Udayavni Special

ಸ್ಥಳೀಯ ಸಂಸ್ಥೆಗಳ ತೆರಿಗೆ ಬಾಕಿ 11 ಕೋಟಿ ರೂ.

ಗಂಗಾವತಿ, ಕೊಪ್ಪಳದಲ್ಲೇ ಬಾಕಿ ಹೆಚ್ಚು ವಸೂಲಾಗದೇ ನರಳಾಡುತ್ತಿವೆ ಗ್ರಾಪಂಗಳು ತೆರಿಗೆ ಸಂಗ್ರಹದಲ್ಲಿ ಶೇ.50 ಪ್ರಗತಿಯಿಲ್ಲ

Team Udayavani, May 26, 2019, 12:10 PM IST

Udayavani Kannada Newspaper

ಕೊಪ್ಪಳ: ಜಿಲ್ಲೆಯಲ್ಲಿ ಬರದ ಪರಿಸ್ಥಿತಿಯಿಂದಲೋ..? ಅಥವಾ ಗ್ರಾಪಂ ಸಿಬ್ಬಂದಿಗಳ ವಿಳಂಬ ನೀತಿಯಿಂದಲೋ ? ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ವಸೂಲಾತಿ ನಡೆಯುತ್ತಿಲ್ಲ. ಅಂಕಿ-ಅಂಶಗಳ ಲೆಕ್ಕಾಚಾರದಲ್ಲಿ 153 ಗ್ರಾಪಂಗಳಲ್ಲಿ 11 ಕೋಟಿಯಷ್ಟು ತೆರಿಗೆ ಬರುವುದು ಬಾಕಿಯಿದೆ.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಜನರಿಂದ ಸಂಗ್ರಹ ಮಾಡಿದ ತೆರಿಗೆಯಿಂದಲೇ ಆಡಳಿತ ನಡೆಸಬೇಕಾದ ಸ್ಥಿತಿಯಿದೆ. ಸರ್ಕಾರ ಅಲ್ಪ ಅನುದಾನ ಮಂಜೂರು ಮಾಡಿದರೆ, ಉಳಿದ ಹಣ ವಾಣಿಜ್ಯ ಮಳಿಗೆ, ನೀರಿನ ಕರ, ಸ್ವಚ್ಛತಾ ಕರ, ಬಾಡಿಗೆ, ಕಟ್ಟಡ, ಮನೆ ಕರ ಸೇರಿ ಸೇರಿದಂತೆ ಇತರೆ ತೆರಿಗೆಗಳನ್ನು ಗ್ರಾಪಂಗಳೇ ಸಾರ್ವಜನಿಕರಿಂದ ವಸೂಲಿ ಮಾಡಬೇಕಿದೆ. ಪ್ರತಿ ವರ್ಷ ಮನೆ-ಮನೆಗೆ ತೆರಳಿ ಕರ ವಸೂಲಿ ಮಾಡಬೇಕಾಗಿದ್ದರೂ ಗ್ರಾಪಂಗಳಿಂದ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ವಸೂಲಿ ನಡೆದಿಲ್ಲ.

11.79 ಕೋಟಿ ರೂ. ಬಾಕಿ: ಅಂಕಿ-ಅಂಶಗಳ ಲೆಕ್ಕಾಚಾರ ಗಮನಿಸಿದರೆ, ಜಿಲ್ಲೆಯಲ್ಲಿನ 153 ಗ್ರಾಪಂನಲ್ಲಿ 23 ಕೋಟಿ ರೂ. ತೆರಿಗೆ ವಸೂಲಿ ಮಾಡಬೇಕಿತ್ತು. ಮಾರ್ಚ್‌-2019ರ ಅಂತ್ಯಕ್ಕೆ 11.25 ಕೋಟಿ ರೂ. ವಸೂಲಿ ಮಾಡಲಾಗಿದೆ. ಅಂದರೆ ಇನ್ನೂ 11.79 ಕೋಟಿ ರೂ. ನಷ್ಟು ವಸೂಲಿ ಮಾಡಬೇಕಿದೆ. ಕೊಪ್ಪಳ ತಾಲೂಕಿನಲ್ಲಿ 4.21 ಕೋಟಿ, ಗಂಗಾವತಿ ತಾಲೂಕಿನಲ್ಲಿ 3.39 ಕೋಟಿ, ಯಲಬುರ್ಗಾ 1.89 ಕೋಟಿ, ಕುಷ್ಟಗಿ ತಾಲೂಕಿನಲ್ಲಿ 1.75 ಕೋಟಿ ವಸೂಲಿ ಬಾಕಿಯಿದೆ.

