ಸನಾತನ ಮೌಲ್ಯಗಳನ್ನು ಮಕ್ಕಳ ತಲೆಯಲ್ಲಿ ತುರುಕುವುದು ಅಪಾಯಕಾರಿ: ಕುಂ.ವೀರಭದ್ರಪ್ಪ

Team Udayavani, Jun 12, 2022, 6:52 PM IST

ಸನಾತನ ಮೌಲ್ಯಗಳನ್ನು ಮಕ್ಕಳ ತಲೆಯಲ್ಲಿ ತುರುಕುವುದು ಅಪಾಯಕಾರಿ: ಕುಂ.ವೀರಭದ್ರಪ್ಪ

ಗಂಗಾವತಿ: ಸನಾತನಿಗಳ ಮೌಲ್ಯಗಳನ್ನು ಮಕ್ಕಳ ತಲೆಯಲ್ಲಿ ತುರುಕುವುದು ಅಪಾಯಕಾರಿಯಾಗಿದೆ. ಇತಿಹಾಸ ತಿರುಚುವ ಕೆಲಸವಾಗುತ್ತಿದೆ. ಪಠ್ಯರಚನಾ ಸಮಿತಿ ಅಧ್ಯಕ್ಷನಿಗೆ ಕನ್ನಡ ನಾಡಿನ ಇತಿಹಾಸ ಗೊತ್ತಿಲ್ಲ ಎಂದು ಸಾಹಿತಿ ಹಾಗೂ ಖ್ಯಾತ ಕಾದಂಬರಿಕಾರ ಕುಂ.ವೀರಭದ್ರಪ್ಪ ಹೇಳಿದರು.

ಅವರು ನಗರದ ಲಯನ್ಸ್ ಕ್ಲಬ್ ಭವನದಲ್ಲಿ ಶಿಕ್ಷಕ ಛತ್ರಪ್ಪ ತಂಬೂರಿ ಬರೆದ “ದೂರದಲ್ಲಿ ತೀರವಿದೆ” ಕವನ ಸಂಕಲ ಲೋಕಾರ್ಪಣೆ ಮಾಡಿ ಮಾತನಾಡಿದರು.

ಕನ್ನಡ ನಾಡು ಶಾಂತಿಯ  ಹೂದೋಟ. ಇಲ್ಲಿ ಅನೇಕ ಧರ್ಮ, ಜಾತಿ, ಭಾಷೆಯನ್ನಾಡುವ ಜನರಿದ್ದಾರೆ. ರಾಜ್ಯ ಸರಕಾರ ಇತಿಹಾಸ ಗೊತ್ತಿಲ್ಲ. ವ್ಯಕ್ತಿಗೆ ಪಠ್ಯ ರಚನಾ ಸಮಿತಿ ಅಧ್ಯಕ್ಷ ಸ್ಥಾನ ನೀಡಿ, ಮಹರ್ಷಿ ವಾಲ್ಮೀಕಿ, ಕನಕದಾಸ, ಕುವೆಂಪು, ಸಂಗೊಳ್ಳಿ ರಾಯಣ್ಣ ಸೇರಿ ಪ್ರಮುಖ ಖ್ಯಾತ ಕವಿಗಳು, ಇತಿಹಾಸಕಾರರನ್ನು ಅವಮಾನಿಸುವಂತೆ ಪಠ್ಯ ರಚನೆ ಮಾಡಲಾಗಿದೆ. ಮಕ್ಕಳ ತಲೆಯಲ್ಲಿ ವೈಚಾರಿಕತೆ ತುಂಬದೇ ಅಜ್ಞಾನ ಮೂಡನಂಬಿಕೆಗಳ ಸುತ್ತ ಪಠ್ಯ ರಚನೆ ಮಾಡಲಾಗಿದೆ. ರಾಜ್ಯದಲ್ಲಿ ಪಠ್ಯ ರಚನೆ ಕುರಿತು ಆಕ್ಷೇವಿದ್ದು ರಾಜ್ಯದಾದ್ಯಂತ ಹೋರಾಟಗಳು ನಿರಂತರವಾಗಿದ್ದು ನೂತನ ಪಠ್ಯ ಪುಸ್ತಕಗಳ ಕುರಿತು  ಸರಕಾರ ಸ್ಪಷ್ಟನೆ ನೀಡುವ ಮೊದಲೇ  ಪಠ್ಯಪುಸ್ತಕ ಮುದ್ರಿಸಿ  ಶಾಲೆಗಳಿಗೆ ಕಳಿಸಲಾಗುತ್ತಿದೆ. ಹೆದ್ದಾರಿಯ ಲೇಖಕರಾಗದೇ ಪಳಹಾದಿಯ ಬರಹಗಾರರಾಗಬೇಕು. ಸಾಮಾಜದಲ್ಲಿ ನಡೆಯುವ ಸಂಘಟನೆಗಳಿಗೆ ಸ್ಪಂದಿಸುವ ಗುಣ ಹೊಂದಿರಬೇಕು. ಲೇಖಕನಾದನು ಹೆದರದೇ ಪ್ರಶ್ನಿಸುವ ವ್ಯಕ್ತಿಯಾಗಬೇಕು. ಸುರಕ್ಷಿತ ವಲಯದಲ್ಲಿದ್ದು ಪ್ರಶಸ್ತಿಗಾಗಿ  ಬರವಣಿಗೆ ಕಾರ್ಯ ನಡೆಸಬಾರದು. ಆಳುವ ಸರಕಾರವನ್ನು ಪ್ರಶ್ನಿಸುವ ಲೇಖಕರಿಂದ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದರು.

