ಅಭಿಯಂತರ ನಾಗಭೂಷಣ ಅಮಾನತಿಗೆ ಸಮಿತಿ ಆಗ್ರಹ


Team Udayavani, Aug 16, 2019, 12:58 PM IST

kopala-tdy-3

ಗಂಗಾವತಿ: ಗೇಟ್ ಒಡೆದ ಸ್ಥಳಕ್ಕೆ ತುಂಗಭದ್ರಾ ಆಂದೋಲನ ಸಮಿತಿ ಸದಸ್ಯರು ಭೇಟಿ ನೀಡಿದ್ದರು.

ಗಂಗಾವತಿ: ತುಂಗಭದ್ರಾ ಜಲಾಶಯದ ಮೇಲ್ಮಟ್ಟದ ಕಾಲುವೆ ಗೇಟ್ ಮುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಪಾಲಕ ಅಭಿಯಂತರ ನಾಗಭೂಷಣ ಅವರನ್ನು ಕೂಡಲೇ ಅಮಾನತು ಮಾಡುವಂತೆ ತುಂಗಭದ್ರಾ ಉಳಿಸಿ ಆಂದೋಲನ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಸಮಿತಿ ಸದಸ್ಯರು ಗುರುವಾರ ಮುನಿರಾಬಾದ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಸಮಗ್ರ ವರದಿ ನೀಡಿ ಅಧಿಕಾರಿಗಳ ಕರ್ತವ್ಯನಿರ್ಲಕ್ಷ್ಯದ ಬಗ್ಗೆ ತಿಳಿಸಲಾಗುತ್ತದೆ ಎಂದು ಸಮಿತಿಯ ಜೆ. ಭಾರದ್ವಾಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ವರ್ಷ ಬೇಸಿಗೆಯಲ್ಲಿ ಜಲಾಶಯದಲ್ಲಿ ನೀರಿಲ್ಲದ್ದಿದಾಗ (ಏಪ್ರೀಲ್-ಮೇ ತಿಂಗಳಲ್ಲಿ) ಗ್ರೀಸಿಂಗ್‌, ಪೆಂಟಿಂಗ್‌ ಹಾಗೂ ಇತ್ಯಾದಿ ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ ಐದಾರು ವರ್ಷಗಳಿಂದ ಈ ರೀತಿಯ ನಿರ್ವಹಣೆ ಮಾಡಲಾಗಿಲ್ಲ. ಆದರೆ ಪ್ರತಿ ವರ್ಷ ನಿರ್ವಯಹಣೆಯ ಬಿಲ್ ಎತ್ತಲಾಗಿದೆ. ಈ ಕಾಲುವೆಯ ನಿರ್ವಹಣೆಯ ಹೊಣೆ ತುಂಗಭದ್ರಾ ಜಲಾಶಯದ ನಂಬರ್‌-1 ವಿಭಾಗದ ಕಾರ್ಯಪಾಲಕ ಅಭಿಯಂತರರದ್ದು, ಕಳೆದ ಐದು ವರ್ಷಗಳಿಂದ ಈ ವಿಭಾಗಕ್ಕೆ ಕಾರ್ಯಪಾಲಕ ಅಭಿಯಂತರ ನಾಗಭೂಷಣ ಅವರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ಈ ಅನಾಹುತಕ್ಕೆ ಕಾರಣವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಎಡದಂಡೆ ಮೇಲ್ಮಟ್ಟದ ಕಾಲುವೆಯ ಹೆಚ್ಚುವರಿ ನೀರು ಹೋಗಲು ಕಾಲುವೆಯ ಒಂದನೇ ಕಿ.