ಅಂತರ್ಜಲ ವೃದ್ಧಿ ಕಾಮಗಾರಿಗಳಿಗೆ ಆದ್ಯತೆ: ಆಚಾರ್‌

Team Udayavani, Nov 6, 2019, 2:45 PM IST

ಯಲಬುರ್ಗಾ: ಅಂತರ್ಜಲ ಹೆಚ್ಚಳಕ್ಕೆ ಪೂರಕವಾಗುವ ಕಾಮಗಾರಿಗಳಿಗೆ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಶಾಸಕ ಹಾಲಪ್ಪ ಆಚಾರ್‌ ಹೇಳಿದರು.

ನಿಲೋಗಲ್‌ ಗ್ರಾಮದ ಹಳ್ಳದ ಹತ್ತಿರ ಸಣ್ಣ ನೀರಾವರಿ ಇಲಾಖೆ ವತಿಯಿಂದ ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಈಗಾಗಲೇ ಕ್ಷೇತ್ರದ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಕಳೆದ ಸಾಲಿನ ಅನುದಾನದಲ್ಲಿ 160ಕ್ಕೂ ಹೆಚ್ಚು ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ. ಅವುಗಳು ಪ್ರಗತಿ ಹಂತದಲ್ಲಿವೆ. ಪ್ರಸಕ್ತ ಸಾಲಿನಲ್ಲಿ ಅಂತರ್ಜಲ ಸಂರಕ್ಷಣೆಗೆ ಪೂರಕವಾಗುವ ಕಾಮಗಾರಿಗಳಿಗೆ ಅನುದಾನ ನೀಡಲಾಗುವುದು ಎಂದರು.

ಚೆಕ್‌ ಡ್ಯಾಂ ನಿರ್ಮಾಣ, ಕೆರೆಗಳ ಜೀರ್ಣೋದ್ಧಾರದಿಂದ ಅಂತರ್ಜಲಮಟ್ಟ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಗ್ರಾಮಸ್ಥರು ಸದರಿ ಕಾಮಗಾರಿ ನಿರ್ಮಿಸಿಕೊಳ್ಳಲು ಅಧಿಕಾರಿಗಳು, ಗುತ್ತಿಗೆದಾರರಿಗೆ ಸಹಕಾರ ನೀಡುವ ಮೂಲಕ ಉತ್ತಮ ಗುಣಮಟ್ಟದಿಂದ ನಿರ್ಮಿಸಿಕೊಳ್ಳಬೇಕು ಎಂದರು.

ಈ ಗ್ರಾಮದಲ್ಲಿ ತಲಾ 25 ಲಕ್ಷದಂತೆ ಎರಡು ಚೆಕ್‌ ಡ್ಯಾಂ ನಿರ್ಮಿಸಲಾಗುವುದು. ಈಗಾಗಲೇ ಯರಿಭಾಗದ ಎಲ್ಲ ಕೆರೆ ಜೀರ್ಣೋದ್ಧಾರಗೊಳಿಸಲಾಗಿದೆ. ಈ ಕೆರೆಗಳು ಮಳೆ ನೀರಿನಿಂದ ತುಂಬಿ ಅಂತರ್ಜಲಮಟ್ಟ ಹೆಚ್ಚಳವಾಗಿದೆ. ಕಳಪೆ ಕಾಮಗಾರಿಯ ನಿರ್ಮಿಸದೇ ಗುಣಮಟ್ಟದ ಕಾಮಗಾರಿ ನಿರ್ಮಿಸುವಂತೆ ಸಲಹೆ ನೀಡಿದರು. ಹಿಂದಿನ ಜನಪ್ರತಿನಿಧಿಗಳು, ಸರಕಾರಗಳಾಗಲಿ ಕೆರೆಗಳನ್ನು ಜೀರ್ಣೋದ್ಧಾರಗೊಳಿಸುವ ಕಾಳಜಿ ತೋರಲಿಲ್ಲ. ಆದರೆ ನಾನು ಶಾಸಕನಾದ ಮೇಲೆ ಚೆಕ್‌ ಡ್ಯಾಂ, ಕೆರೆಗಳ ಅಭಿವೃದ್ಧಿ, ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಾಣಕ್ಕಾಗಿ ಸಣ್ಣ ನೀರಾವರಿ ಇಲಾಖೆಗೆ ಸುಮಾರು 60 ಕೋಟಿಗೂ ಅಧಿಕ ಅನುದಾನ ಸರಕಾರದಿಂದ ಬಿಡುಗಡೆ ಮಾಡಿಸಿದ್ದೇನೆ. ಈಗಾಗಲೇ ತಾಲೂಕಿನಲ್ಲಿ 53 ಕಾಮಗಾರಿ ಮುಕ್ತಾಯದ ಹಂತದಲ್ಲಿವೆ. ಮುಂದಿನ ವರ್ಷ ನಿಲೋಗಲ್‌, ಕಲ್ಲಬಾವಿ ಕೆರೆಗಳ ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆಗೊಳಿಸುತ್ತೇನೆ ಎಂದರು.

