Koppala; ಅಂದು ನಾನು ಮಗನ ಜತೆಯಲ್ಲೇ ಇದ್ದೆ….: ಪರಶುರಾಮ ತಂದೆ ಅಳಲು

ಹಣ ಎಲ್ಲಿಂದ ತರಲಿ ಎಂದಿದ್ದ…

Team Udayavani, Aug 4, 2024, 1:39 PM IST

ಅಂದು ನಾನು ಮಗನ ಜತೆಯಲ್ಲೇ ಇದ್ದೆ….: ಪರಶುರಾಮ ತಂದೆ ಅಳಲು

ಕೊಪ್ಪಳ: ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು. ಮೃತ ಮಗನ ಕುಟುಂಬಕ್ಕೆ ನ್ಯಾಯ ಸಿಗಲಿ. ನನ್ನ ಮಗನ ಸಾವಿಗೆ ಕಾರಣವಾದ ವ್ಯಕ್ತಿಗಳನ್ನು ಕೂಡಲೇ ಬಂಧಿಸಲಿ. ಆ ಕುಟುಂಬಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಿ ಎಂದು ಮೃತಪಟ್ಟ ಯಾದಗಿರಿ ಪಿಎಸ್ಐ ಪರಶುರಾಮ ಅವರ ತಂದೆ ಜನಕಮುನಿ ಹೇಳಿದರು.

ಕಾರಟಗಿ ತಾಲೂಕಿನ ಸೋಮನಾಳದಲ್ಲಿ ರವಿವಾರ (ಆ 04) ಮಾತನಾಡಿದ ಅವರು, ನನ್ನ ಮಗ ಪರುಶುರಾಮ ಜೊತೆ ನಾನು ಯಾದಗಿರಿಯಲ್ಲೇ ಇದ್ದೆ. ಆತನು ಸಾವನ್ನಪ್ಪುವ ಮೊದಲು ನನಗೆ ಚಿತ್ರಾನ್ನ ಮಾಡಿಕೊಟ್ಡಿದ್ದ. ಇಬ್ಬರು ಕೂಡಿಯೇ ಊಟ ಮಾಡಿದ್ದೆವು. ಅಂದು ಮನೆಗೆ ಬಂದ ವೇಳೆ ಆತನ ಮುಖದಲ್ಲಿ ಸಪ್ಪಗಿದ್ದ. ನಾನು ಆತನ ಮುಖ ನೋಡಿ ಕೇಳಿದೆ. ಆತನು ನನಗೆ ಏನೂ ಹೇಳಲಿಲ್ಲ. ಎಲ್ಲವೂ ತನ್ನ ತಾಯಿಯ ಮುಂದೆ ಹೇಳಿಕೊಳ್ಳುತ್ತಿದ್ದ ಎಂದರು.

ಊಟ ಮಾಡಿ ಮಲಗುವೆ ಎಂದು ಹೇಳಿ ರೂಮಿನಲ್ಲಿ ಮಲಗಿದ. ನಾನು ಮಗ ಮಲಗಿದ್ದಾನೆ ಎಂದು ಸುಮ್ಮನೆ ಇದ್ದೆ. ತುಂಬ ಗಂಟೆ ಆದರೂ ಆತನು ಏಳಲಿಲ್ಲ. ಮನೆಯಿಂದ ತಾಯಿ ಕರೆ ಮಾಡಿ ಮಗನನ್ನು ಎಬ್ಬಿಸು ಎಂದಳು. ಮಗ ಮಲಗಿದ್ದಾನೆ ಯಾಕೆ ತೊಂದರೆ ಮಾಡಬೇಕು ಎಂದು ನನ್ನ ಪತ್ನಿಗೆ ಹೇಳಿದೆ. ಮಲಗಿ ತುಂಬಾ ಹೊತ್ತಾಯಿತು ಸಾಕು ಎಬ್ಬಿಸು ಎಂದಳು. ಆಗ ನಾನು ರೂಮಿಗೆ ಹೋಗಿ ಮಗನನ್ನ ಎಬ್ಬಿಸಲು ಯತ್ನಿಸಿದೆ. ಮಗ ಮೇಲೆ ಏಳಲೇ ಇಲ್ಲ, ಆತನ ಬಾಯಿಯಿಂದ ನಾಲ್ಕು ಹನಿ ರಕ್ತ ಬಿದ್ದಿತ್ತು. ನನಗೆ ಧೈರ್ಯ ಬರಲಿಲ್ಲ ಕೈ ಕಾಲು ಮುಟ್ಟಿ ನೋಡಿದೆ ಆದರೂ ಹೇಳಲಿಲ್ಲ. ತಕ್ಷಣ ಅಕ್ಕ ಪಕ್ಕದ ರೂಮಿನವರಿಗೆ ನನ್ನ ಮಗ ಮೇಲೇಳುತ್ತಿಲ್ಲ ಎಂದು ಹೇಳಿದೆ. ಅವರೂ ಸಹ ನನ್ನ ಮಗನ ಎಬ್ಬಿಸಲು ಪ್ರಯತ್ನ ಮಾಡಿದರು. ತಕ್ಷಣ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳಿದೆವು. ಆಗ ಆತನು ಮೃತಪಟ್ಟಿದ್ದಾನೆ ಎಂದು ಹೇಳಿದರು ಎಂದು ಅಳಲು ತೋಡಿಕೊಂಡರು.

