ಕೊಪ್ಪಳದ ವಿವಿಧೆಡೆ ‘ನೋ ಸಿಎಎ’ ಗೋಡೆಬರಹ

Team Udayavani, Jan 18, 2020, 4:22 PM IST

ಕೊಪ್ಪಳ: ಕೇಂದ್ರ ಸರ್ಕಾರ ಜಾರಿ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ಕೊಪ್ಪಳದಲ್ಲಿ ವಿರೋಧದ ಧ್ವನಿ ಕಾಣಿಸಿಕೊಂಡಿದೆ. ಅನಾಮಧೇಯ ವ್ಯಕ್ತಿಗಳು ಸರ್ಕಾರಿ ಕಾಲೇಜಿನ ಗೋಡೆ ಸೇರಿದಂತೆ ರೈಲ್ವೇ ಮೇಲ್ಸೆತುವೆಯ ಗೋಡೆ ಮೇಲೆ ನೋ ಸಿಎಎ, ನೋ ಎನ್‌ಆರ್‌ಸಿ ಹಾಗೂ ನೋ ಎನ್‌ಆರ್‌ಪಿ ಎಂದು ಬರೆದಿದ್ದಾರೆ.

ಆದರೆ ಯಾರು ಬರೆದಿದ್ದಾರೆ ಎನ್ನುವ ಮಾಹಿತಿ ಗೊತ್ತಾಗಿಲ್ಲ. ಉದ್ದೇಶ ಪೂರ್ವಕವೇ ಯಾರೋ ಕಿಡಿಗೇಡಿಗಳಿಂದಲೇ ಈ ಕೃತ್ಯ ಎಸಗಲಾಗಿದೆ ಎನ್ನುವ ಮಾಹಿತಿಯು ಹರಿದಾಡುತ್ತಿದೆ.

ನಗರದ ಸರ್ಕಾರಿ ಪದವಿ ಕಾಲೇಜಿನ ಗೋಡೆಯ ಮೇಲೆ ವಾರದ ಹಿಂದೆಯೇ ಇದನ್ನು ಕಪ್ಪು ಹಾಗೂ ಕೆಂಪು ಬಣ್ಣದಿಂದ ಬರೆಯಲಾಗಿದ್ದರೂ ಇದನ್ನು ಯಾರೂ ಅಷ್ಟಾಗಿ ಗಮನಿಸಿರಲಿಲ್ಲ. ಶನಿವಾರ ಕಾಲೇಜಿನ ವಿದ್ಯಾರ್ಥಿಗಳು ಇದನ್ನು ಗಮನಿಸಿದ್ದು, ಎಬಿವಿಪಿ ಮುಖಂಡರ ಗಮನಕ್ಕೆ ತಂದಿದ್ದಾರೆ.

ಎಬಿವಿಪಿ ಮುಖಂಡರು ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ತಂದಿದ್ದು, ಅವರು ಮಾತ್ರ ಯಾರು ಬರೆದಿದ್ದಾರೋ ನಮಗೆ ಗೊತ್ತಿಲ್ಲವೆಂದು ಸುಮ್ಮನಾಗಿದ್ದಾರೆ. ಶಾಂತಿಗೆ ಹೆಸರಾಗಿದ್ದ ಕೊಪ್ಪಳದಲ್ಲಿಯೂ ನೋ ಸಿಎಎ ಹಾಗೂ ಎನ್‌ಆರ್‌ಸಿ ಗೋಡೆಬರಹ ಕಾಣಿಸಿಕೊಂಡು ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