ತಾಯಿಯ ನೆರವಿಗೆ ಸ್ಪಂದನೆ

•ಭಿಕ್ಷೆ ಬೇಡಿ ತಾಯಿ ಆರೈಕೆ ಮಾಡಿದ ಪ್ರಕರಣ•ದುರ್ಗಮ್ಮ-ಭಾಗ್ಯಾಗೆ ನೆರವಿನ ಹಸ್ತ

Team Udayavani, May 28, 2019, 7:47 AM IST

ಕೊಪ್ಪಳ: ದುರ್ಗಮ್ಮಳ ಆರೋಗ್ಯ ವಿಚಾರಿಸಲು ಆಗಮಿಸಿದ್ದ ಜಿಪಂ ಸದಸ್ಯ ಗವಿಸಿದ್ದಪ್ಪ ಕರಡಿ ಮತ್ತಿತರರು.

ಕೊಪ್ಪಳ: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಅನಾರೋಗ್ಯ ಪೀಡಿತ ತಾಯಿಯನ್ನು ಮಗು ಭಾಗ್ಯ ಭಿಕ್ಷೆ ಬೇಡಿ ಆರೈಕೆ ಮಾಡುತ್ತಿದ್ದ ವಿಚಾರ ಪತ್ರಿಕೆ, ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಗಣ್ಯಾತಿಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ತಾಯಿಯ ಆರೋಗ್ಯ ವಿಚಾರಿಸಿದ್ದಲ್ಲದೇ ಹಣಕಾಸು ನೆರವಿನ ಹಸ್ತ ಚಾಚಿದ್ದಾರೆ.

ಗಂಗಾವತಿ ತಾಲೂಕಿನ ಸಿದ್ದಾಪುರದ ನಿವಾಸಿ ದುರ್ಗಮ್ಮ ಭೋವಿ ಅನಾರೋಗ್ಯದಿಂದ ಬಳಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತ ಪತಿ ಅರ್ಜುನ್‌ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಪುನಃ ವಾಪಸ್‌ ಬಂದಿರಲಿಲ್ಲ. ಆಸ್ಪತ್ರೆ ಸಿಬ್ಬಂದಿ ದುರ್ಗಮ್ಮಳಿಗೆ ಚಿಕಿತ್ಸೆ ನೀಡಿ ಬಳಿಕ ಮನೆಗೆ ತೆರಳುವಂತೆ ಹೇಳಿದ್ದರು. ದುರ್ಗಮ್ಮ ಮನೆಗೆ ತೆರಳಲಾಗದೇ ಆಸ್ಪತ್ರೆ ಆವರಣದಲ್ಲೇ ನಾಲ್ಕು ದಿನ ಕಾಲ ಕಳೆದಿದ್ದಳು. ತಾಯಿ ದುರ್ಗಮ್ಮನ ಜತೆಗಿದ್ದ ಮಗು ಭಾಗ್ಯ ತನ್ನ ತಾಯಿ ಆರೈಕೆ ಮಾಡಲು ಅವರಿವರ ಬಳಿ ಭಿಕ್ಷೆ ಬೇಡಿ ತಾಯಿಗೆ ಊಟ ಮಾಡಿಸುತ್ತಿದ್ದಳು.

ಅಧಿಕಾರಿ ಭೇಟಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಈರಣ್ಣ ಪಂಚಾಳ ಆಸ್ಪತ್ರೆಗೆ ಭೇಟಿ ನೀಡಿ ದುರ್ಗಮ್ಮಳ ಆರೋಗ್ಯ ವಿಚಾರಣೆ ಮಾಡಿದರು. ವೈದ್ಯರ ಜತೆಗೂ ಚರ್ಚೆ ನಡೆಸಿ ಸಂಪೂರ್ಣ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು. ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಸಮಾಲೋಚನೆ ನಡೆಸಿದರು. ಮಗು ಭಾಗ್ಯಳಿಗೆ ದೊರೆಯಬೇಕಾದ ಶಿಕ್ಷಣ ಕುರಿತು ಚರ್ಚಿಸಿ ಮುಂದಿನ ಆರೈಕೆಗಾಗಿ ಸಂಬಂಧಿಸಿದ ಸಿಬ್ಬಂದಿ ಜತೆ ಮಾತನಾಡಿದರು. ಇವರೊಟ್ಟಿಗೆ ಸಂಘಟನೆ ಮುಖಂಡ ವಿಜಯ ಕವಲೂರು ಆಸ್ಪತ್ರೆಗೆ ಭೇಟಿ ನೀಡಿ ತಾಯಿ-ಮಗುವಿನ ಆರೋಗ್ಯ ವಿಚಾರಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