ಮೀನಲ್ಲಿ ಎಸ್ಕೇಪ್‌ ಹಳ್ಳ ತೋಡಲಾಗಿದೆ. ಈ ಹಳ್ಳವು ಹರಿದು ಎಡದಂಡೆ ಮುಖ್ಯಕಾಲುವೆ (ರಾಯಚೂರಿಗೆ ಹರಿಯುವ ಕಾಲುವೆ) ಒಂದನೇ ಕಿ.ಮೀ. ಬಳಿ ಅಂಡರ್‌ಪಾಸ್‌ (ಮುಖ್ಯ ಕಾಲುವೆ ಕೆಳಭಾಗದಿಂದ) ಹರಿದು ಹೊಳೆ ಮುದ್ಲಪುರ ಸೀಮಾದ ಮೂಲಕ ಜಲಾಶಯದ ಮುಂಭಾಗದ ತುಂಗಭದ್ರಾ ನದಿ ಸೇರುತ್ತದೆ. ಈಗ ಈ ಕಾಲುವೆಯ ನಿರ್ವಹಣೆ ಇಲ್ಲದೇ ಮುಖ್ಯ ಗೇಟ್ ಕಿತ್ತು ಹೋಗಿರುವುದರಿಂದ 36 ಕ್ಯೂಸೆಕ್‌ ಹರಿಯಬೇಕಾದ ಕಾಲುವೆಯಲ್ಲಿ ಈಗ 250ರಿಂದ 300 ಕ್ಯೂಸೆಕ್‌ ನೀರು ಹರಿಯುತ್ತಿದೆ. ರಾಜ್ಯದ ಹೆಸರಾಂತ ಜಪಾನ್‌ ಮಾದರಿಯ ಪಂಪಾವನ ಶೇ. 80ರಷ್ಟು ಮುಳುಗಡೆಯಾಗಿದ್ದು, ಅಲ್ಲಿಯ ನರ್ಸರಿಯ ಲಕ್ಷಾಂತರ ಸಸಿಗಳು, ಹುಲ್ಲು ಹಾಸು, ಪಗೋಡಗಳು, ಔಷಧೀಯ ಸಸ್ಯಗಳು ಹಾಳಾಗಿವೆ. ಅಲ್ಲದೇ ಸಾವಿರಾರು ಪಕ್ಷಿಗಳು ನೆಲೆಯಾಗಿದ್ದ ಪಂಪಾವನ ಜಲಾವೃತ್ತದಿಂದ ನೆಲೆ ಕಳೆದುಕೊಂಡು ಪರಿತಪಿಸುತ್ತಿವೆ. ಕಾಲುವೆಯಲ್ಲಿ 250 ಕ್ಯೂಸೆಕ್‌ಗೂ ಅಧಿಕ ನೀರು ಬಂದಿದ್ದರಿಂದ ರಸ್ತೆಯ ಕೆಳಭಾಗದ ಪೈಪ್‌ ಔಟ್ಲೆಟ್‌ನಲ್ಲಿ ಅಷ್ಟೂ ಪ್ರಮಾಣದ ನೀರು ಹೊರ ಹೋಗದೇ ಪಂಪಾವನ ಜಲಾವೃತ್ತವಾಗಿದೆ. ಇದರ ವರದಿ ಸರಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಡಿ.ಎಚ್. ಪೂಜಾರ, ಶಿವಪ್ರಸಾದ ಚಲಸಾನಿ, ವಿಶ್ವನಾಥ ರಾಜ್‌, ಆನಂದ್‌ ಭಂಡಾರಿ, ಚಂದ್ರಪ್ಪ, ವೀರಭದ್ರಯ್ಯ ಭೂಸನೂರಮಠ, ಖಾಜಾವಲಿ, ಜನಾರ್ದನ್‌, ಸುದರ್ಶನ ವರ್ಮಾ, ಎಚ್.ಎನ್‌. ಬಡಿಗೇರ ಇದ್ದರು.

