ಬಹುತೇಕ ಆರ್‌ಒ ಪ್ಲಾಂಟ್ ಸ್ಥಗಿತ
ಅಶುದ್ಧ ನೀರು ಕುಡಿದು ಜನರಿಗೆ ಆರೋಗ್ಯ ಸಮಸ್ಯೆ! ಕೆಲವೆಡೆ ಯಂತ್ರೋಪಕರಣಗಳ ಕಳ್ಳತನ
Team Udayavani, May 9, 2021, 4:19 PM IST
ವರದಿ: ಕೆ. ನಿಂಗಜ್ಜ
ಗಂಗಾವತಿ: ಜನರು ಬೋರ್‌ವೆಲ್ ನೀರು ಕುಡಿದು ವಿವಿಧ ಕಾಯಿಲೆಗಳಿಂದ ಬಳಲುವುದನ್ನು ತಪ್ಪಿಸಲು ಸರಕಾರ ಪ್ರತಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆ. ಇವುಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ತಾಲೂಕಿನ 82 ಆರ್‌ಒ ಪ್ಲಾಂಟ್‌ಗಳ ಪೈಕಿ 40ಕ್ಕೂ ಅಧಿಕ ಪ್ಲಾಂಟ್‌ಗಳ ಕಾರ್ಯ ಸ್ಥಗಿತವಾಗಿದೆ. ಇದರಿಂದ ಜನ ಪುನಃ ಬೋರ್‌ವೆಲ್ ನೀರು ಕುಡಿಯುತ್ತಿರುವುದರಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಸರಕಾರಿ ದಾಖಲೆಗಳಲ್ಲಿ ಮಾತ್ರ ಎಲ್ಲ ಆರ್‌ಒ ಪ್ಲಾಂಟ್ ಗಳು ಕಾರ್ಯ ನಿರ್ವಹಿಸುತ್ತಿದ್ದು, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಪ್ರತಿ ವರ್ಷ ನಿರ್ವಹಣೆಗಾಗಿ ಲಕ್ಷಾಂತರ ರೂ. ಸಂಬಂಧಪಟ್ಟ ಏಜೆನ್ಸಿಯವರಿಗೆ ಪಾವತಿ ಮಾಡಲಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ. ತಾಲೂಕಿನ 18 ಗ್ರಾಪಂ ವ್ಯಾಪ್ತಿಯಲ್ಲಿ 82 ಆರ್‌ಒ ಪ್ಲಾಂಟ್‌ಗಳಿದ್ದು, ಸರಕಾರಿ ದಾಖಲೆಯಲ್ಲಿ ಕೇವಲ 12 ಮಾತ್ರ ಕಾರ್ಯ ನಿರ್ವಹಿಸುತ್ತಿಲ್ಲ. ಉಳಿದಂತೆ 70 ಆರ್‌ಒ ಪ್ಲಾಂಟ್‌ಗಳು ಕಾರ್ಯ ಮಾಡುತ್ತಿವೆ ಎಂದು ತಿಳಿಸಲಾಗಿದೆ.
ರಿಯಾಲಿಟಿ ಚೆಕ್ ಮಾಡಿದ ಸಂದರ್ಭದಲ್ಲಿ ಸಾಣಾಪೂರ ಗ್ರಾಪಂನಲ್ಲಿ ಕರಿಯಮ್ಮಗಡ್ಡಿ, ಮುದುಕಪ್ಪನ ಕ್ಯಾಂಪ್, ಆನೆಗೊಂದಿಯಲ್ಲಿ 6ರ ಪೈಕಿ 3, ಮಲ್ಲಾಪುರ 5ರ ಪೈಕಿ 2, ಸಂಗಾಪುರದಲ್ಲಿ 4, ಚಿಕ್ಕಜಂತಗಲ್ 2, ಢಣಾಪುರ 1, ಮರಳಿ 1, ಹೋಸ್ಕೇರಾ 1, ಶ್ರೀರಾಮನಗರ 2, ವಡ್ಡರಹಟ್ಟಿ 1, ಹೇರೂರು 3, ಹಣವಾಳ 2, ಕೇಸರಹಟ್ಟಿ 3, ಬಸಾಪಟ್ಟಣ 1, ಚಿಕ್ಕಬೆಣಕಲ್ 2, ಆಗೋಲಿ 1 ಹಾಗೂ ವೆಂಕಟಗಿ 1 ಆರ್‌ಒ ಪ್ಲಾಂಟ್ ಕಾರ್ಯ ನಿರ್ವಹಿಸುತ್ತಿಲ್ಲ. ಬೇಸಿಗೆ ಇದೀಗ ಆರಂಭವಾಗಿದೆ.
ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು. ಆರ್‌ಒ ಪ್ಲಾಂಟಿನ ನಿರ್ವಹಣೆಯನ್ನು ಗ್ರಾಪಂಗಳು ಸರಿಯಾಗಿ ಮಾಡಬೇಕು. ವಾರ್ಷಿಕ ನಿರ್ವಹಣೆ ಮಾಡುವ ಹಣವನ್ನು ಸರಕಾರ ಗ್ರಾಪಂಗಳಿಗೆ ಕೊಡಬೇಕು. ಏಜೆನ್ಸಿಗೆ ಹಣ ಕೊಡುವುದರಿಂದ ಪ್ರಯೋಜನವಾಗುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಶುದ್ಧ ಕುಡಿಯುವ ನೀರಿನ ಘಟಕದ ಯಂತ್ರೋಪಕರಣಗಳ ಮೇಲ್ದರ್ಜೆಗೇರಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆಗೆ ಸಿದ್ಧತೆ: ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಧಿವಿಧಾನ
ನೇತ್ರಾವತಿ ನೀರುಪಾಲಾದ ಯುವಕನ ಶವ ಕೋಟೆಪುರದಲ್ಲಿ ಪತ್ತೆ
ಕರಾವಳಿಯಲ್ಲಿ ಭಾರೀ ಮಳೆ: ಕಾಸರಗೋಡಿನ ಮಧೂರು ದೇಗುಲ ಜಲಾವೃತ
ಚಂದ್ರಶೇಖರ್ ಗುರೂಜಿ ಹತ್ಯೆ: ವಿಚಾರಣೆಯಲ್ಲಿ ಹಂತಕರು ಹೇಳಿದ್ದೇನು!
ಚಂದ್ರಶೇಖರ ಗುರೂಜಿ ಹತ್ಯೆ: ಐದು ದಿನ ಹಿಂದೆಯೇ ಫೇಸ್ಬುಕ್ನಲ್ಲಿ ಸುಳಿವು ಕೊಟ್ಟಿದ್ದ ಆರೋಪಿ?
MUST WATCH
ಹೊಸ ಸೇರ್ಪಡೆ
ಮೊದಲ ಬಾರಿಗೆ ಹಿಂದೂ ಸಂಪ್ರದಾಯ ಮೂಲಕ ದಾಂಪತ್ಯ ಜೀವನಕ್ಕೆ ಗೇ ಕಪಲ್ಸ್!
ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆಗೆ ಸಿದ್ಧತೆ: ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಧಿವಿಧಾನ
ಹೌದು. ನಾನು ಲಕ್ಕಿಡಿಪ್ ಸಿಎಂ,ಏನೀಗ?: ಬಿಜೆಪಿ,ಕುಟುಂಬ ರಾಜಕಾರಣ ವಿರುದ್ಧ HDK ಸರಣಿ ಟ್ವೀಟ್
‘ಅಘಾಡಿ ಸರ್ಕಾರದಲ್ಲಿ ದಾವೂದ್, ಹಿಂದುತ್ವದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ’
ನೇತ್ರಾವತಿ ನೀರುಪಾಲಾದ ಯುವಕನ ಶವ ಕೋಟೆಪುರದಲ್ಲಿ ಪತ್ತೆ