ನನಗೆ ವರ್ಗಾವಣೆ ವಿಚಾರ ಏನೂ ಹೇಳಿರಲಿಲ್ಲ. ಹಣದ ವಿಚಾರವನ್ನೂ ನನಗೆ ಏನೂ ಹೇಳಿಲ್ಲ. ಎಲ್ಲವನ್ನು ತನ್ನ ತಾಯಿಯ ಜೊತೆಗೆ ಮಾತನಾಡುತ್ತಿದ್ದ. ನನ್ನ ಮಗ ಕೂಲಿ ಕೆಲಸ ಮಾಡಿ ಕಷ್ಟಪಟ್ಟು ಸರ್ಕಾರಿ ನೌಕರಿ ಸೇರಿದ್ದ. ಮಗನನ್ನು ಕಳೆದುಕೊಂಡ ನಮಗೆ ದಿಕ್ಕು ತೋಚದಂತೆ ಆಗಿದೆ. ಮಗನ ಸಾವು ನಮ್ಮ ಕುಟುಂಬಕ್ಕೆ ಸಹಿಸಲು ಆಗುತ್ತಿಲ್ಲ ಎಂದು ಕಣ್ಣೀರಿಟ್ಟರು.

ಹಣ ಎಲ್ಲಿಂದ ತರಲಿ ಎಂದಿದ್ದ…

ನನ್ನ ಮಗ ಸಾಯುವ ಎರಡು ದಿನ ಮೊದಲು ನಾನು ಜೊತೆಯಲ್ಲೇ ಇದ್ದೆ. ನನ್ನ ಮಗ ತುಂಬ ಕಷ್ಟಪಟ್ಟು ನೌಕರಿ ಸೇರಿದ್ದ. ನಾನು ನಮ್ಮೂರಿಗೆ ಹೋಗುವೆ ಎಂದಿದ್ದೆ. ಆಗ ಆತನು ನನ್ನ ವರ್ಗಾವಣೆ ಆಗುತ್ತಿದೆ ಎಂದು ಹೇಳಿದ್ದ. ನನ್ನ ಮಗ ವರ್ಗಾವಣೆಗೆ ಹಣ ವಿಚಾರ ಮಾತಾಡಿದ್ದ.ಅಷ್ಟೊಂದು ಹಣ ನಾನು ಏಲ್ಲಿಂದ‌ ತರಲಿ ಎಂದಿದ್ದ. ನಿಮ್ಮ ಅಣ್ಣಂದಿರನ್ನು ಕೇಳಪ್ಪಾ ಎಂದು ಮಗನಿಗೆ ಹೇಳಿದ್ದೆ ಪರಶುರಾಮ ತಾಯಿ ಹಿರೇಗಂಗಮ್ಮ ಹೇಳಿದರು.

ಟಾಪ್ ನ್ಯೂಸ್

11-bigg-boss

Bigg Boss Kannada-11: ಬಿಗ್ ಬಾಸ್.. ಪ್ರೋಮೊ ರಿಲೀಸ್: ಆ್ಯಂಕರ್ ಯಾರೆಂಬುದೇ ಕುತೂಹಲ !

10-hubli

Hubballi: ಕರ್ತವ್ಯದಲ್ಲಿದ್ದ ಎಎಸ್‌ಐ ತಲೆ ಮೇಲೆ ಬಿದ್ದ ಕಬ್ಬಿಣದ ರಾಡ್; ತೀವ್ರ ಗಾಯ

9-chikkamagaluru

Kottigehara: ಭಕ್ತಿಗೆ ಬಡತನವಿಲ್ಲವೆಂದು ತೋರಿಸಿಕೊಟ್ಟ ಬಾಲಕ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 12ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 12ನೇ ರೀಲ್ಸ್ ಪ್ರಸಾರ

Davanagere; ಎಸ್.ಪಿ ಕಾರಿನ ಮೇಲೆ  ಕಲ್ಲೆಸೆದ ಮಾನಸಿಕ ಅಸ್ವಸ್ಥ ಮಹಿಳೆ!

