ಕೊನೆಯಾಗಲಿ ಇಪ್ಪತ್ತರ ಆಪತ್ತು

ನೀರಾವರಿ ಹೆಚ್ಚಾಗಲಿ-ರೈತರ ಬದುಕು ಸಮೃದ್ಧಿಯಾಗಲಿನನೆಗುದಿಗೆ ಬಿದ್ದ ಕಾಮಗಾರಿ ಪೂರ್ಣಗೊಳ್ಳಲಿ

Team Udayavani, Jan 1, 2021, 7:35 PM IST

ಕೊನೆಯಾಗಲಿ ಇಪ್ಪತ್ತರ ಆಪತ್ತು

ಕೊಪ್ಪಳ: ಜಿಲ್ಲೆಯ ತುಂಗಭದ್ರಾ ತಟದಲ್ಲಿ ಕಂಡುಬಂದ 2020ರ ಕೊನೆಯ ಸೂರ್ಯಾಸ್ತ.

ಕೊಪ್ಪಳ: ಕೋವಿಡ್ ಕಾರ್ಮೋಡದ 2020ರ ವರ್ಷದಲ್ಲಿ ನೂರೆಂಟು ಸಂಕಷ್ಟ ಎದುರಿಸಿ 2021ರ ಹೊಸ ವರ್ಷಕ್ಕೆ ನೂರೆಂಟು ಕನಸುಗಳನ್ನು ಹೊತ್ತು ಜಿಲ್ಲೆಯ ಜನತೆ ಕಾಲಿಡುತ್ತಿದ್ದಾರೆ.

ಹೊಸ ವರ್ಷದಲ್ಲಿ ಸರ್ವರ ಬಾಳು ಪ್ರಜ್ವಲಿಸಲಿ. ಕೃಷಿಯು ಬೆಳೆಯಲಿ, ನೀರಾವರಿ ಹೆಚ್ಚಾಗಲಿ, ನೆನೆಗುದಿಗೆ ಬಿದ್ದ ಕಾಮಗಾರಿಯ ಪೂರ್ಣಗೊಳಿಸಿ ಜಿಲ್ಲೆಯ ಜನಪ್ರತಿನಿಧಿಗಳು ಸರ್ವ ರಂಗದ ಅಭಿವೃದ್ಧಿಗೆ ಆದ್ಯತೆ ನೀಡಲಿ ಎನ್ನುತ್ತಿದೆ ಜಿಲ್ಲೆಯ ಜನ ಸಮೂಹ.

ಕೊಪ್ಪಳ ಜಿಲ್ಲೆಯು ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಇದಕ್ಕೆ ಇನ್ನಷ್ಟು ವೇಬೇಕಾಗಿದೆ. 2020ರಲ್ಲಿ ಅಭಿವೃದ್ಧಿಯ ಜಪ ಮಾಡುತ್ತಿರುವಾಗಲೇ ಬರೊಬ್ಬರಿ ಎಂಟು ತಿಂಗಳುಕಾಲ ಕೋವಿಡ್ ಕರಿಛಾಯೆ ಜನರ ಜೀವನದಲ್ಲಿಆವರಿಸಿ ಜನರ ಬದುಕನ್ನು ಅತಂತ್ರಗೊಳಿಸಿತು. ಕೋವಿಡ್ ಭಯದಿಂದ ಬದುಕಿನ ಪಾಠ ಕಲಿತ ಜನತೆ ಕಷ್ಟದ ದಿನಗಳನ್ನು ಮರೆತು ಹೊಸ ಬದುಕಿನ ಕಡೆಗೆ ಹೆಜ್ಜೆಯನ್ನಿಡುತ್ತಿದ್ದಾರೆ. 2021ರ ವರ್ಷ ನಮ್ಮ ಬದುಕಿಗೆ ದಾರಿದೀಪವಾಗಲಿ. ಕೈತುಂಬ ದುಡಿಮೆ ಸಿಗಲಿ. ಹೊಟ್ಟೆ ತುಂಬ ಊಟ ಸಿಗಲಿ. ಸಮೃದ್ಧ ಮಳೆಯಾಗಲಿ. ರೈತ ಸಮೂಹ ನೆಮ್ಮದಿಯಿಂದಜೀವನ ನಡೆಸಲಿ. ಬೆಳೆಯು ಸಮೃದ್ಧಿಯಾಗಿ ಬರಲಿ. ಅದಕ್ಕೆ ತಕ್ಕಂತೆ ಬೆಲೆ ಸಿಗಲಿ ಎಂದೆನ್ನುತ್ತಿದೆ ಜನ ಸಮೂಹ.

