Udayavni Special

ಬಂಪರ್‌ ಬೆಳೆ ಭತ್ತಕ್ಕೆ “ದರ ಕುಸಿತ’ದ ಹೊಡೆತ

| ಎಕರೆಗೆ ಬಂದಿದೆ 35-50 ಕ್ವಿಂಟಲ್‌ ಭತ್ತದ ಇಳುವರಿ | ಇನ್ನೂ ಆರಂಭವಾಗುತ್ತಿಲ್ಲ  ಭತ್ತ ಖರೀದಿ ಕೇಂದ್ರಗಳು

Team Udayavani, Apr 21, 2021, 7:30 PM IST

jgtutyut

ವರದಿ: ಕೆ.ನಿಂಗಜ್ಜ

ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಬೇಸಿಗೆ ಹಂಗಾಮಿನ ಭತ್ತದ ಬೆಳೆ ಬಂಪರ್‌ ಇಳುವರಿ ಬಂದಿದ್ದು, ಬೆಲೆ ಕುಸಿತದ ಪರಿಣಾಮ ರೈತರು ಕಂಗಾಲಾಗಿದ್ದಾರೆ. ಎರಡ್ಮೂರು ವರ್ಷಗಳಿಂದ ಭತ್ತದ ಬೆಳೆಗೆ ಹಲವು ರೋಗ ಬಂದಿದ್ದರಿಂದ ಇಳುವರಿಯೂ ಕಡಿಮೆ ಇತ್ತು. ಈ ಬಾರಿ ಭತ್ತವನ್ನು ಮುಂಗಡವಾಗಿ ನಾಟಿ ಮಾಡಿದ್ದರಿಂದ ರೈತರು ಉತ್ತಮ ಇಳುವರಿ ಪಡೆದಿದ್ದಾರೆ.

ಗಂಗಾವತಿ ಸೋನಾ, ಕಾವೇರಿ ಸೋನಾ, ಆರ್‌ಎನ್‌ಆರ್‌ ಹೀಗೆ ಹಲವು ತಳಿಯ ಭತ್ತ ನಾಟಿ ಮಾಡಿದ್ದ ರೈತರು ಈ ಬಾರಿ ಎಕರೆಗೆ 35-50 ಕ್ವಿಂಟಲ್‌ (75 ಕೆಜಿ ತೂಕ) ಭತ್ತ ಬೆಳೆದಿದ್ದಾರೆ. ಆರಂಭದಲ್ಲಿ ಭತ್ತಕ್ಕೆ ಕಂದು ಜಿಗಿ ರೋಗ, ತೆನೆ ಉದ್ದಗೆ ಬರುವ ರೋಗ ಸೇರಿ ಹಲವು ರೋಗಗಳು ಬಂದು ರೈತರು ಆತಂಕಗೊಂಡಿದ್ದರು. ಆದರೆ ರೈತರು ಕೃಷಿ ಇಲಾಖೆ, ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರದ ಅಧಿ ಕಾರಿಗಳು ಕೃಷಿ ವಿಜ್ಞಾನಿಗಳ ಸಲಹೆ ಮೇರೆಗೆ ಹಲವು ರೋಗ ತಡೆಯುವ ಕ್ರಿಮಿನಾಶಕ ಸಿಂಪರಣೆ ಮತ್ತು ನೀರು ಹರಿಸುವ ವಿಧಾನ ಬದಲಿಸಿದ್ದರಿಂದ ಉತ್ತಮ ಇಳುವರಿ ಬಂದಿದೆ. ಈಗಾಗಲೇ ಆನೆಗೊಂದಿ, ಬಸಾಪಟ್ಟಣ, ಹೇರೂರು, ಢಣಾಪೂರ ಸೇರಿ ಇತರೆ ಭಾಗದಲ್ಲಿ ಭತ್ತದ ಕಟಾವು ಕಾರ್ಯ ಭರದಿಂದ ನಡೆಯುತ್ತಿದೆ.

