ಆರಂಭವಾಯ್ತು ಕೆರೆಗಳ ರಕ್ಷಣೆ ಕಾಯಕ

ಪರಿಹಾರ ಕೊಟ್ಟಿದ್ದರೂ ಸ್ವಾಧೀನಕ್ಕೆ ಪಡೆದಿರಲಿಲ್ಲ,ಜಿಲ್ಲೆಯ 22 ಕೆರೆಗಳ ಪಹಣಿ ಪತ್ರ ಸಿದ್ಧ

Team Udayavani, Oct 31, 2020, 1:31 PM IST

kopala-tdy-1

ಕೊಪ್ಪಳ: ಜಿಲ್ಲೆಯಲ್ಲಿ ದಶಕಗಳ ಹಿಂದೆಯೇ ಕೆರೆಗಳಿಗಾಗಿ ಜಿಲ್ಲಾಡಳಿತ ಭೂಮಿ ಸ್ವಾಧೀನ ಮಾಡಿಕೊಂಡು ರೈತರಿಗೆ ಪರಿಹಾರ ಕೊಟ್ಟಿದ್ದರೂ ಅವುಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಂಡಿರಲಿಲ್ಲ. ಈಗ ಕೆರೆಗಳ ರಕ್ಷಣೆಯ ಕಾಯಕ ಆರಂಭವಾಗಿದೆ. ಜಿಲ್ಲೆಯ 22 ಕೆರೆಗಳು ಆರ್‌ಟಿಸಿ ಭಾಗ್ಯ ಕಂಡಿವೆ. ಸರ್ಕಾರದ ಅಧೀಕೃತ ದಾಖಲೆಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಡಿಯೇ 122 ಕೆರೆಗಳಿವೆ. ಈ ಹಿಂದಿನಿಂದಲೂಅವುಗಳ ರಕ್ಷಣೆ ಅಷ್ಟಕ್ಕಷ್ಟೇ ಎನ್ನುವಂತಿತ್ತು. ಇಲಾಖೆ ದಾಖಲೆಗಳಲ್ಲಿಮಾತ್ರ ನಮ್ಮ ವ್ಯಾಪ್ತಿಯಲ್ಲಿ ಇಷ್ಟು ಕೆರಗಳು ಇವೆ ಎನ್ನುವ ಮಾಹಿತಿ ಇಟ್ಟುಕೊಂಡಿತ್ತು. ಆದರೆ ವರ್ಷಕ್ಕೊಮ್ಮೆ ಲೆಕ್ಕಬಾಕಿ ತೋರಿಸುತ್ತಿತ್ತು. ಜಿಲ್ಲಾಡಳಿತವು 1980, 1990ರ ದಶಕದಲ್ಲಿ ಜಿಲ್ಲೆಯಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ನಿರ್ಮಾಣದ ನೂರಾರು ರೈತರ ಜಮೀನುಗಳನ್ನು ಸ್ವಾಧಿಧೀನ ಮಾಡಿಕೊಂಡು ಅವರಿಗೆ ಆಗಲೇ ಪರಿಹಾರವನ್ನೂ ನೀಡಿತ್ತು. ಆದರೆ ಅಧೀಕೃತವಾಗಿ ಪಹಣಿ ಪತ್ರಿಕೆಯನ್ನು ಸರ್ಕಾರದ ಸುಪರ್ದಿಗೆ ಮಾಡಿಕೊಂಡಿರಲಿಲ್ಲ. ಇದರಿಂದಾಗಿ ದಶಕದ ನಂತರವೂ ರೈತರ ಹೆಸರಿನಲ್ಲೇ ಆ ಜಮೀನು ಉಳಿದುಕೊಂಡಿದ್ದವು. ಕೆಲ ರೈತರು ಸರ್ಕಾರಕ್ಕೆ ಕೆರೆಗೆ ಭೂಮಿ ಕೊಟ್ಟಿದ್ದರೂ ಪಹಣಿ ಮುಂದುವರಿದಿದ್ದರಿಂದ ಅವುಗಳನ್ನೇ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟು ಸಾಲ ಪಡೆಯುವುದು, ಬೆಳೆ ಸಾಲ ಪಡೆಯುವುದನ್ನು ಮಾಡುತ್ತಿದ್ದರು. ಇಂತಹ ಕೆಲವು ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಾಳಜಿ ವಹಿಸುವ ಕೆಲಸ ಮಾಡಿದೆ.