ಈ ವೇಳೆ ಬಿಜೆಪಿ ಮುಖಂಡರಾದ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ರತನ ದೇಸಾಯಿ, ಶಿವಕುಮಾರ ನಾಗಲಾಪೂರಮಠ, ಈರಪ್ಪ ಕುಡಗುಂಟಿ, ತಾಪಂ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ಪ್ರಭುರಾಜ ಕಲಬುರ್ಗಿ, ಮಲ್ಲಣ್ಣ ಹರ್ಲಾಪೂರ, ಸಂಗನಗೌಡ ಪಾಟೀಲ, ರಾಚಪ್ಪ ಕಟಗಿಹಳ್ಳಿ, ನಾಗನಗೌಡ ಜಾಲಿಹಾಳ, ಆದೇಶ ರೊಟ್ಟಿ, ಕಳಕಪ್ಪ ತಳವಾರ, ವೆಂಕಟೇಶ ವಾಲ್ಮೀಕಿ, ಶರಣಪ್ಪ ಹೊಸ್ಕೇರಿ ಇತರರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಗಂಗಾವತಿ: ಬೇಸಿಗೆಯಲ್ಲಿ ಭತ್ತ ನಾಟಿ ಮಾಡಲು ರೈತರು ಈಗಾಗಾಗಲೇ ಭತ್ತದ ಸಸಿ ಮಡಿ ಹಾಕುವ ಕಾರ್ಯ ಆರಂಭಿಸಿದ್ದಾರೆ. ಸಾಣಾಪೂರ, ಆನೆಗೊಂದಿ, ಬಸಾಪೂರ ಸೇರಿ ಆನೆಗೊಂದಿ,...

  • ಕಾರಟಗಿ: ಪಟ್ಟಣದ ರಾಜೀವಗಾಂಧಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆವರಣಗೋಡೆ ಇಲ್ಲದೇ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಶಾಲೆಯ...

  • ಸಿದ್ದಾಪುರ: ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಗ್ರಾಮದಲ್ಲಿ ರವಿವಾರ ಬೆಳಗ್ಗೆ ಮೂರನೇ ದಿನದ ಸದ್ಭಾವನಾ ಪಾದಯಾತ್ರೆ ಕೈಗೊಂಡರು. ಶ್ರೀಗಳು ಬಸ್‌ನಿಲ್ದಾಣದ...

  • ಗಂಗಾವತಿ: ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಗುಣಾತ್ಮಕ ಶಿಕ್ಷಣದ ಕೊರತೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಓದುವ ಮತ್ತು ಅರ್ಥ ಮಾಡಿಕೊಳ್ಳುವ ಮನೋಭಾವ ಕಡಿಮೆಯಾಗಿರುವುದರಿಂದ...

  • ಕುಷ್ಟಗಿ: ಪೂರ್ವ ಯುರೋಫ್‌, ಮಧ್ಯ ಏಷ್ಯಾದ ಪರ್ವತ ಪ್ರದೇಶದ ಕೇಸರಿ ಮೈನಾ (ಕಬ್ಬಕ್ಕಿ) ಹಕ್ಕಿಗಳು ತಾಲೂಕಿಗೆ ವಲಸೆ ಬಂದಿವೆ. ಗ್ರಾಮೀಣ ಪ್ರದೇಶದಲ್ಲಿ ಕಬ್ಬಕ್ಕಿ...

ಹೊಸ ಸೇರ್ಪಡೆ