ರಸ್ತೆ ಅಗಲಿಕರಣದ ಕಾಮಗಾರಿ ಅಪೂರ್ಣ: ವಾಹನ ಸವಾರರ ಗೋಳು ಕೇಳುವರ್ಯಾರು?


Team Udayavani, Jan 24, 2022, 6:54 PM IST

ರಸ್ತೆ ಅಗಲಿಕರಣದ ಕಾಮಗಾರಿ ಅಪೂರ್ಣ: ವಾಹನ ಸವಾರರ ಗೋಳು ಕೇಳುವರ್ಯಾರು?

ದೋಟಿಹಾಳ: ಗ್ರಾಮದಲ್ಲಿ ಹಾದುಹೋದ ಕೊಪ್ಪಳ-ಕ್ಯಾದಗುಂಪಾ ಮಾರ್ಗದ ರಸ್ತೆಯ ಅಗಲಿಕರಣದ ಕಾಮಗಾರಿ ಅಪೂರ್ಣವಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ವಾಹನ ಸವಾರರ ಗೋಳು ಆ ದೇವರೇ ಗತಿ ಎನ್ನುವಂತಾಗಿದೆ.

ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು 3-4 ವರ್ಷಗಳೇ ಕಳೇದ್ದಿದು, ಇದೊಂದು ಜ್ವಲಂತ ಸಮಸ್ಯೆಯಾಗಿ ಉಳಿದಿದೆ. ಇದನ್ನು ಸರಿಪಡಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಮೂಕಪ್ರೇಕ್ಷಕರಾಗಿ ಇರುವದರಿಂದ ಸಮಸ್ಯೆಯಾಗಿ ಉಳಿದಿದೆ.

ಈ ಮಾರ್ಗವಾಗಿ ದಿನನಿತ್ಯ ಸಂಚರಿಸುವ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದಾರೆ.

ಗ್ರಾಮದ ಮಧ್ಯ ಭಾಗದಲ್ಲಿ ಆದು ಹೋದ ಕೊಪ್ಪಳ-ಕ್ಯಾದಗುಂಪಾ ರಸ್ತೆಯ ಅಗಲಿಕರಣ ಕಾಮಗಾರಿ 2018ರಲ್ಲಿ ನಡೆದ್ದಿತು. ಗ್ರಾಮದವರಗೆ ಪೂರ್ಣಗೊಂಡಿದೆ. ಗ್ರಾಮದ ಮಧ್ಯ ಭಾಗದ ರಸ್ತೆ ಅಗಲಿಕರಣವಾಗಬೇಕಿದೆ. ಗ್ರಾಮದ ಮುದೇನೂರು ರಸ್ತೆಯಿಂದ ಸುಮಾರು 400 ಮೀಟರ್ ಉದ್ದದ ಸಿಸಿ ರಸ್ತೆಯನ್ನಾಗಿ ಅಗಲಿಕರಣ ಮಾಡಬೇಕಾಗಿತ್ತು. ಆದರೆ ಈ ರಸ್ತೆಯ ಅಕ್ಕ-ಪಕ್ಕದಲ್ಲಿ ಇರುವ ಮನೆಗಳನ್ನು ತೆರವು ಗೋಳಿಸದೇ ಇರುವದರಿಂದ ಇದ್ದ ಹಳೆಯ ಮೇಲೆ ಸಿಸಿ ರಸ್ತೆ ಮಾಡಿದರು. ಈ ವೇಳೆ ರಸ್ತೆಯ ಮಧ್ಯ 20ಅಡಿ ಉದ್ದ ಸಿಸಿ ರಸ್ತೆ ಮಾಡದೆ ಇರುವದರಿಂದ ರಸ್ತೆಯಲ್ಲಿ ದೊಡ್ಡ ಕಂದಕ ಬಿದ್ದಂತಾಗಿದೆ. ಈ ಕಂದಕದಲ್ಲಿ ಸಾಕಷ್ಟು ಜನ ವಾಹನ ಸವಾರರು ಬಿದ್ದು, ತೀವ್ರತರನಾದ ಗಾಯಗಳಾಗಿವೆ. ರಾತ್ರಿ ವೇಳೆ ಈ ಕಂದಕ ಕಾಣದೆ ಅಪಘಾತಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು, ಪ್ರಯಾಣಿಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಕೊಪ್ಪಳ-ಕ್ಯಾದಗುಂಪಿ ಮಾರ್ಗದ ಹಳೆ ರಸ್ತೆ 5ಮಿಮಿ ಇದು. ಈ ರಸ್ತೆಯ 7ಮೀಟರವರಗೆ ಅಗಲಿಕಣ ಮಾಡಬೇಕಾಗಿತ್ತು. ರಸ್ತೆಯ ಎರಡು ಬದಿಗಳಲ್ಲಿ 1ಮೀಟರ ಅಗಲಿಕರಣ ಮಾಡಬೇಕಾದರೆ ರಸ್ತೆ ಪಕ್ಕದಲ್ಲಿ ಇರುವ ಮನೆಗಳನ್ನು ತೆರವು ಮಾಡಬೇಕಾಗಿತ್ತು. ಇದರ ಬಗ್ಗೆ ಗ್ರಾಪಂ, ತಾಪಂ ಇಲಾಖೆಯವರು ಮನೆಗಳ ಮಾಲಿಕರಿಗೆ 2018ರಲ್ಲಿ 2-3 ಬಾರಿ ಸೂಚನೆಯನ್ನು ನೀಡಿದರು ತೆರವು ಕರ‍್ಯಕ್ಕೆ ಮಾಲಿಕರು ಮುಂದಾಗಲಿಲ್ಲ. ಹೀಗಾಗಿ ಕಾಮಗಾರಿಯ ನಿಯಮದ ಪ್ರಕಾರ 7ಮೀಟರವರಗೆ ರಸ್ತೆಯನ್ನು ಅಗಲಿಕರಣ ಆಗಲಿಲ್ಲ.

