ಭಾರಿ ಮಳೆ: ತುಂಬಿದ ಕುಷ್ಟಗಿ ನಿಡಶೇಷಿ ಕೆರೆ

Team Udayavani, Oct 6, 2019, 2:34 PM IST

ಕೊಪ್ಪಳ: ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕುಷ್ಟಗಿ ತಾಲೂಕಿನ ನಿಡಶೇಷಿ ಕೆರೆಗೆ ಒಳ ಹರಿವು ಹೆಚ್ಚಾಗಿದೆ. ಮಳೆಯ ಕೊರತೆಯಿಂದ ಬಿಕೋ ಎನ್ನುತ್ತಿದ್ದ ಕೆರೆಗೆ ನೀರು ಬರುತ್ತಿದ್ದು, ಜನರಲ್ಲಿ ಸಂತಸ ಮೂಡಿದೆ.

ಯಲಬುರ್ಗಾ ತಾಲೂಕಿನ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗಿರುವ ಕಾರಣ, ಹಿರೆಬನ್ನಿಗೋಳ, ಯಲಬುರ್ತಿ ಮಾರ್ಗವಾಗಿ ಹಳ್ಳ ನಿಡಶೇಷಿ ಕೆರೆ ಸೇರುತ್ತಿದ್ದು ಕೆರೆ ಪಾತ್ರದಲ್ಲಿ ನೀರು ಸಂಗ್ರಹವಾಗುತ್ತಿದೆ.

ಕಳೆದ ಫೆಬ್ರವರಿ ತಿಂಗಳಿನಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ  ನೀಡಶೇಷಿ ಕೆರೆಯ ಹೂಳೆತ್ತುವ ಮೂಲಕ ಕೊಪ್ಪಳ ಗವಿಶ್ರೀಗಳು ಚಾಲನೆ ನೀಡಿದ್ದರು. 77 ದಿನಗಳವರೆಗೆ ಕೆಲಸ ನಡೆದಿತ್ತು.

ಬರಿದಾದ ಕೆರೆಗೆ ವರುಣನ ಕೃಪೆಯಿಂದ ನೀರು ತುಂಬಿಕೊಳ್ಳುತ್ತಿದೆ. ಕೆರೆಗೆ ನೀರಿನ ಹರಿವು ನೋಡಲು ತಂಡೋಪ ತಂಡವಾಗಿ ಜನ ಧಾವಿಸುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