ಕೈಕೊಟ್ಟ ಪ್ರೇಮಿಗಾಗಿ ಧರಣಿ

Team Udayavani, Sep 11, 2019, 11:02 AM IST

ಕೊಪ್ಪಳ: ಕುಕನೂರಿನ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡಿರುವ ಜೋಡಿ.

ಕೊಪ್ಪಳ: ಪ್ರಿಯತಮ ಕೈಕೊಟ್ಟ ಎಂದು ಮನನೊಂದು ಪ್ರೇಯಸಿ ಹುಡುಗನ ಮನೆಯ ಮುಂದೆ ಸೋಮವಾರ ಇಡೀ ರಾತ್ರಿ ಧರಣಿ ನಡೆಸಿದ ಪ್ರಸಂಗ ಕುಕನೂರು ತಾಲೂಕಿನ ಭಾನಾಪೂರ ಗ್ರಾಮದಲ್ಲಿ ನಡೆದಿದೆ.

ಹುಬ್ಬಳ್ಳಿಯಲ್ಲಿ ಪ್ಯಾರಾ ಮೆಡಿಕಲ್ ಅಭ್ಯಾಸ ಮಾಡುತ್ತಿರುವ ಭಾನಾಪೂರ ಗ್ರಾಮದ ಯುವತಿ ಶಕುಂತಲಾ ಕಳೆದ ಕೆಲವು ತಿಂಗಳ ಹಿಂದೆ ಅದೇ ಗ್ರಾಮದ ಯುವಕ ವಸಂತನನ್ನು ಪ್ರೀತಿ ಮಾಡಿದ್ದಾಳೆ. ಇಬ್ಬರ ನಡುವೆ ಪ್ರೇಮಾಂಕುರ ನಡೆದಿದೆ. ಯುವಕ ಹೆಚ್ಚಾಗಿ ಗಂಗಾವತಿಯ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದರಿಂದ ಅಲ್ಲಿಯೂ ಪಾರ್ಕ್‌ನಲ್ಲಿ ಇಬ್ಬರು ಸುತ್ತಾಡಿದ್ದಾರೆ.

ಆದರೆ ಕೆಲವು ದಿನಗಳ ಬಳಿಕ ಪ್ರಿಯಕರ ತನ್ನ ಪ್ರೇಯಸಿಯನ್ನು ನಿರಾಕರಿಸಿದ್ದರಿಂದ ಮನ ನೊಂದ ಪ್ರಿಯತಮೆ ನ್ಯಾಯಕ್ಕಾಗಿ ಕುಕನೂರು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಳು. ಪೊಲೀಸರ ಮಧ್ಯಸ್ಥಿಕೆಯಲ್ಲಿಯೇ ಸಂಧಾನ ಮಾತುಕತೆ ನಡೆದಿತ್ತು. ಪ್ರಿಯತಮನ ಜೊತೆ ಯುವತಿ ದೇವಸ್ಥಾನದಲ್ಲಿ ಹಾರ ಬದಲಿಸುವ ಮೂಲಕ ಮದುವೆ ಮಾಡಿಕೊಂಡಿದ್ದಳು. ಆದರೆ ನಾಲ್ಕು ದಿನ ಬಿಟ್ಟು ಗಂಡನ ಮನೆಗೆ ಬರುವಂತೆ ಹೇಳಿದ್ದ ಯುವಕನ ಸಂಬಂಧಿಕರು ಹೇಳಿದ್ದರು. ಆದರೆ ನಾಲ್ಕು ದಿನ ಬಿಟ್ಟು ಬಂದು ಪ್ರಿಯಕರ ಮನೆಯಲ್ಲಿ ಕೇಳಿದರೆ ಪ್ರೇಮಿ ನಾಪತ್ತೆಯಾಗಿದ್ದಾನೆ.

ಸೋಮವಾರ ಗ್ರಾಮದಲ್ಲಿ ನನ್ನ ಗಂಡ ಬರಬೇಕು. ನನ್ನನ್ನು ಮನೆಯ ಒಳಗೆ ಕರೆದುಕೊಂಡು ಹೋಗಬೇಕೆಂದು ಪ್ರಿಯತಮೆ ಶಕುಂತಲಾ ಮನೆಯ ಮುಂದೆ ಇಡೀ ರಾತ್ರಿ ಧರಣಿ ನಡೆಸಿದ ಪ್ರಸಂಗವೂ ನಡೆದಿದೆ. ಆದರೆ ಯುವಕ ಮಾತ್ರ ನಾಪತ್ತೆಯಾಗಿದ್ದಾನೆ. ಇದರ ಹಿಂದೆ ಪಾಲಕರ ಕೈವಾಡವಿದೆ ಎಂದು ಆಪಾದನೆ ಕೇಳಿ ಬಂದಿದ್ದರು. ಯುವತಿ ಮಾತ್ರ ಪೊಲೀಸರ ಮೇಲೆಯೇ ಆರೋಪ ಮಾಡುತ್ತಿದ್ದಾಳೆ. ಕುಕನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