ಇದರ ಬೆನ್ನಲ್ಲೇ ಕಳೆದ ಎರಡು ವರ್ಷದಿಂದ ಜಿಲ್ಲೆಯಲ್ಲಿ ಕೆರೆಗಳ ಉಳಿವಿಗೆ ಆಂದೋಲನ ನಡೆದಿದ್ದರಿಂದ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್‌ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ ಕೆರೆಗಳ ಬಗ್ಗೆಕಾಳಜಿ ವಹಿಸಿ ಒತ್ತುವರಿಯಾದ ಕೆರೆಗಳನ್ನು ತೆರವು ಮಾಡುವಂತೆ ಸರ್ಕಾರಕ್ಕೆ, ಜಿಲ್ಲಾಡಳಿತ ಹಾಗೂ ಅಧಿಕಾರಿ ವರ್ಗಕ್ಕೆ ಒತ್ತಾಯಿಸಿದ್ದರಿಂದ ಜಿಲ್ಲಾಡಳಿತವು ಮತ್ತಷ್ಟು ಕೆರೆಗಳ ರಕ್ಷಣೆ ಮಾಡುವ ಕಾಯಕ ಆರಂಭಿಸಿದೆ.

22 ಕೆರೆಗಳಿಗೆ ಆರ್‌ಟಿಸಿ ನಮೂದು: ಕೊಪ್ಪಳ ಎಸಿ ನಾರಾಯಣರಡ್ಡಿ ಕನಕರಡ್ಡಿ ಅವರು, ಜಿಲ್ಲಾಡಳಿತದಿಂದ ಕೆರೆಗಳಿಗೆ ಭೂಮಿ ಸ್ವಾಧೀನವಾದ ಮಾಹಿತಿ ಪಡೆದು, ಸರ್ಕಾರದಿಂದ ರೈತರಿಗೆ ಪರಿಹಾರ ತಲುಪಿದ ಬಗ್ಗೆ ದಾಖಲೆ ಪರಿಶೀಲಿಸಿ ಅಂತಹ ಕೆರೆಗಳನ್ನು ಗುರುತಿಸಿ ಸರ್ಕಾರದ ಸುಪರ್ದಿಯಲ್ಲಿ ಗಣಕೀಕೃತ ದಾಖಲೆ ಮಾಡಿದ್ದಾರೆ. 22 ಕೆರೆಗಳಿಗೆ ನಿಖರ ಪಹಣಿ ಪತ್ರಿಕೆಗಳೇ ಇರಲಿಲ್ಲ. ಅದಕ್ಕೆ ಎಸಿ ಅವರು ಎಷ್ಟು ಕ್ಷೇತ್ರ ವ್ಯಾಪ್ತಿಯ ಕೆರೆ ಸ್ವಾಧೀನಕ್ಕೆ ಒಳಗಾಗಿದೆ. ಎಷ್ಟು

ಎಕರೆ ಪ್ರದೇಶವನ್ನು ಒಳಗೊಂಡಿದೆ ಎನ್ನುವುದನ್ನು ನಿಖರವಾಗಿ ಅಳತೆ ಮಾಡಿ ಕೆಲವುಸ್ಥಳಕ್ಕೆ ಭೇಟಿ ನೀಡಿ ವಿವಾದಿತ ಕೆರೆಗಳನ್ನು ಪರಿಶೀಲನೆಮಾಡಿ ಅವುಗಳಿಗೆ ದಾಖಲೀಕರಣ ಮಾಡಲು ಪಹಣಿ ಪತ್ರಿಕೆ(ಆರ್‌ಟಿಸಿ) ಭಾಗ್ಯ ಕರುಣಿಸಿದ್ದಾರೆ.ಇದರಿಂದ ಕೆರೆಗಳ ರಕ್ಷಣೆಯ ಕಾಯಕವು ಸದ್ದಿಲ್ಲದೆ ಆರಂಭವಾಗಿದೆ.

ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ: ಸಣ್ಣ ನೀರಾವರಿ ಇಲಾಖೆಯಡಿ 122 ಕೆರೆಗಳು ಇವೆ. ಅವುಗಳನ್ನು ಇಲಾಖೆಯು ದಾಖಲೆಯಲ್ಲಿ ಮಾತ್ರ ಇಟ್ಟುಕೊಂಡಿದೆ. ಆದರೆ ಅಲ್ಲಿ ಕೆರೆಗಳು ಒತ್ತುವರಿಯಾಗಿವೆ. ಇಲಾಖೆ ಈ ಇಲಾಖೆ ಕೆರೆಗಳ ರಕ್ಷಣೆ ಮಾಡುವ ಕಾಯಕದಲ್ಲಿ ತೊಡಗಿದರೆ ಮಾತ್ರ ಭವಿಷ್ಯದಲ್ಲಿ ಕೆರೆಗಳು ಉಳಿಯಲಿವೆ. ಇಲ್ಲದಿದ್ದರೆ ಮತ್ತೆ ಉಳ್ಳವರ ಪಾಲಾಗಲಿವೆ ಎನ್ನುವ ಮಾತು ಕೇಳಿ ಬಂದಿದೆ. ಇನ್ನಾದರೂ ಸಣ್ಣ ನೀರಾವರಿ ಇಲಾಖೆ ಕೆರೆಗಳ ಒತ್ತುವರಿ, ನಿಖರತೆ, ರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕಿದೆ.

ಪಹಣಿಯಾದ ಕೆರೆಗಳು :  ಭಾನಾಪುರ, ಹುಣಸಿಹಾಳ, ಗಾಣದಾಳ,ಚನ್ನಪ್ಪನಹಳ್ಳಿ ಕೆರೆ, ಚಿಕ್ಕ ಮ್ಯಾಗೇರಿ ಕೆರೆ,ರ್ಯಾವಣಕಿ, ಗುನ್ನಾಳ, ನಿಲೋಗಲ್‌, ಕಲ್ಲಬಾವಿ,  ಬಳ್ಳೋಟಗಿ, ತಳಕಲ್‌, ಮುರಡಿ, ಬೆಣಕಲ್‌, ಮಲಕಸಮುದ್ರ, ನೆಲಜೇರಿ, ಕಟಗಿಹಳ್ಳಿ, ಹೊಸೂರು, ದ್ಯಾಂಪೂರ, ಚಿಕ್ಕ ಮನ್ನಾಪೂರ, ತಲ್ಲೂರ, ವಟಪರ್ವಿ, ತರಲಕಟ್ಟಿ ಕೆರೆಗಳಿಗೆ ಪಹಣಿ ಭಾಗ್ಯ ಬಂದಿದೆ. ಇವೆಲ್ಲವೂ ಸೇರಿ 760 ಎಕರೆ ಪ್ರದೇಶದಷ್ಟು ಒಳಗೊಂಡಿವೆ.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ಈ ಹಿಂದೆ ಸರ್ಕಾರ 1980 ಹಾಗೂ 1990ರ ದಶಕದಲ್ಲಿ ಕೆರೆಗಳಿಗಾಗಿ ರೈತರ ಜಮೀನು ಸ್ವಾಧೀನ ಮಾಡಿ, ಅವರಿಗೆ ಪರಿಹಾರವನ್ನೂ ಕೊಟ್ಟಿತ್ತು. ಆದರೆ ಅವುಗಳಿಗೆ ಪಹಣಿ ಪತ್ರಿಕೆ ಮಾಡಿರಲಿಲ್ಲ. ಇನ್ನೂ ರೈತರ ಹೆಸರಿನಲ್ಲೇ ಇದ್ದವು. ಅಂತಹವುಗಳನ್ನು ಗುರುತಿಸಿ 22 ಕೆರೆಗಳಿಗೆ ಪಹಣಿ ಪತ್ರಿಕೆ ಮಾಡಿದ್ದೇವೆ. ಇನ್ನೂ ಇಂತಹ ಕೆರೆಗಳು ಇವೆ. ಅವುಗಳಿಗೂ ಪಹಣಿ ಪತ್ರಿಕೆಯ ಪ್ರಕ್ರಿಯೆ ನಡೆದಿದೆ.- ನಾರಾಯಣರಡ್ಡಿ ಕನಕರಡ್ಡಿ, ಕೊಪ್ಪಳ ಎಸಿ

