ವಿರುಪಾಪೂರ ಗಡ್ಡೆಯಲ್ಲಿ ಸಿಲುಕಿದ ವಿದೇಶಿಗರು ಮತ್ತು ಸ್ಥಳಿಯರು

Team Udayavani, Aug 11, 2019, 8:58 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕೊಪ್ಪಳ: ಹಂಪಿ ಸಮೀಪದ ಪ್ರವಾಸಿ ತಾಣ ವಿರುಪಾಪುರ ಗಡ್ಡೆಯಲ್ಲಿ ವಿದೇಶಿಗರು ಸೇರಿದಂತೆ 350ಕ್ಕೂ ಹೆಚ್ಚು ಜನ ಸಿಲುಕಿದ್ದಾರೆ.
ವಿರುಪಾಪುರ ಗಡ್ಡೆಯು ಪ್ರವಾಸಿ ತಾಣವಾಗಿದ್ದು, ಹಂಪಿ, ಅಂಜಿನಾದ್ರಿ ವೀಕ್ಷಣೆಗೆ ಬರುವ ವಿದೇಶಿಗರು ಹೆಚ್ಚಾಗಿ ವಿರುಪಾಪುರ ಗಡ್ಡೆಯಲ್ಲೇ ನೆಲೆಸಿ ಪ್ರವಾಸ ಮುಗಿಸಿ ತೆರಳುತ್ತಾರೆ.

ವಿರುಪಾಪುರ ಗಡ್ಡೆಯು ತುಂಗಭದ್ರಾ ನದಿ ತಟದಲ್ಲಿ ಇದೆ.‌ ಈ ಬಾರಿ ಜಲಾಶಯದಿಂದ ನೀರನ್ನು ನದಿ ಪಾತ್ರಗಳಿಗೆ ಹೆಚ್ಚಿನ ಮಟ್ಟದಲ್ಲಿ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ವಿರುಪಾಪುರ ಗಡ್ಡೆಯು ನಡುಗಡ್ಡೆಯಾಗಿದೆ. ಮಾತ್ರವಲ್ಲದೇ ನದಿಯ ನೀರು ರಭಸವಾಗಿ ಹರಿಯುತ್ತಿದೆ. ವಿರುಪಾಪುರ ಗಡ್ಡೆಯಲ್ಲಿ ಹೋಟಲ್ ಮಾಲಿಕರು ಸೇರಿದಂತೆ ಸ್ಥಳೀಯ ನಿವಾಸಿಗಳು ನೆಲೆಸಿದ್ದಾರೆ.

20ಕ್ಕೂ ಹೆಚ್ಚು ವಿದೇಶಿಗರು ಗಡ್ಡೆಯಲ್ಲಿ ಸಿಲುಕಿದ್ದಾರೆ.‌ ಕೊಪ್ಪಳ ಜಿಲ್ಲಾಡಳಿತ 64 ಜನರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆ ತಂದಿದೆ. ಇನ್ನೂ ಗಡ್ಡೆಯಲ್ಲಿ 350ಕ್ಕೂ ಹೆಚ್ಚು ಜನರಿರುವ ಕುರಿತು ಮಾಹಿತಿ ಇದ್ದು, ಅವರ ರಕ್ಷಣೆಗೆ ಧಾರವಾಡದಿಂದ NDRF ತಂಡ ಆಗಮಿಸಲಿದೆ.‌ ರಕ್ಷಣಾ ತಂಡ ಬಂದ ಬಳಿಕ ಉಳಿದವರನ್ನು ರಕ್ಷಣೆ ಮಾಡುವುದಾಗಿ ಎಸಿ ಸಿ.ಡಿ ಗೀತಾ ಅವರು ‘ಉದಯವಾಣಿ’ಗೆ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