ಗಂಗಾವತಿ, ಯಲಬುರ್ಗಾ ಹೆಚ್ಚು: ವಿಶೇಷವೆಂದರೆ ಜಿಲ್ಲೆಯಲ್ಲಿ ಗಂಗಾವತಿ ಹಾಗೂ ಕೊಪ್ಪಳ ತಾಲೂಕಿನಲ್ಲಿಯೇ ಹೆಚ್ಚಿನ ಮಟ್ಟದ ತೆರಿಗೆ ಬರಬೇಕಿದೆ. ಗಂಗಾವತಿಯಲ್ಲಿ ಹಲವು ರೈಸ್‌ ಮಿಲ್ಗಳು, ವಿವಿಧ ಉದ್ಯಮಗಳಿವೆ. ಅವರೇ ಸಕಾಲಕ್ಕೆ ತೆರಿಗೆ ಕಟ್ಟಿಲ್ಲ. ಇನ್ನೂ ಕೊಪ್ಪಳ ತಾಲೂಕಿನಲ್ಲೂ ಹಲವು ಉದ್ಯಮಗಳು ಬಾಕಿ ಉಳಿಸಿಕೊಂಡಿದ್ದಾರೆ. ಇಲ್ಲಿ ಗ್ರಾಪಂ ಸಿಬ್ಬಂದಿಗಳ ನಿರಾಸಕ್ತಿಯೋ..? ಜನರೇ ತೆರಿಗೆ ಕಟ್ಟಲು ಮನಸ್ಸು ಮಾಡುತ್ತಿಲ್ಲವೋ| ಜಿಪಂಗೆ ತಿಳಿಯದಂತಾಗಿದೆ.

ಇನ್ನೂ ಸರ್ಕಾರ ಗ್ರಾಪಂ ಪಿಡಿಒ ಹೊರತು ಪಡಿಸಿದರೆ ಉಳಿದಂತೆ ಉಳಿದ ನೌಕರಿಗೆ ಪೂರ್ಣ ಪ್ರಮಾಣದಲ್ಲಿ ವೇತನ ಬಿಡುಗಡೆ ಮಾಡಲ್ಲ. ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹವಾದ ತೆರಿಗೆಯಲ್ಲೇ ವೇತನ ಬಿಡುಗಡೆ ಮಾಡಬೇಕಿದೆ. ಜೊತೆಗೆ ಆಡಳಿತ ವೆಚ್ಚ, ಇತರೆ ಕಾರ್ಯಕ್ಕೂ ಅನುದಾನ ಮೀಸಲಿಟ್ಟು ಗ್ರಾಪಂನಡಿ ಬರುವ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಬೇಕಿದೆ.

ಇನ್ನೂ ಜಿಲ್ಲೆಯಲ್ಲಿ ಬರದ ಪರಿಸ್ಥಿತಿಯಿಂದಾಗಿ ಜನರ ಬಳಿ ಹಣವಿಲ್ಲ. ದುಡಿಮೆ ಇಲ್ಲದೇ ಅವರೇ ಅನ್ಯ ಊರುಗಳಿಗೆ ಗುಳೆ ಹೋಗುತ್ತಿದ್ದಾರೆ. ಇನ್ನೆಲ್ಲಿಂದ ತೆರಿಗೆ ಕಟ್ಟಬೇಕು ಎನ್ನುವುದು ಜನರ ಮಾತಾಗಿದೆ. ಹಾಗಾಗಿ ಗ್ರಾಪಂಗಳು ತೆರಿಗೆ ವಸೂಲಾತಿ ಆಗುತ್ತಿಲ್ಲ ಎಂದು ನರಳಾಡುತ್ತಿವೆ. ಈ ಎಲ್ಲ ಲೆಕ್ಕಾಚಾರದಲ್ಲಿ ತೆರಿಗೆ ವಸೂಲಾತಿಯಲ್ಲಿ ಕೊಪ್ಪಳ ತಾಲೂಕು ಶೇ.64ರಷ್ಟು ಪ್ರಗತಿ ಸಾಧಿಸಿದ್ದರೆ, ಗಂಗಾವತಿ ಶೇ.47, ಯಲಬುರ್ಗಾ-ಶೇ.36, ಕುಷ್ಟಗಿ ಶೇ.43ರಷ್ಟು ಸೇರಿದಂತೆ ಒಟ್ಟಾರೆ ಜಿಲ್ಲಾದ್ಯಂತ ಶೇ.48ರಷ್ಟು ಪ್ರಗತಿ ಸಾಧಿಸಿದೆ. ಅಂದರೆ ಶೇ.50ರಷ್ಟು ಪ್ರಗತಿ ಸಾಧಿಸಲು ಹರಸಾಹಸ ಪಡುವಂತಾಗಿದೆ.