 

-ದತ್ತು ಕಮ್ಮಾರ

ಟಾಪ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆ: 10 ಮಂದಿಗೆ ಸೋಂಕು

ದಕ್ಷಿಣ ಕನ್ನಡ ಜಿಲ್ಲೆ: 10 ಮಂದಿಗೆ ಸೋಂಕು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಟ್ರಾಫಿಕ್‌ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್‌

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ವಕೀಲರ ಪರಿಷತ್‌ ಚುನಾವಣೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆ

ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಲೆಮಾರಿ ಜನಾಂಗಕ್ಕೆ ಸೌಲಭ್ಯ ದೊರೆಯಲಿ

ಅಲೆಮಾರಿ ಜನಾಂಗಕ್ಕೆ ಸೌಲಭ್ಯ ದೊರೆಯಲಿ

1-dadasd

ಗೈರಾದ ತಾಲೂಕು ಅಧಿಕಾರಿಗಳ ವಿರುದ್ಧ ದಲಿತ ಮುಖಂಡರ ಆಕ್ರೋಶ

6crop

ಶೇ.90 ರಷ್ಟು ಬೆಳೆ ಹಾನಿ ವರದಿಯ ಮಾಹಿತಿ ಅಪ್ಲೋಡ್ ಆಗಿದೆ: ಸಚಿವ ಹಾಲಪ್ಪ

ನವ ವೃಂದಾವನದಲ್ಲಿ ಉತ್ತರಾದಿ ಮಠದಿಂದ ಪದ್ಮನಾಭ ತೀರ್ಥರ ಪೂರ್ವಾರಾಧನೆ

ನವ ವೃಂದಾವನದಲ್ಲಿ ಉತ್ತರಾದಿ ಮಠದಿಂದ ಪದ್ಮನಾಭ ತೀರ್ಥರ ಪೂರ್ವಾರಾಧನೆ

gangavati crime

ನಿಯಮ ಉಲ್ಲಂಘನೆ : ಬೀಜ ಸಂಸ್ಕರಣಾ ಘಟಕಗಳಿಗೆ ಅಧಿಕಾರಿಗಳಿಂದ ನೋಟೀಸ್

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

ಅಡಿಕೆಗೆ ಸಂಬಂಧಿಸಿ ಸಂಶೋಧನೆ: ನಿಟ್ಟೆ ವಿವಿ, ಎಆರ್‌ಡಿಎಫ್‌, ಕ್ಯಾಂಪ್ಕೋ ನಡುವೆ ಒಪ್ಪಂದ

ಅಡಿಕೆಗೆ ಸಂಬಂಧಿಸಿ ಸಂಶೋಧನೆ: ನಿಟ್ಟೆ ವಿವಿ, ಎಆರ್‌ಡಿಎಫ್‌, ಕ್ಯಾಂಪ್ಕೋ ನಡುವೆ ಒಪ್ಪಂದ

ಮರಳು ಸಮಸ್ಯೆ : ಪರಿಹಾರಕ್ಕೆ ಕ್ರಮ: ಆಗ್ರಹ

ಮರಳು ಸಮಸ್ಯೆ : ಪರಿಹಾರಕ್ಕೆ ಕ್ರಮ: ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆ: 10 ಮಂದಿಗೆ ಸೋಂಕು

ದಕ್ಷಿಣ ಕನ್ನಡ ಜಿಲ್ಲೆ: 10 ಮಂದಿಗೆ ಸೋಂಕು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಕಿರಿಯರ ಹಾಕಿ ವಿಶ್ವಕಪ್‌: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು

ಗಾಲೆ ಟೆಸ್ಟ್‌ : ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಲಂಕಾ

ಗಾಲೆ ಟೆಸ್ಟ್‌ : ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಲಂಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.