ಇದನ್ನೂ ಓದಿ: ಬೆದರಿಕೆ ಕರೆ ಮತ್ತು ಪತ್ರಗಳಿಗೆ ಹೆದರುವುದಿಲ್ಲ:ಕುಂ.ವೀರಭದ್ರಪ್ಪ

ಮಾತೃ ಭಾಷೆಯಲ್ಲಿ ಮಕ್ಕಳನ್ನು ಓದಿಸಿದರೆ ಅವರಿಂದ ವಾತ್ಸಲ್ಯ ಹಾಗೂ ಗೌರವ ಪ್ರತಿಗಳು ಲಭಿಸುತ್ತವೆ. ಕಾನ್ವೆಂಟ್ ಶಾಲೆಯಲ್ಲಿ ಓದಿದವರಿಗೆ ಪ್ರೀತಿ ವಾತ್ಸಲ್ಯಗಳ ಕುರಿತು ಅರಿವು ಇರುವುದಿಲ್ಲ. ಕವಿ ಅಥವಾ ಲೇಖಕನಾಗುವವರು ಕನ್ನಡ ಸಾಹಿತಿದ ನಿರಂತರ ಅಧ್ಯಾಯನ ಮಾಡಬೇಕು. ರನ್ನ, ಪಂಪ, ರಾಘವಾಂಕ, ಹರಿಹರ ಸೇರಿ ಹಳೆಹನ್ನಡ ನಡುಗನ್ನಡ, ಹೊಸಗನ್ನಡ ಸೇರಿ ಆಧುನೀಕ ಸಾಹಿತ್ಯ ಕೃತಿಗಳ ಅಧ್ಯಾಯನದಿಂದ ಬರೆಯಲು ವಿಷಯಗಳು ದೊರಕುತ್ತದೆ. ನೈಜತೆಯಿಂದ ಬರಹ ಮಾಡಿ ಜನಸಾಮಾನ್ಯರನ್ನು ಮುಖ್ಯವಾಹಿನಿಗೆ ತರಬೇಕೆಂದರು.

ಕಾರ್ಯಕ್ರಮದಲ್ಲಿ ಶಾಸಕ ಪರಣ್ಣ ಮುನವಳ್ಳಿ, ಶಿಕ್ಷಕ ಹಾಗೂ ಲೇಖಕ ಛತ್ರಪ್ಪ ತಂಬೂರಿ, ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ, ತಾಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ, ಎನ್‌ಪಿಎಸ್ ಸಂಘಟನೆ ರಾಜ್ಯ ಕಾರ್ಯದರ್ಶಿ ನಾಗನಗೌಡ, ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಎಂ.ಅಭಿಷೇಕ, ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಇಂಗಳಗಿ, ಬಿಇಒ ಸೋಮಶೇಕರಗೌಡ, ಸಮನ್ವಾಯಾಧಿಕಾರಿ ವೀರಭದ್ರಪ್ಪ ಗೊಂಡಬಾಳ, ಸಾಹಿತಿ ಅಜಮೀರ್ ನಂದಾಪೂರ, ಬಂಜಾರ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣನಾಯಕ್, ಶಿಕ್ಷಕರ ಸಂಘದ ಅಧ್ಯಕ್ಷ ಚಾಂದ್ ಪಾಷಾ, ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಛಾಯಪ್ಪ ಸೇರಿ ಅನೇಕರಿದ್ದರು.

ಸಾಹಿತ್ಯ ಸೇವೆ ಪವಿತ್ರವಾದದ್ದು ಕನ್ನಡ ಭಾಷೆ ಮತ್ತು ಸಾಹಿತ್ಯ ದೇಶದಲ್ಲಿ ಅತ್ಯುತ್ತಮ ಸ್ಥಾನ ಪಡೆದಿದೆ. ಆದ್ದರಿಂದ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಬಂದಿವೆ. ನಾನು ಸಹ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಓದುವ ಸಂದರ್ಭದಲ್ಲಿ ಕುಂ.ವೀರಭದ್ರಪ್ಪ ಸೇರಿ ನಾಡಿನ ಪ್ರಮುಖ ಸಾಹಿತಿಗಳ ಕಥೆ ಕವನ ಕಾದಂಬರಿಗಳನ್ನು ಓದುವ ಹವ್ಯಾಸವಿತ್ತು. ಈಗ ಕಾರ್ಯಕ್ಷೇತ್ರ ಬದಲಾಗಿದ್ದರಿಂದ ಓದಲು ಆಗುತ್ತಿಲ್ಲ. ೭೮ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಯ ಎಲ್ಲರ ಜನತೆಯ ಸಹಕಾರದಿಂದ ಅತ್ಯುತ್ತಮವಾಗಿ ಮಾಡಿದ ಹೆಮ್ಮೆ ಇದೆ.-ಪರಣ್ಣ ಮುನವಳ್ಳಿ ಶಾಸಕರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.