ಸಾರಿಗೆ ಬಸ್ಸು ಜಖಂ: ಈ ರಸ್ತೆಯ ಮಾರ್ಗವಾಗಿ ಪ್ರತಿನಿತ್ಯ ಸಂಚರಿಸು ಸಾರಿಗೆ ಇಲಾಖೆಯ ಎಷ್ಟೋ ಬಸ್ಸುಗಳು ಈ ಕಂದಕದಿಂದ ಜಖಂಗೊಂಡಿವೆ. ಸಾರಿಗೆ ಬಸ್ಸ್ ಅಲ್ಲದೆ ಖಾಸಗಿ ವಾಹನಗಳು ಈ ರಸ್ತೆಯ ಸಂಚರಿಸಿ ಹಾಳಾಗಿವೆ. ಸಾರಿಗೆ ಬಸ್ಸು ಚಾಲಕರು ಈ ಕಂದಕ ದಿಂದ ಬಸ್ಸ ಜಖಂಗೊಂಡ(ಹಾಳದ) ಕಾರಣ ಇಲಾಖೆಗೆ ದಂಡ ಕಟ್ಟಿದ ಉದಾರಣೆಗಳು ಇವೆ. ಹೀಗಾಗಿ ಈ ಮಾರ್ಗದ ವಾಹನಗಳಿಗೆ ಬಸ್ ಚಾಲಕರಾಗಿ ಬರಲು ಹಲವರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಈ ಮಾರ್ಗ ಬಸ್ಸುಗಳು ಸರಿಯಾದ ಸಮಯಕ್ಕೆ ಬರುತ್ತಲ್ಲ. ಇದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದರ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದರೆ ಮೊದಲು ನಿಮ್ಮ ರಸ್ತೆಯನ್ನು ಸರಿಪಡಿಸಿ ಆಮೇಲೆ ಬಸ್ ಕೇಳಿ ಎಂದು ಹೇಳುತ್ತಿದ್ದಾರೆ.

ರಸ್ತೆ ಅಗಲಿಕರಣ ವೇಳೆ ಕೇಸೂರ-ದೋಟಿಹಾಳ ಗ್ರಾಮಸ್ಥರು ಸಹಕಾರ ನೀಡದೇ ಇರುವದರಿಂದ ಕಾಮಗಾರಿ ಅಪೂರ್ಣಗೊಂಡಿದ್ದೆ. ಹೀಗಾಗಿ ರಸ್ತೆ ಮಧ್ಯ ಕಂದಕ ನಿರ್ಮಾಣವಾಗಿ ಸದ್ಯ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.ನಾಗರಾಜ ಇಳಗೇರ,  ಖಾಸಗಿ ವಾಹನ ಚಾಲಕ

ದೋಟಿಹಾಳ ಗ್ರಾಮದಲ್ಲಿ ರಸ್ತೆ ಅಗಲಿಕರಣ ವೇಳೆ ಗ್ರಾಮಸ್ಥರು ಸಹಕಾರ ನೀಡದ ಕಾರಣ ಕಾಮಗಾರಿ ಪೂರ್ಣಗೊಳದೆ ಇರುವದರಿಂದ ರಸ್ತೆಯ ಕಂದಕ ನಿರ್ಮಾಣವಾಗಿದೆ. ಇದರಿಂದ ನಮ್ಮ ಇಲಾಖೆಯ 6-7 ಬಸ್ಸುಗಳು ಜಖಂಗೊಂಡಿವೆ. ರಸ್ತೆ ಸರಿಪಡಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ.ಸಂತೋಷಕುಮಾರ,ಕೆಎಸ್‌ಆರ್‌ಟಿಸಿ ಕುಷ್ಟಗಿ ಡಿಪೋ ಮ್ಯಾನೇಜರ್ 