Davanagere; ಎಸ್.ಪಿ ಕಾರಿನ ಮೇಲೆ ಕಲ್ಲೆಸೆದ ಮಾನಸಿಕ ಅಸ್ವಸ್ಥ ಮಹಿಳೆ!

Bhopal: ರಸ್ತೆ ಬದಿ ಕುಳಿತಿದ್ದವರ ಮೇಲೆ ಏಕಾಏಕೀ ನರಿ ದಾಳಿ: ಗಾಯ

Bhopal: ರಸ್ತೆ ಬದಿ ಕುಳಿತಿದ್ದವರ ಮೇಲೆ ಏಕಾಏಕಿ ನರಿ ದಾಳಿ: ವಿಡಿಯೋ ವೈರಲ್

IAF: ವಿಂಗ್‌ ಕಮಾಂಡರ್‌ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ವಾಯು ಸೇನೆ ಮಹಿಳಾ ಅಧಿಕಾರಿ

IAF: ವಿಂಗ್‌ ಕಮಾಂಡರ್‌ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ವಾಯು ಸೇನೆ ಮಹಿಳಾ ಅಧಿಕಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನ್ಯಾಕೆ ಸಿಎಂ ಆಗಬಾರದು, ನಾನೂ ಸಿಎಂ ಆಕಾಂಕ್ಷಿ: ಬಸವರಾಜ ರಾಯರೆಡ್ಡಿ

CM Race: ನಾನ್ಯಾಕೆ ಸಿಎಂ ಆಗಬಾರದು, ನಾನೂ ಸಿಎಂ ಆಕಾಂಕ್ಷಿ: ಬಸವರಾಜ ರಾಯರೆಡ್ಡಿ

1-rrrr

Koppal: ಪತ್ನಿಯನ್ನು ಹ*ತ್ಯೆಗೈದು ರಾತ್ರೋ ರಾತ್ರಿ ಸು*ಟ್ಟು ಹಾಕಿದ ಕ್ರೂರಿ ಗಂಡ!

Koppala: ಲಾರಿ ಡಿಕ್ಕಿ ಹೊಡೆದು ಪಲ್ಟಿಯಾದ ಟ್ರ್ಯಾಕ್ಟರ್… ಗಣೇಶನ ವಿಗ್ರಹಕ್ಕೆ ಹಾನಿ

Koppala: ಲಾರಿ ಡಿಕ್ಕಿ ಹೊಡೆದು ಪಲ್ಟಿಯಾದ ಟ್ರ್ಯಾಕ್ಟರ್… ಗಣೇಶನ ವಿಗ್ರಹಕ್ಕೆ ಹಾನಿ

Kushtagi: ಸಾಕಿದ ಮಾಲೀಕನಿಗೆ ಬೈಕ್ ಗೆದ್ದು ಕೊಟ್ಟ ಟಗರು!

Kushtagi: ಸಾಕಿದ ಮಾಲೀಕನಿಗೆ ಬೈಕ್ ಗೆದ್ದು ಕೊಟ್ಟ ಟಗರು!

2-gangavathi

Gangavathi: ಪ್ಲಾಸ್ಟಿಕ್ ತಿಂದ ಕರುವಿಗೆ ಉಸಿರಾಟ ತೊಂದರೆ; ನೆರವಿಗೆ ಬಂದ ಕ್ರಿಕೆಟ್ ಆಟಗಾರರು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

11-bigg-boss

Bigg Boss Kannada-11: ಬಿಗ್ ಬಾಸ್.. ಪ್ರೋಮೊ ರಿಲೀಸ್: ಆ್ಯಂಕರ್ ಯಾರೆಂಬುದೇ ಕುತೂಹಲ !

10-hubli

Hubballi: ಕರ್ತವ್ಯದಲ್ಲಿದ್ದ ಎಎಸ್‌ಐ ತಲೆ ಮೇಲೆ ಬಿದ್ದ ಕಬ್ಬಿಣದ ರಾಡ್; ತೀವ್ರ ಗಾಯ

9-chikkamagaluru

Kottigehara: ಭಕ್ತಿಗೆ ಬಡತನವಿಲ್ಲವೆಂದು ತೋರಿಸಿಕೊಟ್ಟ ಬಾಲಕ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 12ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 12ನೇ ರೀಲ್ಸ್ ಪ್ರಸಾರ

Davanagere; ಎಸ್.ಪಿ ಕಾರಿನ ಮೇಲೆ  ಕಲ್ಲೆಸೆದ ಮಾನಸಿಕ ಅಸ್ವಸ್ಥ ಮಹಿಳೆ!

Davanagere; ಎಸ್.ಪಿ ಕಾರಿನ ಮೇಲೆ ಕಲ್ಲೆಸೆದ ಮಾನಸಿಕ ಅಸ್ವಸ್ಥ ಮಹಿಳೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.