ತಡವಾಗಿ ನಾಟಿ ಮಾಡಿದ ಭತ್ತದ ಬೆಳೆ ಇನ್ನೂ 20 ದಿನಗಳ ನಂತರ ಕಟಾವಿಗೆ ಬರುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್‌(75 ಕೆಜಿ ತೂಕ) ಭತ್ತದ ಚೀಲಕ್ಕೆ 1290-1350 ರೂ.ಗಳಿದ್ದು ಭತ್ತ ಬೆಳೆಯಲು ಖರ್ಚು ಮಾಡಿದ ಹಣವೂ ವಾಪಸ್‌ ಬರಲ್ಲ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಸೇರಿ ರಾಜ್ಯದ ವಿವಿಧೆಡೆಯಿಂದ 20 ಲಕ್ಷ ಟನ್‌ ಭತ್ತ ಖರೀದಿಸಿ ಸ್ಥಳೀಯವಾಗಿ ಮಿಲ್ಲಿಂಗ್‌ ಮಾಡಿಸಿ ಅಕ್ಕಿಯನ್ನು ಅನ್ನಭಾಗ್ಯ ಸೇರಿ ಸರಕಾರದ ಹಾಸ್ಟೆಲ್‌-ದಾಸೋಹ ಯೋಜನೆಗೆ ಪೂರೈಸಲು ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲಾ ಧಿಕಾರಿಗಳು ಭತ್ತ ಖರೀದಿ ಕೇಂದ್ರ ಆರಂಭಿಸುವ ಪ್ರಕ್ರಿಯೆ ಆರಂಭ ಮಾಡಿದ್ದಾರೆ. ಭತ್ತ ಖರೀದಿ ಕೇಂದ್ರ ಬೇಗ ಆರಂಭವಾದರೆ ಅನುಕೂಲಸ್ಥ ರೈತರು ಭತ್ತ ಮಾರಲು ಸಾಧ್ಯವಾಗುತ್ತದೆ. ಸ್ವಾಭಾವಿಕವಾಗಿ ಮಾರುಕಟ್ಟೆಯಲ್ಲಿ ಸರಕಾರ ಭತ್ತ ಖರೀದಿ ಆರಂಭಿಸಿದರೆ ಇತರೆ ಭತ್ತ ಖರೀದಿದಾರರು ಸಹ ರೈತರಿಗೆ ಉತ್ತಮ ನೀಡಲು ಆರಂಭಿಸುತ್ತಾರೆ.

ಟಾಪ್ ನ್ಯೂಸ್

ನರೇಗಾ ಕೆಲಸಗಾರರಿಗೆ ಆರೋಗ್ಯ ಭಾಗ್ಯ : ಕೆಲಸದ ಸ್ಥಳದಲ್ಲೇ ವೈದ್ಯಕೀಯ ಮೂಲ ಸೌಲಭ್ಯ

ಮಕ್ಕಳ ದತ್ತು ಸಂದೇಶ ಬಗ್ಗೆ ಎಚ್ಚರವಿರಲಿ! ಕಾನೂನು ಬಾಹಿರ ಪ್ರಕ್ರಿಯೆಗೆ ಕೈಹಾಕದಿರಿ

ಕೋವಿಡ್: ರಾಜ್ಯದಲ್ಲೇ ಹೆಚ್ಚು ಸಾವು : ರವಿವಾರಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆ

2019ರಿಂದಲೇ ಬಿಲ್‌ ಗೇಟ್ಸ್‌ ದಂಪತಿ ವಿಚ್ಛೇದನ ಪ್ರಕ್ರಿಯೆ ಶುರು

ನಿಮ್ಮಿಬ್ಬರಲ್ಲಿ ನಾನು ಜಗತ್ತನ್ನೇ ಕಂಡಿದ್ದೆ : ಹೃದಯ ಕರಗುವ ವೇದಾ ಸಂದೇಶ

BLACK-VIRUS

ಮಾರಣಾಂತಿಕ ಕಪ್ಪು ಶಿಲೀಂಧ್ರ :ಕೋವಿಡ್ ನಡುವೆ ಫಂಗಸ್ ಭೀತಿ

ಪ್ಯಾಲೆಸ್ತೀನಿಯರು-ಇಸ್ರೇಲ್‌ ಪಡೆ ನಡುವೆ ಭಾರೀ ಘರ್ಷಣೆ : 200ಕ್ಕೂ ಹೆಚ್ಚು ಮಂದಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರೇಗಾ ಕೆಲಸಗಾರರಿಗೆ ಆರೋಗ್ಯ ಭಾಗ್ಯ : ಕೆಲಸದ ಸ್ಥಳದಲ್ಲೇ ವೈದ್ಯಕೀಯ ಮೂಲ ಸೌಲಭ್ಯ

ನರೇಗಾ ಕೆಲಸಗಾರರಿಗೆ ಆರೋಗ್ಯ ಭಾಗ್ಯ : ಕೆಲಸದ ಸ್ಥಳದಲ್ಲೇ ವೈದ್ಯಕೀಯ ಮೂಲ ಸೌಲಭ್ಯ

ಕಠಿನ ಲಾಕ್‌ಡೌನ್‌ : ಪಡಿತರ ತರಲು ಗ್ರಾಮಾಂತರ ಭಾಗದ ಜನರ ಪ್ರಯಾಸ

ಕೋವಿಡ್‌ ಸೋಂಕಿತರಾಗಿ “ಮನೆಯಲ್ಲೇ ಚಿಕಿತ್ಸೆ ಪಡೆಯುವವರಿಗೆ ಉಚಿತ ಆರೋಗ್ಯ ಕಿಟ್‌’

