ಮಸೀದಿಗಳಲ್ಲಿ ನಮಾಜ್ ಮಾಡಿದರೆ ಕಠಿಣ ಕ್ರಮ: ಪೊಲೀಸರ ಎಚ್ಚರಿಕೆ

ದೃಷ್ಟಿ ತೆಗೆದರು…ತಮಟೆ ಬಾರಿಸಿದರು…!

ದೃಷ್ಟಿ ತೆಗೆದರು…ತಮಟೆ ಬಾರಿಸಿದರು…!

ಬಾಡಿತು ಹೂವು ಬೆಳೆದವರ ಬದುಕು!

ಬಾಡಿತು ಹೂವು ಬೆಳೆದವರ ಬದುಕು!

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

IPL-2020

ಮುಚ್ಚಿದ ಬಾಗಿಲಲ್ಲಿ ಐಪಿಎಲ್‌ಗೆ ಒತ್ತಡ!

ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸ್ಪಷ್ಟನೆ

ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸ್ಪಷ್ಟನೆ

ಕಾರ್ಮಿಕರ ಶಿಬಿರಗಳ ಸ್ಥಿತಿಗತಿ: ಹೈಕೋರ್ಟ್‌ ನಿರ್ದೇಶ

ಕಾರ್ಮಿಕರ ಶಿಬಿರಗಳ ಸ್ಥಿತಿಗತಿ: ಹೈಕೋರ್ಟ್‌ ನಿರ್ದೇಶ

ASIAN-CUP-TROPHY

ಎಎಫ್ ಸಿ ಏಶ್ಯನ್‌ ಕಪ್‌ ಆತಿಥ್ಯಕ್ಕೆ ಭಾರತ ಬಿಡ್‌

ದೇವೇಗೌಡರ ಜತೆ ಮೋದಿ “ಫೋನ್‌ ಪೆ ಚರ್ಚಾ’

ದೇವೇಗೌಡರ ಜತೆ ಮೋದಿ “ಫೋನ್‌ ಪೆ ಚರ್ಚಾ’