ಕಲ್ಮಠಕ್ಕೆ ಮರಳಿದ ಕೊಟ್ಟೂರು ಶ್ರೀ

Team Udayavani, Dec 28, 2017, 9:16 AM IST

ಗಂಗಾವತಿ: ಲೈಂಗಿಕ ಹಗರಣದ ಫೋಟೋ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಕಲ್ಮಠದಿಂದ ನಾಪತ್ತೆಯಾಗಿದ್ದ ಡಾ.ಕೊಟ್ಟೂರು ಮಹಾಸ್ವಾಮಿಗಳು ಮತ್ತೆ ಮೂಲಸ್ಥಾನ ಪ್ರತಿಷ್ಠಿತ ಕಲ್ಮಠಕ್ಕೆ ಬುಧವಾರ ಆಗಮಿಸಿದ್ದಾರೆ.

ಕೊಡಗಲಿ ಶಾಖಾಮಠದಲ್ಲಿ ವಾಸವಾಗಿದ್ದ ಸ್ವಾಮೀಜಿಗಳು. ಕೊಡಗಲಿ ಶಾಖಾಮಠ ಹಾಗೂ ಸ್ಥಳೀಯ ಭಕ್ತರು, ಪೊಲೀಸರ
ನೆರವಿನೊಂದಿಗೆ ಬುಧವಾರ ಕಲ್ಮಠಕ್ಕೆ ಆಗಮಿಸಿ ಧಾರ್ಮಿಕ ಕಾರ್ಯ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ
ಮಾತನಾಡಿ, ತಾವು ಯಾವುದೇ ಲೈಂಗಿಕ ಹಗರಣ ನಡೆಸಿಲ್ಲ. ಕೆಲವರು ಷಡ್ಯಂತ್ರ ನಡೆಸಿ ನಕಲಿ ದೃಶ್ಯ ಸೃಷ್ಟಿ ಮಾಡಿದ್ದಾರೆ. ಶ್ರೀಮಠದಿಂದ ಶಿಕ್ಷಣ ದಾಸೋಹದಂತಹ ಉತ್ತಮ ಕಾರ್ಯ ಮಾಡು ತ್ತಿದ್ದು ಇದನ್ನು ಸಹಿಸದೆ ಕೆಲವರು ಕುತಂತ್ರ ಮಾಡಿ ತಮ್ಮನ್ನು ಮಠದಿಂದ ಹೊರಗೆ ಹಾಕಲು ಯತ್ನ ನಡೆಸಿದ್ದಾರೆ. ದುಷ್ಕೃತ್ಯ ನಡೆಸಿದವರು ಮತ್ತು ಕೆಲ ಮಾಧ್ಯಮಗಳ ವಿರುದ್ಧ ಕಾನೂನು ಹೋರಾಟ ನಡೆಸಲಾಗುತ್ತಿದೆ ಎಂದರು.  

ಈಗಾಗಲೇ ಬೆಂಗಳೂರು ಸಿವಿಲ್‌ ಹಾಗೂ ಗಂಗಾವತಿ ನ್ಯಾಯಾಲಯಗಳಲ್ಲಿ ಅರ್ಜಿ ಹಾಕಲಾಗಿದೆ. ತಮ್ಮ ವಿರುದ್ಧ ಕಪೋಲಕಲ್ಪಿತ ವರದಿ ಬಿತ್ತರಿಸದಂತೆ ತಡೆ ಕೂಡ ಸಿಕ್ಕಿದೆ. ಶ್ರೀಮಠದ ನಿತ್ಯ ಕಾರ್ಯ ಯಥಾ ರೀತಿ ನಡೆಯುತ್ತದೆ, ಭಕ್ತರು ಸುಳ್ಳು ಸುದ್ದಿಗೆ ಕಿವಿಕೊಡಬಾರದು ಎಂದು ಶ್ರೀಗಳು ತಿಳಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