ಯುವಕರು ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ಆದರ್ಶ ಪಾಲಿಸಬೇಕು:ಶಾಸಕ ಪರಣ್ಣ ಮುನವಳ್ಳಿ
Team Udayavani, Jan 26, 2022, 6:59 PM IST
ಗಂಗಾವತಿ: ಸ್ವಾತಂತ್ರ್ಯ ಸೇನಾನಿ ಬ್ರಿಟಿಷರಿಗೆ ಸಿಂಹಸ್ವಪ್ನಾವಾಗಿದ್ದ ಸಂಗೊಳ್ಳಿರಾಯಣ್ಣನ ಆದರ್ಶವನ್ನು ಯುವಕರು ಪಾಲನೆ ಮಾಡುವ ಮೂಲಕ ದೇಶಕ್ಕಾಗಿ ಸರ್ವ ತ್ಯಾಗಕ್ಕೂ ಸಿದ್ದರಾಗುವಂತೆ ಶಾಸಕ ಪರಣ್ಣ ಮುನವಳ್ಳಿ ಕರೆ ನೀಡಿದರು.
ಅವರು ಬುಧವಾರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನ ಶೌರ್ಯದಿನದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಯಣ್ಣ ಒಬ್ಬ ಅಪ್ಪಟ ದೇಶಪ್ರೇಮಿ ನಂಬಿಕೆಯ ಇನ್ನೊಂದು ಹೆಸರೇ ರಾಯಣ್ಣ ಆಗಿದ್ದಾರೆ. ರಾಣಿ ಚನ್ನಮ್ಮನ ಸಂಸ್ಥಾನದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ರಾಯಣ್ಣ ಜನಿಸಿದ್ದು ಆ.15 ರಂದು ಹುತಾತ್ಮರಾಗಿದ್ದು ಜ.26 ರಂದು ಇಂತಹ ಸೇನಾನಿಯನ್ನು ಸದಾ ಸ್ಮರಣೆ ಮಾಡಬೇಕೆಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಬಿ.ರಾಮಣ್ಣ ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣಕ್ಕೆ ಒಂದು ಲಕ್ಷ ರೂ.ದೇಣಿಗೆ ಸಮರ್ಪಣೆ ಮಾಡುವ ವಾಗ್ದಾನ ಮಾಡಿ ಶೀಘ್ರ ರಾಯಣ್ಣ ಮೂರ್ತಿ ಸ್ಥಾಪನೆಯಾಗಲಿ ಎಂದು ಮನವಿ ಮಾಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ,ನಿರ್ದೇಶಕ ಟಿ.ನಾಗಪ್ಪ,ಶಿವಪ್ಪ, ಕೆ.ನಾಗೇಶ, ಬಕ್ಕಂಡಿ ಬಸವರಾಜ, ಯಮನೂರಪ್ಪ, ಪುಂಡಗೌಡ, ಬಿ.ವೆಂಕಟೇಶ, ಶ್ರೀಧರ ಡ್ಯಾಗಿ,ಅಡ್ಡಿ ಶ್ಯಾಮಣ್ಣ ಸೇರಿ ಅನೇಕರಿದ್ದರು.