ಜಿಲ್ಲೆಯು ಬರಪೀಡಿತ ಎಂಬ ಹಣೆಪಟ್ಟಿ ಹೊತ್ತಿದೆ. ಪಕ್ಕದಲ್ಲೇ ತುಂಗಭದ್ರೆ ಇದ್ದರೂ ಕುಡಿಯುವ ನೀರಿಗೆ ಜನ ಪರಿತಪಿಸುವಂತ ಸನ್ನಿವೇಶವು ಸೃಷ್ಟಿಯಾಗಿವೆ. ಈ ಮಧ್ಯೆ ಕೆರೆಗಳಿಗೆನೀರು ತುಂಬಿಸಿ ಕೃಷಿ ಭೂಮಿಗೆ ನೀರಾವರಿ ಹರಿಸುವ ಕೆಲಸ ಮಾಡಲಿ. ಜಿಲ್ಲೆಯಲ್ಲಿ ಹಲವು ನೀರಾವರಿ ಯೋಜನೆಗಳು ದಶಕಗಳಿಂದ ನನೆಗುದಿಗೆ ಬಿದ್ದಿವೆ. ಅದರಲ್ಲೂ ಕೃಷ್ಣಾ ಬಿ ಸ್ಕೀಂ, ಸಿಂಗಟಲೂರು ಏತ ನೀರಾವರಿ ಯೋಜನೆಸೇರಿದಂತೆ ಸಣ್ಣ ಸಣ್ಣ ಏತ ನೀರಾವರಿ ಯೋಜನೆಗಳಿಗೆ ವೇಗ ದೊರೆತರೆ ಮಾತ್ರ ರೈತರಜಮೀನಿಗೆ ನೀರು ಹರಿದು ಬರಲಿದೆ. ಇದಲ್ಲದೇ ನೀರಾವರಿಯ ಜೊತೆಗೆ ಜಿಲ್ಲಾದ್ಯಂತ ಇರುವ ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಕಾಯಕವೂ ನಡೆಯಲಿದೆ ಎಂದೆನ್ನುತ್ತಿದೆ ಜನ ಸಮೂಹ. ಇನ್ನೂ ಜಿಲ್ಲೆಯಲ್ಲಿ ಕುಂಟುತ್ತ ಸಾಗಿರುವ ನೂರಾರು ಕಾಮಗಾರಿಗಳಿಗೆ ವೇಗ ಸಿಗಬೇಕಿದೆ. ಕೊಪ್ಪಳದ ಯುಜಿಡಿ ಕಾಮಗಾರಿ, ಸ್ನಾತಕೋತ್ತರಅಧ್ಯಯನ ಕೇಂದ್ರ, ತಳಕಲ್‌ ಸರ್ಕಾರಿ ಇಂಜನಿಯರಿಂಗ್‌ ಕಾಲೇಜು ಸಮಸ್ಯೆಗಳು ಈಡೇರಬೇಖೀದೆ. ಸಾವಿರಾರು ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಲ್ಲಿರುವಆಟಿಕೆ ಸಾಮಗ್ರಿ ಘಟಕದ ಕ್ಲಸ್ಟರ್‌ ಇದೇ ವರ್ಷದಲ್ಲಿ ಕಾರ್ಯಾರಂಭ ಮಾಡಿ ಜನರಿಗೆಉದ್ಯೋಗ ದೊರೆಯುವಂತಾಗಲಿ ಎಂದೆನ್ನುತ್ತಿದೆ ಜನ ಸಮೂಹ.

ಜಿಲ್ಲೆಯ ಆರೋಗ್ಯ ಕ್ಷೇತ್ರ ಇನ್ನಷ್ಟು ಸುಧಾರಣೆ ಕಾಣಲಿ. ಜಿಲ್ಲಾಸ್ಪತ್ರೆ ದೊಡ್ಡದಾಗಿದ್ದರೂವೈದ್ಯರ ಸಂಖ್ಯೆಯು ತುಂಬ ಕಡಿಮೆಯಿದೆ. ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಕೂಗು ಸಾಮಾನ್ಯವಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಿ. ಇದರೊಟ್ಟಿಗೆ ಜಿಲ್ಲೆಯ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಗಳನ್ನು ಉಳಿಸಿ,ಬೆಳೆಸುವ ಕೆಲಸವಾಗಲಿ. ಪ್ರವಾಸೋದ್ಯಮಕ್ಕೆಆದ್ಯತೆ ಸಿಗಲಿ. ರೈಲ್ವೆ ವಲಯದಲ್ಲಿ ಮಹತ್ತರ ಬದಲಾವಣೆಗಳಿಗಾಗಿ ಕಾಯುತ್ತಿದೆ ಕೊಪ್ಪಳ ಜಿಲ್ಲೆ.

ವಿದ್ಯುತ್‌ ಚಾಲಿತ ರೈಲುಗಳು ಸಂಚಾರ ಆರಂಭಿಸಲಿ. ರೈಲ್ವೆ ನಿಲ್ದಾಣಗಳು ಉನ್ನತೀಕರಿಸುವ ಕೆಲಸವಾಗಲಿ. ಶಿಕ್ಷಣಸಂಸ್ಥೆಗಳು ಹೆಚ್ಚು ಹೆಚ್ಚು ಬೆಳೆಯಲಿ. ಸರ್ಕಾರಿಶಾಲೆಗಳೂ ಉಳಿಯಲಿ. ಬಡ ಮಕ್ಕಳ ಜ್ಞಾನ ದೇಗುಲಕ್ಕೆ ಬೇಕಾದ ಗುರುಗಳ ನೇಮಕವೂವೇಗದ ಗತಿಯಲ್ಲಿ ನಡೆದು, ಶೈಕ್ಷಣಿಕವಾಗಿ ದೊಡ್ಡ ಹೆಜ್ಜೆಯನ್ನಿಡಲಿ. 2021ರಲ್ಲಿ ಈ ಎಲ್ಲಬೆಳವಣಿಗೆಗಳು ಕಂಡು ಜಿಲ್ಲೆಯ ಜನರ ಬದುಕು ಹಸನಾಗಲಿ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.