ಟಾಪ್ ನ್ಯೂಸ್

1-sdsa

ಗೋವಾ: ನಾಮಪತ್ರ ಸಲ್ಲಿಸುವ ಮುನ್ನಾ ದಿನ ಬಿಜೆಪಿ ತೊರೆದ ಸಚಿವ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 581 ಅಂಕ ಇಳಿಕೆ; ಲಾಭ, ನಷ್ಟ ಕಂಡ ಷೇರುಗಳು ಯಾವುದು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 581 ಅಂಕ ಇಳಿಕೆ; ಲಾಭ, ನಷ್ಟ ಕಂಡ ಷೇರುಗಳು ಯಾವುದು?

vikrant rona

ಅಡ್ವೆಂಚರ್ ಹೀರೋಗಾಗಿ ಮತ್ತಷ್ಟು ಕಾಯಬೇಕು.. ‘ವಿಕ್ರಾಂತ್ ರೋಣ’ನ ದರ್ಶನ ಸದ್ಯಕ್ಕಿಲ್ಲ

1-rwerw

ರಾಮದಾಸ್, ಸಿಂಹ ಕೋಲ್ಡ್ ವಾರ್ : ಮೈಸೂರು ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ

Charanjit Singh

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹಾಕಿ ನಾಯಕ ಚರಣ್ ಜಿತ್ ಸಿಂಗ್ ನಿಧನ

whatsapp group

ಇನ್ನು ಬೇಕಾಬಿಟ್ಟಿ ಗ್ರೂಪ್ ಚಾಟ್ ಮಾಡುವಂತಿಲ್ಲ..: ಅಡ್ಮಿನ್ ಗೆ ಹೊಸ ಆಯ್ಕೆ ನೀಡಿದ ವಾಟ್ಸಪ್

ವಿಧಾನಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಉತ್ಪಲ್ ಪರಿಕ್ಕರ್

ವಿಧಾನಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಉತ್ಪಲ್ ಪರ್ರಿಕರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21ambedkar

ಗಣರಾಜ್ಯೋತ್ಸವದಲ್ಲಿ ಡಾ|ಅಂಬೇಡ್ಕರ್ ಫೋಟೋ ತೆಗೆಸಿದ ಪ್ರಕರಣ: ರಸ್ತೆ ತಡೆದು ಪ್ರತಿಭಟನೆ

19accident

ಕುಷ್ಟಗಿ: ಟ್ರ್ಯಾಕ್ಟರ್ ಪಲ್ಟಿಯಾಗಿ ಮಹಿಳೆ ದುರ್ಮರಣ; ಇಬ್ಬರಿಗೆ ಗಂಭೀರ ಗಾಯ

11edigas

ಗಂಗಾವತಿ: ಈಡಿಗ ಸಮಾಜದಿಂದ ಪ್ರತಿ ಊರಲ್ಲೂ ನಾರಾಯಣ ಗುರುಗಳ ಪೂಜೆ, ಗೌರವ

ಕಲ್ಯಾಣ ಕರ್ನಾಟಕ ದಲ್ಲಿ ಪ್ರತ್ಯೇಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ ಕಲಾವಿದರ ಕೂಗು

ಕಲ್ಯಾಣ ಕರ್ನಾಟಕ ದಲ್ಲಿ ಪ್ರತ್ಯೇಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ ಕಲಾವಿದರ ಕೂಗು

ಯುವಕರು ಸ್ವಾತಂತ್ರ್ಯ  ಸೇನಾನಿ ಸಂಗೊಳ್ಳಿ ರಾಯಣ್ಣನ ಆದರ್ಶ ಪಾಲಿಸಬೇಕು:ಶಾಸಕ ಪರಣ್ಣ ಮುನವಳ್ಳಿ

ಯುವಕರು ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ಆದರ್ಶ ಪಾಲಿಸಬೇಕು:ಶಾಸಕ ಪರಣ್ಣ ಮುನವಳ್ಳಿ

MUST WATCH

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

udayavani youtube

ವಿರಾಟ್​ ಕುದುರೆ ನಿವೃತ್ತಿ, ಮೈ ಸವರಿ ಮುದ್ದಿಸಿ ಬೀಳ್ಕೊಟ್ಟ ಪ್ರಧಾನಿ ಮೋದಿ

ಹೊಸ ಸೇರ್ಪಡೆ

ವಿದ್ಯಾರ್ಥಿಗಳಲ್ಲಿರಲಿ ಸವಾಲು ಎದುರಿಸುವ ದಿಟ್ಟ ಶಕ್ತಿ; ಶಾಸಕ ದೊಡ್ಡನಗೌಡ

23farmers

ಸಾಗರ: ಅರಣ್ಯ ಭೂಮಿ ಸಾಗುವಳಿ ಅರ್ಜಿ ವಜಾ; ಧರಣಿ

ಕಿಮ್ಸ್‌ ರಾಜ್ಯದ ಅತಿ ದೊಡ್ಡ ಆಸ್ಪತ್ರೆ: ಶಶಿಧರ ಮಾಡ್ಯಾಳ

ಕಿಮ್ಸ್‌ ರಾಜ್ಯದ ಅತಿ ದೊಡ್ಡ ಆಸ್ಪತ್ರೆ: ಶಶಿಧರ ಮಾಡ್ಯಾಳ

1-sdsa

ಗೋವಾ: ನಾಮಪತ್ರ ಸಲ್ಲಿಸುವ ಮುನ್ನಾ ದಿನ ಬಿಜೆಪಿ ತೊರೆದ ಸಚಿವ

ಹುಬ್ಬಳ್ಳಿ ರೈಲ್ವೆ ವಿಭಾಗಕ್ಕೆ2633 ಕೋಟಿ ಆದಾಯ

ಹುಬ್ಬಳ್ಳಿ ರೈಲ್ವೆ ವಿಭಾಗಕ್ಕೆ2633 ಕೋಟಿ ಆದಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.