•ದತ್ತು ಕಮ್ಮಾರ

ಟಾಪ್ ನ್ಯೂಸ್

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

ವಲಸಿಗರ ಹತ್ಯೆಗೆ ಕಾರ್ಯಸೂಚಿ; ಕಾಶ್ಮೀರದ ಉಗ್ರರಿಗೆ ಐಎಸ್‌ಐಯಿಂದ 22 ಅಂಶಗಳ ನೀಲನಕ್ಷೆ

ವಲಸಿಗರ ಹತ್ಯೆಗೆ ಕಾರ್ಯಸೂಚಿ; ಕಾಶ್ಮೀರದ ಉಗ್ರರಿಗೆ ಐಎಸ್‌ಐಯಿಂದ 22 ಅಂಶಗಳ ನೀಲನಕ್ಷೆ

ರಾಜಕೀಯದಲ್ಲಿ ನಶೆ ಗಲಾಟೆ!

ರಾಜಕೀಯದಲ್ಲಿ ನಶೆ ಗಲಾಟೆ!

ಬುದ್ಧನ ನಿರ್ವಾಣ ಸ್ಥಳದಲ್ಲಿ ಮೋದಿಯಿಂದ ಅಂ.ರಾ. ವಿಮಾನ ನಿಲ್ದಾಣ ಉದ್ಘಾಟನೆ

ಬುದ್ಧನ ನಿರ್ವಾಣ ಸ್ಥಳದಲ್ಲಿ ಮೋದಿಯಿಂದ ಅಂ.ರಾ. ವಿಮಾನ ನಿಲ್ದಾಣ ಉದ್ಘಾಟನೆ

ಮಧ್ಯಾಂತರ-ನಿಗದಿತ ಚುನಾವಣೆಯ ಲಾಭ ನಷ್ಟದ ಲೆಕ್ಕ

ಮಧ್ಯಾಂತರ-ನಿಗದಿತ ಚುನಾವಣೆಯ ಲಾಭ ನಷ್ಟದ ಲೆಕ್ಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fhfcghftyt

ಕೆಟ್ಟು ನಿಂತ ಆಂಬ್ಯುಲೆನ್ಸ್‌  | ಮೈಮರೆತ ಕಿಮ್ಸ್‌  

ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಕೀಯ ಗಂಜಿಗಿರಾಕಿಗಳ ಸ್ಪರ್ಧೆ ಶಂಕರ ಹೂಗಾರ ಆರೋಪ

ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಕೀಯ ಗಂಜಿ ಗಿರಾಕಿಗಳ ಸ್ಪರ್ಧೆ ಶಂಕರ ಹೂಗಾರ ಆರೋಪ

ಶಾಂತಿ ಸೌಹಾರ್ದತೆಯ ಸಂಕೇತವೇ ಪೈಗಂಬರ್ ಜಯಂತಿ: ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್ .

ಶಾಂತಿ ಸೌಹಾರ್ದತೆಯ ಸಂಕೇತವೇ ಪೈಗಂಬರ್ ಜಯಂತಿ: ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್ .

ಗಂಗಾವತಿ: ಸಾಣಾಪುರ್ ಲೇಕ್; ಜಂಪಿಂಗ್ ಮಾಡಲು ಹೋಗಿ ಇಬ್ಬರು ಐಟಿ ಉದ್ಯೋಗಿಗಳು ನೀರು ಪಾಲು

ಗಂಗಾವತಿ: ಸಾಣಾಪುರ್ ಲೇಕ್; ಜಂಪಿಂಗ್ ಮಾಡಲು ಹೋಗಿ ಇಬ್ಬರು ಐಟಿ ಉದ್ಯೋಗಿಗಳು ನೀರು ಪಾಲು

hfghftytr

ಗುಳದಾಳಕ್ಕೆ ನಡೆದುಕೊಂಡು ಬಂದ ಜಿಲ್ಲಾಧಿಕಾರಿ 

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ಹಳೆ ತಂತ್ರಗಾರಿಕೆ ಬದಲಿಸಿದ ಪಾಕ್‌

ಹಳೆ ತಂತ್ರಗಾರಿಕೆ ಬದಲಿಸಿದ ಪಾಕ್‌

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ಡಾ| ವಿವೇಕ ರೈ ಸಹಿತ 7 ಮಂದಿಗೆ “ಮಾಸ್ತಿ ಪ್ರಶಸ್ತಿ’

ಡಾ| ವಿವೇಕ ರೈ ಸಹಿತ 7 ಮಂದಿಗೆ “ಮಾಸ್ತಿ ಪ್ರಶಸ್ತಿ’

ಭಾರತ-ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು: ಬಿಸಿಸಿಐ

ಭಾರತ-ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು: ಬಿಸಿಸಿಐ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.