ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಉಚಿತ ಆ್ಯಪ್
ವಿದ್ಯಾನಿಕೇತನ ವಿದ್ಯಾಸಂಸ್ಥೆಯ ವಿನೂತನ ಕಾರ್ಯ! ಕನ್ನಡ ಮಾಧ್ಯಮ ಮಕ್ಕಳಿಗೆ ಉಪಯುಕ್ತ
Team Udayavani, Feb 26, 2021, 4:43 PM IST
ಗಂಗಾವತಿ: ಜಿಲ್ಲೆಯ 10ನೇ ತರಗತಿ ಮಕ್ಕಳ ಫಲಿತಾಂಶ ಹೆಚ್ಚಿಸಲು ವಿದ್ಯಾನಿಕೇತನ ವಿದ್ಯಾಸಂಸ್ಥೆ ಆನ್‌ಲೈನ್ ಪ್ಲೇ ಸ್ಟೋರ್ ನಲ್ಲಿ 10ನೇ ತರಗತಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಮಕ್ಕಳಿಗೆ ಅನುಕೂಲವಾಗಲು ಸಿದ್ಧಪಡಿಸಿದ ನೋಟ್ಸ್ ಟಿಪ್ಪಣಿ ಮತ್ತು ವಿಡಿಯೋ ಅಪ್‌ಲೋಡ್ ಮಾಡಲಾಗಿದೆ. ವಿದ್ಯಾರ್ಥಿಗಳು ಲಾಗಿನ್ ಆಗುವ ಮೂಲಕ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಅವರು ಮೊಬೈಲ್‌ನಲ್ಲಿ ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಅಭಿವೃದ್ಧಿಪಡಿಸಿದ ಆ್ಯಪ್‌ಗೆ ಡೌನ್‌ಲೋಡ್ ಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ವಿದ್ಯಾನಿಕೇತನ ಸಂಸ್ಥೆ ಸಿದ್ಧಪಡಿಸಿದ ಆನ್‌ಲೈನ್ ಪಾಠಗಳು ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ಉಪಯೋಗವಾಗಲಿದ್ದು, ತಜ್ಞ ಬೋಧಕರ ಜತೆ ಮಾಹಿತಿ ವಿನಿಮಯದ ಮೂಲಕ ಪಠ್ಯಗಳನ್ನು ಶಿಕ್ಷಣ ಇಲಾಖೆ ಮಾರ್ಗಸೂಚಿ ಅನ್ವಯ ಸಿದ್ಧಪಡಿಸಲಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳು, ಪಾಲಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ವಿದ್ಯಾನಿಕೇತನ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಸಂಸ್ಥೆ ನಿರ್ದೇಶಕ ಎಚ್.ಕೆ. ಚಂದ್ರಮೋಹನ್, ಎನ್.ಆರ್ ಫೌಂಡೇಶನ್ ಅಧ್ಯಕ್ಷ ಎನ್.ಆರ್. ಶ್ರೀನಿವಾಸರಾವ್ ಸೇರಿ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೆಲಾ: ಮಣ್ಣಿನ ರಸ್ತೆಗೆ ಇನ್ನೂ ಒದಗಿ ಬರದ ಡಾಮರು ಭಾಗ್ಯ
ದೊಡ್ಡಣಗುಡ್ಡೆ ಶಾಲೆ ವಿದ್ಯಾರ್ಥಿಗಳಿಗೆ ಸಾವಿರ ರೂ. ಬಾಂಡ್
ಉಪಚುನಾವಣೆ : ಮೂರು ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ : ಮತಯಂತ್ರ ಸೇರಿದ ಭವಿಷ್ಯ
ಪಾಲಿಕೆ ನಿರ್ಲಕ್ಷವೇ ಅತ್ತಿಗೆ ಸಾವಿಗೆ ಕಾರಣ : ಹಿರಿಯ ನಟ ರಮೇಶ್ ಪಂಡಿತ್ ಆರೋಪ
ಐದು ವರ್ಷದ ಹಿಂದೆ ನಡೆದ ಮನೆಗಳ್ಳತನ ಪ್ರಕರಣ ಭೇದಿಸಿದ ಬ್ಯಾಟರಾಯನಪುರ ಪೊಲೀಸರು