-ಮಲ್ಲಿಕಾರ್ಜುನ ಮೆದಿಕೇರಿ

ಟಾಪ್ ನ್ಯೂಸ್

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

1-d-s-sfsf

ಬೆಂಗಳೂರಿನಲ್ಲಿ ಐಕಿಯ ಸ್ಟೋರ್:ಸಿಇಓ ಜೆಸ್ಪರ್ ಬ್ರಾಡಿನ್ ಜತೆ ಸಿಎಂ ಚರ್ಚೆ

ಲವ್‌ ಬರ್ಡ್ಸ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿ: ಹೊಸ ಚಿತ್ರದಲ್ಲಿ ಕೃಷ್ಣ-ಮಿಲನಾ

ಲವ್‌ ಬರ್ಡ್ಸ್‌ನಲ್ಲಿ ಲವ್‌ ಮಾಕ್ಟೇಲ್‌ ಜೋಡಿ: ಹೊಸ ಚಿತ್ರದಲ್ಲಿ ಕೃಷ್ಣ-ಮಿಲನಾ

1-fsfdf

ಹೆಚ್ಚುತ್ತಿರುವ ಮಂಕಿ ಪಾಕ್ಸ್ ಸೋಂಕಿನ ಪ್ರಮಾಣ : ಸಲಿಂಗಕಾಮಿಗಳಿಗೆ ಎಚ್ಚರಿಕೆ

1-dfdffds

ಬಿಜೆಪಿ ನಿಷ್ಠಾವಂತನಾದ ನನ್ನ ಸಚಿವ ಸ್ಥಾನ ಭದ್ರ: ಸಚಿವ ಪ್ರಭು ಚವ್ಹಾಣ್

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

dk shi 2

ಮಸೀದಿ ಕುರಿತು ತಾಂಬೂಲ ಪ್ರಶ್ನೆ; ಬಿಜೆಪಿ ಈ ರಾಜ್ಯವನ್ನು ಕೊಲ್ಲುತ್ತಿದೆ :ಡಿಕೆಶಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

ಸಾಮಾನ್ಯ ಕಾರ್ಯಕರ್ತೆಗೆ ಮೇಲ್ಮನೆ ಗೌರವ

news ningajja

ಗಂಗಾವತಿ : ಆನೆಗೊಂದಿ ಬಳಿಯ ದುರ್ಗಾ ಪ್ಯಾರಡೈಸ್ ರೆಸಾರ್ಟ್ ಗೆ  ಬೆಂಕಿ

ಲಕ್ಷಾಂತರ ಭಕ್ತರ ಮಧ್ಯೆ ಸಾಂಘವಾಗಿ ನೆರವೇರಿದ ಹುಲಿಗೆಮ್ಮದೇವಿ ಮಹಾ ರಥೋತ್ಸವ

ಲಕ್ಷಾಂತರ ಭಕ್ತರ ಮಧ್ಯೆ ಸಾಂಘವಾಗಿ ನೆರವೇರಿದ ಹುಲಿಗೆಮ್ಮದೇವಿ ಮಹಾ ರಥೋತ್ಸವ

20

ನಂದಿಹಳ್ಳಿಯಲ್ಲಿ ಜಿಲ್ಲಾಧಿಕಾರಿ ಸಂಧಾನ ಸಭೆ

19

10 ಎಕರೆಯಲ್ಲಿ ಹಣ್ಣು ಸಂಸ್ಕರಣಾ ಘಟಕ

MUST WATCH

udayavani youtube

ಮಳಲಿ ಮಸೀದಿಯಲ್ಲಿ ದೇವರ ಸಾನಿಧ್ಯ ಗೋಚರ

udayavani youtube

‘ನನಗೆ ಏಳೂವರೆ ಶನಿ ಉಂಟು!’

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

ಹೊಸ ಸೇರ್ಪಡೆ

18

ಸಾಮಾನ್ಯ ಕಾರ್ಯಕರ್ತೆಗೆ ಮೇಲ್ಮನೆ ಗೌರವ

fire-fighters

ಅತಿವೃಷ್ಟಿಯಲ್ಲಿ ಆಪದ್ಭಾಂಧವನಾದ ಅಗ್ನಿಶಾಮಕ ದಳ!

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

2024ರ ಚುನಾವಣೆ “ಕೈ”ಗೆ ದುಬಾರಿಯಾಗಲಿದೆಯೇ: ಐದು ತಿಂಗಳಲ್ಲಿ ಘಟಾನುಘಟಿಗಳ ರಾಜೀನಾಮೆ

Untitled-1

ಶಿಥಿಲಗೊಂಡ ಸರಕಾರಿ ಶಾಲೆಗಳ ಅಭಿವೃದ್ಧಿಪಡಿಸಿ

huvinahadagali

ರೈತರ ಹೊಲಗಳಿಗೆ ಕಲುಷಿತ ನೀರು ತಡೆಗೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.