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೊರೋನಾ ಪಾಜಿಟಿವ್

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೋವಿಡ್ ಪಾಸಿಟಿವ್

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

MUST WATCH

udayavani youtube

ನವಮಂಗಳೂರು ಬಂದರಿಗೆ ಆಗಮಿಸಿದ ಮೆಡಿಕಲ್ ಆಕ್ಸಿಜನ್ ಹೊತ್ತ ಕುವೈತ್ ಹಡಗು

udayavani youtube

ಕರುನಾಡಿಗೆ ಯಾಕೆ ಈ ಪರಿಸ್ಥಿತಿ ಬಂತು?

udayavani youtube

ವೈದ್ಯರ ಏಪ್ರಾನ್ ಧರಿಸಿ ತರಕಾರಿ ಖರೀದಿಗೆ ಬಂದಿದ್ದ ಯುವಕ

udayavani youtube

ಲಾಠಿ ಏಟಿನ ಭೀತಿ : ತಲೆಗೆ ಹೆಲ್ಮೆಟ್‌, ಬೆನ್ನಿಗೆ ತಗಡಿನ ಶೀಟ್‌ ಕಟ್ಟಿಕೊಂಡ ಸೈಕಲ್‌ ಸವಾರ

udayavani youtube

ಸರ್ಕಾರ ತನ್ನ ಕೆಲಸ ನಿರ್ವಹಿಸಿದ್ದರೆ, ಈ ಸ್ಥಿತಿ ಬರುತ್ತಿರಲಿಲ್ಲ

ಹೊಸ ಸೇರ್ಪಡೆ

ನರೇಗಾ ಕೆಲಸಗಾರರಿಗೆ ಆರೋಗ್ಯ ಭಾಗ್ಯ : ಕೆಲಸದ ಸ್ಥಳದಲ್ಲೇ ವೈದ್ಯಕೀಯ ಮೂಲ ಸೌಲಭ್ಯ

ನರೇಗಾ ಕೆಲಸಗಾರರಿಗೆ ಆರೋಗ್ಯ ಭಾಗ್ಯ : ಕೆಲಸದ ಸ್ಥಳದಲ್ಲೇ ವೈದ್ಯಕೀಯ ಮೂಲ ಸೌಲಭ್ಯ

ಮಕ್ಕಳ ದತ್ತು ಸಂದೇಶ ಬಗ್ಗೆ ಎಚ್ಚರವಿರಲಿ! ಕಾನೂನು ಬಾಹಿರ ಪ್ರಕ್ರಿಯೆಗೆ ಕೈಹಾಕದಿರಿ

ಮಕ್ಕಳ ದತ್ತು ಸಂದೇಶ ಬಗ್ಗೆ ಎಚ್ಚರವಿರಲಿ! ಕಾನೂನು ಬಾಹಿರ ಪ್ರಕ್ರಿಯೆಗೆ ಕೈಹಾಕದಿರಿ

ಕೋವಿಡ್: ರಾಜ್ಯದಲ್ಲೇ ಹೆಚ್ಚು ಸಾವು : ರವಿವಾರಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆ

ಕೋವಿಡ್: ರಾಜ್ಯದಲ್ಲೇ ಹೆಚ್ಚು ಸಾವು : ರವಿವಾರಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆ

2019ರಿಂದಲೇ ಬಿಲ್‌ ಗೇಟ್ಸ್‌ ದಂಪತಿ ವಿಚ್ಛೇದನ ಪ್ರಕ್ರಿಯೆ ಶುರು

2019ರಿಂದಲೇ ಬಿಲ್‌ ಗೇಟ್ಸ್‌ ದಂಪತಿ ವಿಚ್ಛೇದನ ಪ್ರಕ್ರಿಯೆ ಶುರು

ನಿಮ್ಮಿಬ್ಬರಲ್ಲಿ ನಾನು ಜಗತ್ತನ್ನೇ ಕಂಡಿದ್ದೆ : ಹೃದಯ ಕರಗುವ ವೇದಾ ಸಂದೇಶ

ನಿಮ್ಮಿಬ್ಬರಲ್ಲಿ ನಾನು ಜಗತ್ತನ್ನೇ ಕಂಡಿದ್ದೆ : ಹೃದಯ ಕರಗುವ ವೇದಾ ಸಂದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.